National Small Industry Day 2021: ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನದ ಇತಿಹಾಸ ಮತ್ತು ಮಹತ್ವ ಗೊತ್ತಾ?

History and Importance: ಜನರಿಗೆ ಕೆಲಸ ಹುಡುಕಲು ಸಹಾಯ ಮಾಡುವ ಸಲುವಾಗಿ ಕೇಂದ್ರ ಸರ್ಕಾರವು ದೇಶಾದ್ಯಂತ ಸಣ್ಣ-ಪ್ರಮಾಣದ ಉದ್ಯಮಗಳನ್ನು ಸ್ಥಾಪಿಸಲು ಎಲ್ಲ ಪ್ರಯತ್ನಗಳನ್ನು ಹಾಗೂ ಸಹಾಯವನ್ನು ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಷ್ಟ್ರೀಯ ಸಣ್ಣ ಕೈಗಾರಿಕಾ ದಿನವು ನಮ್ಮ ಸಮಾಜದಲ್ಲಿನ ಸಣ್ಣ ಉದ್ಯಮಗಳ ಪ್ರಾಮುಖ್ಯತೆಯನ್ನು ಗುರುತಿಸುವ ಒಂದು ದಿನ. ಪ್ರತಿ ವರ್ಷ ಆಗಸ್ಟ್ 30 ರಂದು ದೇಶವು ರಾಷ್ಟ್ರೀಯ ಸಣ್ಣ ಕೈಗಾರಿಕಾ ದಿನವನ್ನು ಆಚರಣೆ ಮಾಡುತ್ತದೆ. ದೇಶದಾದ್ಯಂತ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಲು ಈ ದಿನವನ್ನು ಮೀಸಲಿಡಲಾಗಿದೆ. ಈ ದಿನವನ್ನು ಸಣ್ಣ ವ್ಯಾಪಾರಗಳನ್ನು ಉತ್ತೇಜಿಸುವ ಮತ್ತು ಉದ್ಯೋಗವಿಲ್ಲದವರಿಗೆ ಉದ್ಯೋಗದ ಅವಕಾಶಗಳನ್ನು ನೀಡುವ ಗುರಿಯೊಂದಿಗೆ ಆಚರಿಸಲಾಗುತ್ತದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ, ಸಣ್ಣ-ಪ್ರಮಾಣದ ವಲಯವು ಆರ್ಥಿಕ ಬೆಳವಣಿಗೆಯಲ್ಲಿ ಅತ್ಯಗತ್ಯ ಪಾತ್ರವನ್ನು ವಹಿಸುತ್ತದೆ. ಅಂತಹ ಕ್ಷೇತ್ರಗಳ ಕಾರ್ಯತಂತ್ರವನ್ನು ಗಮನದಲ್ಲಿಟ್ಟುಕೊಂಡು, ಅದರ ಅಭಿವೃದ್ಧಿಯ ಅವಶ್ಯಕತೆಗೆ ವಿಶೇಷ ಒತ್ತು ನೀಡಲಾಗಿದೆ.

ಈ ದಿನದ ಇತಿಹಾಸ

ಆಗಸ್ಟ್ 30, 2000 ರಂದು, ಎಸ್‌ಎಸ್‌ಐ ವಲಯಕ್ಕೆ ಸಮಗ್ರ ನೀತಿ ಪ್ಯಾಕೇಜ್ ಅನ್ನು ಪ್ರಾರಂಭ ಮಾಡಲಾಗಿತ್ತು, ಇದು ಭಾರತದಲ್ಲಿ ಸಣ್ಣ ಸಂಸ್ಥೆಗಳಿಗೆ ಮಹತ್ವದ ಬೆಂಬಲವನ್ನು ನೀಡುವ ಯೋಜನೆಯಾಗಿದೆ. ಈ ದಿನದ ಅಂಗವಾಗಿ ಆಗಸ್ಟ್ 30 20011 ರಂದು ಸಣ್ಣ-ಪ್ರಮಾಣದ ಕೈಗಾರಿಕೆಗಳ ಸಚಿವಾಲಯವು ನವದೆಹಲಿಯಲ್ಲಿ ಎಸ್‌ಎಸ್‌ಐ ಉದ್ಯಮಿಗಳಿಗಾಗಿ ಎಸ್‌ಎಸ್‌ಐ (ಸಣ್ಣ ಪ್ರಮಾಣದ ಕೈಗಾರಿಕೆ) ಸಮಾವೇಶವನ್ನು ನಡೆಸಿತು, ಜೊತೆಗೆ ರಾಷ್ಟ್ರೀಯ ಪ್ರಶಸ್ತಿ ಸಮಾರಂಭವನ್ನು ಸಹ ಹಮ್ಮಿಕೊಂಡಿತ್ತು, ಈ ದಿನವೇ ಎಸ್‌ಎಸ್‌ಐ (ಸಣ್ಣ ಪ್ರಮಾಣದ ಕೈಗಾರಿಕೆ )ದಿನ  ಎಂದು ಘೋಷಣೆ ಮಾಡಲಾಯಿತು. ಇನ್ನು  ಈ ಕಾರ್ಯಕ್ರಮವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆ, ರಾಷ್ಟ್ರೀಯ ಪ್ರಶಸ್ತಿಗಳ ವಿತರಣೆ ಮತ್ತು ಮುಕ್ತ ಚರ್ಚೆ ಎಂದು. ಅಲ್ಲದೇ 2019 ರಲ್ಲಿ ಪ್ರಸ್ತುತಪಡಿಸಲಾಗಿದ್ದ  ಪ್ರಧಾನ ಮಂತ್ರಿಯವರ ಸಮಗ್ರ ನೀತಿ ಪ್ಯಾಕೇಜ್ ನಲ್ಲಿ ಬಹುಪಾಲು ಅವಶ್ಯಕತೆಗಳನ್ನು ಪೂರೈಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ಸೇರಿ ಭಾರತಕ್ಕೆ ಹಾನಿ ಮಾಡಲ್ಲ: ತಾಲಿಬಾನ್ ನಾಯಕ ಶೇರ್ ಮೊಹಮ್ಮದ್

ಇಲ್ಲಿಯವರೆಗೆ, ಜನರಿಗೆ ಕೆಲಸ ಹುಡುಕಲು ಸಹಾಯ ಮಾಡುವ ಸಲುವಾಗಿ ಕೇಂದ್ರ ಸರ್ಕಾರವು ದೇಶಾದ್ಯಂತ ಸಣ್ಣ-ಪ್ರಮಾಣದ ಉದ್ಯಮಗಳನ್ನು ಸ್ಥಾಪಿಸಲು ಎಲ್ಲ ಪ್ರಯತ್ನಗಳನ್ನು ಹಾಗೂ ಸಹಾಯವನ್ನು ಮಾಡಿದೆ. ಈ ದಿನದ ಮುಖ್ಯ ಗುರಿ ಎಂದರೆ  ಸಣ್ಣ ಪ್ರಮಾಣದ ಉದ್ಯಮಗಳ ಪ್ರಾಮುಖ್ಯತೆಯನ್ನು  ಹೆಚ್ಚಿಸುವುದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ  ಜನರಿಗೆ ಕೆಲಸವನ್ನು ಸೃಷ್ಟಿ ಮಾಡುವುದು.  ಇನ್ನು ಸಣ್ಣ ಉದ್ಯಮಗಳು ಕಾರ್ಮಿಕರ ಮೇಲೆ ಹೆಚ್ಚು ಅವಲಂಭಿತರಾಗಿರುವುದರಿಂದ , ಹೆಚ್ಚಿನ ಜನರಿಗೆ ಕೆಲಸ ದೊರೆಯುತ್ತದೆ.

ಈ ಯೋಜನೆಯ ಎರಡನೇ ಪ್ರಮುಖ ಗುರಿ ಆರ್ಥಿಕ ಶಕ್ತಿಯ ಸಮಾನ ಹಂಚಿಕೆಯಾಗಿದೆ. ಸಣ್ಣ ಉದ್ಯಮವು ಆರ್ಥಿಕ ಶಕ್ತಿಯನ್ನು ವ್ಯಾಪಾರೀಕರಣಗೊಳಿಸುತ್ತದೆ. ಸಣ್ಣ ಉದ್ಯಮವು ಕೈಗಾರಿಕಾ ಮಾರಾಟಕ್ಕೆ ಅವಕಾಶ ನೀಡುತ್ತದೆ. ಇದು ತಾಂತ್ರಿಕ ಅಸಮತೋಲನ ಮತ್ತು ಪ್ರಾದೇಶಿಕ ತಾಂತ್ರಿಕ ಅಸಮಾನತೆಯನ್ನು ಕಡಿಮೆ ಮಾಡುವ ಮೂಲಕ ದೇಶದ ಆರ್ಥಿಕ ಪ್ರಗತಿಯನ್ನು  ಹೆಚ್ಚು ಮಾಡುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: