National Energy Conservation Day: ಇಂದು ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ: ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಎಲ್ಲರ ಕರ್ತವ್ಯ

National Energy Conservation Day: ಮರು ನವೀಕರಿಸಲಾಗದ ನೈಸರ್ಗಿಕ ಸಂಪನ್ಮೂಲಗಳ ವ್ಯರ್ಥತೆಯನ್ನು ಕಡಿಮೆ ಮಾಡಿ. ಜೊತೆಗೆ ಭವಿಷ್ಯಕ್ಕಾಗಿ ಸಂಪನ್ಮೂಲಗಳನ್ನು ಉಳಿಸಿ ಎಂದು ಶಕ್ತಿ ಸಂರಕ್ಷಣೆ ಒತ್ತಿ ಹೇಳುತ್ತದೆ. ಶಕ್ತಿ ಸಂರಕ್ಷಣೆಯು ನವೀಕರಿಸಲಾಗದ ಸಂಪನ್ಮೂಲಗಳ ಮಹತ್ವವನ್ನೂ ಸಹ ಪ್ರತಿಪಾದಿಸುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನವದೆಹಲಿ(ಡಿ.14): ಪ್ರತೀ ವರ್ಷ ಡಿ.14ನ್ನು ಭಾರತದಲ್ಲಿ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಸ್ತುತ ಪೀಳಿಗೆ ಮತ್ತು ಮುಂದಿನ ಪೀಳಿಗೆಗೆ ಶಕ್ತಿ ಸಂರಕ್ಷಣೆಯ ಮಹತ್ವವನ್ನು ತಿಳಿಸಲು ಜಾಗೃತಿ ಮೂಡಿಸಲಾಗುತ್ತದೆ. ಮುಂದಿನ ಪೀಳಿಗೆಯವರ ಬದುಕು ಹಸನಾಗಿರಬೇಕೆಂದರೆ ಇಂದು ನಾವು-ನೀವೆಲ್ಲರೂ ಶಕ್ತಿ ಸಂರಕ್ಷಣೆ ಮಾಡಬೇಕಿರುವುದು ಬಹುಮುಖ್ಯವಾಗಿದೆ. ಭಾರತ ಸರ್ಕಾರವು ಶಕ್ತಿಯ ಸಂವರ್ಧನೆ ಹಾಗೂ ಸಂರಕ್ಷಣೆಯ ಅಗತ್ಯವನ್ನು ಮನಗಂಡು, 2001ರಲ್ಲಿ ಶಕ್ತಿಯ ಸಂರಕ್ಷಣಾ ನಿಯಮವನ್ನು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸಲು ಡಿಸೆಂಬರ್ 14ನ್ನು ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ ಎಂದು ಘೋಷಿಸಿದೆ.

  ಮರು ನವೀಕರಣ ಮಾಡಲಾಗದ ನೈಸರ್ಗಿಕ ಸಂಪನ್ಮೂಲಗಳ ಮಹತ್ವನ್ನು ಇಲ್ಲಿ ಅರಿಯಬೇಕಿದೆ. ಶಕ್ತಿಯ ಸಂರಕ್ಷಣೆ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಮುಂದಿನ ಪೀಳಿಗೆಗಳು ನಾಳೆ ಉಜ್ವಲವಾಗಿ ಬದುಕುವಂತೆ ನೋಡಿಕೊಳ್ಳಬೇಕು.

  ಮರು ನವೀಕರಿಸಲಾಗದ ನೈಸರ್ಗಿಕ ಸಂಪನ್ಮೂಲಗಳ ವ್ಯರ್ಥತೆಯನ್ನು ಕಡಿಮೆ ಮಾಡಿ. ಜೊತೆಗೆ ಭವಿಷ್ಯಕ್ಕಾಗಿ ಸಂಪನ್ಮೂಲಗಳನ್ನು ಉಳಿಸಿ ಎಂದು ಶಕ್ತಿ ಸಂರಕ್ಷಣೆ ಒತ್ತಿ ಹೇಳುತ್ತದೆ. ಶಕ್ತಿ ಸಂರಕ್ಷಣೆಯು ನವೀಕರಿಸಲಾಗದ ಸಂಪನ್ಮೂಲಗಳ ಮಹತ್ವವನ್ನೂ ಸಹ ಪ್ರತಿಪಾದಿಸುತ್ತದೆ.

  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳಿಂದ ರೈತರಿಗೆ ಆಗುವ ಲಾಭ-ನಷ್ಟಗಳೇನು?

  ಭಾರತ ಶಕ್ತಿ ಸಂರಕ್ಷಣಾ ಕಾಯ್ದೆಯನ್ನು ಮೊದಲ ಬಾರಿಗೆ 2001ರಲ್ಲಿ ಶಕ್ತಿ ದಕ್ಷತೆ ಬ್ಯೂರೋವನ್ನು ಜಾರಿಗೆ ತಂದಿತು. ಬಿಇಇ ಎಂಬುದು ಭಾರತ ಸರ್ಕಾರದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಮತ್ತು ಶಕ್ತಿಯ ಬಳಕೆಗೆ ಸಂಬಂಧಿಸಿದ ನೀತಿಗಳನ್ನು ರೂಪಿಸುವ ಒಂದು ಸಂಸ್ಥೆಯಾಗಿದೆ.

  ಪ್ರತೀ ವರ್ಷ ಡಿಸೆಂಬರ್ 14ನ್ನು ರಾಷ್ಟ್ರೀಯ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ ದೇಶಾದ್ಯಂತ ಚರ್ಚೆಗಳು, ಸಮಾವೇಶಗಳು, ಕಾರ್ಯಾಗಾರಗಳು ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಇನ್ನೂ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

  ಪ್ರಕೃತಿ ನಮ್ಮ ಆಸೆಗಳನ್ನು ಪೂರೈಸುತ್ತದೆಯೇ ಹೊರೆತು, ದುರಾಸೆಗಳನ್ನಲ್ಲ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಹೀಗಾಗಿ ಇರುವ ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು. ಮುಂದಿನ ಪೀಳಿಗೆಗೂ ಕಾಯ್ದಿರಿಸಬೇಕು. ಪ್ರಕೃತಿ ಮಾತೆ ಕೊಟ್ಟಿರುವ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
  Published by:Latha CG
  First published: