National Education Day 2021: ಈ ದಿನದ ವಿಶೇಷತೆ ಏನು? ಮಹತ್ವ, ಸಂದೇಶ, ಆಚರಣೆ ವಿವರ

National Education Day 2021: ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಪ್ರಯುಕ್ತ ಇಂದು "ರಾಷ್ಟ್ರೀಯ ಶಿಕ್ಷಣ ದಿನವಾಗಿ'' ಆಚರಣೆ ಮಾಡಲಾಗುತ್ತದೆ.

National Education Day 2021: ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಪ್ರಯುಕ್ತ ಇಂದು "ರಾಷ್ಟ್ರೀಯ ಶಿಕ್ಷಣ ದಿನವಾಗಿ'' ಆಚರಣೆ ಮಾಡಲಾಗುತ್ತದೆ.

National Education Day 2021: ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಪ್ರಯುಕ್ತ ಇಂದು "ರಾಷ್ಟ್ರೀಯ ಶಿಕ್ಷಣ ದಿನವಾಗಿ'' ಆಚರಣೆ ಮಾಡಲಾಗುತ್ತದೆ.

  • Share this:
ಮನುಷ್ಯ(Humans) ಎಷ್ಟೇ ಶ್ರೀಮಂತ(Rich)ನಾಗಿದ್ದರೂ ಶಿಕ್ಷಣ(Education)ವಿಲ್ಲ ಅಂದರೆ ಪ್ರಯೋಜನವಿಲ್ಲ. ಅದೇ ಒಬ್ಬ ಮನುಷ್ಯ ಎಷ್ಟೇ ಬಡವನಾಗಿದ್ದರೂ ಆತನಿಗೆ ಶಿಕ್ಷಣವಿದೆ ಅಂದರೆ ಆತ ನಿಜಕ್ಕೂ ಶ್ರೀಮಂತ. ‘ಖಡ್ಗಕ್ಕಿಂತ ಲೇಖನಿ ಹರಿತ’ ಎಂಬ ಮಾತನ್ನು ಎಲ್ಲರೂ ಕೇಳಿದ್ದೀರಾ. ಇದು ನಿಜ ಶಿಕ್ಷಣ ಮುಂದೆ ಯಾವುದು ಶ್ರೀಮಂತವಾಗಿ ಕಾಣಿಸುವುದಿಲ್ಲ. ದುಡ್ಡು(Money) ಇದ್ದವನು ಕೆಲವನ್ನು ಮಾತ್ರ ಕೊಂಡುಕೊಳ್ಲಬಲ್ಲ, ಗೆಲ್ಲಬಲ್ಲ, ಆದರೆ ಶಿಕ್ಷಣ ಇದ್ದವನು ಜಗತ್ತ(World)ನ್ನೇ ಗೆಲ್ಲಬಲ್ಲ. ಇದಕ್ಕೆ ಸಾಕ್ಷಿಯಾಗಿ ದೇಶದ ಮಹಾನ್​ ನಾಯಕರ(Great Leaders) ಸಾಧನೆ(Achievements)ಗಳು ನಮ್ಮ ಕಣ್ಣು ಮುಂದಿದೆ. ಈ ಜಗತ್ತಿನಲ್ಲಿ ಶಿಕ್ಷಣ, ವಿದ್ಯೆಗೆ ಇರುವ ಮಾನ್ಯತೆ ಯಾವುದೇ ಭೌತಿಕ ವಿಷಯಗಳಿಗೆ ಶಾಶ್ವತವಾಗಿ ಸಿಗಲು ಸಾಧ್ಯವೇ ಇಲ್ಲ. ಇದನೆಲ್ಲಾ ಇವಾಗ ಯಾಕೆ ಹೇಳುತ್ತಾ ಇದ್ದೀವೆ ಅಂದುಕೊಂಡಿದ್ದೀರಾ? ಕಾರಣ ಇಂದು ಶಿಕ್ಷಣದ ಮಹತ್ವ ಸಾರುವ‘ರಾಷ್ಟ್ರೀಯ ಶಿಕ್ಷಣ ದಿನ’(National Education Day). 

ಈ ದಿನದ ಮಹತ್ವವೇನು? 

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಪ್ರಯುಕ್ತ ಇಂದು "ರಾಷ್ಟ್ರೀಯ ಶಿಕ್ಷಣ ದಿನವಾಗಿ'' ಆಚರಣೆ ಮಾಡಲಾಗುತ್ತದೆ. ದೇಶದ ಶಿಕ್ಷಣ ಕ್ಷೇತ್ರಕ್ಕೆ ಆಜಾದ್ ಅವರು ನೀಡಿದ ಕೊಡುಗೆಯ ಸ್ಮರಣಾರ್ಥ 2008 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನವೆಂಬರ್ 11 ಅನ್ನು ರಾಷ್ಟ್ರೀಯ ಶಿಕ್ಷಣ ದಿನವೆಂದು ಆಚರಿಸಲು ಘೋಷಿಸಿತು. ಮೌಲಾನಾ ಆಜಾದ್ ಸ್ವತಂತ್ರ ಭಾರತದ ಶಿಕ್ಷಣ ವ್ಯವಸ್ಥೆಯ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು. ರಾಷ್ಟ್ರೀಯ ಶಿಕ್ಷಣ ದಿನವಾದ ಇಂದು, ರಾಷ್ಟ್ರ ನಿರ್ಮಾಣ, ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ ಮತ್ತು ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಳಿಸಲಾಗದ ಕೊಡುಗೆಗಳನ್ನು ನೀಡಿದ ಮೌಲಾನಾ ಆಜಾದ್ ಅವರ ಅನುಕರಣೀಯ ಕೊಡುಗೆಗಳನ್ನು ಭಾರತ ನೆನಪಿಸಿಕೊಳ್ಳುತ್ತದೆ.

ಮೌಲಾನಾ ಅಬುಲ್ ಕಲಾಂ ಆಜಾದ್ ಕುರಿತು

ಆಜಾದ್ ಅವರ ಸಂಪೂರ್ಣ ಹೆಸರು,  ಮೌಲಾನಾ ಸಯ್ಯಿದ್ ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್ ಹುಸೇನಿ ಆಜಾದ್. ಆರಂಭದಲ್ಲಿ ತಂದೆಯಿಂದಲೇ ಶಿಕ್ಷಣ ಪಡೆದ ಆಜಾದ್, ನಂತರ ಅಲ್ಲಿನ ಪ್ರಸಿದ್ಧ ಶಿಕ್ಷಕರಿಂದ ಶಿಕ್ಷಣವನ್ನು ಪಡೆದರು. ತತ್ವಶಾಸ್ತ್ರ, ಗಣಿತ ಮತ್ತು ಬೀಜಗಣಿತವನ್ನು ಪ್ರಮುಖ ವಿಷಯವಾಗಿ ಅಧ್ಯಯನ ಮಾಡಿದರು. ನಂತರ ಸ್ವತಃ ಅಧ್ಯಯನ ಮಾಡುವ ಮೂಲಕ ಇಂಗ್ಲಿಷ್ ಭಾಷೆ, ವಿಶ್ವದ ಇತಿಹಾಸ ಮತ್ತು ರಾಜಕೀಯವನ್ನು ಅರಿತರು. ಬಂಗಾಳದ ಇಬ್ಬರು ಪ್ರಮುಖ ಕ್ರಾಂತಿಕಾರಿಗಳಾದ ಅರವಿಂದ ಘೋಷ್ ಮತ್ತು ಶ್ಯಾಮ್ ಸುಂದರ್ ಚಕ್ರವರ್ತಿ ಅವರನ್ನು ಭೇಟಿಯಾದ ನಂತರ, ಬ್ರಿಟಿಷ್ ಆಡಳಿತದ ವಿರುದ್ಧ ಕ್ರಾಂತಿಕಾರಿ ಚಳವಳಿಗೆ ಧುಮುಕಿದರು.

ಇದನ್ನು ಓದಿ : ಶಾಲೆಗಳಿಂದ ಭವಿಷ್ಯದ ಒಲಿಂಪಿಕ್ ಸ್ಟಾರ್​ಗಳನ್ನ ಹೆಕ್ಕಿ ತೆಗೆಯಲು ಸರ್ಕಾರ ಯೋಜನೆಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಆಜಾದ್

ಶಿಕ್ಷಣ ಸಚಿವರಾಗಿ ಆಜಾದ್ ಮುಕ್ತ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಮಹತ್ವದ ಕ್ರಮಗಳನ್ನು ಕೈಗೊಂಡರು. 1951ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯನ್ನು ಪ್ರಾರಂಭಿಸಿದವರು ಆಜಾದ್. ಇಂದು ದೆಹಲಿ ವಿಶ್ವವಿದ್ಯಾಲಯವಾಗಿ ಮಾರ್ಪಾಡಾಗಿರುವ ಅಂದಿನ ದೆಹಲಿಯ ದಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಅನ್ನು ಸ್ಥಾಪಿಸಿದ ಕೀರ್ತಿ ಸಹ ಆಜಾದ್ ಗೆ ಸಲ್ಲುತ್ತದೆ. ಅಲ್ಲದೇ, 1953ರಲ್ಲಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವನ್ನು ಸ್ಥಾಪಿಸಿ ದೇಶದಲ್ಲಿ ಹತ್ತಾರು ವಿಶ್ವವಿದ್ಯಾಲಯಗಳ ಹುಟ್ಟು ಹಾಗೂ ಇಂದಿನ ಉಳಿವಿಗೆ ಕಾರಣರಾಗಿದ್ದಾರೆ ಆಜಾದ್.

1958ರಲ್ಲಿ ಹೃದಯಾಘಾತದಿಂದ ಆಜಾದ್​ ನಿಧನ

ಆಜಾದ್ ಅವರು ಎರಡೇ ವರ್ಷಗಳಲ್ಲಿ ಉತ್ತರ ಭಾರತ ಮತ್ತು ಬಾಂಬೆಯಾದ್ಯಂತ ರಹಸ್ಯ ಕ್ರಾಂತಿಕಾರಿ ಕೇಂದ್ರಗಳನ್ನು ಸ್ಥಾಪಿಸಿದರು. 1912ರಲ್ಲಿ ಮುಸ್ಲಿಮರಲ್ಲಿ ದೇಶಭಕ್ತಿಯ ಭಾವನೆಯನ್ನು ಹೆಚ್ಚಿಸಲು 'ಅಲ್-ಹಿಲಾಲ್' ಎಂಬ ಉರ್ದು ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಪಂಡಿತ್ ಜವಾಹರಲಾಲ್ ನೆಹರೂ ಅವರ ಸಂಪುಟದಲ್ಲಿ 1947ರಿಂದ 1958ರವರೆಗೆ ಪ್ರಥಮ ಶಿಕ್ಷಣ ಸಚಿವರಾಗಿ ದೇಶಕ್ಕೆ ಸೇವೆ ಸಲ್ಲಿಸಿದರು. 22ರ ಫೆಬ್ರವರಿ 1958ರಂದು ಹೃದಯಾಘಾತದಿಂದ ಅವರು ನಿಧನರಾದರು.

1922ರಲ್ಲಿ ಭಾರತ ರತ್ಮ ಪ್ರಶಸ್ತಿ ನೀಡಿ ಗೌರವ 

ಶಿಕ್ಷಣ ಕ್ಷೇತ್ರಕ್ಕೆ ಆಜಾದ್​ ಅವರು ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ 1922ರಲ್ಲಿ ಮೌಲನಾ ಆಜಾದ್​ ಅವರಿಗೆ ದೇಶದ ಪ್ರತಿಷ್ಠಿತಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 1931ರ ದರ್ಶನ ಸತ್ಯಾಗ್ರಹದ ಮುಖ್ಯ ಆಯೋಜಕರಾಗಿದ್ದ ಮೌಲನ ಅವರು ಕಠಿಣ ಸೆರೆವಾಸ ಅನುಭವಿಸಿದ್ದರು. ಕ್ವಿಟ್​ ಇಂಡಿಯಾ ಚಳವಳಿ ಸಂದರ್ಭ ಮೂರು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು.  1958ರ ಫೆಬ್ರವರಿ 22 ರಂದು ಆಜಾದ್​ ವಿಧಿವಶರಾಗಿದ್ದಾರೆ.
Published by:Vasudeva M
First published: