HOME » NEWS » National-international » NATIONWIDE CORONAVIRUS VACCINE PM MODI DISCUSS WITH CMS OF ALL STATES TODAY MAK

ರಾಷ್ಟ್ರವ್ಯಾಪಿ ಕೊರೋನಾ ಲಸಿಕೆ ವಿತರಣೆ; ಇಂದು ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಚರ್ಚೆ

ವಿತರಣಾ ವ್ಯವಸ್ಥೆಯನ್ನು ಪರೀಕ್ಷಿಸಲು ಕೇಂದ್ರ ಸರ್ಕಾರ ಮೂರು ಕೊರೋನಾ ವೈರಸ್ ಲಸಿಕೆ ಡ್ರೈ ರನ್​ಗಳ್ನು ಈಗಾಗಲೇ ದೇಶವ್ಯಾಪಿ ನಡೆಸಿದೆ. ಕೋವಿನ್ (ಕೋವಿಡ್ ಲಸಿಕೆ ಇಂಟೆಲಿಜೆನ್ಸ್ ನೆಟ್‌ವರ್ಕ್) ಅಪ್ಲಿಕೇಶನ್ ಅನ್ನು ಕೇಂದ್ರವು ಬೃಹತ್ ವ್ಯಾಕ್ಸಿನೇಷನ್ ಡ್ರೈವ್ ನಿರ್ವಹಿಸಲು ಬಳಸುತ್ತಿದೆ.

news18-kannada
Updated:January 11, 2021, 10:10 AM IST
ರಾಷ್ಟ್ರವ್ಯಾಪಿ ಕೊರೋನಾ ಲಸಿಕೆ ವಿತರಣೆ; ಇಂದು ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಚರ್ಚೆ
ನರೇಂದ್ರ ಮೋದಿ.
  • Share this:
ನವ ದೆಹಲಿ (ಜನವರಿ 11); ಭಾರತದಲ್ಲಿ ಕೊರೋನಾ ಸೋಂಕಿನಿಂದಾಗಿ ಈವರೆಗೆ 1.5 ಲಕ್ಷ ಜನ ಮೃತಪಟ್ಟಿದ್ದಾರೆ. ಕೋಟ್ಯಾಂತರ ಜನ ಈ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಕಳೆದ ಒಂದು ವರ್ಷದಿಂದ ನಾನಾ ಕಂಪೆನಿಗಳು ಕೊರೋನಾಗೆ ಲಸಿಕೆಯನ್ನು ಸಂಶೋಧಿಸಲು ಸಾಕಷ್ಟು ಪ್ರಯತ್ನಿಸಿವೆ. ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಕಳೆದ ವಾರ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಮತ್ತು ಪುಣೆ ಮೂಲದ-ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ತುರ್ತಾಗಿ ಬಳಸಲು ಅನುಮತಿ ನೀಡಿದೆ. ಹೀಗಾಗಿ ಕಳೆದ ಒಂದು ವಾರದಿಂದ ಈ ಲಸಿಕೆಯನ್ನು ಈಗಾಗಲೇ ಲಕ್ಷಾಂತರ ಜನರಿಗೆ ಡ್ರೈರನ್ ಮೂಲಕ ನೀಡಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರ ವಿಶ್ವದ ಅತಿದೊಡ್ಡ ಕೊರೋನಾ ವೈರಸ್ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದು ಈ ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಸಿಎಂ ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ.

ಪ್ರಸ್ತುತ ಕೋವಿಡ್​ ಸ್ಥಿತಿಗತಿಗಳ ಕುರಿತು ಶನಿವಾರ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಕೆಲವೇ ಗಂಟೆಗಳ ನಂತರ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, "ಜನವರಿ 16 ರಂದು, ಭಾರತವು COVID-19 ವಿರುದ್ಧ ಹೋರಾಡುವಲ್ಲಿ ಒಂದು ಮಹತ್ವದ ಹೆಜ್ಜೆಗುರುತನ್ನು ಇಡಲಿದೆ. ಆ ದಿನದಿಂದ, ಭಾರತದ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾಗುತ್ತದೆ. ನಮ್ಮ ಧೈರ್ಯಶಾಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು, ಸಫಾಯಿ ಕರ್ಮಚಾರಿಗಳು ಸೇರಿದಂತೆ ಮುಂಚೂಣಿ ಕೆಲಸಗಾರರಿಗೆ ಆದ್ಯತೆ ನೀಡಲಾಗುವುದು" ಎಂದು ತಿಳಿಸಿದ್ದರು.

ವಿತರಣಾ ವ್ಯವಸ್ಥೆಯನ್ನು ಪರೀಕ್ಷಿಸಲು ಕೇಂದ್ರ ಸರ್ಕಾರ ಮೂರು ಕೊರೋನಾ ವೈರಸ್ ಲಸಿಕೆ ಡ್ರೈ ರನ್​ಗಳ್ನು ಈಗಾಗಲೇ ದೇಶವ್ಯಾಪಿ ನಡೆಸಿದೆ. ಕೋವಿನ್ (ಕೋವಿಡ್ ಲಸಿಕೆ ಇಂಟೆಲಿಜೆನ್ಸ್ ನೆಟ್‌ವರ್ಕ್) ಅಪ್ಲಿಕೇಶನ್ ಅನ್ನು ಕೇಂದ್ರವು ಬೃಹತ್ ವ್ಯಾಕ್ಸಿನೇಷನ್ ಡ್ರೈವ್ ನಿರ್ವಹಿಸಲು ಬಳಸುತ್ತಿದೆ.

ಕೋವಿನ್ (KOWIN) ಅಪ್ಲಿಕೇಶನ್ ವೈಯಕ್ತಿಕ ಲಸಿಕೆ ಫಲಾನುಭವಿಗಳನ್ನು ಪತ್ತೆ ಮಾಡುತ್ತದೆ. ಅವರಲ್ಲಿ 79 ಲಕ್ಷಕ್ಕೂ ಹೆಚ್ಚು ಮಂದಿ ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲು ಆದ್ಯತೆ ನೀಡಲಾಗುವುದು ಮತ್ತು ನಂತರ 2 ಕೋಟಿ ಮುಂಚೂಣಿ ಕಾರ್ಮಿಕರು, ಪೊಲೀಸರು ಮತ್ತು ಐಟಿಬಿಪಿ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುವುದು. 50 ವರ್ಷಕ್ಕಿಂತ ಮೇಲ್ಪಟ್ಟ ಇಪ್ಪತ್ತೇಳು ಕೋಟಿ ಜನರು ಮತ್ತು ಸಹ-ಅಸ್ವಸ್ಥತೆ ಹೊಂದಿರುವವರು ಆದ್ಯತೆಯ ಪಟ್ಟಿಯಲ್ಲಿ ಮುಂದಿನ ಸ್ಥಾನದಲ್ಲಿರುತ್ತಾರೆ ಎಂದು ತಿಳಿಸಲಾಗಿದೆ.

ಯೋಜನೆಯನ್ನು ಯಶಸ್ವಿಗೊಳಿಸಲು ಸಾಗಿಸುವ ಲಾಜಿಸ್ಟಿಕ್ಸ್ ಮತ್ತು ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಕೇಂದ್ರವು ಭಾನುವಾರ ರಾಜ್ಯ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿದೆ. ಫಲಾನುಭವಿಗಳ ಡಿಜಿಟಲ್ ದಾಖಲೆಗಳನ್ನು ಇರಿಸಲು ರಾಜ್ಯಗಳನ್ನು ಕೇಳಲಾಗಿದೆ.

ಇದನ್ನೂ ಓದಿ : Mutant Corona: ಲಂಡನ್​ನಿಂದ ಬೆಂಗಳೂರಿಗೆ ಮತ್ತೊಂದು ವಿಮಾನ; 247 ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು!

ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ಕೋವಿಡ್​ ವಿರುದ್ಧ ಪರಿಣಾಮಕಾರಿಯಾಗಿದ್ದು, ವೈರಸ್ ವಿರುದ್ಧ ಗರಿಷ್ಠ ರಕ್ಷಣೆಗಾಗಿ ಇದರ ಎರಡು ಡೋಸ್​ಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು.  ಎರಡನ್ನೂ ಸಾಮಾನ್ಯ ಫ್ರಿಜ್ ತಾಪಮಾನದಲ್ಲಿ (2 ರಿಂದ 8 ಡಿಗ್ರಿ ಸೆಲ್ಸಿಯಸ್) ಸಂಗ್ರಹಿಸಬಹುದು. ಇದರಿಂದಾಗಿ ದೇಶದ ಅಪಾರ ಜನಸಂಖ್ಯೆಗೆ ಲಸಿಕೆ ಹಾಕಲು ಬೇಕಾದ ಕೋಟಿ ಬಾಟಲುಗಳನ್ನು ಸಾಗಿಸಲು ಮತ್ತು ಸಂಗ್ರಹಿಸಲು ಸುಲಭವಾಗುತ್ತದೆ.

ಭಾರತದಲ್ಲಿ ಈವರೆಗೆ 1.04 ಕೋಟಿ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. 1 ಕೋಟಿಗೂ ಹೆಚ್ಚು ಜನರು ಈಗಾಗಲೇ ಚೇತರಿಸಿಕೊಂಡಿದ್ದಾರೆ. 1.5 ಲಕ್ಷ ಜನ ಮೃತಪಟ್ಟಿದ್ದಾರೆ.
Published by: MAshok Kumar
First published: January 11, 2021, 10:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories