HOME » NEWS » National-international » NATHURAM GODSE IS THE FIRST HINDU TERRORIST COMMITTED TO HIS STATEMENT SAYS ACTOR KAMAL HAASAN

ದೇಶದ ಮೊದಲ ಹಿಂದೂ ಉಗ್ರ ನಾಥೂರಾಮ್ ಗೋಡ್ಸೆ ಎಂಬ ತನ್ನ ಹೇಳಿಕೆಗೆ ಬದ್ಧ; ನಟ ಕಮಲ್ ಹಾಸನ್

ನಾಥೂರಾಮ್ ಗೋಡ್ಸೆ ಕುರಿತ ಕಮಲ್ ಹಾಸನ್ ಅವರ ಈ ಹೇಳಿಕೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಹಾಗೂ ಕೆಲ ಹಿಂದೂಪರ ಸಂಘಟನೆ ಸುಪ್ರೀಂ ಕೋರ್ಟ್​ ಹಾಗೂ ದೆಹಲಿ ಪಟಿಯಾಲ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿವೆ. ಅಲ್ಲದೆ ತಮಿಳುನಾಡಿನಲ್ಲಿ ಕಮಲ್​ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆಯುತ್ತಿದ್ದು, ಗುರುವಾರ ಕಮಲ್ ಮೇಲೆ ಓರ್ವ ವ್ಯಕ್ತಿ ಸಾರ್ವಜನಿಕವಾಗಿ ಚಪ್ಪಲಿ ಎಸೆದು ಸುದ್ದಿಯಾಗಿದ್ದ.

MAshok Kumar | news18
Updated:July 7, 2020, 11:36 AM IST
ದೇಶದ ಮೊದಲ ಹಿಂದೂ ಉಗ್ರ ನಾಥೂರಾಮ್ ಗೋಡ್ಸೆ ಎಂಬ ತನ್ನ ಹೇಳಿಕೆಗೆ ಬದ್ಧ; ನಟ ಕಮಲ್ ಹಾಸನ್
ಕಮಲ್ ಹಾಸನ್
  • News18
  • Last Updated: July 7, 2020, 11:36 AM IST
  • Share this:
ಚೆನ್ನೈ (ಮೇ.17) : ದೇಶದ ಮೊದಲ ಉಗ್ರ ಒಬ್ಬ ಹಿಂದೂ ಆತನ ಹೆಸರು ನಾಥೂರಾಮ್ ಗೋಡ್ಸೆ" ಎಂಬ ತಮ್ಮ ಹೇಳಿಕೆಗೆ ಈಗಲೂ ಬದ್ಧ ಎಂದು ತಮಿಳು ನಟ, ರಾಜಕಾರಣಿ ಕಮಲಹಾಸನ್ ಸ್ಪಷ್ಟಪಡಿಸಿದ್ದಾರೆ.

ಕಳೆದ 12ನೇ ತಾರೀಖು ತಿರುಪ್ಪರಗುಂಡ್ರಂ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ್ದ ಕಮಲ್ ಹಾಸನ್​ “ನಾನು ಇದು ಮುಸ್ಲೀಮರ ಪ್ರದೇಶ ಎಂಬ ಕಾರಣಕ್ಕೆ ಈ ಹೇಳಿಕೆ ನೀಡುತ್ತಿಲ್ಲ. ಗಾಂಧಿಯ ಪ್ರತಿಮೆಯ ಮುಂದೆ ನಿಂತು ಹೇಳುತ್ತಿದ್ದೇನೆ. ಸ್ವತಂತ್ರ್ಯ ಭಾರತದ ಮೊದಲ ಉಗ್ರ ಓರ್ವ ಹಿಂದು. ಆತನ ಹೆಸರು ನಾಥೂರಾಮ್​ ಗೋಡ್ಸೆ. ನಾನು ಮಹಾತ್ಮಾ ಗಾಂಧಿಯ ಮೊಮ್ಮಗನಾಗಿ ಆ ಹತ್ಯೆಗೆ ನ್ಯಾಯ ಕೇಳಲು ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿಕೆ ನೀಡಿದ್ದರು. ನಂತರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಕಮಲ್ ಹಾಸನ್ ಅವರ ಈ ಹೇಳಿಕೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಯಿತು. ಈ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಹಾಗೂ ಕೆಲ ಹಿಂದೂಪರ ಸಂಘಟನೆ ಸುಪ್ರೀಂ ಕೋರ್ಟ್​ ಹಾಗೂ ದೆಹಲಿ ಪಟಿಯಾಲ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿವೆ. ಅಲ್ಲದೆ ತಮಿಳುನಾಡಿನಲ್ಲಿ ಕಮಲ್​ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಗುರುವಾರ ಮಧುರೈ ಜಿಲ್ಲೆಯ ಸಾರ್ವಜನಿಕ ಸಭೆಯಲ್ಲಿ ಕಮಲ್ ಮಾತನಾಡುತ್ತಿದ್ದಾಗ ಓರ್ವ ವ್ಯಕ್ತಿ ಕಮಲ್​ ಹಾಸನ್ ಮೇಲೆ ಚಪ್ಪಲಿ ಎಸೆದು ಸುದ್ದಿಯಾಗಿದ್ದ.

ಈ ಕುರಿತು ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಕಮಲ್ ಹಾಸನ್, “ನನ್ನ ಹೇಳಿಕೆಯ ಕುರಿತು ನನಗೆ ಯಾವುದೇ ವಿಷಾಧವಿಲ್ಲ. ನಾನು ಸತ್ಯವನ್ನೇ ಹೇಳಿದ್ದೇನೆ. ನಾಥೂರಾಮ್ ಗೋಡ್ಸೆ ಉಗ್ರ ಎಂಬ ಹೇಳೆಕೆಯಲ್ಲಿ ತಪ್ಪೇನಿದೆ. ಆದರೆ, ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ವಿವಾದ ಮಾಡಲಾಗುತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ತಮಿಳುನಾಡಿನಲ್ಲಿ ದೊಡ್ಡ ಗಲಭೆಗೆ ಕಾರಣವಾಗಿರುವ ನಟ ರಾಜಕಾರಣಿ ಕಮಲ್​ ಹಾಸನ್ ಹೇಳಿಕೆ ವಿವಾದ ಸದ್ಯಕ್ಕೆ ಅಂತ್ಯವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
Published by: MAshok Kumar
First published: May 17, 2019, 11:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading