• Home
  • »
  • News
  • »
  • national-international
  • »
  • National Youth Day 2023: ಸ್ವಾಮಿ ವಿವೇಕಾನಂದರು ಹೇಳಿಕೊಟ್ಟ ಜೀವನ ಪಾಠಗಳಿವು, ಅಳವಡಿಸಿಕೊಂಡು ಅನುಸರಿಸೋಣ

National Youth Day 2023: ಸ್ವಾಮಿ ವಿವೇಕಾನಂದರು ಹೇಳಿಕೊಟ್ಟ ಜೀವನ ಪಾಠಗಳಿವು, ಅಳವಡಿಸಿಕೊಂಡು ಅನುಸರಿಸೋಣ

ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದ

ದೇಶದ ಯುವಕರಿಗೆ ಸ್ಪೂರ್ತಿಯ ಚಿಲುಮೆಯಂತಿದ್ದ ಸ್ವಾಮಿ ವಿವೇಕಾನಂದರನ್ನು ಸ್ಮರಿಸಲು, ದೇಶದ ಯುವಕರು ಉತ್ತಮ ವ್ಯಕ್ತಿಯಾಗಲು ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.

  • Trending Desk
  • Last Updated :
  • Bangalore [Bangalore], India
  • Share this:

    ಭಾರತ (India) ಕಂಡ ಶ್ರೇಷ್ಠ ನಾಯಕ, ಆಧ್ಯಾತ್ಮಿಕ ನಾಯಕ, ಚಿಂತಕ, ಯುವಕರೇ ದೇಶದ ದೊಡ್ಡ ಆಸ್ತಿ ಎಂದು ನಂಬಿದ್ದ ದೊಡ್ಡ ಶಕ್ತಿ ಸ್ವಾಮಿ ವಿವೇಕಾನಂದರ (Swamy Vivekananda) ಜನ್ಮದಿನವಿಂದು. ದೇಶದ ಯುವಕರಿಗೆ ಸ್ಪೂರ್ತಿಯ ಚಿಲುಮೆಯಂತಿದ್ದ ಸ್ವಾಮಿ ವಿವೇಕಾನಂದರನ್ನು ಸ್ಮರಿಸಲು, ದೇಶದ ಯುವಕರು (Youths) ಉತ್ತಮ ವ್ಯಕ್ತಿಯಾಗಲು ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.


    ಯುವಕರ ಶಕ್ತಿ, ಸ್ಪೂರ್ತಿ


    ದೇಶ ಕಂಡ ಮಹಾನ್‌ ನಾಯಕರಲ್ಲಿ ಒಬ್ಬರಾದ ವಿವೇಕಾನಂದರು ಓರ್ವ ದಾರ್ಶನಿಕ, ಸನ್ಯಾಸಿ ಮತ್ತು ಶಿಕ್ಷಕರಾಗಿದ್ದರು. ಅಷ್ಟೇ ಅಲ್ಲ ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಮತ್ತು ಭಾರತದಲ್ಲಿ ಹಿಂದೂ ಧರ್ಮದ ಪುನರುತ್ಥಾನದಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.


    ಯುವಕ ದನಿಯಾಗಿ ಇದ್ದ ಇವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಶಿಕ್ಷಣ, ರಾಷ್ಟ್ರೀಯತೆ ಮತ್ತು ಆಧ್ಯಾತ್ಮಿಕತೆಯ ಕುರಿತಾದ ಅವರ ಬೋಧನೆಗಳನ್ನು ಜನರಿಗೆ ತಲುಪಿಸುತ್ತಿದ್ದರು. ಪ್ರಸಕ್ತ ಕೂಡ ವಿವೇಕಾನಂದರ ಚಿಂತನೆ, ಬೋಧನೆ ಅದೆಷ್ಟೋ ಯುವಕರಿಗೆ ಜೀವನ ಪಾಠವಾಗಿದೆ.


    ಇದನ್ನೂ ಓದಿ:  Swami Vivekananda: ಆತ್ಮವಿಶ್ವಾಸವೇ ನಿಜವಾದ ಶಿಕ್ಷಣ: ಸ್ವಾಮಿ ವಿವೇಕಾನಂದ


    ಜೀವನ ಪಾಠ ಹೇಳಿಕೊಟ್ಟ ಮಹಾತ್ಮ


    ಸ್ವಾಮಿ ವಿವೇಕಾನಂದರಂತಹ ಮಹಾತ್ಮರನ್ನು ಗೌರವಿಸುವುದು, ಅವರ ಆದರ್ಶವನ್ನು ಜೀವಂತವಾಗಿರಿಸುವುದು ಅವರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯುವ ಮೂಲಕ, ಅವರು ಹೇಳಿಕೊಟ್ಟ ಜೀವನ ಪಾಠವನ್ನು ಮೈಗೂಡಿಸಿಕೊಳ್ಳುವ ಮೂಲಕ ಮಾತ್ರ ಸಾಧ್ಯ.


    ಸ್ವಾಮಿ ವಿವೇಕಾನಂದರ ಜನ್ಮದಿನವಾದ ಇಂದು ಅವರು ನಮಗೆ ಕಲಿಸಿದ ಕೆಲವು ಜೀವನ ಪಾಠಗಳನ್ನು ನೋಡೋಣ ಮತ್ತು ಅಳವಡಿಸಿಕೊಳ್ಳುವ ಪ್ರಯತ್ನ ಮಾಡೋಣ.


    ಸ್ವಾಮಿ ವಿವೇಕಾನಂದರು


    ಸ್ವಾಮಿ ವಿವೇಕಾನಂದರು ಹೇಳಿಕೊಟ್ಟ ಜೀವನ ಪಾಠಗಳು


    * "ನಾವು ಹೊರಗೆ ಬಂದು ಇತರರಿಗೆ ಒಳ್ಳೆಯದನ್ನು ಮಾಡಿದರೆ, ನಮ್ಮ ಹೃದಯಗಳು ಹೆಚ್ಚು ಶುದ್ಧವಾಗುತ್ತವೆ ಮತ್ತು ಅಂತಹ ಹೃದಯದಲ್ಲಿ ದೇವರು ನೆಲೆಸುತ್ತಾನೆ.


    ನಾವು ಎಷ್ಟು ಜನರಿಗೆ ಒಳ್ಳೆಯದನ್ನು ಮಾಡುತ್ತೇವೆಯೋ ಅಷ್ಟು ಹೆಚ್ಚು ನಮ್ಮ ಹೃದಯ ಮತ್ತು ಮನಸ್ಸನ್ನು ಶುದ್ಧೀಕರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದರು.


    ಆದ್ದರಿಂದ ನಾವು ನಮ್ಮ ಕೈಲಿ ಎಷ್ಟಾಗುತ್ತದೆಯೋ ಅಷ್ಟು ಜನರಿಗೆ ಒಳ್ಳೆಯದು ಮಾಡೋಣ ಎಂದು ಕಲಿಸಿದ್ದಾರೆ. ಅಷ್ಟೇ ಅಲ್ಲ ನಿಸ್ವಾರ್ಥತೆ ಮತ್ತು ಮಾನವೀಯತೆಯ ಸೇವೆಯ ಮೂಲಕ ಮಾತ್ರ ಒಬ್ಬರು ನಿಜವಾಗಿಯೂ ಧರ್ಮ ಮತ್ತು ದೇವರನ್ನು ಕಂಡುಕೊಳ್ಳಬಹುದು ಎಂದು ಅವರು ನಂಬಿದ್ದರು ಮತ್ತು ಅದನ್ನೇ ಜನತೆಗೂ ಮನನ ಮಾಡಿಸುತ್ತಿದ್ದರು.
    .
    * "ಏಳಿ,ಎದ್ದೇಳಿ ಮತ್ತು ನಿಮ್ಮ ಗುರಿಯನ್ನು ತಲುಪುವವರೆಗೆ ನಿಲ್ಲಬೇಡಿ"
    ಇಲ್ಲಿ ಸ್ವಾಮಿ ವಿವೇಕಾನಂದರು ನಮ್ಮ ಗುರಿ ಮತ್ತು ಆಕಾಂಕ್ಷೆಗಳನ್ನು ನಾವು ಎಂದಿಗೂ ಬಿಟ್ಟುಕೊಡಬಾರದು ಎಂದು ಕಲಿಸಿದ್ದಾರೆ.


    ಜನರು ತಮ್ಮ ಗುರಿಗಳನ್ನು ಸಾಧಿಸಲು ತಮ್ಮ ಪ್ರಯತ್ನಗಳಲ್ಲಿ ದೃಢಸಂಕಲ್ಪ ಮತ್ತು ನಿರಂತರವಾಗಿರಬೇಕು ಎಂದು ಅವರು ಒತ್ತಾಯಿಸಿದ್ದಾರೆ.


    ನಾವು ಸಾಧಿಸಬೇಕಾಗಿರುವುದನ್ನು ಸಾಧಿಸಲು ಮತ್ತು ನಮಗೆ ತಲುಪ ಬೇಕಾಗಿರುವ ಗುರಿಯನ್ನು ತಲುಪಲು ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಚ್ಚರವಾಗಿರುವ ಅವಶ್ಯಕತೆ ಇದೆ ಎಂದು ಅವರು ಹೇಳಿ ಕೊಟ್ಟಿದ್ದಾರೆ.


    * "ನಿಮಗೆ ನೀವು ನಿಜವಾಗಿದ್ದರೆ, ಜಗತ್ತಿಗೂ ನೀವು ನಿಜವಾಗಿರುತ್ತೀರಿ"


    ಸ್ವಾಮಿ ವಿವೇಕಾನಂದರು ಜಗತ್ತಿಗೆ ನಿಜವಾಗಲು ತನಗೆ ತಾನೇ ಸತ್ಯವಾಗಿರುವುದು ಮುಖ್ಯ ಎಂದು ನಂಬಿದ್ದರು. ಇತರರೊಂದಿಗೆ ಹೊಂದಿಕೊಳ್ಳುವ ಸಲುವಾಗಿ ತಮ್ಮ ಮೌಲ್ಯಗಳ ಜೊತೆ ರಾಜಿ ಮಾಡಿಕೊಳ್ಳದಂತೆ ಇರಲು ಹೇಳುತ್ತಿದ್ದರು.


    ಒಬ್ಬ ವ್ಯಕ್ತಿ ಹೇಗಿರುತ್ತಾನೋ ಹಾಗೆ ಇರುವ ಮೂಲಕ ಜಗತ್ತನ್ನು ಧನಾತ್ಮಕವಾಗಿ ಪ್ರಭಾವಿಸಲು ಸಾಧ್ಯವಾಗುತ್ತದೆ ಎಂದು ಅವರು ನಂಬಿದ್ದರು.


    * "ಭಯವನ್ನು ಹೋಗಲಾಡಿಸಿ ನಿಮ್ಮ ಜೀವನದ ನಿಜವಾದ ಹೀರೋ ನೀವೇ ಆಗಿ."


    ಜೀವನದಲ್ಲಿ ಎದೆಗುಂದದೆ ಎಲ್ಲವನ್ನೂ ಎದುರಿಸುವ ಧೈರ್ಯಶಾಲಿಗಳಾಗಿ ಎಂದು ಅವರು ಹೇಳುತ್ತಿದ್ದರು. ಗುರಿ ಸಾಧಿಸುವ ವೇಳೆ ಭಯ ಪಡಬಾರದು, ಈ ಭಯ ನಿಮ್ಮನ್ನು ಗುರಿ ಸಾಧಿಸಲು ಅಡ್ಡಿಪಡಿಸಬಾರದು ಎಂದು ಹೇಳುತ್ತಿದ್ದರು.


    ಇದನ್ನೂ ಓದಿ: NATIONAL YOUTH DAY 2023: ಸ್ವಾಮಿ ವಿವೇಕಾನಂದ ಜಯಂತಿಯನ್ನು ರಾಷ್ಟ್ರೀಯ ಯುವ ದಿನ ಎಂದು ಏಕೆ ಆಚರಿಸಲಾಗುತ್ತದೆ? ಏನಿದರ ಇತಿಹಾಸ, ವಿಶೇಷತೆ?


    ನಮ್ಮೊಳಗಿನ ಭಯವನ್ನು ಎದುರಿಸುವ ಮೂಲಕ, ನಮ್ಮ ಸ್ವಂತ ಜೀವನದಲ್ಲಿ ನಾವು ನಿಜವಾದ ಹೀರೋ ಆಗಬಹುದು ಎಂದು ಅವರು ನಂಬಿದ್ದರು.


    * "ನಿಮ್ಮನ್ನು ದುರ್ಬಲ ಎಂದು ಭಾವಿಸುವುದು ದೊಡ್ಡ ಪಾಪ."


    ನಾವು ದುರ್ಬಲರು, ನಮ್ಮಿಂದ ಏನೂ ಸಾಧ್ಯವಿಲ್ಲ ಎಂಬ ಮನಸ್ಥಿತಿಯನ್ನು ಕಿತ್ತೊಗೆಯಬೇಕು. ಮೊದಲಿಗೆ ನಮ್ಮ ಮೇಲೆ ನಾವು ನಂಬಿಕೆ ಇಡುವುದು ಬಹಳ ಅಗತ್ಯ.


    ನಮ್ಮಿಂದ ಎಲ್ಲವೂ ಸಾಧ್ಯ, ಪ್ರಯತ್ನ ಪಟ್ಟರೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂಬುದನ್ನು ಕಲಿಸಿಕೊಟ್ಟಿದ್ದಾರೆ.


    ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎನ್ನುವ ಮೂಲಕ ನಾವೆಲ್ಲರೂ ಶ್ರೇಷ್ಠರಾಗುವ ಸಾಮರ್ಥ್ಯವನ್ನು ಹೊಂದಿದ್ದೇವೆ ಮತ್ತು ನಮ್ಮ ಗುರಿಗಳನ್ನು ಸಾಧಿಸಲು ನಾವು ಸಮರ್ಥರಲ್ಲ ಎಂದು ಯೋಚಿಸುವ ಮೂಲಕ ನಮ್ಮನ್ನು ನಾವು ಮಿತಿಗೊಳಿಸಬಾರದು ಎಂದು ಅವರು ನಂಬಿದ್ದರು.


    ಅವರು ತಮ್ಮ ಸಾಮರ್ಥ್ಯಗಳಲ್ಲಿ ನಂಬಿಕೆ ಮತ್ತು ಶ್ರೇಷ್ಠತೆಯನ್ನು ಸಾಧಿಸಲು ಶ್ರಮಿಸುವಂತೆ ಜನರನ್ನು ಪ್ರೋತ್ಸಾಹಿಸಿದರು.


    * "ಶಿಕ್ಷಣವು ಈಗಾಗಲೇ ಮನುಷ್ಯನಲ್ಲಿರುವ ಪರಿಪೂರ್ಣತೆಯ ಅಭಿವ್ಯಕ್ತಿಯಾಗಿದೆ."


    ಸ್ವಾಮಿ ವಿವೇಕಾನಂದರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಇದು ವ್ಯಕ್ತಿಯಲ್ಲಿನ ಉತ್ತಮತೆಯನ್ನು ಹೊರತರುತ್ತದೆ ಎಂದು ನಂಬಿದ್ದರು.


    ಮುಖ್ಯವಾಗಿ ವಿವೇಕಾನಂದರು ಶಿಕ್ಷಣ ಕೇವಲ ಜ್ಞಾನವನ್ನು ಸಂಪಾದಿಸುವುದಲ್ಲ, ಒಬ್ಬರ ಸಹಜ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಎಂದು ನಂಬಿದ್ದರು. ಶಿಕ್ಷಣದ ಮೂಲಕ ಜನರು ಒಬ್ಬ ಉತ್ತಮ ವ್ಯಕ್ತಿಯಾಗಬೇಕು ಎಂದು ಜನರಿಗೆ ತಿಳಿಸುತ್ತಿದ್ದರು.

    Published by:Precilla Olivia Dias
    First published: