Sidhu letter to Sonia- ಇದೇ ಕೊನೆ ಅವಕಾಶ; ಸೋನಿಯಾ ಗಾಂಧಿಗೆ ಪತ್ರ ಬರೆದ ನವಜೋತ್ ಸಿಂಗ್ ಸಿಧು

Punjab Politics- ಪಂಜಾಬ್ ಪುನಶ್ಚೇತನಕ್ಕೆ ಇದು ಕೊನೆಯ ಅವಕಾಶವಾಗಿದೆ ಎಂದು ಹೇಳಿ 13 ವಿಚಾರಗಳನ್ನ ಉಲ್ಲೇಖಿಸಿ ಸೋನಿಯಾ ಗಾಂಧಿಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ಪತ್ರ ಬರೆದಿದ್ದಾರೆ.

ನವಜೋತ್​ ಸಿಂಗ್​ ಸಿಧು.

ನವಜೋತ್​ ಸಿಂಗ್​ ಸಿಧು.

 • News18
 • Last Updated :
 • Share this:
  ಅಮೃತಸರ್: ಕಾಂಗ್ರೆಸ್‌ನ ಪಂಜಾಬ್ ಘಟಕದ ಅಧ್ಯಕ್ಷರಾಗಿ ಮತ್ತೆ ಅಧಿಕಾರವಹಿಸಿಕೊಂಡ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಸೋನಿಯಾ ಗಾಂಧಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ, "ಪಂಜಾಬ್ ಸರ್ಕಾರವು ನೀಡಬೇಕಾದ ಆದ್ಯತೆಯ ವಿಷಯಗಳು ಯಾವುದು ಹಾಗೂ "ರಾಜ್ಯದ ಪುನರುತ್ಥಾನ ಮತ್ತು ವಿಮೋಚನೆಗೆ ಕೊನೆಯ ಅವಕಾಶ" ಎಂದು ಕರೆದಿದ್ದಾರೆ.

  ಪಂಜಾಬಿನಾದ್ಯಂತದ ಪಕ್ಷದ ಕಾರ್ಯಕರ್ತರೊಂದಿಗೆ ಅನೇಕ ಚರ್ಚೆಗಳು ಮತ್ತು ಸಮಾಲೋಚನೆಗಳ ನಂತರ ಮತ್ತು 17 ವರ್ಷಗಳ ಸಾರ್ವಜನಿಕ ಜೀವನದ ಭಾವನೆಯ ಆಳವಾದ ತಿಳುವಳಿಕೆಯೊಂದಿಗೆ, ಇದು ಪಂಜಾಬಿನ ಪುನರುತ್ಥಾನಜೀವನದಲ್ಲಿ ಮತ್ತು ವಿಮೋಚನೆಯ ಕೊನೆಯ ಅವಕಾಶ ಎಂದು ಹೇಳಲು ಇಷ್ಟ ಪಡುತ್ತೇನೆ. ನನ್ನ ಹೃದಯದಿಂದ ಬಹಳ ನೋವನ್ನು ವ್ಯಕ್ತಪಡಿಸುತ್ತೇನೆ. ನನ್ನ ಹೃದಯದಲ್ಲಿರುವ ಸಮಸ್ಯೆಗಳನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ ಮತ್ತು ಕಳೆದ ಮುಖ್ಯಮಂತ್ರಿಗೆ ನೀಡಲಾದ 18-ಪಾಯಿಂಟ್ ಅಜೆಂಡಾದಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಪಂಜಾಬ್‌ನ ಹಕ್ಕುಗಳ ಪಾಲಕನಾಗಿ ಕಾರ್ಯನಿರ್ವಹಿಸಲು ಸಂಘಟನೆಯ ನನ್ನ ಜವಾಬ್ದಾರಿ ಅರಿತುಕೊಂಡು ಆ ಮೂಲಕ ಅಜೆಂಡಾದ ಪ್ರತಿಯೊಂದು ಅಂಶಕ್ಕೂ ನಾನು ಬದ್ದನಾಗಿದ್ದೇನೆ "ಎಂದು ಅವರು ಬರೆದಿದ್ದಾರೆ.

  ಅಕ್ಟೋಬರ್ 15 ರ ದಿನಾಂಕದಂದು ಬರೆದ ಪತ್ರವನ್ನು ಸಿಧು ಅವರು ಭಾನುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅವರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಕೆಸಿ ವೇಣುಗೋಪಾಲ್ ಅವರನ್ನು ಭೇಟಿಯಾದ ಒಂದು ದಿನದ ನಂತರ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಹಿಂತೆಗೆದುಕೊಂಡರು, "ಎಲ್ಲವನ್ನೂ ಬಗೆಹರಿಸಲಾಗಿದೆ" ಎಂದು ಹೇಳಿದರು.

  ಇದನ್ನೂ ಓದಿ: Kerala Rains- ರಣಮಳೆಗೆ ಕೇರಳ ತಲ್ಲಣ- ಎಲ್ಲವನ್ನೂ ಆಪೋಷಣೆ ಪಡೆಯುತ್ತಿರುವ ಮಳೆ; ಸಾವಿನ ಸಂಖ್ಯೆ 19ಕ್ಕೇರಿಕೆ

  ಸರಿಗೇಲೆಲಿ ಪ್ರಕರಣ, ಪಂಜಾಬ್‌ನ ಮಾದಕ ದ್ರವ್ಯಗಳ ಸಮಸ್ಯೆ, ಕೃಷಿ ಸಮಸ್ಯೆಗಳು, ಉದ್ಯೋಗಾವಕಾಶಗಳು, ಮರಳು ಗಣಿಗಾರಿಕೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ 13 ಸಮಸ್ಯೆಗಳನ್ನು ಅವರು ತಮ್ಮ ಪತ್ರದಲ್ಲಿ ಉಲ್ಲೇಕಿಸಿದ್ದು "ಪಂಜಾಬ್ ಮಾದರಿ ಅಭಿವೃದ್ಧಿ" ಗಾಗಿ ಬ್ಯಾಟ್ ಮಾಡಿದ್ದಾರೆ.

  ಈ ಹಿಂದೆ ನಡೆದ ಬೆಳವಣಿಗೆಯಲ್ಲಿ, ಜುಲೈ 19 ರಂದು ಪಿಪಿಸಿಸಿ ಮುಖ್ಯಸ್ಥರಾಗಿ ನೇಮಕಗೊಂಡ ಸಿದ್ದು, ಚನ್ನಿ ನೇತೃತ್ವದ ಹೊಸ ಸರ್ಕಾರದಲ್ಲಿ ಸಚಿವರಿಗೆ ಖಾತೆಗಳನ್ನು ಹಂಚಿದ ಕೆಲವೇ ನಿಮಿಷಗಳಲ್ಲಿ, ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದರು.

  ಪಂಜಾಬ್ ಕಾಂಗ್ರೆಸ್‌ ಪಕ್ಷದ ಒಳಗಿನವರ ಪ್ರಕಾರ, ಕೆಲವು ಉನ್ನತ ಅಧಿಕಾರಿಗಳ ನೇಮಕಾತಿಯಲ್ಲಿ ಅವರ ಸಲಹೆಗಳನ್ನು ನಿರ್ಲಕ್ಷಿಸಲಾಗಿತ್ತು ಎಂದು ಸಿಧು "ಕೋಪಗೊಂಡಿದ್ದರು ಮತ್ತು ಅಸಮಾಧಾನಗೊಂಡರು". ಇದೇ ಅವರ ರಾಜನಾಮೆಗೆ ಮೂಲ ಕಾರಣ ಎಂದು ಹೇಳಲಾಗಿತ್ತು.

  ಇದನ್ನೂ ಓದಿ: Love Leave: ಪ್ರೀತಿ ಮಾಡುವುದಕ್ಕೂ ಸಿಗುತ್ತೆ ರಜಾ, ‘ಲವ್ ಲೀವ್’ ಎಲ್ಲರೂ ತೆಗೆದುಕೊಳ್ಬಹುದಂತೆ ನೋಡಿ!

  ಸಿದ್ದು ಸೋನಿಯಾ ಗಾಂಧಿಯವರಿಗೆ ಈ ಅಂಶಗಳನ್ನು ಪರಿಗಣಿಸಲು ಮತ್ತು "ಪಂಜಾಬ್ ಜನರ ಹಿತಾಸಕ್ತಿಗಾಗಿ ತಕ್ಷಣವೇ ಕಾರ್ಯಗತಗೊಳಿಸಲು" ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೇಳಿದರು. 2022 ರ ಕಾಂಗ್ರೆಸ್ ಪ್ರಣಾಳಿಕೆಯ ಒಂದು ಭಾಗವಾಗಲು ಪಂಜಾಬ್ ಮಾದರಿಯನ್ನು ಪ್ರಸ್ತುತಪಡಿಸಲು ಅವರು ಗಾಂಧಿಯವರೊಂದಿಗೆ ವೈಯಕ್ತಿಕವಾಗಿ ಮಾತನಾಡಲು ಕೂಡ ಬಯಸಿದರು ಎಂದು ಮೂಲಗಳು ಹೇಳಿವೆ.

  - ರಮೇಶ್ ಹಂಡ್ರಂಗಿ
  Published by:Vijayasarthy SN
  First published: