NASA On Wobble Moon: 2030ಕ್ಕೆ ಭೂಮಿಯಲ್ಲಿ ಭಾರೀ ಪ್ರವಾಹ ಸಂಭವಿಸಲಿದೆ; ಇದೇ ಪ್ರಳಯವಾ? ನಾಸಾ ಆತಂಕ !

Wobble Moon NASA: ನಿರಂತರವಾಗಿ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು 2030ರ ವೇಳೆಗೆ ವಿನಾಶಕಾರಿ ಪ್ರವಾಹಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ನೈಸರ್ಗಿಕ ವಿಪತ್ತುಗಳನ್ನು ವಿನಾಶಕಾರಿ ಪ್ರವಾಹ ಎಂದು ಉಲ್ಲೇಖಿಸಿದ್ದಾರೆ. ಈ ಸಂಶೋಧನೆ ಅಮೆರಿಕದ ಹೃದಯ ಬಡಿತ ಹೆಚ್ಚಿಸಿದೆ. ಪ್ರವಾಹಗಳು ಅನಿಯಮಿತವಾಗಿದ್ದು ಹೆಚ್ಚು ತೀವ್ರವಾಗಿ ಸಂಭವಿಸಲಿದೆ ಎನ್ನುತ್ತಿದ್ದಾರೆ.

ಚಂದ್ರಗ್ರಹಣ

ಚಂದ್ರಗ್ರಹಣ

  • Share this:

Wobble Moon NASA: ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಹೊಸ ಅಧ್ಯಯನ ನಡೆಸಿದ್ದು ಆಘಾತಕಾರಿ ಅಂಶವನ್ನು ಹೊರಹಾಕಿದೆ. ಚಂದ್ರನ ಕಕ್ಷೆಯಲ್ಲಿ 'ಕಂಪನ' ಕಂಡುಕೊಂಡಿರುವ ಈ ಸಂಶೋಧನೆ ಜಗತ್ತಿನ ವಿನಾಶದ ಬಗ್ಗೆ ಅನಾವರಣ ಮಾಡಿದೆ. ನಿರಂತರವಾಗಿ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು 2030ರ ವೇಳೆಗೆ ವಿನಾಶಕಾರಿ ಪ್ರವಾಹಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ನೈಸರ್ಗಿಕ ವಿಪತ್ತುಗಳನ್ನು ವಿನಾಶಕಾರಿ ಪ್ರವಾಹ ಎಂದು ಉಲ್ಲೇಖಿಸಿದ್ದಾರೆ. ಈ ಸಂಶೋಧನೆ ಅಮೆರಿಕದ ಹೃದಯ ಬಡಿತ ಹೆಚ್ಚಿಸಿದೆ. ಪ್ರವಾಹಗಳು ಅನಿಯಮಿತವಾಗಿದ್ದು ಹೆಚ್ಚು ತೀವ್ರವಾಗಿ ಸಂಭವಿಸಲಿದೆ ಎನ್ನುತ್ತಿದ್ದಾರೆ. ಅದರಲ್ಲೂ ಅಮೆರಿಕದ ಕರಾವಳಿಯು ಈ ಹೊಡೆತಕ್ಕೆ ಸಾಕಷ್ಟು ಹತ್ತಿರದಲ್ಲಿದ್ದು ಭಾರೀ ಮುಂಜಾಗ್ರತೆ ವಹಿಸಬೇಕು ಎಂದು ಅಧ್ಯಯನ ಮನದಟ್ಟು ಮಾಡಿದೆ.


ಅಧ್ಯಯನದ ಪ್ರಮುಖ ಲೇಖಕ ಹವಾಯಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಫಿಲ್ ಥಾಂಪ್ಸನ್ ಭೂಮಿಯಲ್ಲಿ ಪ್ರವಾಹ ಉಂಟಾಗಲು ಚಂದ್ರನ ಪ್ರಭಾವದ ಬಗ್ಗೆ ತಿಳಿಸಿದರು. ಚಂದ್ರನ ಕಕ್ಷೆಯಲ್ಲಿನ 'ಕಂಪನ' ಪೂರ್ಣಗೊಳ್ಳಲು 18.6 ವರ್ಷಗಳು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.


ಚಂದ್ರನ ಕಂಪನದ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ಅಂಶ ಇಲ್ಲಿದೆ ಗಮನಿಸಿ


ಕಂಪನ ಎನ್ನುವುದು ಇದ್ದೇ ಇರುತ್ತದೆ. ಆದರೆ ಗ್ರಹದ ಉಷ್ಣತೆ ಹೆಚ್ಚಾದಾಗ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತದೆ ಆಗ ಈ ಕಂಪನ ಸೇರಿಬಿಟ್ಟರೇ ಅದು ವಿನಾಶಕ್ಕೆ ನಾಂದಿ..! ಎಂದು ಥಾಂಪ್ಸನ್ ಹೇಳಿದರು.ಈ ಭಯಾನಕ ಪ್ರವಾಹವು 2030ರ ದಶಕದ ಮಧ್ಯಭಾಗದಲ್ಲಿ ಕಂಡು ಬರಲಿದೆ. ಅಲ್ಲದೇ ಹೆಚ್ಚುತ್ತಿರುವ ಸಮುದ್ರ ಮಟ್ಟವೂ ಈ ಆತಂಕವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಜಾಗತಿಕ ತಾಪಮಾನವನ್ನು ಇನ್ನಾದರೂ ನಿಯಂತ್ರಣಕ್ಕೆ ತರದೇ ಹೋದರೆ ಸಾಕಷ್ಟು ಕಷ್ಟವನ್ನು ಎದುರಿಸಲು ಸಜ್ಜಾಗಬೇಕಿದೆ.


ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್ ಸಾವಿನ ನಂತರ ದಾಖಲೆ ಪ್ರಮಾಣದಲ್ಲಿ ಅಂಗಾಂಗ ದಾನ !

ನಾಸಾದ ವೆಬ್​ಸೈಟ್ ಪ್ರಕಾರ ಚಂದ್ರನು ತನ್ನ ಅಂಡಾಕಾರದ ಕಕ್ಷೆಗೆ ಬಂದಾಗ ಅದರ ವೇಗವು ಬದಲಾಗುತ್ತದೆ. 'ಲೈಟ್ ಸೈಡ್' ನ (ಲೈಟ್ ಸೈಡ್ ಎನ್ನುವುದು ಭೂಮಿಯ ಅಥವಾ ಇತರ ಗ್ರಹಗಳ ಇನ್ನೊಂದು ಭಾಗವಾಗಿದೆ, ಇದು ಟರ್ಮಿನೇಟರ್ ರೇಖೆಯಿಂದ ವ್ಯಾಖ್ಯಾನಿಸಲಾದ ಸೂರ್ಯನ ಬೆಳಕು / ನಕ್ಷತ್ರದ ದಿಕ್ಕಿನಲ್ಲಿ ಎದುರಾಗಿರುವ ಬೆಳಕಿನಿಂದ ನಿರೂಪಿಸಲ್ಪಟ್ಟಿದೆ.) ನಮ್ಮ ದೃಷ್ಟಿಕೋನವು ಸ್ವಲ್ಪ ವಿಭಿನ್ನ ಕೋನಗಳಲ್ಲಿ ಗೋಚರಿಸುವಂತೆ ಮಾಡುತ್ತದೆ.
ಸಾಮಾನ್ಯವಾಗಿ ಆಕಾಶವನ್ನು ನೋಡುವುದರಿಂದ ನಮಗೆ ಇದು ಗೋಚರವಾಗುವುದಿಲ್ಲ. ಪೂರ್ಣ ತಿಂಗಳ ಚಂದ್ರನ ವೀಕ್ಷಣೆಗಳನ್ನು 12 ಸೆಕೆಂಡುಗಳಲ್ಲಿ ಸಂಕುಚಿತಗೊಳಿಸಿದಾಗ ಈ ಅಗೋಚರ ಅಂಶವನ್ನು ಲೆಕ್ಕಹಾಕಬಹುದು ಎಂದಿದ್ದಾರೆ.


18.6 ವರ್ಷಗಳ ಚಂದ್ರನ ಕಕ್ಷೆಯ ಅರ್ಧದಷ್ಟು ಸಮಯದಲ್ಲಿ, ಭೂಮಿಯ ನಿಯಮಿತ ಉಬ್ಬರವಿಳಿತಗಳನ್ನು ನಿಗ್ರಹಿಸಲಾಗುತ್ತದೆ. ಹೆಚ್ಚಿನ ಉಬ್ಬರವಿಳಿತಗಳು ಸಾಮಾನ್ಯಕ್ಕಿಂತ ಕಡಿಮೆಯಿರುತ್ತವೆ ಮತ್ತು ಕಡಿಮೆ ಉಬ್ಬರವಿಳಿತಗಳು ಸಾಮಾನ್ಯಕ್ಕಿಂತಲೂ ಹೆಚ್ಚಾಗಿರುತ್ತದೆ. ಉಳಿದ ಅರ್ಧದಲ್ಲಿ ಪರಿಣಾಮವು ವ್ಯತಿರಿಕ್ತವಾಗಿರುತ್ತದೆ. ಇದನ್ನು ಚಂದ್ರನ ಉಬ್ಬರವಿಳಿತ ವರ್ಧಿಸುವ ಹಂತ ಎಂದು ಕರೆಯಲಾಗುತ್ತದೆ.


ಸಮುದ್ರಮಟ್ಟದ ಏರಿಕೆಗೆ ಕಾರಣಗಳು


ಭೂಮಿಯಿಂದ ಸಮುದ್ರಕ್ಕೆ ಹಿಮ ಕರಗಿ ವಿಸ್ತರಿಸುವ ನೀರು ಸಮುದ್ರಮಟ್ಟದ ಏರಿಕೆಗೆ ಕಾರಣವಾಗುತ್ತವೆ. ಜಾಗತಿಕ ವಿದ್ಯಮಾನವಾಗಿದ್ದರೂ ಪೂರ್ವದ ನಡುವೆ ಮತ್ತು ಪಶ್ಚಿಮ ಕರಾವಳಿ ಎಂದು ಸಮುದ್ರ ಮಟ್ಟ ಏರಿಕೆಯ ಪ್ರಮಾಣ ಮತ್ತು ವೇಗವು ಸ್ಥಳದ ಪ್ರಕಾರ ಬದಲಾಗುತ್ತದೆ. ಹಿಮದ ಕರಗುವಿಕೆ ಮತ್ತು ಉಷ್ಣ ವಿಸ್ತರಣೆ ಎಲ್ಲೆಡೆ ಸಮುದ್ರ ಮಟ್ಟ ಏರಿಕೆಗೆ ಜಾಗತಿಕ ಕಾರಣವೆಂದು ಪರಿಗಣಿಸಲಾಗುತ್ತದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: