• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Skeletons: ಬೊಲೆರೋ ವಾಹನದಲ್ಲಿ ಸುಟ್ಟು ಕರಕಲಾದ 2 ಶವ ಪತ್ತೆ; ಗೋಸಾಗಾಟ ನೆಪದಲ್ಲಿ ಭಜರಂಗದಳದ ಕೃತ್ಯ!

Skeletons: ಬೊಲೆರೋ ವಾಹನದಲ್ಲಿ ಸುಟ್ಟು ಕರಕಲಾದ 2 ಶವ ಪತ್ತೆ; ಗೋಸಾಗಾಟ ನೆಪದಲ್ಲಿ ಭಜರಂಗದಳದ ಕೃತ್ಯ!

ಭಜರಂಗದಳದ ಕೃತ್ಯ

ಭಜರಂಗದಳದ ಕೃತ್ಯ

ಈ ಬಗ್ಗೆ ಪೊಲೀಸರಲ್ಲಿ ಬಾಯ್ಬಿಟ್ಟಿರುವ ಬಂಧಿತ ಆರೋಪಿ ಹಾಗೂ ಭಜರಂಗ ದಳದ ಸಹಚರ ಸೈನಿ, ಅಪರಾಧ ನಡೆದ ಸ್ಥಳದಿಂದ ದೂರದಲ್ಲಿ ಶವವನ್ನು ಸುಟ್ಟು ಹಾಕಿದರೆ ದೇಹಗಳನ್ನು ಮತ್ತು ಸುಟ್ಟ ವಾಹನವನ್ನು ಯಾರೂ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ ಎಂದು ನಾವು ಯೋಜನೆ ರೂಪಿಸಿದೆವು ಎಂದು ಹೇಳಿದ್ದಾನೆ.

ಮುಂದೆ ಓದಿ ...
  • Share this:

ಹರ್ಯಾಣ: ಇತ್ತೀಚೆಗೆ ಹರ್ಯಾಣದ (Haryana) ಭಿವಾನಿಯ ಲೋಹರು ಪೊಲೀಸ್ ಠಾಣಾ ವ್ಯಾಪ್ತಿಯ ಬರ್ವಾಸ್ ಗ್ರಾಮದಲ್ಲಿ ಸುಟ್ಟು ಕರಕಲಾದ ಬೊಲೆರೋ ವಾಹನದಲ್ಲಿ ಎರಡು ಅಸ್ಥಿಪಂಜರ (Skeletons) ಪತ್ತೆಯಾದ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌ ಸಿಕ್ಕಿದೆ. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಮಹತ್ವದ ಅಂಶಗಳು ಲಭ್ಯವಾಗಿದ್ದು, ಈ ಅಸ್ಥಿಪಂಜರಗಳು ರಾಜಸ್ಥಾನದಲ್ಲಿ ನಾಪತ್ತೆಯಾದ ಇಬ್ಬರು ಮುಸ್ಲಿಂ ಯುವಕರದ್ದಾಗಿದ್ದು, ಇದು ಭಜರಂಗದಳ (Bharangdal) ಎಸಗಿದ ಕೃತ್ಯ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.


ಈ ಬಗ್ಗೆ ರಾಜಸ್ಥಾನ ಪೊಲೀಸರು ಮಾಹಿತಿ ನೀಡಿದ್ದು, ರಾತ್ರಿ ವೇಳೆ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ನಾಲ್ಕು ಜನರ ಭಜರಂಗ ದಳದ ತಂಡ ನಾಸೀರ್ (25) ಮತ್ತು ಜುನೈದ್ ಅಲಿಯಾಸ್ ಜುನಾ (35) ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಪೊಲೀಸರಿಂದ ಬಂಧಿತನಾಗಿರುವ ಆರೋಪಿ ಹಾಗೂ ಭಜರಂಗದಳದ ಸದಸ್ಯ ರಿಂಕು ಸೈನಿ, ಯುವಕರಿಗೆ ತೀವ್ರ ಹಲ್ಲೆ ನಡೆಸಿದ ನಂತರ ಅವರಿಬ್ಬರನ್ನೂ ಆರೋಪಿಗಳು ಹರಿಯಾಣದ ಫಿರೋಜ್‌ಪುರ ಜಿರ್ಕಾದ ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದೆವು ಎಂದು ಹೇಳಿದ್ದಾನೆ.


ಇದನ್ನೂ ಓದಿ: Crime News: ಸುಟ್ಟು ಕರಕಲಾದ ಬೊಲೆರೋ ವಾಹನದಲ್ಲಿ ಮಾನವರ ಎರಡು ಅಸ್ಥಿಪಂಜರಗಳು ಪತ್ತೆ!


ಹರ್ಯಾಣ ಪೊಲೀಸರ ನಿರ್ಲಕ್ಷ್ಯ?


ಪೊಲೀಸ್ ಠಾಣೆಗೆ ಸಂತ್ರಸ್ತ ಯುವಕರನ್ನು ಕರೆತಂದ ಆರೋಪಿಗಳಾದ ಭಜರಂಗ ದಳದ ಕಾರ್ಯಕರ್ತರು, ಗೋವುಗಳ ಕಳ್ಳಸಾಗಣೆ ಆರೋಪದ ಮೇಲೆ ಜುನೈದ್ ಮತ್ತು ನಾಸಿರ್ ಅವರನ್ನು ಬಂಧಿಸಬೇಕೆಂದು ಹರ್ಯಾಣ ಪೊಲೀಸರಿಗೆ ಹೇಳಿದ್ದಾರೆ. ಅದಾಗಲೇ ಮಾರಣಾಂತಿಕ ಹಲ್ಲೆಗೆ ಒಳಗಾದ ನಾಸೀರ್ ಮತ್ತು  ಜುನೈದ್ ಪ್ರಜ್ಞೆ ಕಳೆದುಕೊಂಡಿದ್ದರು. ಆಗ ಪೊಲೀಸರು ಅವರನ್ನು ಬಿಡಲು ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ ಇಬ್ಬರೂ ಕೂಡ ಮೃತಪಟ್ಟಿದ್ದು, ಆಗ ಭಯಭೀತಗೊಂಡ ಭಜರಂಗ ದಳದ ಆರೋಪಿಗಳು ಇಬ್ಬರ ಶವವನ್ನು ವಿಲೇವಾರಿ ಮಾಡಲು ಸಲಹೆ ನೀಡುವಂತೆ ತಮ್ಮ ಸಹಚರರಿಗೆ ಕರೆ ಮಾಡಿ ಹೇಳಿದ್ದಾರೆ.


ಬೊಲೆರೋಗೆ ಪೆಟ್ರೋಲ್ ಹಾಕಿ ಬೆಂಕಿ!


ಅಂತಿಮವಾಗಿ ಭಜರಂಗ ದಳದ ಗೂಂಡಾಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ನಾಸೀರ್ ಮತ್ತು ಜುನೈದ್ ಅಲಿಯಾಸ್ ಜುನಾ ಮೃತದೇಹವನ್ನು ತಮ್ಮ ಬೊಲೆರೊ ಎಸ್‌ಯುವಿ ವಾಹನದಲ್ಲಿ 200 ಕಿಮೀ ದೂರದಲ್ಲಿರುವ ರಾಜಸ್ಥಾನದ ಭಿವಾನಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದರು. ಗುರುವಾರ ಮುಂಜಾನೆ ಎರಡೂ ದೇಹಗಳನ್ನು ಭಿವಾನಿಗೆ ಕರೆತಂದು ಬೊಲೆರೊ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಆ ಮೂಲಕ ಇದೊಂದು ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಪೊಲೀಸರಲ್ಲಿ ಬಾಯ್ಬಿಟ್ಟ ಕಿರಾತಕ


ಈ ಬಗ್ಗೆ ಪೊಲೀಸರಲ್ಲಿ ಬಾಯ್ಬಿಟ್ಟಿರುವ ಬಂಧಿತ ಆರೋಪಿ ಹಾಗೂ ಭಜರಂಗ ದಳದ ಸಹಚರ ಸೈನಿ, ಅಪರಾಧ ನಡೆದ ಸ್ಥಳದಿಂದ ದೂರದಲ್ಲಿ ಶವವನ್ನು ಸುಟ್ಟುಹಾಕಿದರೆ ದೇಹಗಳನ್ನು ಮತ್ತು ಸುಟ್ಟ ವಾಹನವನ್ನು ಯಾರೂ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ ಎಂದು ನಾವು ಯೋಜನೆ ರೂಪಿಸಿದೆವು ಎಂದು ಹೇಳಿದ್ದಾನೆ. ಆದರೆ ಬೊಲೆರೊದ ಚಾಸಿಸ್ ನಂಬರ್‌ನಿಂದ ವಾಹನದಲ್ಲಿದ್ದ ಅಸ್ಥಿಪಂಜರ ಜುನೈದ್ ಮತ್ತು ನಾಸಿರ್ ಅವರದ್ದು ಎಂದು ಪೊಲೀಸರು ಕಂಡು ಹಿಡಿದಿದ್ದಾರೆ.


ರಾಜಸ್ಥಾನ ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ಯುವಕರ ಕುಟುಂಬಗಳು ಹೆಸರಿಸಿದ ಪ್ರಮುಖ ಶಂಕಿತರಲ್ಲಿ ಒಬ್ಬನಾದ ಬಜರಂಗದಳದ ಮೋನು ಮಾನೇಸರ್ ಅಪಹರಣದಲ್ಲಿ ಭಾಗಿಯಾಗಿಲ್ಲ. ಆದರೆ ಆತ ಅಪಹರಣಕಾರರೊಂದಿಗೆ ಸಂಪರ್ಕ ಹೊಂದಿದ್ದ ಮಾತ್ರವಲ್ಲದೇ ದಾರಿಯುದ್ದಕ್ಕೂ ಅವರಿಗೆ ಶವವನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಉಳಿದ ಹಂತಕರಿಗಾಗಿ ರಾಜಸ್ಥಾನ ಪೊಲೀಸರ ಹಲವು ತಂಡಗಳು ಹುಡುಕಾಟ ನಡೆಸಿದ್ದು.


ಇದನ್ನೂ ಓದಿ: Tamil Nadu: ಬಟ್ಟೆ ಒಗೆಯುವ ಕಾರಣಕ್ಕೆ ಉಂಟಾದ ಜಗಳ ಸೈನಿಕನ ಕೊಲೆಯಲ್ಲಿ ಅಂತ್ಯ!


ಪ್ರಮುಖ ಆರೋಪಿಗೆ ಬಿಜೆಪಿ ನಾಯಕರೊಂದಿಗೆ ಲಿಂಕ್‌


ಸೈನಿ ಮತ್ತು ಮೋನು ಮಾನೇಸರ್ ಮಾತ್ರವಲ್ಲದೇ, ಅನಿಲ್, ಶ್ರೀಕಾಂತ್ ಮತ್ತು ಲೋಕೇಶ್ ಸಿಂಗ್ಲಾ ಎಂಬ ಮೂವರು ಆರೋಪಿಗಳ ಹೆಸರನ್ನು ಸಂತ್ರಸ್ತರ ಕುಟುಂಬಸ್ಥರು ವಿವರಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮೋನು ಮಾನೇಸರ್‌ನ ಶಸ್ತ್ರಾಸ್ತ್ರ ಪರವಾನಿಗೆಯನ್ನು ರದ್ದುಗೊಳಿಸಲು ಹರ್ಯಾಣ ಪೊಲೀಸರು ಮುಂದಾಗಿದ್ದು, ಈತ ಆಡಳಿತಾರೂಢ ಬಿಜೆಪಿಯ ಉನ್ನತ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾನೆ.


ಬಿಜೆಪಿ ನಾಯಕರೊಂದಿಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

Published by:Avinash K
First published: