National Flag: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪ; ಮಹಿಳೆ ಸೇರಿ ಮೂವರು ಅಪ್ರಾಪ್ತರ ಬಂಧನ
ಪ್ರಾಥಮಿಕ ತನಿಖೆಯ ನಂತರ, ಉಮ್ರೇತ್ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈದ್ ಹಬ್ಬವನ್ನು ಆಚರಿಸುವ ಸಲುವಾಗಿ ಬಾಲಕರು ಇಸ್ಲಾಮಿಕ್ ಚಿಹ್ನೆಗಳಿರುವ ತ್ರಿವರ್ಣ ಧ್ವಜವನ್ನು ಹಾರಿಸಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.
news18-kannada Updated:November 26, 2020, 12:06 PM IST

ಸಾಂದರ್ಭಿಕ ಚಿತ್ರ
- News18 Kannada
- Last Updated: November 26, 2020, 12:06 PM IST
ಗುಜರಾತ್(ನ.26): ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಓರ್ವ ಮಹಿಳೆ ಸೇರಿ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತ್ನ ಆನಂದ್ ಜಿಲ್ಲೆಯ ಉಮ್ರೇತ್ ನಗರದಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆ ಹಾಗೂ ಆಕೆಯ ಮಗ ಮತ್ತು ಆತನ ಇಬ್ಬರು ಗೆಳೆಯರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಾಲಕರು 10-14 ವರ್ಷದೊಳಗಿನವರು ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಗೌರವಕ್ಕೆ ಧಕ್ಕೆ ನಿಯಂತ್ರಣ ಕಾಯ್ದೆ-1971ರ ಅಡಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಸೂಪರಿಂಡೆಂಟ್ ಆಫ್ ಪೊಲೀಸ್ ಬಿಡಿ ಜಡೇಜಾ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಸದ್ಯ ಪೊಲೀಸರ ವಶದಲ್ಲಿರುವ ಬಾಲಕ ಈದ್ ಆಚರಣೆ ವೇಳೆ, ಇಸ್ಲಾಮಿಕ್ ಚಿಹ್ನೆಗಳಿರುವ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಲು ಮುಂದಾಗಿದ್ದ. ಹಸಿರು ಧ್ವಜವನ್ನು ಹಾರಿಸುವ ಬದಲಾಗಿ, ಇಸ್ಲಾಮಿಕ್ ಚಿಹ್ನೆಗಳನ್ನು ಮುದ್ರಿಸಿರುವ ತ್ರಿವರ್ಣ ಧ್ವಜವನ್ನು ಖರೀದಿಸಿದ್ದರು ಎಂದು ಎಸ್ಪಿ ಹೇಳಿದ್ದಾರೆ. ಹೆಚ್ಚಿದ ಕೊರೋನಾ ಪ್ರಕರಣ: ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ
ಕೆಲವು ಹುಡುಗರು ಉಮ್ರೇತ್ ನಗರದ ಮನೆಯೊಂದರಲ್ಲಿ ಬೇರೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ ಎಂಬ ಮಾಹಿತಿ ಸ್ಥಳೀಯ ಪೊಲೀಸರಿಗೆ ಸಿಕ್ಕಿದೆ. ಮನೆಯ ಯಜಮಾನಿ 30 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಜೊತೆಗೆ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುವ ಕೃತ್ಯದಲ್ಲಿ ಭಾಗಿಯಾಗಿದ್ದ ಮಹಿಳೆಯ ಮಗ ಹಾಗೂ ಆತನ ಇಬ್ಬರು ಗೆಳೆಯರನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ, ಉಮ್ರೇತ್ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈದ್ ಹಬ್ಬವನ್ನು ಆಚರಿಸುವ ಸಲುವಾಗಿ ಬಾಲಕರು ಇಸ್ಲಾಮಿಕ್ ಚಿಹ್ನೆಗಳಿರುವ ತ್ರಿವರ್ಣ ಧ್ವಜವನ್ನು ಹಾರಿಸಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಅದು ಕೂಡ ಇತರರು ತಮ್ಮ ತಮ್ಮ ಮನೆಯ ಟೆರೇಸ್ನಲ್ಲಿ ಈ ರೀತಿಯಾಗಿ ಬಾವುಟ ಹಾರಿಸುವುದನ್ನು ನೋಡಿದ ಬಳಿಕ.
ಸಾಮಾನ್ಯವಾಗಿ ಹಸಿರು ಬಾವುಟವನ್ನು ಹಾರಿಸುವ ಬದಲಾಗಿ, ಇಸ್ಲಾಮಿಕ್ ಚಿಹ್ನೆಗಳಿರುವ ತ್ರಿವರ್ಣ ಧ್ವಜವನ್ನು ಖರೀದಿ ಮಾಡಿದ್ದರು ಎಂದು ಹೆಡ್ ಕಾನ್ಸ್ಟೇಬಲ್ ಶಕ್ತಿಸಿನ್ಹ್ ಜಾಲಾ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಸದ್ಯ ಪೊಲೀಸರ ವಶದಲ್ಲಿರುವ ಬಾಲಕ ಈದ್ ಆಚರಣೆ ವೇಳೆ, ಇಸ್ಲಾಮಿಕ್ ಚಿಹ್ನೆಗಳಿರುವ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಲು ಮುಂದಾಗಿದ್ದ. ಹಸಿರು ಧ್ವಜವನ್ನು ಹಾರಿಸುವ ಬದಲಾಗಿ, ಇಸ್ಲಾಮಿಕ್ ಚಿಹ್ನೆಗಳನ್ನು ಮುದ್ರಿಸಿರುವ ತ್ರಿವರ್ಣ ಧ್ವಜವನ್ನು ಖರೀದಿಸಿದ್ದರು ಎಂದು ಎಸ್ಪಿ ಹೇಳಿದ್ದಾರೆ.