National Voter's Day: ರಾಷ್ಟ್ರೀಯ ಮತದಾರರ ದಿನ 2021: ಈ ದಿನದ ಮಹತ್ವ ಮತ್ತು ಇತಿಹಾಸ ತಿಳಿಯಿರಿ

ಚುನಾವಣೆಯ ಸಮಯದಲ್ಲಿ ದೇಶದ ಮತದಾರರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಹಾಗೂ ಜವಾಬ್ದಾರಿಯುರ ನಾಗರಿಕರಾಗಲು ಅವರಿಗೆ ಸಹಕರಿಸುವುದು ಇಂದಿನ ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಇಂದು ರಾಷ್ಟ್ರೀಯ ಮತದಾರರ ದಿನ. ಹೀಗಾಗಿ ಭಾರತದ ಚುನಾವಣಾ ಆಯೋಗವು ಇಂದು 11ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುತ್ತಿದೆ. ದೇಶದ ಕೋಟ್ಯಾಂತರ ಮತದಾರರಿಗೆ ಈ ರಾಷ್ಟ್ರೀಯ ಮತದಾರರ ದಿನವನ್ನು ಅರ್ಪಿಸಲಾಗುತ್ತದೆ. ಜೊತೆಗೆ ಮತದಾರರ ದಿನದ ಮಹತ್ವವನ್ನು ತಿಳಿಸಲಾಗುತ್ತದೆ. ಮತ ಚಲಾವಣೆಯ ಮಹತ್ವ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

  ರಾಷ್ಟ್ರೀಯ ಮತದಾರರ ದಿನದಂದು ಹೊಸ ಮತದಾರರನ್ನು ಸನ್ಮಾನಿಸಿ ಅವರಿಗೆ ಹೊಸ ವೋಟರ್ ಐಡಿ ಕಾರ್ಡ್​​(ಎಪಿಕ್-ಎಲೆಕ್ಟರಲ್ ಫೋಟೋ ಐಡೆಂಟಿಟಿ ಕಾರ್ಡ್​​)ನ್ನು ಹಸ್ತಾಂತರಿಸಲಾಗುತ್ತದೆ.

  ಪ್ರಧಾನಿ ನರೇಂದ್ರ ಮೋದಿ ಭಾರತದ ಚುನಾವಣಾ ಆಯೋಗವನ್ನು ಇಂದು ಹಾಡಿಹೊಗಳಿದ್ದಾರೆ. ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ಟ್ವೀಟ್ ಮಾಡಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ಚುನಾವಣೆಗಳನ್ನು ಸುಗಮವಾಗಿ ನಡೆಸುವಲ್ಲಿ ಚುನಾವಣೆ ಆಯೋಗ ನೀಡಿರುವ ಕೊಡುಗೆ ಅನನ್ಯವಾದುದು. ಆಯೋಗದ ಮಹತ್ವವಾದ ಕೊಡುಗೆಯನ್ನು ಶ್ಲಾಘಿಸುವ ಸಂದರ್ಭ ಇದಾಗಿದೆ ಎಂದು ಹೇಳಿದ್ದಾರೆ.

  EPF ಅಕೌಂಟ್​​ನಲ್ಲಿ ನಿಮ್ಮ ಮೊಬೈಲ್​ ನಂಬರ್ ಚೇಂಜ್ ಮಾಡುವುದು ಹೇಗೆ?; ಇಲ್ಲಿದೆ ಮಾಹಿತಿ

  ಇಂದು ಭಾರತದ ಚುನಾವಣಾ ಆಯೋಗವು ಔಪಚಾರಿಕವಾಗಿ ಇ-ಎಪಿಕ್​(ಎಲೆಕ್ಟ್ರಾನಿಕ್​ ಎಲೆಕ್ಟರಲ್ ಫೋಟೋ ಐಡೆಂಟಿಟಿ ಕಾರ್ಡ್​​) ಪ್ರೋಗ್ರಾಮ್​ನ್ನು ಲಾಂಚ್ ಮಾಡಲಿದೆ.​​​ ನಾನ್​-ಎಡಿಟ್ ಸೆಕ್ಯೂರ್ಡ್ ಪೋರ್ಟೇಬಲ್ ಡಾಕ್ಯುಮೆಂಟ್​​​​ ಆವೃತ್ತಿಯ ಇ-ಎಪಿಕ್​​ ಕಾರ್ಡ್,​ ಫೋಟೋ, ಕ್ರಮ ಸಂಖ್ಯೆ ಮತ್ತು ಪಾರ್ಟ್​ ನಂಬರ್​ ಇರುವ ಸುರಕ್ಷಿತ ಕ್ಯೂಆರ್​ ಕೋಡ್​​ನ್ನು ಹೊಂದಿರುತ್ತದೆ. ಇ-ಎಪಿಕ್​ ಕಾರ್ಡ್​ನ್ನು ಮೊಬೈಲ್ ಅಥವಾ ಕಂಪ್ಯೂಟರ್​​ನಲ್ಲಿ ಡೌನ್​ಲೋಡ್ ಮಾಡಿಕೊಂಡು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

  ರಾಷ್ಟ್ರೀಯ ಮತದಾರರ ದಿನದ ಧ್ಯೇಯ:

  ಈ ವರ್ಷದ ರಾಷ್ಟ್ರೀಯ ಮತದಾರರ ದಿನದ ವಿಷವೇನೆಂದರೆ, ನಮ್ಮ ದೇಶದ ಮತದರರನ್ನು ಸಬಲೀಕರಣ, ಜಾಗರೂಕ, ಸುರಕ್ಷಿತ ಮತ್ತು ಮಾಹಿತಿದಾರರನ್ನಾಗಿ ಮಾಡುವುದು. ಚುನಾವಣೆಯ ಸಮಯದಲ್ಲಿ ದೇಶದ ಮತದಾರರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಹಾಗೂ ಜವಾಬ್ದಾರಿಯುರ ನಾಗರಿಕರಾಗಲು ಅವರಿಗೆ ಸಹಕರಿಸುವುದು ಇಂದಿನ ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಗಿದೆ. ಸಾಂಕ್ರಾಮಿಕ ರೋಗ ಕೊರೋನಾ ಸೋಂಕಿನ ನಡುವೆ, ಸುರಕ್ಷಿತವಾಗಿ ಚುನಾವಣೆ ನಡೆಸುವ ಭಾರತೀಯ ಚುನಾವಣೆ ಆಯೋಗದ ಬದ್ಧತೆ ಬಗ್ಗೆಯೂ ಇದು ಗಮನ ಹರಿಸಲಿದೆ.

  ರಾಷ್ಟ್ರೀಯ ಮತದಾರರ ದಿನ 2021: ಇತಿಹಾಸ ಮತ್ತು ಮಹತ್ವ

  ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಭಾರತದಲ್ಲಿ ಪ್ರತೀವರ್ಷ ಜನವರಿ 25ರಂದು ಆಚರಿಸಲಾಗುತ್ತದೆ. 1950ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ನೆನಪಿಗಾಗಿ ಈ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. 2011ರಲ್ಲಿ ಮೊದಲ ಬಾರಿಗೆ ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು.
  Published by:Latha CG
  First published: