ತಣ್ಣಾಗದ ಸಿಧು: ಪದವಿ ಇರಲಿ.. ಬಿಡಲಿ.. ರಾಹುಲ್-ಪ್ರಿಯಾಂಕಾ ಜೊತೆಗಿರುವೆ ಎಂದ Navjot Singh Sidhu

punjab congress crisis: ಪಂಜಾಬ್ ಕಾಂಗ್ರೆಸ್ ಹಾವು-ಏಣಿ ಆಟಕ್ಕೆ ಪೂರ್ಣವಿರಾಮ ಬಿದ್ದಿಲ್ಲ. ಅಕ್ಟೋಬರ್ 4ರ ಸಂಪುಟ ಸಭೆ ಬಳಿಕ ಸಿಧು ಮುಂದಿನ ನಡೆ ಏನಿರಲಿದೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ.

ಕಾಂಗ್ರೆಸ್​ ನಾಯಕರು.

ಕಾಂಗ್ರೆಸ್​ ನಾಯಕರು.

 • Share this:
  ನವದೆಹಲಿ: ಪಂಜಾಬ್ ಕಾಂಗ್ರೆಸ್ (Punjab Congress Crisis) ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ನವಜೋತ್ ಸಿಂಗ್ ಸಿಧು (Navjot Singh Sidhu) ತಣ್ಣಗಾದಂತೆ ಕಾಣುತ್ತಿದೆ. ಪದವಿ ಸಿಕ್ಕರೂ, ಸಿಗದಿದ್ದರೂ ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಜೊತೆಗಿರುತ್ತೇನೆ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ನಕರಾತ್ಮಕ ಶಕ್ತಿಗಳು ನನ್ನನ್ನು ಹೊರಗೆ ಕಳುಹಿಸಲು ಪ್ರಯತ್ನಿಸುತ್ತಿವೆ. ಆದ್ರೆ ಸಕಾರಾತ್ಮಕ ಶಕ್ತಿಯಿಂದ ಪಂಜಾಬ್ ನಲ್ಲಿ ಕಾಂಗ್ರೆಸ್ ಗೆಲುವನ್ನು ಸುನಿಶ್ಚಿತವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಇದು ಎಲ್ಲ ಪಂಜಾಬಿಗಳ ಗೆಲುವು ಆಗಲಿದೆ ಎಂದು ಭವಿಷ್ಯ ನುಡಿದರು.

  ಅಕ್ಟೋಬರ್ 4ಕ್ಕೆ ಆಟ ಮೂಂದೂಡಿಕೆ

  ಪಂಜಾಬ್ ಕಾಂಗ್ರೆಸ್ ಹಾವು-ಏಣಿ ಆಟಕ್ಕೆ ಪೂರ್ಣವಿರಾಮ ಬಿದ್ದಿಲ್ಲ. ಅಕ್ಟೋಬರ್ 4ರ ಸಂಪುಟ ಸಭೆ ಬಳಿಕ ಸಿಧು ಮುಂದಿನ ನಡೆ ಏನಿರಲಿದೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಸಂಪುಟ ಸಭೆಯಲ್ಲಿ ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ (CM Charanjit Singh Channi) ಎಲ್ಲ ಮಂತ್ರಿಮಹೋದಯರ ಮನವೊಲಿಸಿ ಸಿಧು ಬೇಡಿಕೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತಾರೆ ಎಂಬುವುದು ಸೋಮವಾರ  ತಿಳಿಯಲಿದೆ. ಉತ್ತರಾಖಂಡ ಮಾಜಿ ಸಿಎಂ ಹರೀಶ್ ರಾವತ್ ಅವರನ್ನು ಪಂಜಾಬ್ ಪ್ರದೇಶ ಪ್ರಭಾರಿಯಿಂದ ತೆಗೆಯುವ ಸಾಧ್ಯತೆಗಳಿವೆ. ತೆರವಾಗುವ ಸ್ಥಾನಕ್ಕೆ ಹರೀಶ್ ಚೌಧರಿ ಅವರನ್ನು ತರುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಕಳೆದ 15 ದಿನಗಳಿಂದ ಪಂಜಾಬ್ ನಲ್ಲಿ ರಾಜಕಾರಣಿಗಳ ಸ್ಥಾನಪಲ್ಲಟ ಆಗುತ್ತಲಿದೆ.

  ಇದನ್ನೂ ಓದಿ: K-9 Vajra: ಲಡಾಕ್ ಗಡಿ ತಲುಪಿದ ಕೆ-9 ವಜ್ರ; ಚೀನಾ ಎದುರಿಸಲು ಸಿದ್ಧಗೊಳ್ಳುತ್ತಿರುವ ಇಂಡಿಯನ್ ಆರ್ಮಿ

  ಇದಕ್ಕೂ ಮೊದಲು ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh) ರಾಜೀನಾಮೆ ಬಳಿಕ ಕಾಂಗ್ರೆಸ್ ಹೈ ಕಮಾಂಡ್ ಮುಖ್ಯಮಂತ್ರಿಯನ್ನಾಗಿ ಚರಣ್‍ಜಿತ್ ಸಿಂಗ್ ಚನ್ನಿ ಅವರನ್ನ ಆಯ್ಕೆ ಮಾಡಿತ್ತು. ಈ ನಡುವೆ ಹಠ ಹಿಡಿದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುರ್ಚಿ ಏರಿದ್ದ ಸಿಧು, ರಾಜೀನಾಮೆ ನೀಡಿದ್ದರು. ತದನಂತರ ಸಿಧು ಮನವೊಲಿಸುವಲ್ಲಿ ಸಿಎಂ ಚನ್ನಿ ಯಶಸ್ವಿಯಾಗಿದ್ದರು.

  ಬಿಜೆಪಿ ಸೇರ್ಪಡೆಗೆ ವಯಸ್ಸು ಅಡ್ಡಿಯಾಯ್ತಾ?

  ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಳಿಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನ ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು. ಈ ವೇಳೆ ಬಿಜೆಪಿ (BJP) ಸೇರ್ಪಡೆಯಾದ್ರೆ ಯಾವುದೇ ಸ್ಥಾನಮಾನ ಸಿಗಲ್ಲ ಎಂಬುವುದು ಕ್ಯಾಪ್ಟನ್ ಗೆ ಖಾತ್ರಿ ಆಯ್ತು ಎನ್ನಲಾಗಿದೆ. ಹಾಗಾಗಿ ಬಿಜೆಪಿ ಸೇರ್ಪಡೆಗೆ ಮುಂದಿಟ್ಟ ಹೆಜ್ಜೆ ಹಿಂದಿಟ್ಟರು ಎನ್ನಲಾಗಿದೆ. ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟ ನಾಯಕರಿಗೆ ಯಾವುದೇ ಸ್ಥಾನಮಾನ ನೀಡಲ್ಲ ಎಂಬ ಅಲಿಖಿತ ನಿಯಮ ಇದೆ. ಸದ್ಯ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ವಯಸ್ಸು 79. ಈ ನಡುವೆ ಕ್ಯಾಪ್ಟನ್ ಹೊಸ ಪಕ್ಷ ಸ್ಥಾಪನೆ ಕುರಿತು ಚಿಂತನೆ ನಡೆಸಿದ್ದಾರೆ.

  ಛತ್ತೀಸಗಢದಲ್ಲಿಯೂ ಬಂಡಾಯದ ಬಾವುಟ

  ಪಂಜಾಬ್ ರಾಜಕೀಯ ಬೆಳವಣಿಗೆ ನಡುವೆ ಛತ್ತೀಸಗಢದಲ್ಲಿಯೂ ಬಂಡಾಯ ಬಾವುಟ ಹಾರಾಡುತ್ತಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ (Chief Minister Bhupesh Baghel) ಅವರನ್ನ ಕೆಳಗಿಳಿಸುವಂತೆ ಬಂಡಾಯಗಾರರ ಗುಂಪು ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ರೆ, ಸಿಎಂ ಆಪ್ತ ಬಣ ಭೂಪೇಶ್ ಬಘೇಲ್ ಅವರೇ ಮುಖ್ಯ ಮಂತ್ರಿಯಾಗಿ ಮುಂದುವರಿಯಬೇಕೆಂದು ಹೇಳುತ್ತಿದೆ. ಪಂಜಾಬಿನಂತೆ ಛತ್ತೀಸಗಢದಲ್ಲಿ ಕಾಂಗ್ರೆಸ್ ಹೈಕಮಾಂಡ್ (Congress High Command) ಇಕ್ಕಟ್ಟಿಗೆ ಸಿಲುಕಿದೆ.

  ವರದಿ: ಮಹ್ಮದ್​ ರಫೀಕ್​ ಕೆ 
  Published by:Kavya V
  First published: