ನವರಾತ್ರಿ ಧಮಾಕಾ: ಕೇವಲ 1 ರೂಪಾಯಿಗೆ ಮನೆಯಲ್ಲೇ ಕುಳಿತು ಖರೀದಿಸಿ 24 ಕ್ಯಾರೆಟ್​ ಶುದ್ಧ ಚಿನ್ನ!

news18
Updated:October 12, 2018, 5:16 PM IST
ನವರಾತ್ರಿ ಧಮಾಕಾ: ಕೇವಲ 1 ರೂಪಾಯಿಗೆ ಮನೆಯಲ್ಲೇ ಕುಳಿತು ಖರೀದಿಸಿ 24 ಕ್ಯಾರೆಟ್​ ಶುದ್ಧ ಚಿನ್ನ!
  • Advertorial
  • Last Updated: October 12, 2018, 5:16 PM IST
  • Share this:
ನ್ಯೂಸ್​ 18 ಕನ್ನಡ

ನವರಾತ್ರಿ ಸಂಭ್ರಮ ಆರಂಭವಾಗಿದೆ. ದೇಶದೆಲ್ಲಡೆ ಜನರು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಹೀಗಿರುವಾಗ ನೀವು ಕೇವಲ 1 ರೂಪಾಯಿಗೆ ಚಿನ್ನವನ್ನು ಖರೀದಿಸಬಹುದಾಗಿದೆ. ಆದರೆ ಇಷ್ಟು ಕಡಿಮೆ ಮೊತ್ತಕ್ಕೆ ಚಿನ್ನ ಹೇಗೆ ಖರೀದಿಸುವುದು ಹಾಗೂ ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆ ಕಾಡುವುದು ಸಹಜ. ನಿಮ್ಮ ಈ ಕುತೂಹಲಕ್ಕೆ ಉತ್ತರ ನಾವು ನೀಡುತ್ತೇವೆ. ಅಕ್ಷಯ ತೃತೀಯಕ್ಕಾಗಿ Paytm ಹಾಗೂ MMTC Pams ಜಂಟಿಯಾಗಿ 24 ಕ್ಯಾರೆಟ್​ ಚಿನ್ನವನ್ನು ಖರೀದಿ ಹಾಗೂ ಮಾರಾಟಕ್ಕಾಗಿ ಹೊಸ ಯೋಜನೆಯೊಂದನ್ನು ಘೋಷಿಸಿದೆ. ಹಾಗಾದ್ರೆ ಹಣವಿಲ್ಲದೇ ಚಿನ್ನ ಖರೀದಿಸುವುದು ಹೇಗೆ? ಇಲ್ಲಿದೆ ವಿವರ.

Paytm Gold:

ಕಂಪೆನಿಯು ಕೇವಲ 1 ರೂಪಾಯಿಗೆ ಚಿನ್ನ ಖರೀದಿಸುವ ಆಯ್ಕೆ ನೀಡಿದೆ. ಡಿಜಿಟಲ್​ ಗೋಲ್ಡ್​ ಹೆಸರಿನಲ್ಲಿ ಆರಂಭಿಸಿರುವ ವೆಲ್ತ್​ ಮ್ಯಾನೇಜ್ಮೆಂಟ್​ನ ಈ ನೂತನ ಯೋಜನೆಯ ಮೂಲಕ ನೀವು ವರ್ಷದ ಯಾವುದೇ ದಿನ, ಯಾವುದೇ ಸಮದಲ್ಲಾದರೂ Paytmನ ಮೊಬೈಲ್​ ಆ್ಯಪ್​ ಬಳಸಿ ಮನೆಯ್ಲಲೇ ಕುಳಿತು ಚಿನ್ನ ಖರೀದಿಸಬಹುದಾಗಿದೆ. ನೀವು ಚಿನ್ನವನ್ನು ರೂಪಾಯಿಗೆ ಅನುಗುಣವಾಗಿ ಖರೀದಿಸಿದರೂ, ತೂಕದ ಅನುಗುಣವಾಗಿ ಖರೀದಿಸಿದರೂ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಚಿನ್ನದ ಬೆಲೆಗೆ ನಿಮಗೆ ಚಿನ್ನ ಸಿಗುತ್ತದೆ. ನೀವು ನಿಮಗೆಷ್ಟು ಚಿನ್ನ ಬೇಕೋ ಅಷ್ಟು ಖರೀದಿಸಿ, ಹಣ ಪಾವತಿಸಬಹುದು.1 ರೂಪಾಯಿಗೆ ಖರೀದಿಸಿ ಚಿನ್ನ:

Paytm Gold ಹೊರತುಪಡಿಸಿ ಬುಲಿಯನ್​ ಇಂಡಿಯಾ(Bullion India) ಕೂಡಾ ನಿಮಗೆ ಇಂತಹುದೇ ಸೇವೆ ನೀಡುತ್ತದೆ. ನೀವು ಇಲ್ಲಿಂದ ಕಡಿಮೆ ಎಂದರೆ ಕೇವಲ 1 ರೂಪಾಯಿಗೆ ಚಿನ್ನ ಖರೀದಿಸಬಹುದು. ಇದಕ್ಕಾಗಿ ನೀವು ಬುಲಿಯನ್​ ಇಂಡಿಯಾದಲ್ಲಿ ನಿಮ್ಮ ಖಾತೆ ತೆರೆಯಬೇಕಾಗುತ್ತದೆ. Paytm Gold ನಂತೆ ಬುಲಿಯನ್​ ಇಂಡಿಯಾ ಕೂಡಾ ಚಿನ್ನವನ್ನು ಹೋಂ ಡೆಲಿವರಿ ಮಾಡುತ್ತದೆ. ಈ ಮೂಲಕ ನೀವು ಮನೆಯಲ್ಲೇ ಕುಳಿತು 1 ರೂಪಾಯಿಗೆ ಚಿನ್ನ ಪಡೆಯಬಹುದಾಗಿದೆ.EMI ನಲ್ಲಿ ಖರೀದಿಸಿ ಚಿನ್ನ:

ನೀವು ಕಂತುಗಳಲ್ಲಿ ಹಣ ಪಾವತಿಸಿಯೂ ಚಿನ್ನ ಪಡೆಯಬಹುದಾಗಿದೆ. ಮುತ್ತೂಟ್​ ಫೈನಾನ್ಸ್​ ಹಾಗೂ ತನಿಷ್ಕ್​ ಜ್ಯುವೆಲ್ಲರ್ಸ್​ ಸೇರಿದಂತೆ ಹಲವಾರು ಜ್ಯುವೆಲ್ಲರ್ಸ್​ ನಿಮಗೆ ಈ ಸೌಲಭ್ಯವನ್ನು ನೀಡುತ್ತವೆ. ತನಿಷ್ಕ್​ ತನ್ನ ಗೋಲ್ಡ್​ ಹಾರ್ವೆಸ್ಟ್​ ಸ್ಕೀಂನಡಿಯಲ್ಲಿ ನಿಮಗೆ EMIನಲ್ಲಿ ಚಿನ್ನ ಖರೀದಿಸುವ ಅವಕಾಶ ನೀಡುತ್ತದೆ. ಕಂತುಗಳಲ್ಲಿ ಚಿನ್ನ ಖರೀದಿಸುವುವಾಗ, ಮೇಲೆ ನೀಡಿದ ಎಲ್ಲಾ ಸೌಲಭ್ಯ ಹಾಗೂ ಇನ್ನಿತರ ಯೋಜನೆಗಳಡಿ ಬಂಗಾರ ಖರೀದಿಸುವ ಮುನ್ನ ಎಲ್ಲಾ ನಿಯಮ ಹಾಗೂ ಸೂಚನೆಗಳನ್ನು ತಪ್ಪದೇ ಓದಿ. ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಂಡ ಬಳಿಕವಷ್ಟೇ ಖರೀದಿಸಿ.

ಮುತ್ತೂಟ್​ ಫೈನಾನ್ಸ್​:

ತನಿಷ್ಕ್​ ಹೊರತುಪಡಿಸಿ ಮುತ್ತೂಟ್​ ಫೈನಾನ್​ಸ್ ಕೂಡಾ ನಿಮಗೆ ಚಿನ್ನ ಖರೀದಿಸುವ ಅವಕಾಶ ನೀಡುತ್ತದೆ. ನೀವು EMIನಲ್ಲಿ ಜ್ಯುವೆಲ್ಲರಿ ಸೇರಿದಂತೆ ಇನ್ನಿತರ ವಸ್ತುಗಳನ್ನೂ ಖರೀದಿಸಬಹುದಾಗಿದೆ. ಮುತ್ತೂಟ್​ ಫೈನಾನ್ಸ್​ 'ಸ್ವರ್ಣ ವರ್ಷಂ' ಎಂಬ ಯೋಜನೆಯಡಿಯಲ್ಲಿ ನಿಮಗೆ ಈ ಸೌಲಭ್ಯ ಕಲ್ಪಿಸಿದೆ.
First published:October 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ