5 ಸ್ಟಾರ್ ‘ಗಾರ್ಬೇಜ್ ಫ್ರೀ ಸಿಟೀಸ್​​ 2020: ದೇಶದ ನಂ.1 ಕಸ ಮುಕ್ತ ನಗರಿ ಅಂಬಿಕಾಪುರ, ಮೈಸೂರಿಗೆ ಸಿಕ್ತು ನಾಲ್ಕನೇ ಪಟ್ಟ

ಕಳೆದ ಮೂರು ತಿಂಗಳಿಂದ ಸಮೀಕ್ಷೆಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಕೇಂದ್ರದ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿದೆ. ವಾಣಿಜ್ಯ ಸಂಕೀರ್ಣಗಳ ಬಳಿ ಎಲ್ಲಿಯೂ ಹೆಚ್ಚಾಗಿ ಕಸ ಕಾಣಿಸದಂತೆ ಮುನ್ನೆಚ್ಚರಿಕೆಯಾಗಿ ರಾತ್ರಿ ವೇಳೆ ಸ್ವಚ್ಛತಾ ಕಾರ್ಯ ನಡೆಸಲಾಗಿತ್ತು.

news18-kannada
Updated:May 19, 2020, 2:10 PM IST
5 ಸ್ಟಾರ್ ‘ಗಾರ್ಬೇಜ್ ಫ್ರೀ ಸಿಟೀಸ್​​ 2020: ದೇಶದ ನಂ.1 ಕಸ ಮುಕ್ತ ನಗರಿ ಅಂಬಿಕಾಪುರ, ಮೈಸೂರಿಗೆ ಸಿಕ್ತು ನಾಲ್ಕನೇ ಪಟ್ಟ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಮೇ.19): ರಾಷ್ಟ್ರಮಟ್ಟದ 5 ಸ್ಟಾರ್ ಗಾರ್ಬೇಜ್ ಫ್ರೀ' ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಂಬಿಕಾಪುರ ಮೊದಲ ಸ್ಥಾನ ಪಡೆದುಕೊಂಡಿದೆ. ಜತೆಗೆ ಈ ಹಿಂದಿನಿಂದಲೂ 'ದೇಶದ ನಂ.1 ಸ್ವಚ್ಛ ನಗರಿ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಾಂಸ್ಕೃತಿಕ ನಗರ ಮೈಸೂರಿಗೆ ನಾಲ್ಕನೇ ಪಟ್ಟ ಸಿಕ್ಕಿದೆ. ರಾಜಕೋಟ್​​ ನಂ.2 , ಸೂರತ್​​ ಮೂರನೇ ಸ್ಥಾನ ಮತ್ತ ನಂತರದ ಸ್ಥಾನಗಳಲ್ಲಿ ಇಂಧೋರ್, ನವಿ ಮುಂಬೈ ತೃಪ್ತಿಪಟ್ಟುಕೊಂಡಿವೆ.

ಇದೇ ವರ್ಷದ 2020-21ನೇ ಸಾಲಿನ ರಾಷ್ಟ್ರಮಟ್ಟದ 5 ಸ್ಟಾರ್ ಗಾರ್ಬೇಜ್ ಫ್ರೀ' ಅಭಿಯಾನದಲ್ಲಿ ದೇಶದ 10 ನಗರಗಳು ಆಯ್ಕೆಯಾಗಿದ್ದವು. ಈ ಪೈಕಿ ಮೈಸೂರು ನಗರವೂ ಸ್ಥಾನ ಪಡೆದಿದ್ದು, ಮತ್ತೊಮ್ಮೆ ದೇಶದ ನಂಬರ್‌.1 ಸ್ವಚ್ಛನಗರಿ ಮತ್ತು ಕಸ ಮುಕ್ತ ನಗರ ಎಂಬ ಪಟ್ಟ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೀಗ ಅಂಬಿಕಾಪುರಕ್ಕೆ ಮೊದಲ ಸ್ಥಾನ ದೊರಕಿದೆ.

ಮೈಸೂರು ನಗರ ಪಾಲಿಕೆ ಪ್ರತಿನಿತ್ಯ ಕೇಂದ್ರ ಸರ್ಕಾರದ ಈ ಅಭಿಯಾನಕ್ಕೆ ಮಾಹಿತಿಗಳನ್ನು ಅಪ್‌ಲೋಡ್‌ ಮಾಡುತ್ತಿತ್ತು. ಇದಕ್ಕಾಗಿ ಒಂದು ವಿಶೇಷ ತಂಡವನ್ನು ಆಯೋಜಿಸಲಾಗಿತ್ತು. ಕಳೆದ ಮೂರು ತಿಂಗಳಿಂದ ಸಮೀಕ್ಷೆಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಕೇಂದ್ರದ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿದೆ. ವಾಣಿಜ್ಯ ಸಂಕೀರ್ಣಗಳ ಬಳಿ ಎಲ್ಲಿಯೂ ಹೆಚ್ಚಾಗಿ ಕಸ ಕಾಣಿಸದಂತೆ ಮುನ್ನೆಚ್ಚರಿಕೆಯಾಗಿ ರಾತ್ರಿ ವೇಳೆ ಸ್ವಚ್ಛತಾ ಕಾರ್ಯ ನಡೆಸಲಾಗಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ಒಂದೇ ದಿನ ಕೊರೋನಾಗೆ 3 ಬಲಿ, 127 ಕೇಸ್​​ ಪತ್ತೆ; ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆ

5 ಸ್ಟಾರ್ ಗಾರ್ಬೇಜ್ ಫ್ರೀ' ನಗರಗಳ ಪಟ್ಟಿ ಇಲ್ಲಿದೆ..

  1. ಅಂಬಿಕಾಪುರ
  2. ರಾಜಕೋಟ್​​

  3. ಸೂರತ್​​

  4. ಮೈಸೂರು

  5. ಇಂಧೋರ್​​

  6. ನವಿ ಮುಂಬೈ


First published: May 19, 2020, 2:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading