AAP CMನ ಹಾಡಿ ಹೊಗಳಿದ ಸಿಧು.. ರಾಜೀನಾಮೆ ಬಳಿಕ ಮತ್ತೆ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದರೇ?

ಆಮ್ ಆದ್ಮಿ ಪಕ್ಷವು ಪಂಜಾಬ್​ ವಿಧಾನಸಭೆಯ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಆಡಳಿತವನ್ನು ಕಿತ್ತೆಸೆದಿದೆ.  ಯಾರೂ ನಿರೀಕ್ಷಿಸದ ವ್ಯಕ್ತಿ ಸಿಎಂ ಆಗಿದ್ದಾರೆ. ಅವರ ಮೇಲೆ ದೊಡ್ಡ ನಿರೀಕ್ಷೆಗಳಿರದೆ ಇರುವುದೇ ಅವರಿಗೆ ಪ್ಲಸ್​​ ಪಾಯಿಂಟ್​​..

ಸಿಧು, ನೂತನ ಸಿಎಂ ಮಾನ್​

ಸಿಧು, ನೂತನ ಸಿಎಂ ಮಾನ್​

  • Share this:
ಚಂಢೀಗಡ್​​: ಪಂಜಾಬ್​​ನಲ್ಲಿ ಕಾಂಗ್ರೆಸ್​​ (Congress) ಪಕ್ಷದ ಹೀನಾಯ ಸೋಲಿನ ನಂತರ ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ (Punjab Congress Chief) ರಾಜೀನಾಮೆ ನೀಡಿದ ನವಜೋತ್​ ಸಿಂಗ್ ಸಿಧು (Navjot Singh Sidhu) ಟ್ವಿಟ್ಟರ್​​ನಲ್ಲಿ ನೂತನ ಸಿಎಂ ಭಗವಂತ್​ ಮಾನ್​​ (Bhagwant Mann) ಅವರನ್ನು ಹಾಡಿ ಹೊಗಳಿದ್ದಾರೆ. ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಹೊಗಳಿ, ಅವರು ರಾಜ್ಯದಲ್ಲಿ 'ಹೊಸ ಮಾಫಿಯಾ ವಿರೋಧಿ' ಯುಗವನ್ನು ತೆರೆದಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ. ಆ ಮೂಲಕ ಹಿಂದಿನ ತಮ್ಮದೇ ಕಾಂಗ್ರೆಸ್​​ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.  ವಿವಾದಗಳಿಂದಲೇ ಹೆಸರಾಗಿರುವ ಸಿಧು, ಜನಪರ ನೀತಿಗಳೊಂದಿಗೆ ಮಾನ್ ಪಂಜಾಬ್ ಅನ್ನು ಪುನರುಜ್ಜೀವನದ ಹಾದಿಗೆ ತರುತ್ತಾರೆ ಎಂದು ಆಶಿಸಿದ್ದಾನೆಂದು ಟ್ವೀಟಿಸಿದ್ದಾರೆ.  

ಹೊಸ ಮಾಫಿಯಾ ವಿರೋಧಿ ಯುಗ ಆರಂಭವಾಗಲಿ

ಆಮ್ ಆದ್ಮಿ ಪಕ್ಷವು ಪಂಜಾಬ್​ ವಿಧಾನಸಭೆಯ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಆಡಳಿತವನ್ನು ಕಿತ್ತೆಸೆದಿದೆ. ಯಾರೂ ನಿರೀಕ್ಷಿಸದ ವ್ಯಕ್ತಿ ಸಿಎಂ ಆಗಿದ್ದಾರೆ. ಅವರ ಮೇಲೆ ದೊಡ್ಡ ನಿರೀಕ್ಷೆಗಳಿರದೆ ಇರುವುದೇ ಅವರಿಗೆ ಪ್ಲಸ್​​ ಪಾಯಿಂಟ್​​.. ಭಗವಂತ್ ಮಾನ್ ಪಂಜಾಬ್‌ನಲ್ಲಿ ಹೊಸ ಮಾಫಿಯಾ ವಿರೋಧಿ ಯುಗವನ್ನು ಆರಂಭಿಸಲಿದ್ದಾರೆ... ಜನ ಪರ ನೀತಿಗಳೊಂದಿಗೆ ಪಂಜಾಬ್ ಅನ್ನು ಪುನರುಜ್ಜೀವನದ ಹಾದಿಗೆ ತರುತ್ತಾರೆ ಎಂದು ಭಾವಿಸುತ್ತೇವೆ ... ಯಾವಾಗಲೂ ಒಳ್ಳೆಯದನ್ನು ಮಾಡಿ ಎಂದು ಸಿಧು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್​ ಅನ್ನು ತಿರಸ್ಕರಿಸಿರುವ ಜನಾದೇಶವನ್ನು ನಾನು ವಿನಮ್ರವಾಗಿ ಸ್ವೀಕರಿಸಿದ್ದೇನೆ. ಜನರ ಧ್ವನಿ ದೇವರ ಧ್ವನಿ ... ಪಂಜಾಬ್ ಜನತೆಯ ಆದೇಶವನ್ನು ಒಪ್ಪಿದ್ದೇನೆ... ಆಪ್‌ಗೆ ಅಭಿನಂದನೆಗಳು.. ಎಂದು ಅವರು ಬರೆದುಕೊಂಡಿದ್ದಾರೆ.

ಪಂಜಾಬ್​​​ ರಾಜಕೀಯದಲ್ಲಿ ಹಳ್ಳ ಹಿಡಿದ ಕಾಂಗ್ರೆಸ್​

ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರದ ಕಾಂಗ್ರೆಸ್​ ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಪಂಜಾಬ್​​ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಮುಖ ಸ್ಪರ್ಧಿಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಒಟ್ಟು 117 ಅಸೆಂಬ್ಲಿ ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆಲ್ಲುವ ಎಎಪಿ ಕಾಂಗ್ರೆಸ್​​ ದೊಡ್ಡ ಹೊಡೆತ ನೀಡಿತು.  ಈ ಹಿಂದೆ ಕಾಂಗ್ರೆಸ್ ಆಳ್ವಿಕೆಯಲ್ಲಿದ್ದ ಪಂಜಾಬ್ ರಾಜ್ಯವು ನವಜೋತ್ ಸಿಂಗ್ ಸಿಧು ಮತ್ತು ನಂತರ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಡುವಿನ ಆಂತರಿಕ ಜಗಳವನ್ನು ಕಂಡಿತ್ತು, ನಂತರ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಸಿಎಂ ಸ್ಥಾನಕ್ಕೆ  ನೇಮಿಸಲಾಯಿಗಿತ್ತು.

ಇದನ್ನೂ ಓದಿ: Rahul Gandhi​ ಮೇಲೆ ನಂಬಿಕೆ ಇಲ್ಲ. ಆದರೆ, ಕಾಂಗ್ರೆಸ್​ ಮೇಲಿದೆ; ನಾಯಕತ್ವ ಬದಲಾವಣೆಗೆ G23 ನಾಯಕರ ಆಗ್ರಹ

ಒಳಜಗಳವೇ ಸೋಲಿಗೆ ಕಾರಣ

ಕಾಂಗ್ರೆಸ್​​ ಹೀನಾಯ ಪ್ರದರ್ಶನದ ಬಗ್ಗೆ ಟೀಕೆಗಳನ್ನು ಎದುರಿಸಿದೆ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವು ಪಕ್ಷದ ನಾಯಕರು ಇದಕ್ಕೆ ಕಾಂಗ್ರೆಸ್‌ನ ಒಳಜಗಳವೇ ಕಾರಣ ಎಂದಿದ್ದಾರೆ. 2017 ರ ಚುನಾವಣೆಗಳಿಗೆ ಹೋಲಿಸಿದರೆ ಕಾಂಗ್ರೆಸ್​​ ಪಕ್ಷವು ಮತ ​​ಹಂಚಿಕೆಯಲ್ಲಿ ಗಮನಾರ್ಹ ಕುಸಿತವನ್ನು ಕಂಡಿತು, ಕಾಂಗ್ರೆಸ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದಾರೆ.

ಸಿಧು ಅವರು ಜನವರಿ 2017 ರಲ್ಲಿ ಕಾಂಗ್ರೆಸ್ ಸೇರಿದ್ದರು. 2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಮೃತಸರ ಪೂರ್ವ ಕ್ಷೇತ್ರದಲ್ಲಿ 42,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. 2019 ರಲ್ಲಿ, ಅವರು ಅಂದಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೊಂದಿಗಿನ ಜಗಳದಿಂದಾಗಿ ಪಂಜಾಬ್ ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದರು. ಜುಲೈ 14 ರಂದು ಟ್ವಿಟರ್‌ನಲ್ಲಿ ತಮ್ಮ ರಾಜೀನಾಮೆಯ ಪ್ರತಿಯನ್ನು ಪೋಸ್ಟ್ ಮಾಡಿದ ಸಿಧು, ಅದನ್ನು ಜೂನ್ 10 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಲುಪಿಸಲಾಗಿದೆ ಎಂದು ಹೇಳಿದ್ದರು..
Published by:Kavya V
First published: