• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಅಮೇಥಿಯಲ್ಲಿ ರಾಹುಲ್ ಸೋತರೆ ರಾಜಕೀಯ ನಿವೃತ್ತಿ ಎಂದಿದ್ದ ಸಿದ್ದು; ನೆನಪಿಸಿ ಕಾಲೆಳೆಯುತ್ತಿರುವ ನೆಟ್ಟಿಗರು

ಅಮೇಥಿಯಲ್ಲಿ ರಾಹುಲ್ ಸೋತರೆ ರಾಜಕೀಯ ನಿವೃತ್ತಿ ಎಂದಿದ್ದ ಸಿದ್ದು; ನೆನಪಿಸಿ ಕಾಲೆಳೆಯುತ್ತಿರುವ ನೆಟ್ಟಿಗರು

ನವಜೋತ್​​ ಸಿಂಗ್​ ಸಿಧು

ನವಜೋತ್​​ ಸಿಂಗ್​ ಸಿಧು

ಇದೀಗ ನಿರೀಕ್ಷೆಯಂತೆಯೇ ಸ್ಮೃತಿ ಇರಾನಿ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಗೆಲುವು ಸಾಧಿಸಿದ್ದಾರೆ. 6 ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸಿದ್ದಾರೆ. ಪರಿಣಾಮ ನವಜೋತ್​ ಸಿಂಗ್ ಸಿಧು ಅವರ ಹಳೆ ಸವಾಲನ್ನು ನೆನಪು ಮಾಡಿರುವ ನೆಟ್ಟಿಗರು ರಾಜೀನಾಮೆ ಯಾವಾಗ ನಿಡ್ತೀರ? ಎಂದು ಕಾಲೆಯುತ್ತಿದ್ದಾರೆ.

ಮುಂದೆ ಓದಿ ...
  • News18
  • 4-MIN READ
  • Last Updated :
  • Share this:

ನವ ದೆಹಲಿ (ಮೇ.25); ಮಂಡ್ಯದಲ್ಲಿ ನಿಖಿಲ್ ಸೋಲನುಭವಿಸಿದರೆ ತಾವು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದ ಸಚಿವ ಸಿ.ಎಸ್. ಪುಟ್ಟರಾಜು ಇಂದು ಪೇಚಿಗೆ ಸಿಲುಕಿದ್ದಾರೆ. ಎಲ್ಲಾ ನೆಟ್ಟಿಗರು ಇದೀಗ ಅವರ ರಾಜಕೀಯ ನಿವೃತ್ತಿ ಯಾವಾಗ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಥೇಟ್ ಇದೇ ರೀತಿಯ ಹೇಳಿಕೆ ನೀಡಿದ್ದ ಪಂಜಾಬ್ ರಾಜ್ಯ ಸಚಿವ ನವಜೋತ್ ಸಿಂಗ್ ಸಿಧು ಸಹ ಇದೀಗ ಇಂತಹದ್ದೆ ಸಂದಿಗ್ಧ ಸ್ಥಿತಿಗೆ ಒಳಗಾಗಿದ್ದಾರೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಮೇಥಿಯಿಂದ ರಾಹುಲ್ ವಿರುದ್ಧ ಸ್ಪರ್ಧೆ ಮಾಡಿರುವ ಸ್ಮೃತಿ ಇರಾನಿ ಗೆಲ್ಲುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿದ್ದಾರೆ ಎಂದು ವಾದ ಚಾಲ್ತಿಗೆ ಬಂದಿತ್ತು. ಆದರೆ, ಇದಕ್ಕೆ ಸವಾಲು ಹಾಕಿದ್ದ ಸಚಿವ ಸಿಧು, ”ರಾಹುಲ್ ಗಾಂಧಿ ಸೋಲುವುದಕ್ಕೆ ಸಾಧ್ಯವೇ ಇಲ್ಲ. ರಾಹುಲ್ ಸೋತರೆ ತಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ” ಎಂದು ಹೇಳಿದ್ದರು.



ಆದರೆ, ಇದೀಗ ನಿರೀಕ್ಷೆಯಂತೆಯೇ ಸ್ಮೃತಿ ಇರಾನಿ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಗೆಲುವು ಸಾಧಿಸಿದ್ದಾರೆ. 6 ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸಿದ್ದಾರೆ. ಪರಿಣಾಮ ನವಜೋತ್​ ಸಿಂಗ್ ಸಿಧು ಅವರ ಹಳೆ ಸವಾಲನ್ನು ನೆನಪು ಮಾಡಿರುವ ನೆಟ್ಟಿಗರು ರಾಜೀನಾಮೆ ಯಾವಾಗ ನಿಡ್ತೀರ? ಎಂದು ಕಾಲೆಯುತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕನನ್ನು ತೀವ್ರ ಮುಜುಗರಕ್ಕೀಡು ಮಾಡಿದೆ.




First published: