PFI ಕಚೇರಿ, ನಾಯಕರ ಮನೆ ಮೇಲೆ ರಾಷ್ಟ್ರವ್ಯಾಪಿ NIA, ED ದಾಳಿ, 100ಕ್ಕೂ ಅಧಿಕ ಕಾರ್ಯಕರ್ತರ ಬಂಧನ!

Nation Wide NIA Raid on PFI Offices: ರಾಷ್ಟ್ರೀಯ ತನಿಖಾ ಸಂಸ್ಥೆ ಮಧ್ಯರಾತ್ರಿ ಬಳಿಕ ಈ ದಾಳಿ ಆರಂಭಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಈ ದಾಳಿ ನಡೆಯುತ್ತಿದ್ದು, ಅದರಲ್ಲೂ ವಿಶೇಷವಾಗಿ ಆಂಧ್ರ ಪ್ರದೇಶ ಮತ್ತು ಸ್ಥಳೀಯ ನಾಯಕರ ಮನೆಗಳ ಮೇಲೆ ಅಧಿಕಾರಿಗಳು ರೇಡ್ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೈದರಾಬಾದ್(ಸೆ.22): ಪಾಪ್ಯುಲರ್ ಫ್ರಂಟ್ ಸಂಸ್ಥೆಗಳು (Popular Front Of India) ನಾಯಕರ ಮನೆಗಳ ಮೇಲೆ ರಾಷ್ಟ್ರವ್ಯಾಪಿ ದಾಳಿ NIA ದಾಳಿ ನಡೆಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಮಧ್ಯರಾತ್ರಿ ಬಳಿಕ ಈ ದಾಳಿ ಆರಂಭಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಈ ದಾಳಿ ನಡೆಯುತ್ತಿದ್ದು, ಅದರಲ್ಲೂ ವಿಶೇಷವಾಗಿ ಆಂಧ್ರ ಪ್ರದೇಶ ಮತ್ತು ಸ್ಥಳೀಯ ನಾಯಕರ ಮನೆಗಳ ಮೇಲೆ ಅಧಿಕಾರಿಗಳು ರೇಡ್ ನಡೆಸುತ್ತಿದ್ದಾರೆ. ರಾಜ್ಯ ಸಮಿತಿ ಕಚೇರಿಗೂ ದಾಳಿ ನಡೆಯಲಿದೆ. ಇನ್ನು ಪ್ರಮುಖ ಕೇಂದ್ರಗಳ ಮೇಲಿನ ದಾಳಿಯಲ್ಲಿ ಜಾರಿ ನಿರ್ದೇಶನಾಲಯವೂ (Enforcement Directorate) ಭಾಗಿಯಾಗಿದ್ದಾರೆನ್ನಲಾಗಿದೆ.

ಭಯೋತ್ಪಾದಕರಿಗೆ ಧನಸಹಾಯ ಮತ್ತು ಶಿಬಿರವನ್ನು ನಡೆಸುವ ವಿಚಾರವಾಗಿ, ದೇಶದಾದ್ಯಂತ PFI ಅಂದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿರುದ್ಧ ದೊಡ್ಡ ಕ್ರಮವನ್ನು ಕೈಗೊಳ್ಳಲಾಗಿದೆ. ದೇಶದ 10 ರಾಜ್ಯಗಳಲ್ಲಿ ಎನ್‌ಐಎ ಮತ್ತು ಇಡಿ ತಂಡಗಳು ಪಿಎಫ್‌ಐನ ರಾಜ್ಯದಿಂದ ಜಿಲ್ಲಾ ಮಟ್ಟದ ನಾಯಕರ ಮನೆಗಳ ಮೇಲೆ ದಾಳಿ ನಡೆಸಿ ಸುಮಾರು 100 ಕಾರ್ಯಕರ್ತರನ್ನು ಬಂಧಿಸಿದೆ. NIA ಮತ್ತು ED ಯ ರಾಡಾರ್‌ನಲ್ಲಿ ಪಿಎಫ್‌ಐ ಅಧ್ಯಕ್ಷ ಒಎಂಎ ಸಲಾಮ್ ಕೂಡ ಇದ್ದಾರೆ, ಅವರ ಮನೆ ಮಧ್ಯರಾತ್ರಿ ದಾಳಿಯಾಗಿದೆ.

ಇದನ್ನೂ ಓದಿ: SDPI, PFI ಬಿಜೆಪಿ ಸಾಕಿದ ಕೂಸುಗಳು; ಸಿದ್ದರಾಮಯ್ಯ ಆರೋಪ

NIA ಮತ್ತು ED ತಂಡವು ರಾಜ್ಯ ಪೊಲೀಸರೊಂದಿಗೆ ಹತ್ತು ರಾಜ್ಯಗಳಲ್ಲಿ ದಾಳಿ ನಡೆಸಿತು ಮತ್ತು ಈ ಸಮಯದಲ್ಲಿ 100 ಕ್ಕೂ ಹೆಚ್ಚು PFI ಕಾರ್ಯಕರ್ತರನ್ನು ಬಂಧಿಸಲಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ತಮಿಳುನಾಡಿನ ಕೊಯಮತ್ತೂರು, ಕಡಲೂರು, ರಾಮನಾಡ್, ದಿಂಡುಗಲ್, ಥೇಣಿ ಮತ್ತು ತೆಂಕಾಸಿ ಸೇರಿದಂತೆ ಹಲವು ಸ್ಥಳಗಳಲ್ಲಿ ಪಿಎಫ್‌ಐ ಪದಾಧಿಕಾರಿಗಳ ಮನೆಗಳನ್ನು ಎನ್‌ಐಎ ಶೋಧಿಸಿದೆ. ಪುರಸವಕ್ಕಂನಲ್ಲಿರುವ ಚೆನ್ನೈ ಪಿಎಫ್‌ಐನ ರಾಜ್ಯ ಪ್ರಧಾನ ಕಚೇರಿಯಲ್ಲೂ ಶೋಧ ನಡೆಸಲಾಗುತ್ತಿದೆ.

NIA Recruitment 2022 apply for 106 posts
ರಾಷ್ಟ್ರೀಯ ತನಿಖಾ ದಳ


ಪಾಪ್ಯುಲರ್ ಫ್ರಂಟ್ ನಾಯಕರ ಮನೆಗಳ ಮೇಲೆ ಕೇಂದ್ರೀಯ ಸಂಸ್ಥೆಗಳಾದ ಎನ್‌ಐಎ ಮತ್ತು ಇಡಿ ತಡರಾತ್ರಿ ನಡೆಸಿದ ದಾಳಿ ರಾಜ್ಯ ಭಯೋತ್ಪಾದನೆಗೆ ಇತ್ತೀಚಿನ ಉದಾಹರಣೆಯಾಗಿದೆ. ರಾಷ್ಟ್ರೀಯ ರಾಜ್ಯ ಸ್ಥಳೀಯ ನಾಯಕರ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ರಾಜ್ಯ ಸಮಿತಿ ಕಚೇರಿಯ ಮೇಲೂ ದಾಳಿ ನಡೆಸಲಾಗುತ್ತಿದೆ. ಫ್ಯಾಸಿಸ್ಟ್ ಆಡಳಿತದ ನಡೆ ವಿರುದ್ಧ ತೀವ್ರ ಪ್ರತಿಭಟನೆ ಭಿನ್ನಾಭಿಪ್ರಾಯದ ಧ್ವನಿ ಹತ್ತಿಕ್ಕಲು ಏಜೆನ್ಸಿಗಳನ್ನು ಬಳಸಲಾಗುತ್ತಿದೆ" ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ಸತ್ತಾರ್ ಪ್ರಕಟಣೆಯಲ್ಲಿಆರೋಪಿಸಿದ್ದಾರೆ.

ಇದನ್ನೂ ಓದಿ: PFI ಕಾರ್ಯಕರ್ತರಿಂದ NIA ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ; ಭಜರಂಗದಳ ಖಂಡನೆ

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಬುಧವಾರ ಮಧ್ಯರಾತ್ರಿ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಪಿಎಫ್‌ಐ ಅಧ್ಯಕ್ಷ ಒಎಂಎ ಸಲಾಂ ಅವರ ಮನೆ ಮೇಲೆ ಎನ್‌ಐಎ ಮತ್ತು ಇಡಿ ಹಠಾತ್ ದಾಳಿ ನಡೆಸಿದೆ. ದಾಳಿಗಳು ಇನ್ನೂ ಮುಂದುವರೆದಿದೆ. ಇನ್ನು ಇದೇ ವೇಳೆ PFI ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಅಧ್ಯಕ್ಷರ ಮನೆಯ ಹೊರಗೆ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು.ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಸೆಪ್ಟೆಂಬರ್ 18 ರಂದು ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಆಂಧ್ರಪ್ರದೇಶದ ನೆಲ್ಲೂರು ಮತ್ತು ನಂದ್ಯಾಲ್ ಮತ್ತು ತೆಲಂಗಾಣದ ಜಗ್ತಿಯಾಲ್‌ನಲ್ಲಿ ದಾಳಿ ನಡೆಸಲಾಗಿದೆ. ಇದರ ನಂತರ ರಾಷ್ಟ್ರವ್ಯಾಪಿ ದಾಳಿ ನಡೆದಿದೆ.
Published by:Precilla Olivia Dias
First published: