Navjot Singh Sidhu: ದಿನಗೂಲಿ ಕೆಲಸ ಮಾಡುತ್ತಿದ್ದಾರಂತೆ ಸಿಧು, ದಿನಕ್ಕೆ 90 ರೂಪಾಯಿ ಸಂಬಳವಂತೆ!

ಜೈಲು ವಾಸದಲ್ಲಿರುವ ಸಿಧು, ಅಲ್ಲಿ ದಿನಗೂಲಿ ಕೆಲಸಗಾರರಾಗಿ ದುಡಿಯುತ್ತಿದ್ದಾರಂತೆ. ಹೌದು, ಅವರು ಒಂದು ವರ್ಷದ ಜೈಲು ಶಿಕ್ಷೆಯ ಸಮಯದಲ್ಲಿ ಪ್ರತಿದಿನ ₹40 ರಿಂದ ₹60 ಗಳಿಸುತ್ತಾರೆ.

ನವಜೋತ್ ಸಿಂಗ್ ಸಿಧು

ನವಜೋತ್ ಸಿಂಗ್ ಸಿಧು

  • Share this:
ಪಂಜಾಬ್ (Punjab) ಕಾಂಗ್ರೆಸ್ (Congress) ಮಾಜಿ ಮುಖ್ಯಸ್ಥ ಮತ್ತು ಟೀಂ ಇಂಡಿಯಾದ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು (Navjoth Singh Sidhu) ಅವರಿಗೆ 1988ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿ ಒಂದು ವರ್ಷ ಜೈಲು ಶಿಕ್ಷೆಯನ್ನು ಪಟಿಯಾಲಾ ನ್ಯಾಯಾಲಯ (Patiala House Court) ನೀಡಿದೆ. ಹೀಗಾಗಿ ಸದ್ಯ ಜೈಲು ವಾಸದಲ್ಲಿರುವ ಸಿಧು, ಅಲ್ಲಿ ದಿನಗೂಲಿ ಕೆಲಸಗಾರರಾಗಿ ದುಡಿಯುತ್ತಿದ್ದಾರಂತೆ. ಹೌದು, ಅವರು ಒಂದು ವರ್ಷದ ಜೈಲು ಶಿಕ್ಷೆಯ ಸಮಯದಲ್ಲಿ ಪ್ರತಿದಿನ ₹40 ರಿಂದ ₹90 ಗಳಿಸುತ್ತಾರೆ. ಅದೇ ಜೈಲಿನಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಕೂಡ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದಾರೆ. ಆದರೂ ಅವರ ಬ್ಯಾರಕ್‌ಗಳು ವಿಭಿನ್ನವಾಗಿವೆ.

ದಿನಗೂಲಿ ನೌಕರನಾಗಿ ದುಡಿಯಲಿರುವ ಸಿಧು:

ಇನ್ನು, ನವಜೋತ್ ಸಿಂಗ್ ಸಿಧು ಅವರು 1988ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿ ಒಮದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಸಿಧು ಅವರು ಜೈಲು ವಾಸದ ಸಮಯದಲ್ಲಿ ಅಕೌಂಟೆಂಟ್ ಆಗಿ ದಿನಗೂಲಿ ಲೆಕ್ಕದಲ್ಲಿ ಕೆಲಸ ಮಾಡಲಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5 ಗಂಟೆ ವರೆಗೆ ಸಿಧು ಕೆಲಸ ಮಾಡಲಿದ್ದಾರೆ. ಇದರ ನಡುವೆ ಅವರಿಗೆ 3 ಗಂಟೆಗಳ ವಿರಾಮ ನೀಡಲಾಗುತ್ತದೆ ಎಮದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಟಿಯಾಲಾ ಜೈಲಿನ ನಿಯಮಗಳ ಪ್ರಕಾರ ಸಿಧುಗೆ ವೇತನವಿಲ್ಲದೆ ಮೊದಲ 3 ತಿಂಗಳು ತರಬೇತಿ ನೀಡಲಾಗುತ್ತದೆ.

ಸಿಧುಗೆ ಯಕೃತ್ತಿನ ಕಾಯಿಲೆ ಇದೆ:

ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ನವಜೋತ್ ಸಿಂಗ್ ಸಿಧು ಅವರು ಎಂಬಾಲಿಸಮ್‌ನಂತಹ ವೈದ್ಯಕೀಯ ಪರಿಸ್ಥಿತಿಗಳಿಂದ ಬಳಲುತ್ತಿದ್ದಾರೆ ಮತ್ತು ಯಕೃತ್ತಿನ ಕಾಯಿಲೆಯನ್ನು ಹೊಂದಿದ್ದಾರೆ. 2015 ರಲ್ಲಿ, ಸಿಧು ಅವರು ದೆಹಲಿಯ ಆಸ್ಪತ್ರೆಯಲ್ಲಿ ತೀವ್ರವಾದ ಆಳವಾದ ರಕ್ತನಾಳದ ಥ್ರಂಬೋಸಿಸ್ ಚಿಕಿತ್ಸೆಗೆ ಒಳಗಾಗಿದ್ದರು. ಆಳವಾದ ರಕ್ತನಾಳದ ಥ್ರಂಬೋಸಿಸ್ ಸ್ಥಿತಿಯಿಂದಾಗಿ, ಸಿಧು ತನ್ನ ಕಾಲುಗಳಿಗೆ ದೊಡ್ಡ ಪ್ಲಾಸ್ಟಿಕ್ ಬ್ಯಾಂಡ್‌ಗಳನ್ನು ಧರಿಸಬೇಕಾಗುತ್ತದೆ.

ಇದನ್ನೂ ಓದಿ: Navjot Singh Sidhu: ನವಜೋತ್ ಸಿಂಗ್ ಸಿಧುಗೆ ಬಿಗ್ ಶಾಕ್, ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್

ಇದರಿಂದ ಯಾವುದೇ ಹೆಪ್ಪುಗಟ್ಟುವಿಕೆ ಉಂಟಾಗುವುದಿಲ್ಲ, ಸಿಧು ಅವರ ಆರೋಗ್ಯದ ತೊಂದರೆಗಳಿಂದಾಗಿ ಪ್ರತಿದಿನ ಹಲವಾರು ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಲ್ಲಾ ಹೇಳಿದ್ದಾರೆ. ಗೋಧಿ ಹಿಟ್ಟನ್ನು ಒಳಗೊಂಡಿರುವ ಆಹಾರದಿಂದ ದೂರವಿರಲು ಸಿಧುಗೆ ಸಲಹೆ ನೀಡಲಾಗಿದೆ ಎಂದು ಅವರ ಮಾಧ್ಯಮ ಸಲಹೆಗಾರ ತಿಳಿಸಿದ್ದಾರೆ.

ಇದನ್ನೂ ಓದಿ: Navjot Singh Sidhu: ಮೊದಲ ದಿನವೇ ಜೈಲಿನ ಊಟ ಬೇಡ ಎಂದ ಸಿಧು, ಔಷಧಿ ಸೇವಿಸಿ ನಿದ್ರಿಸಿದ ಮಾಜಿ ಸಿಎಂ

ಏನಿದು 1988ರ ರೋಡ್ ರೇಜ್ ಪ್ರಕರಣ?:

ಇನ್ನು, ಸಿಧು ಅವರು ಸದ್ಯ 1988ರ ರೋಡ್ ರೇಜ್ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಸುಮಾರು 34 ವರ್ಷಗಳ ಹಿಂದೆ ನವಜೋತ್ ಸಿಂಗ್ ಸಿಧು ಪಟಿಯಾಲ ನ್ಯಾಯಾಲಯಕ್ಕೆ ಶರಣಾಗಿದ್ದರು. 1988ರಲ್ಲಿ ರಸ್ತೆ ಬಿಡುವ ಮಾತಿಗೆ ನಡೆದ ಜಗಳದಲ್ಲಿ ಸಿಧು 65 ವರ್ಷದ ಗುರ್ನಾಮ್‌ ಸಿಂಗ್‌ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದರು. ಹೀಗಾಗಿ ಪಟಿಯಾಲಾ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿದೆ. ಸದ್ಯ ಜೈಲಿನಲ್ಲಿ ಸಿಧು ಅಕೌಟೆಂಟ್ ಆಗಿ ಕೆಲಸಮಾಡುತ್ತಿದ್ದಾರೆ.
Published by:shrikrishna bhat
First published: