9/11 Terror Attack: 9/11 ಭಯೋತ್ಪಾದಕ ದಾಳಿಯ ಉಪಗ್ರಹ ಚಿತ್ರಗಳನ್ನು ಹಂಚಿಕೊಂಡ ನಾಸಾ

9/11 ಭಯೋತ್ಪಾದಕ ದಾಳಿಯ ಉಪಗ್ರಹ ಚಿತ್ರ

9/11 ಭಯೋತ್ಪಾದಕ ದಾಳಿಯ ಉಪಗ್ರಹ ಚಿತ್ರ

ಈಗ 9/11 ರ ಭಯೋತ್ಪಾದಕ ದಾಳಿ ನಡೆದು 21 ವರ್ಷವಾಯ್ತು. 21ನೇ ವಾರ್ಷಿಕೋತ್ಸವದ ನೆನಪಿಗಾಗಿ, ನಾಸಾ ಭಾನುವಾರ ತನ್ನ ಗಗನಯಾತ್ರಿಗಳಲ್ಲಿ ಒಬ್ಬರು ನ್ಯೂಯಾರ್ಕ್ ನಗರವನ್ನು ಬಾಹ್ಯಾಕಾಶದಿಂದ ತೆಗೆದ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  • Share this:

9/11 ಭಯೋತ್ಪಾದಕ ದಾಳಿ (Terror Attack) ಎಂದರೆ ಸಾಕು ಜಗತ್ತಿನ ಪ್ರತಿಯೊಬ್ಬರಿಗೂ, ಅದರಲ್ಲೂ ಅಮೆರಿಕನ್ನರಿಗೆ ನ್ಯೂಯಾರ್ಕ್‌ನಲ್ಲಿನ ವಿಶ್ವ ವಾಣಿಜ್ಯ ಕೇಂದ್ರದ (World Trade Center) ಮೇಲಿನ ಭಯೋತ್ಪಾದಕ ದಾಳಿ ನೆನಪಿಗೆ ಬರುತ್ತದೆ. ಅಷ್ಟೇ ಏಕೆ? ದೊಡ್ಡ ಕಟ್ಟಡವೊಂದಕ್ಕೆ ವಿಮಾನ (Plane) ಬಂದು ಡಿಕ್ಕಿ ಹೊಡೆದದ್ದು, ಕಟ್ಟಡ ಕುಸಿದು ಬೀಳುತ್ತಿರುವ ದೃಶ್ಯ ಇನ್ನೂ ಅನೇಕರ ಕಣ್ಣಿಗೆ ಕಟ್ಟಿದ ಹಾಗೆಯೇ ಇದೆ ಆ ಘಟನೆ.  ಈ ದುರಂತದ ವಿಡಿಯೋವನ್ನು ನೋಡಿದ ಅನೇಕರಿಗೆ ದೊಡ್ಡ ಆಘಾತವಾಗಿತ್ತು ಅಂತ ಹೇಳಬಹುದು. ನ್ಯೂಯಾರ್ಕ್ (New York) ನಗರದಲ್ಲಿರುವ ಅತಿದೊಡ್ಡ ಕಟ್ಟಡವೊಂದು ಉಗ್ರರ ದಾಳಿಗೆ ಬಲಿಯಾಗಿದೆ ಎಂಬುದು ಜನರಿಗೆ ಮನದಟ್ಟಾಗುವ ಮುಂಚೆಯೇ ಅನೇಕ ಅಮಾಯಕರು ತಮ್ಮ ಜೀವವನ್ನು ಕಳೆದುಕೊಂಡಿದ್ದರು.


21ನೇ ವಾರ್ಷಿಕೋತ್ಸವದ ಉಪಗ್ರಹ ಚಿತ್ರಗಳನ್ನು ಹಂಚಿಕೊಂಡ ನಾಸಾ
ಈಗ 9/11 ರ ಭಯೋತ್ಪಾದಕ ದಾಳಿ ನಡೆದು 21 ವರ್ಷವಾಯ್ತು. 21ನೇ ವಾರ್ಷಿಕೋತ್ಸವದ ನೆನಪಿಗಾಗಿ, ನಾಸಾ ಭಾನುವಾರ ತನ್ನ ಗಗನಯಾತ್ರಿಗಳಲ್ಲಿ ಒಬ್ಬರು ನ್ಯೂಯಾರ್ಕ್ ನಗರವನ್ನು ಬಾಹ್ಯಾಕಾಶದಿಂದ ತೆಗೆದ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಗಗನಯಾತ್ರಿ ಫ್ರಾಂಕ್ ಕಲ್ಬರ್ಟ್ಸನ್ ಅವರು ತೆಗೆದ ಈ ಚಿತ್ರದಲ್ಲಿ ಎರಡು ವಿಮಾನಗಳು ಕಟ್ಟಡಗಳಿಗೆ ಅಪ್ಪಳಿಸಿದ ಸ್ವಲ್ಪ ಸಮಯದ ನಂತರ ಮ್ಯಾನ್‌ಹಟನ್ ಭಾರಿ ಪ್ರಮಾಣದ ಹೊಗೆ ಏಳುತ್ತಿರುವುದನ್ನು ಇದರಲ್ಲಿ ನಾವು ನೋಡಬಹುದು.


ಎಂದೂ ಮರೆಯದ ಘಟನೆ 
"ಆ ಭಯಾನಕ ದಿನದ 21ನೇ ವಾರ್ಷಿಕೋತ್ಸವದಂದು, ನಾವು 9/11 ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರನ್ನು ಮತ್ತು ವೀರರನ್ನು ಗೌರವಿಸುತ್ತೇವೆ" ಎಂದು ಯುಎಸ್ ಬಾಹ್ಯಾಕಾಶ ಸಂಸ್ಥೆ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದೆ. "ಸೆಪ್ಟೆಂಬರ್ 11, 2001 ರ ದಾಳಿ ಒಂದು ರಾಷ್ಟ್ರೀಯ ದುರಂತವಾಗಿದ್ದು, ಇದು ದಿಗ್ಭ್ರಮೆಗೊಳಿಸುವ ಜೀವಹಾನಿ ಮತ್ತು ಅಮೆರಿಕನ್ ಸಂಸ್ಕೃತಿಯಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಯಿತು. ಪ್ರತಿ ವರ್ಷ, ನಾವು ಇದನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ಎಂದಿಗೂ ಮರೆಯುವುದಿಲ್ಲ" ಎಂದು ಅದು ಪ್ರತ್ಯೇಕವಾಗಿ ಪ್ರಕಟಣೆಯಲ್ಲಿ ತಿಳಿಸಿದೆ.




ಇದನ್ನೂ ಓದಿ: Flood in Pakistan: ಪ್ರವಾಹ ಪೀಡಿತ ಜನರಿಗೆ ಆಶ್ರಯ ನೀಡಿದ ಪಾಕಿಸ್ತಾನದ ಹಿಂದೂ ದೇವಾಲಯಗಳು


ದಾಳಿಯ ಸಮಯದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ದಲ್ಲಿದ್ದ ಗಗನಯಾತ್ರಿ ಫ್ರಾಂಕ್ ಕುಲ್ಬರ್ಟ್ಸನ್ ಮತ್ತು ಸಿಬ್ಬಂದಿಯಲ್ಲಿದ್ದ ಏಕೈಕ ಅಮೆರಿಕನ್ ಅವರ ಮಾತುಗಳನ್ನು ನಾಸಾ ಪತ್ರಿಕಾ ಟಿಪ್ಪಣಿಯಲ್ಲಿ ಹಂಚಿಕೊಂಡಿದೆ. ಅವರು ಕ್ಯಾಮೆರಾದಲ್ಲಿ ಸೆರೆಹಿಡಿದ ಆ ಫೋಟೋದಲ್ಲಿ ಭುಗಿಲೆದ್ದ ಹೊಗೆಯನ್ನು ನಾವು ನೋಡಬಹುದು ಎಂದು ಅವರು ಹೇಳಿದರು.




ಫೋಟೋ ನೋಡಿ ಏನ್ ಹೇಳಿದ್ರು ಕಲ್ಬರ್ಟ್ಸನ್
"ನಾವು ಈಗಷ್ಟೇ ಸ್ವೀಕರಿಸಿದ ಸುದ್ದಿಗಳಲ್ಲಿ ಒಂದನ್ನು ಓದಿದ ನಂತರ, ನಾವು ಎರಡನೇ ಗೋಪುರದ ಕುಸಿತದ ಸಮಯದಲ್ಲಿ ಅಥವಾ ಸ್ವಲ್ಪ ಸಮಯದ ನಂತರ ನ್ಯೂಯಾರ್ಕ್ ನಗರವನ್ನು ಮತ್ತೆ ನೋಡಿದ್ದೇವೆ ಅಂತ ನಾನು ನಂಬುತ್ತೇನೆ" ಎಂದು ಕಲ್ಬರ್ಟ್ಸನ್ ಹೇಳಿದರು. "ಇಂತಹ ಅದ್ಭುತ ಅನುಕೂಲಕರ ಸ್ಥಳದಿಂದ ಹೊಗೆ ಬರುವುದನ್ನು ನೋಡುವುದೇ ಒಂದು ಭಯಾನಕವಾಗಿದೆ. ಭೂಮಿಯ ಮೇಲಿನ ಜೀವನವನ್ನು ಸುಧಾರಿಸಲು ಮೀಸಲಾದ ಬಾಹ್ಯಾಕಾಶ ನೌಕೆಯಲ್ಲಿದ್ದ ನಾವು ಅಂತಹ ಉದ್ದೇಶಪೂರ್ವಕ, ಭಯಾನಕ ಕೃತ್ಯಗಳಿಂದ ಜೀವನವು ನಾಶವಾಗುವುದನ್ನು ನೋಡುವುದು ನಿಜಕ್ಕೂ ಎಂಥವರಿಗಾದರೂ ಮನಸ್ಸನ್ನು ನಡುಗಿಸುತ್ತದೆ" ಎಂದು ಅವರು ಹೇಳಿದರು.




ನ್ಯೂಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್ ಗೆ ಬಂದು ಅಪ್ಪಳಿಸಿದ ವಿಮಾನಗಳು 
ಸೆಪ್ಟೆಂಬರ್ 11, 2001 ರಂದು, ವಿಮಾನಗಳು ನ್ಯೂಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್, ವಾಷಿಂಗ್ಟನ್ ಡಿಸಿಯ ಪೆಂಟಗನ್ ಮತ್ತು ಪೆನ್ಸಿಲ್ವೇನಿಯಾದ ಒಂದು ಕ್ಷೇತ್ರಕ್ಕೆ ಅಪ್ಪಳಿಸಿದವು. ಭಯೋತ್ಪಾದಕ ದಾಳಿಗಳು ಸುಮಾರು 3,000 ಜನರನ್ನು ಬಲಿ ತೆಗೆದುಕೊಂಡವು ಮತ್ತು ಅಸಂಖ್ಯಾತರನ್ನು ಗಾಯಗೊಳಿಸಿದವು.




ಇದನ್ನೂ ಓದಿ: Gyanvapi Masjid Case Timeline: ಜ್ಞಾನವಾಪಿ ಪ್ರಕರಣ, 1991 ರಿಂದ ಈವರೆಗೆ ಏನಾಯ್ತು? ಇಲ್ಲಿದೆ ಟೈಂಲೈನ್

top videos


    ಭಾನುವಾರ, ಅಮೆರಿಕದ ಅಧ್ಯಕ್ಷರಾದ ಜೋ ಬೈಡನ್ ಅವರು ಸೆಪ್ಟೆಂಬರ್ 11 ರ ದಾಳಿಯ 21ನೇ ವರ್ಷವನ್ನು ಪೆಂಟಗನ್ ನಲ್ಲಿ ಮಳೆಯಲ್ಲಿಯೇ ನಡೆದ ಶೋಕಾಚರಣೆಯಲ್ಲಿ ಪುಷ್ಪಗುಚ್ಛ ಅರ್ಪಿಸಿ ನೆರವೇರಿಸಿದರು. "ದಾಳಿ ನಡೆದ ಆ ದಿನ ಅಮೆರಿಕ ರಾಷ್ಟ್ರದ ಕಥೆಯೇ ಬದಲಾಯಿತು. ಈ ರಾಷ್ಟ್ರದ ಗುಣಲಕ್ಷಣವನ್ನು "ದಾಳಿಕೋರರು ಗಾಯಗೊಳಿಸಲು ಪ್ರಯತ್ನಿಸಿದರು" ಎಂದು ಅವರು ಪೆಂಟಗನ್ ಹೊರಗೆ ಮಾಡಿದ ಭಾಷಣದಲ್ಲಿ ಹೇಳಿದರು.

    First published: