ಯುದ್ದೋನ್ಮಾದ ಸೃಷ್ಟಿಗೆ ರಾಷ್ಟ್ರವಾದ, ಭಾರತ್ ಮಾತಾ ಕೀ ಜೈ ಘೋಷಣೆ ದುರ್ಬಳಕೆಯಾಗುತ್ತಿದೆ; ಡಾ.ಮನಮೋಹನ್ ಸಿಂಗ್ ಕಳವಳ

ವಿಶ್ವ ವೇದಿಕೆಗಳಲ್ಲಿ ಭಾರತವು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿಂತಿರುವುದರ ಹಿಂದೆ ಮತ್ತು ಜಗತ್ತಿನ ಪ್ರಮುಖ ಶಕ್ತಿಯಾಗಿ ಕಾಣುತ್ತಿರುವುದರ ಹಿಂದೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪರಿಶ್ರಮವಿದೆ. ಅವರು ನವ ಭಾರತದ ಶಿಲ್ಪಿ. ಇತಿಹಾಸ ಓದದವರು ನೆಹರು ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

news18-kannada
Updated:February 22, 2020, 9:15 PM IST
ಯುದ್ದೋನ್ಮಾದ ಸೃಷ್ಟಿಗೆ ರಾಷ್ಟ್ರವಾದ, ಭಾರತ್ ಮಾತಾ ಕೀ ಜೈ ಘೋಷಣೆ ದುರ್ಬಳಕೆಯಾಗುತ್ತಿದೆ; ಡಾ.ಮನಮೋಹನ್ ಸಿಂಗ್ ಕಳವಳ
ಡಾ. ಮನಮೋಹನ್ ಸಿಂಗ್
  • Share this:
ನವದೆಹಲಿ: ರಾಷ್ಟ್ರವಾದ ಮತ್ತು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಪ್ರಸ್ತುತ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜನರನ್ನು ದಾರಿ ತಪ್ಪಿಸಲು ಈ ಘೋಷಣೆ ಬಳಸಿಕೊಳ್ಳಲಾಗುತ್ತಿದೆ. ಯುದ್ದೋನ್ಮಾದ ಸೃಷ್ಟಿಗೆ ಭಾರತ್ ಮಾತಾ ಕೀ ಜೈ ಘೋಷಣೆ ಬಳಕೆ ಮಾಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಜವಾಹರಲಾಲ್ ನೆಹರು ಅವರ ಲೇಖನಗಳನ್ನು ಪ್ರೊ. ಕೆ.ಇ‌. ರಾಧಾಕೃಷ್ಣ ಅವರು ಕನ್ನಡಕ್ಕೆ ಅನುವಾದ ಮಾಡಿ ಬರೆದಿರುವ 'ಯಾರು ಭಾರತ ಮಾತೆ? ಎಂಬ ಕನ್ನಡ ಪುಸ್ತಕ ಬಿಡುಗಡೆ ಬಿಡುಗಡೆ ಮಾಡಿ ಮಾತನಾಡಿದ ಮನಮೋಹನ್ ಸಿಂಗ್ ಅವರು, ಹೊಸ ಭಾರತ ಕಟ್ಟುವಲ್ಲಿ ನೆಹರು ಪಾತ್ರ ಮಹತ್ವದ್ದು. ವಿಶ್ವ ವೇದಿಕೆಗಳಲ್ಲಿ ಭಾರತವು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿಂತಿರುವುದರ ಹಿಂದೆ ಮತ್ತು ಜಗತ್ತಿನ ಪ್ರಮುಖ ಶಕ್ತಿಯಾಗಿ ಕಾಣುತ್ತಿರುವುದರ ಹಿಂದೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪರಿಶ್ರಮವಿದೆ. ಅವರು ನವ ಭಾರತದ ಶಿಲ್ಪಿ. ಇತಿಹಾಸ ಓದದವರು ನೆಹರು ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ದೇಶ ಆಗಷ್ಟೇ ಪ್ರಜಾಪ್ರಭುತ್ವ ಅಳವಡಿಸಿಕೊಂಡಿದ್ದ ಕಾಲದಲ್ಲಿ ಅತ್ಯಂತ ಕಷ್ಟದ ದಿನಗಳಲ್ಲಿ ಆಗಷ್ಟೇ ದೇಶ ನಿರ್ಮಾಣವಾಗಬೇಕಿದ್ದ ಕಾಲಘಟ್ಟದಲ್ಲಿ ನೆಹರು ವಿಭಿನ್ನ ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನಗಳೊಂದಿಗೆ ಈ ದೇಶವನ್ನು ಮುನ್ನಡೆಸಿದ್ದಾರೆ. ಹೊಸ ಭಾರತವನ್ನು ಅಗತ್ಯದ ಹಿನ್ನೆಲೆಯಲ್ಲಿ ನೆಹರು ಅವರು ಈ ದೇಶವನ್ನು ಸಾಮರಸ್ಯ ಮತ್ತು ಏಕತೆಯ ಉದ್ದೇಶಗಳೊಂದಿಗೆ ಕಟ್ಟಿದ್ದಾರೆ ಎಂದರು.

ಇದನ್ನು ಓದಿ: AICC president: ಕಾಂಗ್ರೆಸ್​​​ಗೆ ಮತ್ತೆ ರಾಹುಲ್​​​ ಗಾಂಧಿ ಅಧ್ಯಕ್ಷ?

ಲಕ್ಷಾಂತರ ಜನರು, ನಾಗರಿಕರ ಹೊರತಾದ ಯುದ್ದೋನ್ಮಾದದ ಮತ್ತು ಸಂಪೂರ್ಣ ಭಾವನಾತ್ಮಕ ಕಲ್ಪನೆಯ ಭಾರತ ಕಟ್ಟುವ ಸಲುವಾಗಿ ರಾಷ್ಟ್ರವಾದ ಮತ್ತು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಹೂ ಈಸ್ ಭಾರತ್ ಮಾತಾ (ಯಾರು ಭಾರತ ಮಾತೆ) ಪುಸ್ತಕ ಅತ್ಯಂತ ಪ್ರಸ್ತುತ ಎನಿಸಿದೆ ಎಂದು ಮನಸಿಂಗ್ ಸಿಂಗ್ ಅಭಿಪ್ರಾಯಪಟ್ಟರು.
First published: February 22, 2020, 9:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading