Sidhu Comeback- ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಸಿಧುವೇ ಮುಂದುವರಿಕೆ; ಶುಕ್ರವಾರ ಅಧಿಕೃತ ಘೋಷಣೆ

Punjab Congress Crisis- ಹಿಂದಿನ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಈಗಿನ ಸಿಎಂ ಚನ್ನಿ ಜೊತೆ ಮುನಿಸಿಕೊಂಡು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ನವಜೋತ್ ಸಿಧು ಅವರನ್ನ ಅದೇ ಸ್ಥಾನದಲ್ಲಿ ಮುಂದುವರಿಸುವ ಸಾಧ್ಯತೆ ಇದೆ.

ನವಜೋತ್ ಸಿಂಗ್ ಸಿಧು

ನವಜೋತ್ ಸಿಂಗ್ ಸಿಧು

  • News18
  • Last Updated :
  • Share this:
    ನವದೆಹಲಿ: ಪಂಜಾಬ್ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಆಂತರಿಕ ಕಲಹಕ್ಕೆ ಹೈಕಮಾಂಡ್ ಮತ್ತೆ ಮುಲಾಮು ಹಚ್ಚಿದ್ದು, ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು ಮತ್ತೆ ಅಧ್ಯಕ್ಷ ಸ್ಥಾನ (Punjab Congress Chief) ದಲ್ಲಿ ಮುಂದುವರಿಯಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ (AICC general secretary Harish Rawat), ಈಗ ಎಲ್ಲ ಗೊಂದಲಗಳು ಶಮನವಾಗಿವೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ಮುಂದುವರಿಯಲಿದ್ದಾರೆ. ಸಿಧು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವ ಮೂಲಕ ಸಂಘಟನ ಶಕ್ತಿಯನ್ನು ಹೆಚ್ಚಿಸಲಿದ್ದಾರೆ ಎಂದು ಹೇಳಿದ್ದಾರೆ. ಆದ್ರೆ ಈವರೆಗೂ ಕಾಂಗ್ರೆಸ್ ನಿಂದ ಅಧಿಕೃತ ಹೇಳಿಕೆ ಬಿಡುಗಡೆಗೊಂಡಿಲ್ಲ. ಈ ಸಂಬಂಧ ಶುಕ್ರವಾರ ಅಧಿಕೃತ ಘೋಷಣೆ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

    ಮಾತುಕತೆ ಮೂಲಕ ಪರಿಹಾರ:

    ಮಾತುಕತೆಯ ಮೂಲಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುತ್ತಿದೆ. ಸಿಧು ಮತ್ತು ಸಿಎಂ ಚರಣಜೀತ್ ಸಿಂಗ್ ಚನ್ನಿ ಎಲ್ಲ ವಿಷಯಗಳ ಕುರಿತು ಮಾತನಾಡಿದ್ದಾರೆ. ಯಾವುದೇ ತೊಂದರೆಗಳಿದ್ರೂ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಹರೀಶ್ ರಾವತ್ ಹೇಳಿಕೆ ನೀಡಿದ್ದಾರೆ. ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡಿದ್ದ ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಪತ್ರ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ತದನಂತರ ಸಿಎಂ ಮತ್ತು ಸಿಧು ನಡುವಿನ ಮನಸ್ತಾಪ ಜಗಜ್ಜಾಹೀರು ಆಗಿತ್ತು. ಕಾಂಗ್ರೆಸ್ ವಿರುದ್ಧವೇ ಹೇಳಿಕೆ ನೀಡುವ ಮೂಲಕ ಸಿಎಂ ಚನ್ನಿಯವರಿಗೆ ಮುಜುಗುರ ಉಂಟು ಮಾಡಿದ್ದರು.

    ಇಂದು ದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರನ್ನು ಭೇಟಿ ಮಾಡಿದ್ದ ನವಜೋತ್ ಸಿಂಗ್ ಸಿಧು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿರುವ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದೆ. ಈ ವೇಳೆ ರಾಜೀನಾಮೆ ನೀಡಿದ್ದಕ್ಕೆ ಕಾರಣಗಳನ್ನು ಹೈಕಮಾಂಡ್ ನಾಯಕರ ಮುಂದೆ ಸಿಧು ತಿಳಿಸಿದ್ದಾರೆ. ಇದೇ ವೇಳೆ ಪಕ್ಷ ಸಂಘಟನೆ ಮತ್ತು ವಿಧಾನಸಭಾ ಚುನಾವಣೆ ತಯಾರಿ ಕುರಿತ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಚುನಾವಣೆ ವೇಳೆ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಹೈಕಮಾಂಡ್ ಮುಂದಾಗಿದೆ.

    ಇದನ್ನೂ ಓದಿ: Punjab Congress- ಹೊಸ ಸಮೀಕರಣ? ಸಿಧು ಜೊತೆಗಿನ ಮನಸ್ತಾಪದ ಬಳಿಕ ಕ್ಯಾಪ್ಟನ್ ಭೇಟಿಯಾದ ಸಿಎಂ ಚನ್ನಿ

    ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಸಂಪೂರ್ಣ ವಿಶ್ವಾಸ:

    ನವಜೋತ್ ಸಿಂಗ್ ಸಿಧು ಮತ್ತು ಸಿಎಂ ಚನ್ನಿ ಮಾತುಕತೆ ನಡೆಸಿದ್ದಾರೆ. ಕೆಲ ವಿಷಯಗಳು ಸಮಯವನ್ನು ತೆಗೆದುಕೊಳ್ಳುತ್ತವೆ. ಸಿಧು ಅವರನ್ನೇ ಪಂಜಾಬ್ ಕಾಂಗ್ರೆಸ್ ಅಧ್ಯಜಕ್ಷರನ್ನಾಗಿ ಮುಂದುವರಿಸುವ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಿದ್ದಾರೆ ಎಂದು ಹರೀಶ್ ರಾವತ್ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಧು, ನಾನು ಹೈಕಮಾಂಡ್ ಮುಂದೆ ಪಂಜಾಬ್ ಮತ್ತು ಪಂಜಾಬಿಗಳ ಕುರಿತ ನನ್ನ ಕಳವಳವನ್ನು ಇರಿಸಿದ್ದೇನೆ. ನನಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ (Rahul Gandhi and Priyanka Gandhi) ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ. ಅವರು ತೆಗೆದುಕೊಳ್ಳುವ ನಿರ್ಧಾರಗಳು ಪಂಜಾಬ್ (Punjab) ಹಿತವನ್ನು ಒಳಗೊಂಡಿರುತ್ತವೆ. ಪಕ್ಷದ ನಿರ್ದೇಶನಗಳನ್ನು ಪಾಲನೆ ಮಾಡುತ್ತೇನೆ ಅಂತ ತಿಳಿಸಿದ್ದಾರೆ.

    ಸೆ.28ರಂದು ರಾಜೀನಾಮೆ ನೀಡಿದ್ದ ಸಿಧು:

    ಸೆಪ್ಟೆಂಬರ್ 28ರಂದು ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿವರಿಗೆ ಪತ್ರ ಬರೆದಿದ್ದರು. ನನ್ನ ಪಕ್ಷ ದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಯಾವುದೇ ವ್ಯಕ್ತಿಯ ವ್ಯಕ್ತಿತ್ವವೂ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕುಸಿಯುತ್ತದೆ. ಪಂಜಾಬ್ ಭವಿಷ್ಯ ಮತ್ತು ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜೀ ಮಾಡಿಕೊಳ್ಳಲಾರೆ ಎಂದು ಹೇಳಿದ್ದರು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಸಿಧು ರಾಜೀನಾಮೆ ಪತ್ರವನು ಸ್ವೀಕರಿಸಿರಲಿಲ್ಲ.

    - ಮಹಮ್ಮದ್ ರಫೀಕ್ ಕೆ.
    Published by:Vijayasarthy SN
    First published: