ಒಟ್ಟಿಗೆ ಕಾಣಿಸಿಕೊಂಡ ಸಿಧು- ಕ್ಯಾಪ್ಟನ್​; ಶಮನದತ್ತ ಪಂಜಾಬ್​ ಕಾಂಗ್ರೆಸ್​ ಯುದ್ಧ

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಆಹ್ವಾನದ ಮೇರೆಗೆ ಸಿಧು ಅವರು ಆಗಸ್ಟ್ 2018 ರಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗಿದ್ದರು. ಈ ಕೆಲಸದ ನಂತರ ಇಬ್ಬರ ಭಿನ್ನಾಭಿಪ್ರಾಯಗಳು ಹೆಚ್ಚಾಗಿತ್ತು. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ವಿರೋಧದ ಹೊರತಾಗಿಯೂ, ಸಿಧು ಪಾಕಿಸ್ತಾನಕ್ಕೆ  ಹೋಗಿ ಆ ದೇಶದ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಜ್ವಾ ಅವರನ್ನು ತಬ್ಬಿಕೊಂಡಿದ್ದರು, ಸಿಖ್ ಯಾತ್ರಿಕರಿಗಾಗಿ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ತೆರೆಯುವ ಉದ್ದೇಶದ ಬಗ್ಗೆ ಮಾತನಾಡಿದ್ದರು.

ಕ್ಯಾಪ್ಟನ್​ - ಸಿಧು

ಕ್ಯಾಪ್ಟನ್​ - ಸಿಧು

 • Share this:
  ಪಂಜಾಬ್ ಕಾಂಗ್ರೆಸ್‌ನಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ರಾಜಕೀಯ ಕಚ್ಚಾಟಕ್ಕೆ ಒಂದು ತೆರೆ ಬಿದ್ದಂತೆ ಕಂಡಿತು ಎನ್ನಬುದು. ಶುಕ್ರವಾರ ನಡೆದ  ನವಜೋತ್ ಸಿಂಗ್ ಸಿಧು  ಅವರು ಪಂಜಾಬ್​ ಕಾಂಗ್ರೆಸ್​  ಅಧ್ಯ ಅಧಿಕ್ಷ ಸ್ಥಾನ  ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಭಾಗವಹಿಸಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು. ಇದರಿಂದ ಪಕ್ಷದಲ್ಲಿ ಕಳೆದ ಅನೇಕ ತಿಂಗಳುಗಳಿಂದ ಉಂಟಾಗಿದ್ದ ಉದ್ವಿಗ್ನ ವಾತಾವರಣ ಒಂದು ತಹಬದಿಗೆ ಬಂದಂತೆ ಕಾಣುತ್ತಿತ್ತು. ಉಭಯ ನಾಯಕರುಗಳ ಸುದೀರ್ಘ ಶೀತಲ ಸಮರದ ನಂತರ ಒಟ್ಟಿಗೆ ಚಹಾ ಕೂಟದಲ್ಲಿ ಬೆರೆತು ಮಾತನಾಡಿದ್ದಾರೆ.

  57 ವರ್ಷದ ಅಮೃತಸರ ಎಂಎಲ್​ಎ ಸಿಧು ಅವರು ಗುರುವಾರದಂದು ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ಗೆ ಪತ್ರ ಬರೆದು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ’’ಪಂಜಾಬ್​ ಕಾಂಗ್ರೆಸ್​ ಕುಟುಂಬದ ಅತ್ಯಂತ ಹಿರಿಯರು’’ ಹಾಜರಾಗಬೇಕು ಎಂದು ಮನವಿ ಮಾಡಿದ್ದರು. ಅಲ್ಲದೇ ಇಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಮೃದು ನುಡಿಗಳಲ್ಲಿ ಪತ್ರ ಬರೆದಿದ್ದರಿಂದ ಕ್ಯಾಪ್ಟನ್​ ಸಮಾರಂಭಕ್ಕೆ ಹಾಜರಾದರು ಎಂದು ಹೇಳಲಾಗುತ್ತಿದೆ. ಪಕ್ಷದ ಕಚೇರಿಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯುವುದಕ್ಕೆ ಮುಂಚಿತವಾಗಿ ಮುಖ್ಯಮಂತ್ರಿ ಕಚೇರಿ ಪಂಜಾಬ್​​ ಭವನದಲ್ಲಿ ಚಹಾ ಕೂಟ ಏರ್ಪಡಿಸಲಾಗಿತ್ತು. ಸುಮಾರು 4 ತಿಂಗಳ ನಂತರ ಇಬ್ಬರೂ ನಾಯಕರು ಒಟ್ಟಿಗೆ ಮುಖಾಮುಖಿಯಾಗಿ ಮಾತನಾಡಿದರು.

  ಉಭಯ ನಾಯಕರು ತಮ್ಮ ಭಿನ್ನಾಬಿಪ್ರಾಯಗಳನ್ನು ಮರೆಯಲು ನಿರ್ಧರಿಸಿದಂತೆ ಕಂಡು ಬರುತ್ತಿತ್ತು. ಸಿಎಂ ಅಮರಿಂದರ್ ಸಿಂಗ್ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ,  ಹೊಸ ರಾಜ್ಯ ಅಧ್ಯಕ್ಷರಿಗೆ ಸಂಪೂರ್ಣ ಬೆಂಬಲ ನೀಡುವಂತೆ ಒತ್ತಾಯಿಸಿದರು. “ನಾವು ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು. ಈ ಹಂತದಿಂದ ಎಲ್ಲರಿಗೂ ನಾನು ಹೇಳುತ್ತಿದ್ದೇನೆ, ನಾವು ಸಿಧು ಅವರನ್ನು ಬೆಂಬಲಿಸಬೇಕು ಮತ್ತು ಪಂಜಾಬ್‌ಗಾಗಿ ಒಟ್ಟಾಗಿ ಕೆಲಸ ಮಾಡಬೇಕು. " ಎಂದು ಹೇಳಿದರು.

  ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಳ್ಳುವ ಮುನ್ನ, ಸಿಧು ಮುಖ್ಯಮಂತ್ರಿಯನ್ನು ಪಂಜಾಬ್ ಭವನದಲ್ಲಿ ಭೇಟಿಯಾದರು. ಸಿಧು ಅವರು ಮುಖ್ಯಮಂತ್ರಿ ಕ್ಯಾಪ್ಟನ್​ ಅವರನ್ನು ಸ್ವಾಗತಿಸುತ್ತಿರುವ ವೀಡಿಯೊ ವೈರಲ್​ ಆಗಿದ್ದು ಅದರಲ್ಲಿ, “ನೀವು ಹೇಗಿದ್ದೀರಿ, ಸರ್?” ಎಂದು ಕೇಳಿದ್ದಾರೆ. ಮುಖ್ಯಮಂತ್ರಿ ಮತ್ತು ಸಿಧು ಪಂಜಾಬ್ ಭವನದಲ್ಲಿ ಮತ್ತು ನಂತರ ಪಕ್ಷದ ಪ್ರಧಾನ ಕಚೇರಿಯಲ್ಲಿ ಒಬ್ಬರ ಪಕ್ಕ ಒಬ್ಬರು ಕುಳಿತಿರುವುದು ಕಂಡುಬಂತು!
   ಕಾಂಗ್ರೆಸ್ ಶಾಸಕ ಪರ್ಗತ್ ಸಿಂಗ್ ಮಾತನಾಡಿ, ಪಂಜಾಬ್ ಭವನದಲ್ಲಿ ಸಿಧು ಮತ್ತು ಸಿಎಂ ನಡುವಿನ ಸಭೆ "ಸೌಹಾರ್ದಯುತವಾಗಿತ್ತು" ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಹರೀಶ್​ ರಾವತ್​ ಈ ಸಂದರ್ಭಕ್ಕೆ ಸಾಕ್ಷಿಯಾದರು.


  ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಇಬ್ಬರು ನಾಯಕರು ಸಂಭಾಷಣೆ ನಡೆಸುತ್ತಿರುವ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. ಸಮಾರಂಭದ ಮೊದಲು ಪಂಜಾಬ್ ಭವನದಲ್ಲಿ ಚಹ ಕೂಟಕ್ಕೆ ಸಿಎಂ ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸಿದ್ದರು.  ಸಿಧು ಅವರು ಪಟಿಯಾಲದಿಂದ ಬಂದು ಸಿಎಂ ಆಗಮನಕ್ಕೆ ಸ್ವಲ್ಪ ಮೊದಲು ಪಂಜಾಬ್ ಭವನಕ್ಕೆ ಹೋದರು.


  ಸಿಧು ಅವರನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಿಸುವುದನ್ನು ಮುಖ್ಯಮಂತ್ರಿ ವಿರೋಧಿಸಿದ್ದರು ಮತ್ತು ಅವರ ವಿರುದ್ಧದ “ಅವಹೇಳನಕಾರಿ” ಟ್ವೀಟ್‌ ಮಾಡಿರುದಕ್ಕೆ ಕ್ಷಮೆಯಾಚಿಸುವವರೆಗೂ ಅವರನ್ನು ಭೇಟಿಯಾಗುವುದಿಲ್ಲ ಎಂದು ಹೇಳಿದ್ದರು.


  ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಂದ ತುಂಬಿ ತುಳುಕುತ್ತಿದ್ದ ಪಕ್ಷದ ಪ್ರಧಾನ ಕಚೇರಿಯಲ್ಲಿ ನಾಲ್ಕು ಕಾರ್ಯಕಾರಿ ಅಧ್ಯಕ್ಷರೊಂದಿಗೆ ಸುನಿಲ್ ಜಖರ್ ಅವರ ಬದಲಾಗಿ ಸಿಧು ಅವರು ಅಧಿಕಾರ ವಹಿಸಿಕೊಂಡರು. ಪಕ್ಷದ ಹೈಕಮಾಂಡ್ ಸಂಗತ್ ಸಿಂಗ್ ಗಿಲ್ಜಿಯಾನ್, ಸುಖ್ವಿಂದರ್ ಸಿಂಗ್ ಡ್ಯಾನಿ, ಪವನ್ ಗೋಯೆಲ್ ಮತ್ತು ಕುಲ್ಜಿತ್ ಸಿಂಗ್ ನಾಗ್ರಾ ಅವರನ್ನು ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿ ಸಿಧು ಅವರಿಗೆ ಸಹಾಯ ಮಾಡಲು ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಿದೆ.
  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಆಹ್ವಾನದ ಮೇರೆಗೆ ಸಿಧು ಅವರು ಆಗಸ್ಟ್ 2018 ರಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗಿದ್ದರು. ಈ ಕೆಲಸದ ನಂತರ ಇಬ್ಬರ ಭಿನ್ನಾಭಿಪ್ರಾಯಗಳು ಹೆಚ್ಚಾಗಿತ್ತು. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ವಿರೋಧದ ಹೊರತಾಗಿಯೂ, ಸಿಧು ಪಾಕಿಸ್ತಾನಕ್ಕೆ  ಹೋಗಿ ಆ ದೇಶದ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಜ್ವಾ ಅವರನ್ನು ತಬ್ಬಿಕೊಂಡು, ಸಿಖ್ ಯಾತ್ರಿಕರಿಗಾಗಿ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ತೆರೆಯುವ ಉದ್ದೇಶದ ಬಗ್ಗೆ ಮಾತನಾಡಿದ್ದರು. 2019 ರಲ್ಲಿ, ಚಂಡೀಗಡದಿಂದ ಲೋಕಸಭಾ ಟಿಕೆಟ್ ಕೈ ತಪ್ಪದ ನಂತರ ಸಿಧು ಅವರು ಸಿಂಗ್ ಅವರನ್ನು ದೂಷಿಸಿದ್ದರು. ಈ ಆರೋಪವನ್ನು ಮುಖ್ಯಮಂತ್ರಿ ನಿರಾಕರಿಸಿದ್ದರು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


  Published by:HR Ramesh
  First published: