ರಾಷ್ಟ್ರೀಯ ಜಲಾಭಿವೃದ್ಧಿ ಮಂಡಳಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ: 1.12 ಲಕ್ಷ ರೂ. ವರೆಗೆ ಸಿಗುತ್ತೆ ಸಂಬಳ..!

ಜೂನಿಯರ್ ಎಂಜಿನಿಯರ್, ಹಿಂದಿ ಭಾಷಾಂತರಿಗಳು, ಜೂನಿಯರ್ ಅಕೌಂಟ್ ಆಫೀಸರ್‌ಗಳು, ಅಪ್ಪರ್ ಡಿವಿಷನಲ್ ಕ್ಲರ್ಕ್, ಸ್ಟೆನೋಗ್ರಾಫರ್ ಮತ್ತು ಎಲ್‍ಡಿಸಿ ಸೇರಿದಂತೆ ಒಟ್ಟು 62 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

JOB

JOB

  • Share this:
ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಜಲಾಭಿವೃದ್ಧಿ ಮಂಡಳಿ ವಿವಿಧ ಹುದ್ದೆಗಳ ನೇಮಕಾತಿಗೆ (NWDA)ರಾಷ್ಟ್ರಾದ್ಯಂತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮೇ 10 ರಿಂದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಬಗ್ಗೆ ಅಧಿಕೃತ ವೆಬ್‍ಸೈಟ್ www.nwda.gov.inನಲ್ಲಿ ಅರ್ಜಿ ಸಲ್ಲಿಸಬುದಾಗಿದ್ದು ಅರ್ಜಿ ಸಲ್ಲಿಕೆಗೆ ಜೂನ್ 25 ಕೊನೆಯ ದಿನವಾಗಿದೆ.

ಜೂನಿಯರ್ ಎಂಜಿನಿಯರ್, ಹಿಂದಿ ಭಾಷಾಂತರಿಗಳು, ಜೂನಿಯರ್ ಅಕೌಂಟ್ ಆಫೀಸರ್‌ಗಳು, ಅಪ್ಪರ್ ಡಿವಿಷನಲ್ ಕ್ಲರ್ಕ್, ಸ್ಟೆನೋಗ್ರಾಫರ್ ಮತ್ತು ಎಲ್‍ಡಿಸಿ ಸೇರಿದಂತೆ ಒಟ್ಟು 62 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

NWDA ನೇಮಕಾತಿ 2021: ಹುದ್ದೆ ಅನ್ವಯ ವಿವರ

ಜೂನಿಯರ್ ಎಂಜಿನಿಯರ್ (ಸಿವಿಎಲ್): 16
ಹಿಂದಿ ಭಾಷಾಂತರಿ: 1
ಜೂನಿಯರ್ ಅಕೌಂಟ್ ಆಫೀಸರ್‌ಗಳು: 5
ಸ್ಟೆನೋಗ್ರಾಫರ್ ಗ್ರೇಡ್-|| - 12
ಯುಡಿಸಿ: 5
ಎಲ್‍ಡಿಸಿ : 23

NWDA ನೇಮಕಾತಿ 2021: ಅರ್ಹತೆಗಳು

ಜೂನಿಯರ್ ಎಂಜಿನಿಯರ್ (ಸಿವಿಎಲ್) ಅರ್ಹತೆಗಳು: ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ ಮತ್ತು ಪದವಿ ಪಡೆದಿರಬೇಕು. 18 ರಿಂದ 27 ವರ್ಷದವರು ಈ ಹುದ್ದೆಗೆ ಅರ್ಹತೆ ಪಡೆಯುತ್ತಾರೆ.

ಹಿಂದಿ ಹಿಂದಿ ಭಾಷಾಂತರರ ಹುದ್ದೆಗೆ, ಅಭ್ಯರ್ಥಿಗಳು ಇಂಗ್ಲೀಷ್‌ ಅಥವಾ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಕಡ್ಡಾಯ ಅಥವಾ ಆಯ್ಕೆ ವಿಷಯವಾಗಿರಬೇಕು ಅಥವಾ ಪದವಿ ಮಟ್ಟದಲ್ಲಿ ಇಂಗ್ಲೀಷ್ ಅಥವಾ ಹಿಂದಿ ಪರೀಕ್ಷೆಯ ಮಾಧ್ಯಮವಾಗಿರಬೇಕು. 21 ರಿಂದ 30 ವರ್ಷದವರು ಅರ್ಜಿ ಸಲ್ಲಿಸಬಹುದು.

ಜೂನಿಯರ್ ಅಕೌಂಟ್ಸ್ ಆಫೀಸರ್: ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕಾಮರ್ಸ್ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಸರ್ಕಾರಿ ಅಧಿಕಾರಿ/ಪಿಎಸ್‍ಯು/ಸ್ವಾಯತ್ತ ಸಂಸ್ಥೆ/ಕಾನೂನಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಮೂರು ವರ್ಷ ಕಾರ್ಯನಿರ್ವಹಿಸಿದ ಅನುಭವವಿರಬೇಕು. ಸಿಎ/ಐಸಿಡಬ್ಲ್ಯೂಎಐ/ಕಂಪೆನಿಯ ಕಾರ್ಯದರ್ಶಿಯಾಗಿದ್ದವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. 21 ರಿಂದ 30 ವರ್ಷದವರು ಅರ್ಜಿ ಸಲ್ಲಿಸಬಹುದು.

ಯುಡಿಸಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಸ್ಟೆನೋಗ್ರಾಫರ್ ಗ್ರೇಡ್ || ಮತ್ತು ಎಲ್‍ಡಿಸಿ ಹುದ್ದೆಗೆ ದ್ವಿತೀಯ ಪಿಯುಸಿ ಉತ್ತೀರ್ಣರಾದವರು ಅರ್ಜಿ ಹಾಕಬಹುದು. 18 ರಿಂದ 27 ವರ್ಷದವರು ವಯೋಮಿತಿ ಇರುತ್ತದೆ.

NWDA ನೇಮಕಾತಿ 2021: ಅರ್ಜಿ ಸಲ್ಲಿಸುವುದು ಹೇಗೆ?

1ನೇ ಹಂತ: ಮೊದಲು ಅಧಿಕೃತ ವೆಬ್‍ಸೈಟ್ http://www.nwda.gov.in/content/ ಗೆ ಹೋಗಬೇಕು.
2ನೇ ಹಂತ: ನಂತರ ಇದರಲ್ಲಿ ತೋರಿಸುವ vacancy ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
3ನೇ ಹಂತ: ಬಳಿಕ Advertisement no.07/2021 ಎಂಬ ಆನ್‍ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
4ನೇ ಹಂತ: ಕೇಳಿದ ಮಾಹಿತಿಯನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್‍ಲೋಡ್ ಮಾಡಬೇಕು.
5ನೇ ಹಂತ: ಆನ್‍ಲೈನ್ ಪೇಮೆಂಟ್ ಒಪ್ಪಿಗೆ ಸೂಚಿಸಿ ಯಾವ ರೀತಿಯ ಆನ್‍ಲೈನ್ ಪೇಮೆಂಟ್ ಮಾಡುವಿರೋ ಎಂಬುದನ್ನು ಆಯ್ಕೆ ಮಾಡಿ
6ನೇ ಹಂತ: ಆಯ್ಕೆ ಮಾಡಿದ ಪೇಮೆಂಟ್ ವಿಧಾನದ ಅನುಸಾರ ಶುಲ್ಕ ಭರಿಸಿ ಅರ್ಜಿಯ ಒಂದು ಕಾಪಿಯನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು.

ಆಯ್ಕೆ ಹೇಗೆ?
ಕಂಪ್ಯೂಟರ್ ಆಧಾರಿತ ಆನ್‍ಲೈನ್ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯ ಮೂಲಕ ಅರ್ಜಿದಾರರನ್ನು ಆಯ್ಕೆ ಮಾಡಲಾಗುತ್ತದೆ. ಕಂಪ್ಯೂಟರ್ ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಅಧಿಕೃತ ವೆಬ್‍ಸೈಟ್‍ನಲ್ಲಿ ತಿಳಿಸಲಾಗುವುದು.

ವೇತನದ ವಿವರ:
ಆಯ್ಕೆಯಾದ ಅಭ್ಯರ್ಥಿಗಳು ಹುದ್ದೆಯ ಆಧಾರದ ಮೇಲೆ ರೂ.19, 900 ರಿಂದ ರೂ.1,12,400 ಲಕ್ಷದವರೆಗೂ ವೇತನ ಪಡೆಯಬಹುದು.
First published: