ಪಂಜಾಬ್‌ನ ಪ್ರಗತಿ ನನ್ನ ಪ್ರಗತಿಯಾಗಿದೆ: ಅಧ್ಯಕ್ಷರಾಗುತ್ತಿದ್ದಂತೆ ಚುರುಕಾದ ನವಜೋತ್​ ಸಿಂಗ್​ ಸಿಧು

ಸಿಧು ಅವರ ಬಲ ಪಾದದ ಕಾಲ್ಬೆರಳಿಗೆ ಆದ ಗಾಯದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದರು. ನವಾನ್‌ಶಹರ್‌ನ ಖಟ್ಕರ್ ಕಲಾನ್‌ನಲ್ಲಿ ಅವರ ಕಾಲ್ಬೆರಳ ಉಗುರು ಮುರಿದಿತ್ತು. ಡ್ರೆಸ್ಸಿಂಗ್ ಮಾಡಿಸಿಕೊಂಡ ನಂತರ ಹೊರಟರು.

ಸಿಧುಗೆ ಭರ್ಜರಿ ಸ್ವಾಗತ ಕೋರಿದ ಕಾಂಗ್ರೆಸ್​ ಕಾರ್ಯಕರ್ತರು

ಸಿಧುಗೆ ಭರ್ಜರಿ ಸ್ವಾಗತ ಕೋರಿದ ಕಾಂಗ್ರೆಸ್​ ಕಾರ್ಯಕರ್ತರು

 • Share this:


  ಈ ಬುಧವಾರ ಒಂದು ರೀತಿಯಲ್ಲಿ ಬಲಾ-ಬಲಗಳ ಪ್ರದರ್ಶನಕ್ಕೆ ಪಂಜಾಬ್​ ಸಾಕ್ಷಿಯಾಯಿತು. ಕಳೆದ ಭಾನುವಾರ  ಹೊಸದಾಗಿ ಪಂಜಾಬ್ ಕಾಂಗ್ರೆಸ್  ಅಧ್ಯಕ್ಷರಾಗಿ ನೇಮಕಗೊಂಡ  ನವಜೋತ್ ಸಿಂಗ್ ಸಿಧು ಅವರು 62 ಶಾಸಕರ ಗುಂಪಿನ ಜೊತೆ ಅಮೃತಸರದ ಗೋಲ್ಡನ್ ಟೆಂಪಲ್​ ಬಳಿ ಪ್ರಾರ್ಥನೆ ಸಲ್ಲಿಸಿದರು.

  ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ  ಔಪಚಾರಿಕವಾಗಿ ವಹಿಸಿಕೊಳ್ಳುವ ಮೊದಲು ಗೋಲ್ಡನ್ ಟೆಂಪಲ್‌ನಲ್ಲಿ ಪೂಜೆ ಸಲ್ಲಿಸುವ ಕುರಿತು ಎಲ್ಲಾ 77 ಕಾಂಗ್ರೆಸ್ ಶಾಸಕರನ್ನು ಸಿಧು ಆಹ್ವಾನಿಸಿದ್ದರು, ಆದರೆ ಅವರಲ್ಲಿ ಕೇವಲ 62 ಮಂದಿ ಮಾತ್ರ ಅಮೃತಸರದ ಅವರ ನಿವಾಸಕ್ಕೆ ತೆರಳಿದ್ದರು ಎಂದು ಅವರ ಸಹಾಯಕರು ತಿಳಿಸಿದ್ದಾರೆ.

  “ನಾನು ಪ್ರಮಾಣ ಮಾಡಿದ್ದೇನೆ. ಪಂಜಾಬ್‌ನ ಪ್ರಗತಿಯು ನನ್ನ ಉದ್ದೇಶ. ಪಂಜಾಬ್‌ನ ಪ್ರಗತಿಯು ನನ್ನ ಪ್ರಗತಿಯಾಗಿದೆ ”ಎಂದು ಸಿಧು ಹೇಳಿದರು.

  ಪಂಜಾಬ್​ ಕಾಂಗ್ರೆಸ್​ ಮುಖ್ಯಸ್ಥರಾದ ನಂತರ ಮಂಗಳವಾರ ಅಮೃತಸರಕ್ಕೆ ಆಗಮಿಸಿದ ಸಿಧು ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿತ್ತು. ಸ್ವಾತಂತ್ರ್ಯ ಹೋರಾಟಗಾರ ಭಗತ್​ಸಿಂಗ್​  ಅವರ ಗ್ರಾಮ ಖಟ್ಕರ್ ಕಲನ್​ನಲ್ಲಿ ಇರುವ ಸ್ಮಾರಕಕ್ಕೆ ಭೇಟಿ ನೀಡಿದ್ದರು.

  ನವ್​ಶಹರ್​ ನಲ್ಲಿ ಇರುವ ಕಾಂಗ್ರೆಸ್​ ಕಚೇರಿಗೆ ಭೇಟಿ ನೀಡಿದ ಸಿಧು ಅವರಿಗೆ ಕಾಂಗ್ರೆಸ್ ನೇಮಕ ಮಾಡಿದ ನಾಲ್ಕು ಕಾರ್ಯಕಾರಿ ಅಧ್ಯಕ್ಷರಲ್ಲಿ ಒಬ್ಬರಾದ ಶಾಸಕ ಕುಲ್ಜಿತ್ ಸಿಂಗ್ ನಾಗ್ರಾ, ರಾಜ್ ಕುಮಾರ್ ವರ್ಕಾ, ಅಂಗದ್ ಸೈನಿ, ಸುಖ್ಪಾಲ್ ಭುಲ್ಲರ್, ಇಂದರ್ಬೀರ್ ಸಿಂಗ್ ಬೊಲೇರಿಯಾ ಮತ್ತು ಗುರ್‌ಪ್ರೀತ್ ಸಿಂಗ್ ಜಿ.ಪಿ. ಅವರು ಸಾಥ್​ ನೀಡಿದರು. ಈ ಪ್ರದೇಶದಲ್ಲಿ ಭಾರಿ ಪೊಲೀಸ್ ನಿಯೋಜನೆ ಮಾಡಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.

  ಸಿಧುಗೆ ಹೂವಿನ ಗೌರವ ಸಲ್ಲಿಸಲಾದ ನಂತರ, ಪಕ್ಷದ ಇತರ ಮುಖಂಡರೊಂದಿಗೆ ಅಮೃತಸರ ಕಡೆಗೆ ಹೊರಟರು. ಅಮೃತಸರದ ಮುಖ್ಯ ಪ್ರವೇಶ ದ್ವಾರವಾದ ಗೋಲ್ಡನ್ ಗೇಟ್‌ಗೆ ಆಗಮಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಆತ್ಮೀಯ ಸ್ವಾಗತ ನೀಡಿದರು.

  ಸಿಧು ಅವರನ್ನು ಸ್ವಾಗತಿಸಿದ ಪಕ್ಷದ ಶಾಸಕರಾದ ಇಂದರ್ಬೀರ್ ಸಿಂಗ್ ಬಲೋರಿಯಾ, ರಾಜ್ ಕುಮಾರ್ ವರ್ಕಾ, ಸುನಿಲ್ ದಟ್ಟಿ, ಸುಖ್ವಿಂದರ್ ಸಿಂಗ್ ಡ್ಯಾನಿ ಮತ್ತು ನಾಯಕ ಸುಖ್ಜಿಂದರ್ ರಾಜ್ ಸಿಂಗ್ ಲಾಲಿ ಸೇರಿದ್ದಾರೆ. ಸಿಧು ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಡೋಲಿನ ಬಡಿತಕ್ಕೆ ನೃತ್ಯ ಮಾಡಿದರು.

  ಪಕ್ಷದ ಕಾರ್ಯಕರ್ತರು ಸಿಧು ಅವರ ಪೋಸ್ಟರ್‌ಗಳನ್ನು ನಗರದ ಅನೇಕ ಸ್ಥಳಗಳಲ್ಲಿ ಹಾಕಿದ್ದರು.

  ಅವರ ನಿವಾಸಕ್ಕೆ ಹೋಗುವ ಮೊದಲು, ಸಿಧು ಅವರ ಬಲ ಪಾದದ ಕಾಲ್ಬೆರಳಿಗೆ ಆದ ಗಾಯದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದರು. ನವಾನ್‌ಶಹರ್‌ನ ಖಟ್ಕರ್ ಕಲಾನ್‌ನಲ್ಲಿ ಅವರ ಕಾಲ್ಬೆರಳ ಉಗುರು ಮುರಿದಿತ್ತು. ಡ್ರೆಸ್ಸಿಂಗ್ ಮಾಡಿಸಿಕೊಂಡ ನಂತರ ಹೊರಟರು.

  ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಪಂಜಾಬ್ ಕಾಂಗ್ರೆಸ್​ ಘಟಕದ ನೂತನ ಅಧ್ಯಕ್ಷರನ್ನಾಗಿ ನವಜೋತ್ ಸಿಂಗ್ ಸಿಧು ಅವರನ್ನು ನೇಮಕ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯ ತಯಾರಿ ಹಾಗೂ ಅಧಿಕಾರ ಹಿಡಿಯುವ ಸಲುವಾಗಿ ಸಿಧು ಅವರಿಗೆ ಸಹಾಯ ಮಾಡಲು ನಾಲ್ಕು ಕಾರ್ಯಕಾರಿ ಅಧ್ಯಕ್ಷರನ್ನು ನೇಮಿಸಲಾಗಿದೆ.


  ನೇಮಕಾತಿಯ ನಂತರ, ಸಿಧು ಸೋಮವಾರ 'ಜೀತೇಗಾ ಪಂಜಾಬ್' ಮಿಷನ್ ಪೂರೈಸಲು ಪ್ರತಿಯೊಬ್ಬ "ಕಾಂಗ್ರೆಸ್​ ಕುಟುಂಬದ" ಸದಸ್ಯರೊಂದಿಗೆ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದರು. 57 ವರ್ಷದ ಕ್ರಿಕೆಟಿಗ- ರಾಜಕಾರಣಿಯನ್ನು ಪಂಜಾಬ್ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಿದ ಕಾಂಗ್ರೆಸ್ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದರು. ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸುವುದಾಗಿ ಪ್ರತಿಪಾದಿಸಿದರು. ಕಾಂಗ್ರೆಸ್ ಆಡಳಿತದಲ್ಲಿರುವ ಈ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ.


  ಸಿಧು ಸೋಮವಾರ ಬೆಳಿಗ್ಗೆ ಚಂಡೀಗ ಡಕ್ಕೆ ಆಗಮಿಸಿ ಮಾಜಿ ಮುಖ್ಯಮಂತ್ರಿ ರಾಜಿಂದರ್ ಕೌರ್ ಭತಲ್, ಮಂತ್ರಿಗಳಾದ ರಾಜಿಂದರ್ ಸಿಂಗ್ ಬಜ್ವಾ, ಚರಣಜಿತ್ ಸಿಂಗ್, ರಜಿಯಾ ಸುಲ್ತಾನಾ ಮತ್ತು ಸುಖ್ಜಿಂದರ್ ಸಿಂಗ್ ರಾಂಧವಾ ಸೇರಿದಂತೆ ಪಕ್ಷದ ಹಲವಾರು ಮುಖಂಡರನ್ನು ಭೇಟಿ ಮಾಡಿದ್ದರು.


  ಸಿಧು ಟ್ವಿಟರ್​ನಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರೊಂದಿಗೆ ಇರುವ ತಮ್ಮ ತಂದೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. "ಸಮೃದ್ಧಿ, ಸವಲತ್ತು ಮತ್ತು ಸ್ವಾತಂತ್ರ್ಯವನ್ನು ಹಂಚಿಕೊಳ್ಳಲು ಕೆಲವರಲ್ಲಿ ಮಾತ್ರವಲ್ಲದೆ, ನನ್ನ ತಂದೆ ಕಾಂಗ್ರೆಸ್ ಕಾರ್ಯಕರ್ತರು, ರಾಜಮನೆತನ ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು, ಅಂದಿನ ಬ್ರಿಟಿಷ್​ ಸರ್ಕಾರ ಅವರ ದೇಶಭಕ್ತಿಯ ಕೆಲಸಕ್ಕಾಗಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. , ಎಂಎಲ್​ಎ, ಎಂಎಲ್​ಸಿ ಮತ್ತು ಅಡ್ವೊಕೇಟ್ ಜನರಲ್  ಆಗಿದ್ದರು ಎಂದು ಬರೆದಿದ್ದಾರೆ.

  ನಾಗ್ರಾ ಅವರ ನಿವಾಸದಲ್ಲಿ, ಸಿಹಿ ವಿತರಿಸಲಾಯಿತು, ಕೇಕ್ ಕತ್ತರಿಸಲಾಯಿತು. ನಂತರ ಪಂಜಾಬ್ ಯೂತ್ ಕಾಂಗ್ರೆಸ್ ಮುಖ್ಯಸ್ಥ ಬರೀಂದರ್ ಸಿಂಗ್ ಧಿಲ್ಲೋನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು.


  ಇದನ್ನೂ ಓದಿ: ಪಂಜಾಬ್​ ಕಾಂಗ್ರೆಸ್​ ಬಲ ಪ್ರದರ್ಶನ; ಸಿಧು 62 -ಕ್ಯಾಪ್ಟನ್​ 15: ಈಗ ಆಟ ಶುರು ಎಂದ ಬಿಜೆಪಿ

  ನಂತರ ಅವರು ಪಂಜಾಬ್ ಮಾಜಿ ಸಿಎಂ ರಾಜಿಂದರ್ ಕೌರ್ ಭತಾಲ್ ಅವರ ನಿವಾಸಕ್ಕೆ ತೆರಳಿ ಅವರ ಆಶೀರ್ವಾದ ಕೋರಿದರು. ಸಿಧು ಅವರು ಪಿಪಿಸಿಸಿ ಅಧ್ಯಕ್ಷರಾಗುವುದಕ್ಕೂ ಮೊದಲೇ ಕಳೆದ ಕೆಲವು ದಿನಗಳಿಂದ ಪಕ್ಷದ ಮುಖಂಡರನ್ನು ಭೇಟಿಯಾಗುತ್ತಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: