• Home
  • »
  • News
  • »
  • national-international
  • »
  • Navratri: ಲಂಕಾ ದಹನ ಪ್ರದರ್ಶನದ ವೇಳೆ ವೇದಿಕೆಯಿಂದ ಕುಸಿದು ಹನುಮಂತನ ಪಾತ್ರಧಾರಿ ಸಾವು, ವಿಡಿಯೋ ವೈರಲ್!

Navratri: ಲಂಕಾ ದಹನ ಪ್ರದರ್ಶನದ ವೇಳೆ ವೇದಿಕೆಯಿಂದ ಕುಸಿದು ಹನುಮಂತನ ಪಾತ್ರಧಾರಿ ಸಾವು, ವಿಡಿಯೋ ವೈರಲ್!

ಹನುಮನ ಪಾತ್ರದಾರಿ ಸಾವು

ಹನುಮನ ಪಾತ್ರದಾರಿ ಸಾವು

ಫತೇಪುರ್ ಜಿಲ್ಲೆಯ ಧಾತಾ ಪೊಲೀಸ್ ಠಾಣೆ ವ್ಯಾಪ್ತಿಯ ಸೇಲಂಪುರ ಗ್ರಾಮದ ದುರ್ಗಾ ಪಂಡಲ್‌ನಲ್ಲಿ ಜಾಗರಣ್ ಲಂಕಾ ದಹನ್ ಕಾರ್ಯಕ್ರಮದ ವೇಳೆ ಕಲಾವಿದ ರಾಮಸ್ವರೂಪ್ ಹೃದಯಾಘಾತದಿಂದ ನಿಧನರಾದರು. ವೇದಿಕೆಯಲ್ಲಿ ಲಂಕಾದಹನದ ದೃಶ್ಯದ ವೇಳೆ, ಲಂಕೆಗೆ ಬೆಂಕಿ ಹಚ್ಚಲು ಅವರ ಬಾಲಕ್ಕೆ ಬೆಂಕಿ ಹಚ್ಚಲಾಗಿದ್ದು, ಇದಾದ ಒಂದು ನಿಮಿಷದ ಬಳಿಕ ಅವರಿಗೆ ಅಟ್ಯಾಕ್​ ಆಗಿದೆ. ನೋಡ ನೋಡುತ್ತಿದ್ದಂತೆಯೇ ಅವರು ತಲೆಕೆಳಗಾಗಿ ವೇದಿಕೆಯಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮುಂದೆ ಓದಿ ...
  • Share this:

ಲಕ್ನೋ(ಅ.03): ಉತ್ತರ ಪ್ರದೇಶದ (Uttar Pradesh) ಫತೇಪುರ್ ಜಿಲ್ಲೆಯಲ್ಲಿ ಮಹಾಬಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ ಕಲಾವಿದರೊಬ್ಬರು ವೇದಿಕೆಯಲ್ಲೇ ಸಾವನ್ನಪ್ಪಿದ್ದಾರೆ. ಧಾತಾ ಪೊಲೀಸ್ ಠಾಣೆ ವ್ಯಾಪ್ತಿಯ ಸೇಲಂಪುರ ಗ್ರಾಮದಲ್ಲಿ ಘಟನೆ ನಡೆದಿದೆ. ದುರ್ಗಾ ಪಂಡಾಲ್​ನಲ್ಲಿ ಜಾಗರಣೆಯ ವೇಳೆ ಲಂಕಾ ದಹನದ ದೃಶ್ಯಕ್ಕೆ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಕಲಾವಿದ ರಾಮಸ್ವರೂಪ್ ಏಕಾಏಕಿ ಸಿಂಹಾಸನದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಲಾಹಲ ಉಂಟಾಯಿತು. ಹಿರಿಯ ಕಲಾವಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆಯ ನಂತರ ಪಂಡಾಲ್‌ನಲ್ಲಿ ನೀರವ ಮೌನ ಆವರಿಸಿತ್ತು. ವೇದಿಕೆಯನ್ನು ನೋಡುತ್ತಿದ್ದ ಅವರ ಪತ್ನಿ ಅಳಲಾರಂಭಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ಪಂಡಾಲ್​ನಲ್ಲಿ ನಡೆಯುತ್ತಿದ್ದ ರಾಮ್​ಲೀಲಾ


ನವರಾತ್ರಿಯ ಪ್ರಯುಕ್ತ ಸೇಲಂಪುರದಲ್ಲಿ ದೇವಿಯ ಜಾಗರಣ ಕಾರ್ಯಕ್ರಮ ನಡೆಯುತ್ತಿತ್ತು. ಶನಿವಾರ ರಾತ್ರಿ ಪಂದಳದಲ್ಲಿ ರಾಮಲೀಲಾ ಆಯೋಜಿಸಲಾಗಿತ್ತು. ಗ್ರಾಮದ 50 ವರ್ಷದ ರಾಮಸ್ವರೂಪ ಮಹಾಬಲಿ ಹನುಮಂತನ ಪಾತ್ರ ಮಾಡುತ್ತಿದ್ದ. ವೇದಿಕೆಯಲ್ಲಿ, ಲಂಕೆಗೆ ಬೆಂಕಿ ಹಚ್ಚಲು ಅವನ ಬಾಲಕ್ಕೆ ಬೆಂಕಿ ಹಚ್ಚಲಾಗಿತ್ತು. ಇದಾದ ನಿಮಿಷದಲ್ಲಿ ಅವರಿಗೆ ಹೃದಯಾಘಾತವಾಗಿದೆ. ಅವರು ಸಿಂಹಾಸನದಿಂದ ತಲೆಕೆಳಗಾಗಿ ಕೆಳಗೆ ಕುಸಿದು ಬಿದ್ದಿದ್ದಾರೆ. ಅವರನ್ನು ಎತ್ತಲು ಜನರು ಓಡಿ ಬಂದಿದ್ದಾರೆ. ಕೂಡಲೃಏ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಕೊನರಯುಸಿರೆಳೆದಿದ್ದರು.


ವೇದಿಕೆ ಎದುರಿದ್ದ ಅವರ ಪತ್ನಿ ಅನುಸೂಯ್ಯಾ ಹಾಗೂ ನೂರಾರು ಜನರು ಅವರ ಸಾವನ್ನು ಕಣ್ಣಾರೆ ಕಂಡಿದ್ದಾರೆ. ರಾಮಸ್ವರೂಪ್ ದೋಣಿ ಚಲಾಯಿಸಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು ಎಂದು ಗ್ರಾಮದ ಮುಖಂಡ ಗುಲಾಬ್ ತಿಳಿಸಿದ್ದಾರೆ. ಅವರ ಪತ್ನಿ ಮತ್ತು ಅಮಾಯಕ ಮಗಳು ಕೂಡ ಪಂಡಾಲ್‌ನಲ್ಲಿದ್ದರು.


ಇದನ್ನೂ ಓದಿ: Breast Cancer Prevention: ಸ್ತನ ಕ್ಯಾನ್ಸರ್ ಬರದಂತೆ ಹೇಗೆ ತಡೆಯೋದು? ನಿಮಗಾಗಿಯೇ ಇಲ್ಲಿದೆ ವಿವರ


ಪೊಲೀಸರಿಗೆ ಮಾಹಿತಿ ನೀಡದೆ ಕುಟುಂಬದವರು ಭಾನುವಾರ ಶವವನ್ನು ಸುಟ್ಟು ಹಾಕಿದ್ದಾರೆ. ಅದೇ ಸಮಯದಲ್ಲಿ, ಕಲಾವಿದನ ಸಾವಿನ ಲೈವ್ ವಿಡಿಯೋ ಹೊರಬಿದ್ದ ನಂತರ, ಪೊಲೀಸರು ಗ್ರಾಮಕ್ಕೆ ತಲುಪಿ ಈ ವಿಚಾರದ ಬಗ್ಗೆ ತನಿಖೆ ಆರಂಭಿಸಿದ್ದಾರೆ.


ಮಹಿಳೆಯರಲ್ಲಿ ಹೃದಯಾಘಾತ ಸಂಖ್ಯೆ ಹೆಚ್ಚಳ; ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸಬೇಡಿ


ಕಳೆದ ಸೋಮವಾರದಂದು ಬಿಜೆಪಿಯ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್  ಅವರು ಗೋವಾದಲ್ಲಿ  ನಿಧನರಾದರು. ಈ ಬಗ್ಗೆ ವರದಿಗಳಲ್ಲಿ ಹೇಳಲಾಗಿರುವಂತೆ ಸೋನಾಲಿ ಅವರು ಮ್ಯಾಸಿವ್ ಹಾರ್ಟ್ ಅಟ್ಯಾಕ್​ನಿಂದ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. 42ರ ಪ್ರಾಯದವರಾಗಿದ್ದ ಸೋನಾಲಿ ನಿಧನರಾಗುವುದಕ್ಕೂ ಮುಂಚೆ ತಮಗೆ ಒಂದು ರೀತಿಯ ಅಸಮಾಧಾನ ಹಾಗೂ ಎದೆನೋವಾಗುತ್ತಿರುವ  ಬಗ್ಗೆ ದೂರಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗದೆ ಅವರು ಕೊನೆಯುಸಿರೆಳಿದಿದ್ದಾರೆ. ಅಷ್ಟಕ್ಕೂ ಅವರ ನಿಧನಕ್ಕೆ  ಸಂಬಂಧಿಸಿದಂತೆ ಇನ್ನೂ ಸ್ಪಷ್ಟ ವರದಿಗಳಿಗಾಗಿ ಕಾಯಲಾಗುತ್ತಿದೆ.


ಹೆಣ್ಣು ಹಾಗೂ ಗಂಡು ಇಬ್ಬರ ಸಾವಿಗೂ ಕಾರಣವಾಗುತ್ತಿರುವ ಹೃದಯ ಕಾಯಿಲೆ


ಏತನ್ಮಧ್ಯೆ, ಇತ್ತೀಚಿನ ದಿನಮಾನಗಳಲ್ಲಿ ಹೃದಯ ಕಾಯಿಲೆ ಎಂಬುದು ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂಬ ಅಭಿಪ್ರಾಯವಿದೆ. ಆದರೆ, ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಹೃದಯ ಕಾಯಿಲೆ ಎಂಬುದು ಹೆಣ್ಣು ಹಾಗೂ ಗಂಡು ಇಬ್ಬರ ಸಾವಿಗೂ ಹೆಚ್ಚು ಕಾರಣವಾಗುತ್ತಿರುವುದನ್ನು ಗಮನಿಸಬಹುದು.


ಇದನ್ನೂ ಓದಿ: Tomato Flu: ಟೊಮ್ಯಾಟೋ ಜ್ವರದ ರೋಗಲಕ್ಷಣಗಳೇನು? ಚಿಕ್ಕಮಕ್ಕಳಲ್ಲಿ ಈ ರೋಗ ಕಂಡುಬರಲು ಕಾರಣವೇನು?

  ಇಲ್ಲಿ ಇನ್ನೊಂದು ವಿಚಾರವೆಂದರೆ ಹೃದಯ ಕಾಯಿಲೆಗೆ ಸಂಬಂಧಿಸಿದಂತೆ ಅದು ತೋರಿಸುವ ಲಕ್ಷಣಗಳು ಪುರುಷ ಹಾಗೂ ಸ್ತ್ರೀಯರಲ್ಲಿ ಭಿನ್ನ ಭಿನ್ನವಾಗಿರುತ್ತವೆ. ಹಾಗಾಗಿ ಸ್ತ್ರೀಯಲ್ಲಿ ಹೃದಯದ ಕಾಯಿಲೆಯ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಹೃದಯ-ಸ್ನೇಹಿಯಾದ ಆಹಾರ ಕ್ರಮ, ನಿತ್ಯ ವ್ಯಾಯಾಮ ಹಾಗೂ ಜಿಡ್ಡಿನ ಜೀವನಶೈಲಿಯಿಂದ ದೂರ ಉಳಿಯುವುದು ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

Published by:Precilla Olivia Dias
First published: