ಸಮುದ್ರದಲ್ಲಿ ಮುಳುಗುತ್ತಿದ್ದವನ ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ನೌಕಾಧಿಕಾರಿ

ಸುತ್ತಲೂ ಉರಿಬಿಸಿಲು. ಕೆಲಸದ ಜಂಜಾಟವನ್ನೆಲ್ಲ ಪಕ್ಕಕ್ಕಿಟ್ಟು ಕೂಲಿಂಗ್ ಗ್ಲಾಸ್​ ಹಾಕಿಕೊಂಡು ಮರಳ ಹೊದಿಕೆಯ ಮೇಲೆ ಕುಳಿತಿದ್ದ ಓರ್ವ ನೌಕಾಧಿಕಾರಿ. ಆಚೆಯೇನೋ ಗಲಾಟೆ ಕೇಳಿದ್ದರಿಂದ ಅತ್ತ ನೋಡಿದರೆ ಅಲ್ಲಿ ಜನರ ದೊಡ್ಡ ಗುಂಪು ಸೇರಿತ್ತು. ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನೊಬ್ಬ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ.

Sushma Chakre | news18
Updated:April 10, 2019, 4:42 PM IST
ಸಮುದ್ರದಲ್ಲಿ ಮುಳುಗುತ್ತಿದ್ದವನ ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ನೌಕಾಧಿಕಾರಿ
ದಿಲೀಪ್​ ಅವರನ್ನು ಕಾಪಾಡಿದ ನೌಕಾಧಿಕಾರಿ ರಾಹುಲ್ ದಲಾಲ್
Sushma Chakre | news18
Updated: April 10, 2019, 4:42 PM IST
ಕೇರಳದ ಮಟ ಮಟ ಮಧ್ಯಾಹ್ನದ ಸಮಯ. ಸಮುದ್ರದ ದಡದಲ್ಲಿ ಕುಳಿತಿದ್ದ ರಾಹುಲ್ ದಲಾಲ್ ಕೆಲಸದಿಂದ ಕೊಂಚ ವಿಶ್ರಾಂತಿ ಬೇಕೆಂದು ರಜೆ ಹಾಕಿ ಊರಿಗೆ ಬಂದಿದ್ದರು. ಕೇರಳದ ತಂಪು ವಾತಾವರಣವನ್ನು ನುಂಗಿ ಹೊಳೆಯುತ್ತಿದ್ದ ಬಿಸಿಲ ಕಿರಣಗಳಿಗೆ ಮುಖವೊಡ್ಡಿ ವಿಪಿನ್ ಕಡಲ ತೀರದಲ್ಲಿ ಕುಳಿತಿದ್ದ ರಾಹುಲ್ ಯಾವುದೋ ಯೋಚನೆಯಲ್ಲಿ ಮುಳುಗಿದ್ದರು. ಕೈಯಲ್ಲಿ ಐಸ್​ಕ್ರೀಂ ಹಿಡಿದು ತಿನ್ನುತ್ತಾ, ಉರಿಬಿಸಿಲ ಧಗೆಯನ್ನು ತಣಿಸಿಕೊಳ್ಳುತ್ತಿದ್ದ ಅವರಿಗೆ ಪಕ್ಕದಲ್ಲಿ ದೊಡ್ಡ ಗುಂಪು ಸೇರಿರುವುದು ಕಂಡಿತು. ಏನಾಯ್ತಪ್ಪಾ? ಎಂದು ಜನರ ಗುಂಪಿನ ಹತ್ತಿರ ಹೋಗಿ ನೋಡಿದರೆ ಸಮುದ್ರದ ಮಧ್ಯೆ ಯಾರೂ ಕೈ ಎತ್ತಿ ಕೂಗುತ್ತಿದ್ದರು. ಮುಳುಗಿ ಮುಳುಗಿ ಏಳುತ್ತಿದ್ದ ಆ ವ್ಯಕ್ತಿಯನ್ನು ನೋಡಿದ ಕೂಡಲೇ ರಾಹುಲ್​ಗೆ ಪರಿಸ್ಥಿತಿಯ ಅರಿವಾಗಿತ್ತು.

ನೀರಿನಲ್ಲಿ ಮುಳುಗಿದ್ದ ವ್ಯಕ್ತಿ ದಡ ಸೇರಲು ಪ್ರಯತ್ನಪಡುತ್ತಿದ್ದ. ಆದರೆ, ಅಲೆಗಳು ಜೋರಾಗಿದ್ದರಿಂದ ಆತನಿಗೆ ದಡ ಸೇರಲು ಸಾಧ್ಯವಾಗಲಿಲ್ಲ. ಜನರೆಲ್ಲ ದಡದಲ್ಲಿ ನಿಂತು ಭಯದಿಂದ ನೋಡುತ್ತಿರುವಾಗಲೇ ರಾಹುಲ್ ನೀರಿಗೆ ಧುಮುಕಿದರು. ಸಮುದ್ರದ ಒಡಲಿಗಿಳಿದು ಈಜುತ್ತಾ ಆ ಯುವಕ ಇದ್ದಲ್ಲಿಗೆ ಹೋಗಿ ಹಿಡಿದುಕೊಂಡರು. ತನ್ನ ಜೀವವನ್ನೂ ಲೆಕ್ಕಿಸದೆ ಈಜಿಕೊಂಡು ಆ ಯುವಕನನ್ನು ದಡಕ್ಕೆ ಎಳೆದುತಂದರು.

ರಫೇಲ್​ ಒಪ್ಪಂದ; ಕೇಂದ್ರ ಸರ್ಕಾರಕ್ಕೆ ಭಾರೀ ಹಿನ್ನಡೆ; ಕಡತಗಳ ಪರಿಶೀಲನೆಗೆ ಸುಪ್ರೀಂಕೋರ್ಟ್​ ಅಸ್ತು

ಅಂದಹಾಗೆ, ಈ ಧೈರ್ಯವಂತ ರಾಹುಲ್ ಭಾರತೀಯ ನೌಕಾಸೇನೆಯಲ್ಲಿ ಲೆಫ್ಟಿನೆಂಟ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2014ರಲ್ಲಿ ನೌಕಾಸೇನೆಗೆ ಸೇರಿರುವ ರಾಹುಲ್ ರಜೆಯ ಮೇಲೆ ಊರಿಗೆ ಬಂದಿದ್ದರು. ಬೆಟರ್​ ಇಂಡಿಯಾ ಜೊತೆಗೆ ಮಾತನಾಡಿರುವ ರಾಹುಲ್ ದಲಾಲ್, ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ನೋಡುತ್ತಿದ್ದಂತೆ ಆತನನ್ನು ರಕ್ಷಿಸುವುದೊಂದೇ ನನಗೆ ಮುಖ್ಯವಾಗಿತ್ತು. ನನ್ನ ಹೆಂಡತಿಗೆ ಆ್ಯಂಬುಲೆನ್ಸ್​ಗೆ ಫೋನ್​ ಮಾಡಲು ತಿಳಿಸಿ ನಾನು ನೀರಿಗೆ ಧುಮುಕಿದೆ. ನೌಕಾಸೇನೆಗೆ ಉದ್ಯೋಗಕ್ಕೆ ಸೇರುವಾಗ ನಾನು ಪಡೆದಿದ್ದ ತರಬೇತಿ ನನ್ನ ಸಹಾಯಕ್ಕೆ ಬಂದಿತು. ಅದರಿಂದಾಗಿ ಕೆಲವೇ ನಿಮಿಷಗಳಲ್ಲಿ ಆತನಿದ್ದಲ್ಲಿಗೆ ಹೋಗಿ ಜೀವ ಉಳಿಸಲು ಸಾಧ್ಯವಾಯಿತು ಎಂದಿದ್ದಾರೆ.

ಗೂಗಲ್​ ಮ್ಯಾಪ್​ನಲ್ಲೂ ಇದ್ದಾನೆ ‘ನಿಖಿಲ್​ ಎಲ್ಲಿದ್ದೀಯಪ್ಪಾ..?‘

rahul dalal
ಪತ್ನಿಯೊಂದಿಗೆ ಲೆಫ್ಟಿನೆಂಟ್ ರಾಹುಲ್ ದಲಾಲ್

Loading...

ನೀರಿನಲ್ಲು ಮುಳುಗಿದ್ದ ದಿಲೀಪ್​ ಅಗರ್​ವಾಲ್ ಎಂಬ ಯುವಕನಿಗೆ ಈಜಲು ಬರುತ್ತಿರಲಿಲ್ಲ. ಹೀಗಾಗಿ, ಆತ ಸಹಾಯಕ್ಕಾಗಿ ಕೂಗುತ್ತಿದ್ದ. ಆದರೆ, ಅಲ್ಲಿ ಸೇರಿದ್ದ ಜನರಾರೂ ಸಮುದ್ರದೊಳಗೆ ಇಳಿಯುವ ಧೈರ್ಯ ಮಾಡಲಿಲ್ಲ. ರಾಹುಲ್ ಆತನಿದ್ದಲ್ಲಿಗೆ ಹೋಗುತ್ತಿದ್ದಂತೆ ತನ್ನ ಪ್ರಾಣ ಉಳಿಸುಕೊಳ್ಳುವ ಸಲುವಾಗಿ ರಾಹುಲ್ ಅವರ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಅವರ ಬೆನ್ನಮೇಲೆ ತನ್ನ ಭಾರವನ್ನು ಹಾಕಿದ. ಇದರಿಂದ ರಾಹುಲ್​ಗೆ ಉಸಿರಾಡಲೂ ಕಷ್ಟವಾಗಿತ್ತು. ಆದರೆ, ಬೇರೇನೂ ಯೋಚನೆ ಮಾಡಲು ಸಮಯವಿಲ್ಲದ್ದರಿಂದ ತಕ್ಷಣ ಆತನನ್ನು ಕೆಳಗಿಳಿಸಿ, ಆತನನ್ನು ಗಟ್ಟಿಯಾಗಿ ಹಿಡಿದುಕೊಂಡು ದಡಕ್ಕೆ ಕರೆದುಕೊಂಡು ಬಂದರು.

ಪರೀಕ್ಷೆ ಬರೆಯಲು ತಡವಾಯಿತೆಂದು ಈ ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತಾ..?

ಆದರೆ, ಅಷ್ಟರಲ್ಲಾಗಲೇ ದಿಲೀಪ್ ಉಸಿರಾಡುವುದನ್ನು ನಿಲ್ಲಿಸಿದ್ದ. ತಕ್ಷಣ ಆತನ ಕುತ್ತಿಗೆಯನ್ನು ಎತ್ತಿ, ಉಸಿರಾಡುವಂತೆ ಮಾಡಲಾಯಿತು. 20 ನಿಮಿಷಗಳ ನಂತರ ದಿಲೀಪ್​ ದೇಹದೊಳಗೆ ಸೇರಿದ್ದ ನೀರನ್ನು ತೆಗೆದು ಉಸಿರಾಡುವಂತೆ ಮಾಡಲಾಯಿತು. ಅಷ್ಟರಲ್ಲಿ ಆ್ಯಂಬುಲೆನ್ಸ್​ ಬಂದಿದ್ದರಿಂದ ದಿಲೀಪ್​ನನ್ನು ಆಸ್ಪತ್ರೆಗೆ ಸೇರಿಸಲಾಯಿತು. ನೌಕಾಧಿಕಾರಿ ರಾಹುಲ್ ಮತ್ತು ಆತನ ಪತ್ನಿಯ ಸಮಯಪ್ರಜ್ಞೆಯಿಂದ ದಿಲೀಪ್ ಪ್ರಾಣ ಉಳಿಯಿತು.
ನೌಕಾಧಿಕಾರಿಯಾಗಿ ಯಾರಾದರೂ ತೊಂದರೆಯಲ್ಲಿದ್ದಾಗ ಅವರನ್ನು ರಕ್ಷಿಸುವುದು ನನ್ನ ಜವಾಬ್ದಾರಿ. ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ನಾನು ಮುಂಬೈಗೆ ಹೋದ ನಂತರ ದಿಲೀಪ್ ನನಗೆ ಫೋನ್ ಮಾಡಿ ಧನ್ಯವಾದ ತಿಳಿಸಿದರು. ಒಬ್ಬರಿಗೆ ನಮ್ಮಿಂದ ಸಹಾಯವಾಯಿತೆಂದರೆ ಅದಕ್ಕಿಂತ ಖುಷಿಯ ಸಂಗತಿ ಮತ್ತೇನಿದೆ? ಎಂದು ಬೆಟರ್​ ಇಂಡಿಯಾ ಜೊತೆಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ 27 ವರ್ಷದ ರಾಹುಲ್ ದಲಾಲ್.

ರಾಹುಲ್ ದಲಾಲ್​ ಅವರ ಕಾರ್ಯಕ್ಕೆ ನೌಕಾಸೇನೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ. ಅಲ್ಲದೆ, ಸೇನೆಯ ಅಧಿಕೃತ ಖಾತೆಯಲ್ಲೂ ಈ ಬಗ್ಗೆ ಟ್ವೀಟ್​ ಮಾಡಲಾಗಿದೆ.

ಹನಿಮೂನ್​ಗೆ ಬಂದಿದ್ದ ರಾಹುಲ್ :

ಇತ್ತೀಚೆಗಷ್ಟೆ ಮದುವೆಯಾಗಿದ್ದ ರಾಹುಲ್ ಹನಿಮೂನ್​ಗೆಂದು ರಜೆ ಹಾಕಿ ಕೊಚ್ಚಿಗೆ ಬಂದಿದ್ದರು. ಆ ದಿನ ಬೆಳಗ್ಗೆಯೇ ಕೊಚ್ಚಿಗೆ ಆಗಮಿಸಿದ್ದ ಅವರು ಸಮುದ್ರದ ಬಳಿ ಹೋಗಿ ಸ್ವಲ್ಪ ಹೊತ್ತು ಕುಳಿತರಾಯಿತೆಂದು ಸಮುದ್ರದ ದಡಕ್ಕೆ ಹೋಗಿದ್ದರು. ಅವರ ಹೆಂಡತಿ ಅದೇ ದಿನ ಸಂಜೆ ಕೊಚ್ಚಿಗೆ ಬರುವವರಿದ್ದರು. ದಿಲೀಪ್​ ಮುಳುಗುತ್ತಿರುವುದನ್ನು ನೋಡಿದ ರಾಹುಲ್ ತನ್ನ ಹೆಂಡತಿಗೆ ಫೋನ್ ಮಾಡಿ ಆ್ಯಂಬುಲೆನ್ಸ್​ಗೆ ವಿಷಯ ತಿಳಿಸಲು ಸೂಚಿಸಿ ನೀರಿಗೆ ಧುಮುಕಿದ್ದರು.

First published:April 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...