Naseeruddin Shah| ತಾಲಿಬಾನಿಗಳ ಗೆಲುವಿಗೆ ಭಾರತದ ಕೆಲ ಮುಸ್ಲಿಮರು ಸಂಭ್ರಮಿಸುತ್ತಿರುವುದು ಆಘಾತಕಾರಿ; ನಾಸೀರುದ್ದೀನ್ ಶಾ

ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರಗಾಮಿಗಳು ಅಧಿಕಾರಕ್ಕೆ ಬಂದಿರುವುದನ್ನು ಕಂಡು ಇಡೀ ಜಗತ್ತೇ ಎಚ್ಚರ ವಹಿಸಿರುವಾಗ, ಅನಾಗರಿಕತೆಯನ್ನು ಸಂಭ್ರಮಿಸುತ್ತಿರುವ ಕೆಲವು ಭಾರತೀಯ ಮುಸ್ಲಿಮರು ಅಪಾಯಕಾರಿ ಎಂದು ನಟ ನಾಸೀರುದ್ದೀನ್ ಶಾ ಅಭಿಪ್ರಾಯಪಟ್ಟಿದ್ದಾರೆ.

ನಾಸೀರುದ್ದೀನ್ ಶಾ.

ನಾಸೀರುದ್ದೀನ್ ಶಾ.

 • Share this:
  ಮುಂಬೈ (ಸೆಪ್ಟೆಂಬರ್ 02); ಅಫ್ಘಾನಿಸ್ತಾನದಲ್ಲಿ (Afghanistan) 20 ವರ್ಷಗಳ ಸತತ ಉಗ್ರಗಾಮಿ (Taliban Terrorist) ಹೋರಾಟ ನಡೆಸಿದ್ದ ತಾಲಿಬಾನಿ ಉಗ್ರವಾದಿಗಳು ಕೊನೆಗೂ ಕಾಬೂಲ್ (Kabul) ಅನ್ನು ವಶಕ್ಕೆ ಪಡೆದಿದ್ದಾರೆ. ಮತ್ತೆ ತಮ್ಮ ಅಧಿಕಾರವನ್ನು ಸ್ಥಾಪಿಸಿದ್ದಾರೆ. ತಾಲಿಬಾನಿಗಳು ಈ ಕೃತ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ದೇಶಗಳೂ ಖಂಡಿಸಿವೆ. ಆದರೆ, ಭಾರತದ ಕೆಲವು ಮುಸ್ಲಿಮರು (Indian Muslims) ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಆದರೆ, ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ ಎಂದು ಖ್ಯಾತ ನಟ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ನಾಸೀರುದ್ದೀನ್‌ ಶಾ (Naseeruddin Shah) ಆತಂಕ ವ್ಯಕ್ತಪಡಿಸಿದ್ದಾರೆ.

  ಈ ಬಗ್ಗೆ ವಿಡಿಯೋ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಾಸೀರುದ್ದೀನ್ ಶಾ, " ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರಗಾಮಿಗಳು ಅಧಿಕಾರಕ್ಕೆ ಬಂದಿರುವುದನ್ನು ಕಂಡು ಇಡೀ ಜಗತ್ತೇ ಎಚ್ಚರ ವಹಿಸಿರುವಾಗ, ಅನಾಗರಿಕತೆಯನ್ನು ಸಂಭ್ರಮಿಸುತ್ತಿರುವ ಕೆಲವು ಭಾರತೀಯ ಮುಸ್ಲಿಮರು ಅಪಾಯಕಾರಿ" ಎಂದು ಅಭಿಪ್ರಾಯಪಟ್ಟಿದ್ದಾರೆ.  ಅಲ್ಲದೆ, "ನಮ್ಮ ಧಾರ್ಮಿಕತೆಯನ್ನುಸುಧಾರಿಸಿಕೊಂಡು, ಆಧುನಿಕತೆಯತ್ತ ಹೊರಳಬೇಕೆ ಅಥವಾ ಹಳೆಯ ಅನಾಗರೀಕತೆಯೇ ಇರಬೇಕಾ?” ಎಂಬ ಪ್ರಶ್ನೆಯನ್ನು ತಾಲಿಬಾನ್‌ ಅಧಿಕಾರವನ್ನು ಖುಷಿ ಪಡುವವರು ಕೇಳಿಕೊಳ್ಳಲಿ ಎಂದು ತಾಕೀತು ಮಾಡಿರುವ ನಾಸೀರುದ್ದೀನ್ ಶಾ, ಭಾರತದ ಇಸ್ಲಾಂಗೂ ಜಗತ್ತಿನ ಇತರೆಡೆ ಇರುವ ಇಸ್ಲಾಂಗೂ ಇರುವ ವ್ಯತ್ಯಾಸವನ್ನು ತಾಲಿಬಾನ್ ಸಂಭ್ರಮಿಗಳು ಅರಿತುಕೊಳ್ಳಬೇಕಿದೆ.

  "(ಹಿಂದುಸ್ತಾನಿ ಇಸ್ಲಾಂ ದುನಿಯಾ ಭರ್ ಕೆ ಇಸ್ಲಾಂ ಸೆ ಹುಮೇಶ ಮುಖಾಲಿಫ್ ರಹಾ ಹೈ. ಖುದಾ ವೋ ವಕ್ತ್ ನ ಲಾಯೆ ಕಿ ವೋ ಇಟ್ನಾ ಬದಲ್ ಜಾಯೆ ಕಿ ಹಮ್ ಬಳಕೆ ಪೆಹ್ಚಾನ್ ಭೀ ನಾ ಸಾಕೆ) ಭಾರತೀಯ ಇಸ್ಲಾಂ ಯಾವಾಗಲೂ ಪ್ರಪಂಚದ ಇತರೆಡೆ ಇರುವ ಇಸ್ಲಾಂಗಿಂತ ಭಿನ್ನವಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  ಖ್ಯಾತ ಕವಿ ಮಿರ್ಜಾ ಗಾಲಿಬ್ ಅವರ ಕವನವನ್ನೂ ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿರುವ 71 ವರ್ಷದ ನಟ ನಾಸೀರುದ್ದೀನ್ ಶಾ, "ಸರ್ವಶಕ್ತನೊಂದಿಗಿನ ನಮ್ಮ ಸಂಬಂಧವು ಅನೌಪಚಾರಿಕವಾಗಿದೆ. ಆದರೆ, ನನಗೆ ರಾಜಕೀಯ ಧರ್ಮದ ಅಗತ್ಯವಿಲ್ಲ" ಎಂದು ಒತ್ತಿ ಹೇಳಿದ್ದಾರೆ. ನಸೀರುದ್ದೀನ್ ಶಾ ಅವರ ಈ ವಿಡಿಯೋ ಹೇಳಿಕೆಯನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಸೀರುದ್ದೀನ್ ಶಾ ಅವರ ಹೇಳಿಕೆ ಸರಿ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  ಇದನ್ನೂ ಓದಿ: Afghanistan- ಪಂಜಶಿರ್ ಪ್ರಾಂತ್ಯದಲ್ಲಿ 13 ತಾಲಿಬಾನ್ ಉಗ್ರರನ್ನು ಸಂಹರಿಸಿದ ಪ್ರತಿರೋಧ ಪಡೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: