National Handloom day: ಕೈಮಗ್ಗ ಉತ್ಪನ್ನಗಳ ಬಗ್ಗೆ ನಿಮಗೆಷ್ಟು ಗೊತ್ತು?

ಸಿಂಥೆಟಿಕ್ ಮತ್ತು ಕೃತಕ ಉತ್ಪನ್ನಗಳು ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಂಡಿದ್ದರೂ, ಗಮನ ಸೆಳೆಯುವ ವಿವಿಧ ಕೈಮಗ್ಗದ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ಪ್ರಾಚೀನ ವಸ್ತುಗಳು, ಕಲೆ, ಬುಟ್ಟಿಗಳು, ಪೇಪಿಯರ್ ಮ್ಯಾಚೆ, ಸೆರಾಮಿಕ್ಸ್, ಜವಳಿ, ವರ್ಣಚಿತ್ರಗಳು, ಲೋಹದ ಕರಕುಶಲ ವಸ್ತುಗಳು ಮತ್ತು ಅಲಂಕಾರ ವಸ್ತುಗಳು ಹೀಗೆ ಅದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದ ಕೈಮಗ್ಗ ಉದ್ಯಮವು(Handloom) ದೇಶದ ಇತಿಹಾಸ ಮತ್ತು ಪರಂಪರೆಯ ಪ್ರಮುಖ ಭಾಗವಾಗಿದೆ. ಇದು ತಲೆಮಾರುಗಳಿಂದ  ಭಾರತದ ಸಂಸ್ಕೃತಿಯ ಒಂದು ಅಂಶವಾಗಿದೆ.  ಅಲ್ಲದೇ ನಮ್ಮ ಸಂಸ್ಕೃತಿಯ ವಿಚಾರದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಆಗಸ್ಟ್ 7 ರಂದು ದೇಶದಲ್ಲಿ ರಾಷ್ಟ್ರೀಯ ಕೈಮಗ್ಗ ದಿನವನ್ನು(National Handloom day) ಆಚರಿಸಲಾಗುತ್ತದೆ. ಕೈಮಗ್ಗ ಉದ್ಯಮದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು 2015 ರಲ್ಲಿ ಮೊದಲ ಬಾರಿಗೆ ಈ  ದಿನವನ್ನು ಆಚರಿಸಲಾಯಿತು.  ಸಿಂಥೆಟಿಕ್ ಮತ್ತು ಕೃತಕ ಉತ್ಪನ್ನಗಳು ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಂಡಿದ್ದರೂ, ಗಮನ ಸೆಳೆಯುವ ವಿವಿಧ ಕೈಮಗ್ಗದ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ಪ್ರಾಚೀನ ವಸ್ತುಗಳು, ಕಲೆ, ಬುಟ್ಟಿಗಳು, ಪೇಪಿಯರ್ ಮ್ಯಾಚೆ, ಸೆರಾಮಿಕ್ಸ್, ಜವಳಿ, ವರ್ಣಚಿತ್ರಗಳು, ಲೋಹದ ಕರಕುಶಲ ವಸ್ತುಗಳು ಮತ್ತು ಅಲಂಕಾರ ವಸ್ತುಗಳು ಹೀಗೆ ಅದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಬಹುತೇಕ ಪ್ರತಿ ಭಾರತೀಯ ರಾಜ್ಯವು ತನ್ನದೇ ಆದ ವಿಶಿಷ್ಟ ಮುದ್ರಣಗಳು ಮತ್ತು ವಿನ್ಯಾಸಗಳನ್ನು ಹೊಂದಿದೆ. ಗುಜರಾತ್ ಬಂಧನಿ ಮತ್ತು ಪಟೋಲಾಕ್ಕೆ ಹೆಸರುವಾಸಿಯಾದರೆ ರಾಜಸ್ಥಾನವು ಡಾಬುಗೆ ಹೆಸರುವಾಸಿಯಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವ ಮತ್ತು ಆಧುನಿಕ ಅಭಿರುಚಿಯನ್ನು ಪೂರೈಸುವ ಕೆಲವು ಅತ್ಯುತ್ತಮ ಕೈಮಗ್ಗ ಉತ್ಪನ್ನಗಳ ಬಗ್ಗೆ ಮಾಹಿತಿ  ಇಲ್ಲಿವೆ:

ಕೈಮಗ್ಗದ ಸೀರೆಗಳು

ನೀವು ಭಾರತೀಯ ಉಡುಗೆಯನ್ನು ಪ್ರೀತಿಸುತ್ತಿದ್ದರೆ, ಕೈಮಗ್ಗ ಸೀರೆಗಳು ನಿಮ್ಮ ಅಲಂಕಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಕೈಮಗ್ಗ ಸೀರೆಗಳಿಗೆ ಹಲವಾರು ವಿನ್ಯಾಸಗಳು ಮತ್ತು ವೈವಿಧ್ಯಗಳು ಲಭ್ಯವಿದ್ದು ಅದು ನಿಮಗೆ ಸರಳ ಮತ್ತು ಸೊಗಸಾದ ನೋಟವನ್ನು ನೀಡುತ್ತದೆ. ನೀವು ಬಂಧನಿ ಮುದ್ರಣ, ಪಟೋಲಾ, ಬುಟಿ, ಡಾಬು ಮತ್ತು ಲೆಹೇರಿಯಾಗಳನ್ನು ಆಯ್ಕೆ ಮಾಡಿಕೊಳ್ಳಬಹುದು.  ಇದನ್ನು contrast ಬ್ಲೌಸ್ ಮತ್ತು ಪಂಜಾಬಿ ಜುಟ್ಟಿಯೊಂದಿಗೆ ಜೋಡಿಸಿ ಧರಿಸಿದರೆ ಸುಂದರವಾಗಿ ಕಾಣುತ್ತದೆ.

ಇದನ್ನೂ ಓದಿ: ದೇಹದ ತೂಕ ಇಳಿಸಬೇಕಾ? ಹಾಗಾದ್ರೆ ಆಯುರ್ವೇದದ ಈ ಸಲಹೆಗಳನ್ನು ಪಾಲಿಸಿ

ಕೈಮಗ್ಗದ ಕುರ್ತಾ

ಸೀರೆಗಳು ಮಾತ್ರವಲ್ಲ, ನೀವು ಕುರ್ತಿಗಳಲ್ಲಿ ಬುಟಿ, ಪಟೋಲಾ, ಡಾಬು ಮತ್ತು ಲೆಹೇರಿಯಾದಂತಹ ಮುದ್ರಣಗಳನ್ನು ಸಹ ಬಳಸಬಹುದು. ಇವು ಮುಖ್ಯವಾಗಿ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಅಭ್ಯಾಸ ಮಾಡುವ  Tie- Die ಶೈಲಿಗಳು.  ಒಂದೋ ನೀವು ಮುದ್ರಿತ ಕುರ್ತಾವನ್ನು ಸರಳ ಸಲ್ವಾರ್ ಜೊತೆ ಜೋಡಿಸಬಹುದು ಅಥವಾ ಸರಳ ಕುರ್ತಾ ಮತ್ತು ಮುದ್ರಿತ ಸಲ್ವಾರ್ ಅನ್ನು ನೀವು ಆಯ್ಕೆ ಮಾಡಬಹುದು. ನೀವು ಯಾವುದನ್ನೆ ಆಯ್ಕೆ ಮಾಡಿಕೊಂಡರೂ  ಒಳ್ಳೆಯ ಬೆರಗು ನೀಡುತ್ತದೆ.

ಬ್ಯಾಗ್​ಗಳು

ಬಟ್ಟೆಯೊಂದಿಗೆ ಮ್ಯಾಚಿಂಗ್ ಬ್ಯಾಗ್ ಇದ್ದರೆ ಚಂದ. ಈಗಾಗಲೇ  ಸೆಣಬು ಮತ್ತು ಹತ್ತಿಯಿಂದ ಮಾಡಿದ ಕೆಲವು ಅದ್ಭುತವಾದ ಕೈಮಗ್ಗದ ಬ್ಯಾಗ್ಗಳನ್ನು ನೀಡುವ ಕೆಲವು ಬ್ರಾಂಡ್‌ಗಳು ಮತ್ತು ವೆಬ್‌ಸೈಟ್‌ಗಳಿವೆ. ಅಲ್ಲಿ ಜೋಲಿ ಚೀಲಗಳು ಮತ್ತು  ಕೈಚೀಲಗಳವರೆಗೆ ಪ್ರತಿಯೊಂದು ವಿನ್ಯಾಸದ ಬ್ಯಾಗ್ಗಳು ಲಭಿಸುತ್ತವೆ. ಇವುಗಳಲ್ಲಿ ಯಾವುದನ್ನಾದರೂ ನಿಮ್ಮ ಉಡುಪಿನೊಂದಿಗೆ ಸ್ಟೈಲ್ ಮಾಡಲು ಮತ್ತು ಟ್ರೆಂಡಿಯಾಗಿ ಸೊಗಸಾಗಿ ಕಾಣುವಂತೆ ನೀವು ಆರಿಸಿಕೊಳ್ಳಬಹುದು.

ಅಲಂಕಾರಿಕ ವಸ್ತುಗಳು

ಮರದ ಮತ್ತು ಲೋಹದ ಉದ್ಯಾನ ಬೇಲಿಗಳಂತಹ ಲೋಹದ ಕರಕುಶಲ ವಸ್ತುಗಳು ನಿಮ್ಮ  ಮನೆಯ ಹೊರಭಾಗದಲ್ಲಿ ಒಳ್ಳೆಯ ಕಳೆ ನೀಡುತ್ತದೆ. ಇವುಗಳು ಹವಾಮಾನ-ನಿರೋಧಕ ಲೇಪನಗಳನ್ನು ಹೊಂದಿವೆ ಮತ್ತು ಹೊರಾಂಗಣಕ್ಕಾಗಿ  ವಿಶೇಷವಾಗಿ ರಚಿಸಲಾಗಿದೆ. ನಿಮ್ಮ ಮನೆಯ ಮುಂಭಾಗ ಮತ್ತು ವಾಸ್ತುಶಿಲ್ಪದ ಪ್ರಕಾರಕ್ಕೆ ಸರಿ ಹೊಂದುವ  ಮರ ಮತ್ತು ಲೋಹವನ್ನು ಸೇರಿಸಿ ನೀವು ತಯಾರಿಸಿಕೊಳ್ಳಬಹುದು.

ವರ್ಣಚಿತ್ರಗಳು

ಮಧುಬನಿ

ವರ್ಣಚಿತ್ರಗಳಂತಹ ಕೈಯಿಂದ ಮಾಡಿದ ಚಿತ್ರಗಳು ನಿಮ್ಮ ಮನೆಯ ಗೋಡೆಗಳಿಗೆ ಒಳ್ಳೆಯ ಲುಕ್ ನೀಡುತ್ತದೆ.  ಈ ವರ್ಣಚಿತ್ರಗಳಿಂದ ನಿಮ್ಮ ಸ್ಥಳವನ್ನು ನೀವು ಅಲಂಕರಿಸಬಹುದು ಮತ್ತು ಈ ಸ್ಥಳೀಯ ವರ್ಣಚಿತ್ರಕಾರರಿಗೂ ಸಹಾಯ ಮಾಡಿದಂತೆ ಆಗುತ್ತದೆ
Published by:Sandhya M
First published: