National Shooter Dies by Suicide| ಮೊಹಾಲಿಯಲ್ಲಿ ರಾಷ್ಟ್ರೀಯ ಶೂಟರ್ ನಮನ್ವೀರ್ ಸಿಂಗ್ ಆತ್ಮಹತ್ಯೆ!

ಪ್ರೈಮಾ ಫಾಸಿ, ಇದು ಆತ್ಮಹತ್ಯೆ ಪ್ರಕರಣದಂತೆ ಕಾಣುತ್ತದೆ ಎಂದು ಅಧಿಕಾರಿಗಳು ದೃಢಪಡಿಸಿದ್ದು, ಕೋಣೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮೊಹಾಲಿ (ಸೆಪ್ಟೆಂಬರ್​ 14); 29 ವರ್ಷದ ರಾಷ್ಟ್ರೀಯ ಶೂಟರ್ (National Shooter) ಮತ್ತು ಖಾಸಗಿ ತರಬೇತುದಾರ ನಮನ್ವೀರ್ ಸಿಂಗ್ (Namanveer singh) ಬ್ರಾರ್ ಸೋಮವಾರ ಮುಂಜಾನೆ ಮೊಹಾಲಿಯ ಸೆಕ್ಟರ್ 71 ರಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ತನಿಖಾಧಿಕಾರಿ ಸಬ್ ಇನ್ಸ್‌ಪೆಕ್ಟರ್ ಅಮಂದೀಪ್ ಸಿಂಗ್ (Amandeep Singh) ಈ ಬಗ್ಗೆ ಮಾಹಿತಿ ನೀಡಿದ್ದು, "ನಮನ್ವೀರ್ ಸಿಂಗ್ ಬ್ರಾರ್ ತನ್ನ ಕೋಣೆಯಲ್ಲಿ ಏಕಾಂಗಿಯಾಗಿದ್ದಾಗ ಬೆಳಗಿನ ಜಾವ 3:35 ರ ಸುಮಾರಿಗೆ ಈ ಘಟನೆ ನಡೆದಿದೆ. ಭಾನುವಾರ ತಡವಾಗಿಯೇ ಅವರು ಮನೆಗೆ ಹಿಂತಿರುಗಿದ್ದರು ಮತ್ತು ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಬೆಳಗಿನ ಜಾವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವೇಳೆ ಗರ್ಭಿಣಿ ಆಗಿದ್ದ ಆತನ ಹೆಂಡತಿ ಮತ್ತು ಅತ್ತೆ ಮನೆಯಲ್ಲೇ ಮಲಗಿದ್ದರು" ಎಂದು ತಿಳಿಸಿದ್ದಾರೆ.

  ನಮನ್ವೀರ್​ ಸಿಂಗ್ ಪಪರವಾನಗಿ ಪಡೆದ ಆಸ್ಟ್ರಿಯಾ ನಿರ್ಮಿತ ಗ್ಲಾಕ್ ಪಿಸ್ತೂಲಿನಿಂದ ತಾನೇ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಗುಂಡಿನ ಸದ್ದನ್ನು ಕೇಳಿದ ತಕ್ಷಣ ಮನೆಯವರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲ ನೀಡದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಂಬಂಧಿಸಿದವರಿಗೆ ಶವವನ್ನು ಹಸ್ತಾಂತರ ಮಾಡಲಾಗಿದೆ.

  "ಪ್ರೈಮಾ ಫಾಸಿ, ಇದು ಆತ್ಮಹತ್ಯೆ ಪ್ರಕರಣದಂತೆ ಕಾಣುತ್ತದೆ" ಎಂದು ಅಧಿಕಾರಿಗಳು ದೃಢಪಡಿಸಿದ್ದು, ಕೋಣೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎನ್ನಲಾಗಿದೆ.

  ಇದನ್ನೂ ಓದಿ: Why China Backs Taliban| ಚೀನಾ ಏಕೆ ತಾಲಿಬಾನ್ ಬೆನ್ನಿಗೆ ನಿಂತಿದೆ; ಇದು ಭಾರತಕ್ಕೆ ಹೇಗೆ ಅಪಾಯಕಾರಿ?

  ಸೆಕ್ಷನ್ 174 ರ ಅಡಿಯಲ್ಲಿ ಪೊಲೀಸರು ವಿಚಾರಣಾ ಕ್ರಮಗಳನ್ನು ಆರಂಭಿಸಿದ್ದಾರೆ. ಆದರೆ, ನಮನ್ವೀರ್​ ಸಿಂಗ್ ತಂದೆಯ ಹೇಳಿಕೆಯಂತೆ ಇದು ಆತ್ಮಹತ್ಯೆ ಎಂಬುದು ದೃಢವಾಗಿದ್ದು, ಪೊಲೀಸರು ತನಿಖೆಯನ್ನು ಕೈಬಿಟ್ಟಿದ್ದಾರೆ ಎಂದು ವರದಿಯಾಗಿದೆ.
  Published by:MAshok Kumar
  First published: