ಬಾಲಿವುಡ್ ನಟ ಅಜಯ್ ದೇವಗನ್ (Actor Ajay Devgan) ಮತ್ತು ನಟ ಕಿಚ್ಚ ಸುದೀಪ್ (Kiccha Sudeep) ಅವರ ನಡುವೆ ಟ್ವಿಟ್ಟರ್ನಲ್ಲಿ ಇತ್ತೀಚೆಗೆ ನಡೆದ ಹಿಂದಿ ಭಾಷೆಯ (Hindi Language) ಕುರಿತ ಟ್ವೀಟ್ ವಿನಿಮಯದ ಬಳಿಕ , ರಾಷ್ಟ್ರೀಯ ಭಾಷೆಯ ಕುರಿತ ಚರ್ಚೆ ಇನ್ನಷ್ಟು ಬಿಸಿ ಏರಿದ್ದು, ಸಿನಿಮಾ ರಂಗಕ್ಕೆ ಸೇರಿದ ಹಲವಾರು ಮಂದಿ ಆ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯದಲ್ಲಿ ನಟ ಜಾವೇದ್ ಜಾಫ್ರಿ ಕೂಡ ಹಿಂದೆ ಬಿದ್ದಿಲ್ಲ. ತಾನು ಕೂಡ ಅಜಯ್ ದೇವಗನ್ ಅವರಂತೆ, ಇಷ್ಟು ದಿನ ಹಿಂದಿಯೇ ನಮ್ಮ ದೇಶದ ರಾಷ್ಟ್ರ ಭಾಷೆ ಎಂದು ಭಾವಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.
ಯಾವುದೇ ಭಾಷೆ ರಾಷ್ಟ್ರೀಯ ಭಾಷೆ ಅಲ್ಲ
ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ಜಾವೆದ್ ಜಾಫ್ರಿ ಅವರು, ರಾಷ್ಟ್ರ ಭಾಷೆಯಾಗಿ ಯಾವುದೇ ಒಂದು ಭಾಷೆಯಿಲ್ಲ ಎಂಬುದನ್ನು ಅವರು ಓದಿ ತಿಳಿದುಕೊಂಡಿದ್ದಾಗಿ ಹೇಳಿದ್ದಾರೆ. “ಸಂವಿಧಾನಿಕವಾಗಿ ಯಾವುದೇ ಒಂದು ಭಾಷೆ ಇಲ್ಲ. ಅದನ್ನೇ ನಾನು ನೋಡಿದೆ. ನಾನು ಅಧಿಕೃತ ಭಾರತೀಯ ಭಾಷೆಗಳ ಬಗ್ಗೆ ನೋಡುತ್ತಿದ್ದೆ ಮತ್ತು ಸಂವಿಧಾನ ಯಾವುದೇ ಭಾಷೆಗೆ ರಾಷ್ಟ್ರೀಯ ಭಾಷೆಯ ಸ್ಥಾನ ನೀಡಿಲ್ಲ. ನನಗೆ ಅದು ತಿಳಿಯಿತು. ನಾನು ಕೂಡ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ಭಾವನೆಯಲ್ಲಿ ಇದ್ದೆ. ಆದರೆ, ಸಂವಿಧಾನ ಯಾವುದೇ ಭಾಷೆಗೆ ರಾಷ್ಟ್ರೀಯ ಭಾಷೆಯ ಸ್ಥಾನ ನೀಡಿಲ್ಲ ಎಂಬುವುದನ್ನು ನಾನು ಓದಿ ತಿಳಿದುಕೊಂಡೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Bollywood: ಈ ಬಾಲಿವುಡ್ ಸ್ಟಾರ್ಗಳು ಎಲ್ಲಿ ಹೂಡಿಕೆ ಮಾಡಿದ್ದಾರೆ ನೋಡಿ! ಇಲ್ಲಿಂದಾನೂ ಒಳ್ಳೆ ಕಮಾಯಿ
ಹಲವು ಭಾಷೆಗಳ ಬೀಡು ಭಾರತ
“ಭಾರತ ದೇಶವು 22 ಅಧಿಕೃತ ಭಾಷೆಗಳನ್ನು ಹೊಂದಿದೆ ಮತ್ತು ಇದುವೇ ಈ ದೇಶದ ಸೌಂದರ್ಯವಾಗಿದೆ. ನೋಡಿ, ವಿವಿಧತೆಯಲ್ಲಿ ಏಕತೆಯ ಕುರಿತ ಅಂಶವಿದು. ಅದು ಈ ದೇಶದ ಸೌಂದರ್ಯವಾಗಿತ್ತು ಮತ್ತು ಸೌಂದರ್ಯವಾಗಿದೆ. ಇಲ್ಲಿ ಹಲವಾರು ಧರ್ಮಗಳಿವೆ ಆದರೆ, ಯಾವುದೇ ರಾಷ್ಟ್ರೀಯ ಧರ್ಮ ಇಲ್ಲ. ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ನಿಮ್ಮ ಬಳಿ ಒಂದು ರಾಷ್ಟ್ರೀಯ ಪಕ್ಷಿ ಅಥವಾ ಒಂದು ರಾಷ್ಟ್ರೀಯ ಪುಷ್ಪ ಇದೆ. ದೇಶದ ಭವಿಷ್ಯವು ಪ್ರತಿಯೊಂದರ ಅನುಕರಣೆಯಾಗಿದೆ ಮತ್ತು ಬೇರೆ ಯಾವುದೇ ದೇಶವು ಇದನ್ನು ಹೊಂದಿಲ್ಲ ಎಂದು ನನಗೆ ಅನಿಸುತ್ತದೆ” ಎಂದು ಜಾವೆದ್ ಜಾಫ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಹಳೆಯ ಭಾಷೆ ತಮಿಳು
ಗಾಯಕ ಸೋನು ನಿಗಮ್ ಕೂಡ, ಪತ್ರಕರ್ತ ಸುಶಾಂತ್ ಮೆಹ್ತಾ ಅವರ ಇತ್ತೀಚಿನ ಈವೆಂಟ್ ಒಂದರಲ್ಲಿ, ಇದನ್ನು ಹೋಲುವಂತ ಮಾತುಗಳನ್ನೇ ಹೇಳಿದ್ದಾರೆ. “ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿ ಎಲ್ಲೂ ಬರೆದಿಲ್ಲ. ಇದು ಹೆಚ್ಚಿನ ಸಂಖ್ಯೆಯಲ್ಲಿ ಮಾತನಾಡಲ್ಪಡುವ ಭಾಷೆಯಾಗಿರಬಹುದು, ಆದರೆ ರಾಷ್ಟ್ರೀಯ ಭಾಷೆ ಅಲ್ಲ. ವಾಸ್ತವದಲ್ಲಿ ತಮಿಳು ಅತ್ಯಂತ ಹಳೆಯ ಭಾಷೆಯಾಗಿದೆ. ಸಂಸ್ಕೃತ ಮತ್ತು ತಮಿಳುನ ನಡುವೆ ಚರ್ಚೆ ನಡೆಯುತ್ತಿದೆ. ಆದರೆ, ಇಡೀ ಜಗತ್ತಿನಲ್ಲಿಯೇ ತಮಿಳು ಅತ್ಯಂತ ಹಳೆಯ ಭಾಷೆ ಎಂದು ಜನರು ಹೇಳುತ್ತಾರೆ” ಎಂದು ಸೋನು ನಿಗಮ್ ಹೇಳಿದ್ದರು.
ಸಮಾರಂಭವೊಂದರಲ್ಲಿ ಸುದೀಪ್ ಹೇಳಿರುವ ಪ್ರಕಾರ "ಹಿಂದಿ ರಾಷ್ಟ ಭಾಷೆಯಾಗಿ ಈಗ ಉಳಿದಿಲ್ಲ ‘ ಎಂದಾದರೆ, ನೀವು ನಿಮ್ಮ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ ಎಂದು ಅಜಯ್ ದೇವಗನ್ ಅವರು ಸುದೀಪ್ ಅವರಿಗೆ ಟ್ವೀಟ್ ಮಾಡಿದ ಬಳಿಕ, ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬ ಕುರಿತ ಸಂಗತಿಯ ಬಗ್ಗೆ ಚರ್ಚೆ ಹೆಚ್ಚಾಗತೊಡಗಿತು. ಅವರ ಟ್ವೀಟ್ನ ಕನ್ನಡ ಅನುವಾದ ಹೀಗಿದೆ : “ಸಹೋದರ ನಿಮ್ಮ ಪ್ರಕಾರ ಹಿಂದಿ ರಾಷ್ಟ್ರಭಾಷೆ ಅಲ್ಲದಿದ್ದರೆ, ನಿಮ್ಮ ಮಾತೃ ಭಾಷೆಯಲ್ಲಿ ತಯಾರಿಸಿದ ಸಿನಿಮಾಗಳನ್ನು ಏಕೆ ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃ ಭಾಷೆ ಮತ್ತು ನಮ್ಮ ರಾಷ್ಟ್ರೀಯ ಭಾಷೆ ಮತ್ತು ಅದು ಯಾವಾಗಲೂ ಆಗಿರುತ್ತದೆ. ಜನ ಗಣ ಮನ.”
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ