Inflation hit: 1KG ಆಲೂಗಡ್ಡೆಯ ಬೆಲೆ 200 ರೂ, ಮೆಣಸಿನಕಾಯಿ ಬೆಲೆ 710 ರೂ..ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ನೆರೆಯ ದೇಶ!

ಕಳೆದ ವರ್ಷ ಆಗಸ್ಟ್ 30 ರಂದು, ಕರೆನ್ಸಿ ಮೌಲ್ಯದಲ್ಲಿ ತೀವ್ರ ಕುಸಿತದ ನಂತರ ಶ್ರೀಲಂಕಾ ಸರ್ಕಾರವು ರಾಷ್ಟ್ರೀಯ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿತು ಮತ್ತು ಅದರ ನಂತರ ಆಹಾರದ ಬೆಲೆಗಳಲ್ಲಿ ತೀವ್ರ ಏರಿಕೆಯಾಯಿತು.

ಆಲೂಗಡ್ಡೆ- ಮೆಣಸಿನಕಾಯಿ

ಆಲೂಗಡ್ಡೆ- ಮೆಣಸಿನಕಾಯಿ

  • Share this:
    ಭಾರತದ (India) ನೆರೆಯ ರಾಷ್ಟ್ರ ಶ್ರೀಲಂಕಾ (Sri Lanka) ಪ್ರಸ್ತುತ ಆಳವಾದ ಆರ್ಥಿಕ (Economy) ಮತ್ತು ಮಾನವೀಯ ಬಿಕ್ಕಟ್ಟನ್ನು (The humanitarian crisis) ಎದುರಿಸುತ್ತಿದೆ. ಶ್ರೀಲಂಕಾ ಬಹುತೇಕ ದಿವಾಳಿತನದ (Insolvency) ಅಂಚಿನಲ್ಲಿದೆ. ಸದ್ಯದ ಪರಿಸ್ಥಿತಿಯ ಬಗ್ಗೆ ಗಮನಹರಿಸಿದಾಗ ಹಣದುಬ್ಬರವು ದಾಖಲೆಯ ಶೇಕಡಾ 11.1 ತಲುಪಿದೆ. ಅಷ್ಟೇ ಅಲ್ಲದೆ ಅಲ್ಲಿನ ಜನ ಹಣದುಬ್ಬರದ ಸಂಕಷ್ಟ (Inflationary hardship) ಎದುರಿಸುತ್ತಿದ್ದಾರೆ. ಶ್ರೀಲಂಕಾದ ಅಡ್ವೊಕಾಟಾ ಇನ್ಸ್ಟಿಟ್ಯೂಟ್ ಹಣದುಬ್ಬರದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಒಂದು ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆಗಳು ಶೇಕಡಾ 15 ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ.

    ಶ್ರೀಲಂಕಾದಲ್ಲಿ ರಾಷ್ಟ್ರೀಯ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ

    ಕಳೆದ ವರ್ಷ ಆಗಸ್ಟ್ 30 ರಂದು, ಕರೆನ್ಸಿ ಮೌಲ್ಯದಲ್ಲಿ ತೀವ್ರ ಕುಸಿತದ ನಂತರ ಶ್ರೀಲಂಕಾ ಸರ್ಕಾರವು ರಾಷ್ಟ್ರೀಯ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿತು ಮತ್ತು ಅದರ ನಂತರ ಆಹಾರದ ಬೆಲೆಗಳಲ್ಲಿ ತೀವ್ರ ಏರಿಕೆಯಾಯಿತು. ಚೀನಾ ಸೇರಿದಂತೆ ಹಲವು ದೇಶಗಳಿಂದ ಪಡೆದ ಸಾಲವನ್ನು ಮರುಪಾವತಿಸಲು ಶ್ರೀಲಂಕಾ ಭಾರಿ ತೊಂದರೆ ಎದುರಿಸುತ್ತಿದೆ.

    ಒಂದು ತಿಂಗಳಲ್ಲಿ ಹಣದುಬ್ಬರವು ಶೇಕಡಾ 15 ರಷ್ಟು ಹೆಚ್ಚಾಗಿದೆ

    ಅಡ್ವೊಕಾಟಾ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ನವೆಂಬರ್ 2021 ಮತ್ತು ಡಿಸೆಂಬರ್ 2021 ರ ನಡುವೆ ಶ್ರೀಲಂಕಾದಲ್ಲಿ ಆಹಾರ ಹಣದುಬ್ಬರವು ಶೇಕಡಾ 15 ರಷ್ಟು ಹೆಚ್ಚಾಗಿದೆ. ಶ್ರೀಲಂಕಾದಲ್ಲಿ 100 ಗ್ರಾಂ ಮೆಣಸಿನಕಾಯಿ ಬೆಲೆ 18 ರೂ ಆಗಿದ್ದರೆ, ಈಗ 71 ರೂ.ಗೆ ಏರಿಕೆಯಾಗಿದೆ. ಅಂದರೆ, ಒಂದು ಕೆಜಿ ಮೆಣಸಿನಕಾಯಿ ಬೆಲೆ 710 ರೂ. ಇದು ಒಂದೇ ತಿಂಗಳೊಳಗೆ ಇಷ್ಟೊಂದು ಬದಲಾವಣೆಗೆ ಕಂಡಿದೆ.

    1 ಕೆಜಿ ಆಲೂಗಡ್ಡೆ ಬೆಲೆ 200 ರೂ.

    ಇದಲ್ಲದೇ ಬದನೆ ಬೆಲೆಯಲ್ಲಿ ಶೇ.51ರಷ್ಟು ಏರಿಕೆಯಾಗಿದ್ದು, ಈರುಳ್ಳಿ ದರದಲ್ಲಿ ಶೇ.40ರಷ್ಟು ಏರಿಕೆಯಾಗಿದೆ. ಆಮದು ಕೊರತೆಯಿಂದ ಇಲ್ಲಿ ಹಾಲಿನ ಪುಡಿಯೂ ಸಿಗುತ್ತಿಲ್ಲ. ಇದರೊಂದಿಗೆ ಒಂದು ಕೆಜಿ ಆಲೂಗೆಡ್ಡೆ ಬೆಲೆ ಸುಮಾರು 200 ರೂ.ಗೆ ತಲುಪಿದೆ.

    ಇದನ್ನು ಓದಿ: PM Security Breach: ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ಸಮಿತಿ ರಚನೆ

    ಇತರ ತರಕಾರಿ ಬೆಲೆಗಳು

    1ಕೆಜಿ ಟೊಮೆಟೊ - 200 ರೂ
    1ಕೆಜಿ ಬದನೆಕಾಯಿ – 160 ರೂ
    1ಕೆಜಿ ಬೆಂಡೆಕಾಯಿ – 200 ರೂ
    1ಕೆಜಿ ಹಾಗಲಕಾಯಿ - 160 ರೂ
    1ಕೆಜಿ ಬೀನ್ಸ್ - ರೂ 320 ರೂ
    1ಕೆಜಿ ಎಲೆಕೋಸು – 240 ರೂ
    1ಕೆಜಿ ಕ್ಯಾರೆಟ್ – 200 ರೂ
    1ಕೆಜಿ ಬಾಳೆಕಾಯಿ - 120 ರೂ

    ನಷ್ಟದಲ್ಲಿ ಶ್ರೀಲಂಕಾ ದೇಶ

    ಕೊಲಂಬೊ ಗೆಜೆಟ್ನ ವರದಿಯ ಪ್ರಕಾರ, ಕಳೆದ ದಶಕದ ಬಹುಪಾಲು ಅವಧಿಯಲ್ಲಿ ಶ್ರೀಲಂಕಾ ದುಪ್ಪಟ್ಟು ನಷ್ಟವನ್ನು ಎದುರಿಸುತ್ತಿದೆ. ಒಂದು ವಿತ್ತೀಯ ಕೊರತೆ ಮತ್ತು ಇನ್ನೊಂದು ವ್ಯಾಪಾರ ಕೊರತೆ. 2014 ರಿಂದ, ಶ್ರೀಲಂಕಾದ ಮೇಲಿನ ವಿದೇಶಿ ಸಾಲದ ಮಟ್ಟವು ನಿರಂತರವಾಗಿ ಹೆಚ್ಚುತ್ತಿದೆ. 2019 ರಲ್ಲಿ, ಈ ಸಾಲವು ದೇಶದ GDP ಯ 42.6 ಪ್ರತಿಶತವನ್ನು ತಲುಪಿದೆ.

    ಅಪ್ಘಾನಿಸ್ತಾನದ ಜೊತೆಗೆ ಶ್ರೀಲಂಕಾ ದೇಶ ಕೂಡ ಸಂಕಷ್ಟದಲ್ಲಿದೆ. ಅದರಲ್ಲೂ ಈ ಆರ್ಥಿಕ ನಷ್ಟದಿಂದ ಅಲ್ಲಿನ ಜನರಿಗೆ ಬದುಹುಕಲು ಕಷ್ಟವಾಗಿದೆ. ಜೊತೆಗೆ ಮಾಡಿದ ಸಾಲವನ್ನು ತೀರಿಸಲು ಹವಣಿಸುತ್ತಿದ್ದಾರೆ. ಆಹರ ಸಾಮಾಗ್ರಿಗಳ ಬೆಲೆ ಏರಿಕೆಯನ್ನು ಗಮನಿಸಿದಾಗ ಮುಂದಿನ ದಿನಗಳಳ್ಲಿ ದಿನಸಿ ಸಾಮಾಗ್ರಿಗಳಲ್ಲೂ ಬೆಲೆ ಏರಿಕೆ ಕಾಣುವ ಸಾಧ್ಯತೆ ಹೆಚ್ಚಿದೆ. ಮುಂದಬರುವ ದಿನಗಳಲ್ಲಿ ಆಹಾರದ ಕೊರತೆಯು ಎದುರಿಸುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.

    ಇದನ್ನು ಓದಿ: Conversion Therapy: ಲಿಂಗ ಪರಿವರ್ತನೆ ನಿಷೇಧಿಸಿದ ಕೆನಡಾ! ಪರಿವರ್ತನೆ ಮಾಡಿ ಸಿಕ್ಕಿಬಿದ್ರೆ ಶಿಕ್ಷೆ ಏನು ಗೊತ್ತಾ?

    ಶ್ರೀಲಂಕಾ ಆರ್ಥಿಕ ಸಂಕಷ್ಟದದ ಜೊತೆಗೆ ಆಹಾರ ಕೊರತೆಯನ್ನು ಎದುರಿಸುತ್ತಾ ಬದುಕಬೇಕಿದೆ. ಸದ್ಯ ದಿನೇ ದಿನೇ ಪರಿಸ್ಥಿತಿ ಕ್ಷಿಣಿಸುತ್ತಿದ್ದು, ಕೊರೋನಾದ ಜೊತೆಗೆ ಆರ್ಥಿಕವಾಗಿ ಸದೃಢವಾಗಿದೆ. ಆದರೆ ಇದೆಲ್ಲವನ್ನು ಎದುರಿಸಿ ಸಮರ್ಥವಾಗಲಿದೆ ಎಂದು ಕಾದು ನೋಡಬೇಕಿದೆ.
    Published by:Harshith AS
    First published: