NASA: ಆಗಸದಲ್ಲಿ ಕಂಡುಬಂದ ನೈಸರ್ಗಿಕ ಬೆಳಕಿನಾಟ, ಅದ್ಭುತ ಚಿತ್ರ ಹಂಚಿಕೊಂಡ ನಾಸಾ!

ನಾಸಾ ಹಂಚಿಕೊಂಡ ಆಗಸದ ಚಿತ್ರ

ನಾಸಾ ಹಂಚಿಕೊಂಡ ಆಗಸದ ಚಿತ್ರ

ಬಾಹ್ಯಾಕಾಶ ನಿಲ್ದಾಣದಿಂದ ಆರೋರಾದ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳುವುದು ಹೆಚ್ಚಿನ ಜನರಿಗೆ ಸಾಧ್ಯವಿಲ್ಲದೇ ಇರುವುದರಿಂದ ಈ ಅದ್ಭುತ ನೈಸರ್ಗಿಕ ವಿದ್ಯಮಾನವನ್ನು ವೀಕ್ಷಿಸಲು ನಾಸಾ ಸಹಾಯ ಮಾಡಿದೆ.

  • Share this:

ಆಗಸದಲ್ಲಿ (Sky) ಕಂಡುಬರುವ ವರ್ಣರಂಜಿತ (Colourfull) ಬೆಳಕಿನಾಟ ಅರೋರಾದ ಅತ್ಯಂತ ಮನಮೋಹಕ ಚಿತ್ರವನ್ನು ನಾಸಾದ ಗಗನಯಾತ್ರಿ ಜೋಶ್ ಕಸ್ಸಾಡಾ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಧ್ರುವ ದೀಪಗಳು ಎಂಬ ಹೆಸರನ್ನು (Name) ಹೊಂದಿರುವ ಅರೋರಾ ಆಕಾಶದಲ್ಲಿ ಕಂಡುಬರುವ ನೈಸರ್ಗಿಕ ಬೆಳಕಿನಾಟವೂ ಹೌದು. ಇದು ಪ್ರಧಾನವಾಗಿ ಹೆಚ್ಚಿನ ಅಕ್ಷಾಂಶ ಪ್ರದೇಶಗಳಲ್ಲಿ ಅಂದರೆ ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ (Antarctica) ಸುತ್ತಲೂ ಕಂಡುಬರುತ್ತವೆ.


ಆರೋರಾ ಹೇಗೆ ಸಂಭವಿಸುತ್ತದೆ?


ಭೂಮಿಯ ಮೇಲ್ಭಾಗದ ವಾತಾವರಣದಲ್ಲಿ ಎಲೆಕ್ಟ್ರಾನ್ ಹಾಗೂ ಪ್ರೋಟಾನ್‌ಗಳಂತಹ ವಿದ್ಯುತ್ ಚಾರ್ಜ್ ಕಣಗಳು ಅನಿಲಗಳೊಂದಿಗೆ ಘರ್ಷಿಸಿದಾಗ ಆಕಾಶದಲ್ಲಿ ಸುಂದರವಾದ ಬೆಳಕಿನಾಟವಾದ ಆರೋರಾ ಕಂಡುಬರುತ್ತದೆ. ಇದು ಆಕಾಶದ ತುಂಬೆಲ್ಲಾ ಅದ್ಭುತವಾದ ಹೊಳಪನ್ನುಂಟು ಮಾಡುತ್ತದೆ ಹಾಗೂ ಇದೊಂದು ಮೈನವಿರೇಳಿಸುವ ದೃಶ್ಯವೂ ಆಗಿದೆ.


ಆರೋರಾದ ಸುಂದರ ದೃಶ್ಯಾವಳಿ ಹಂಚಿಕೊಂಡ ಗಗನಯಾತ್ರಿ


ಗ್ರಹದಿಂದ 250 ಕಿಲೋಮೀಟರ್ ಎತ್ತರದಲ್ಲಿ ಸುತ್ತುತ್ತಿರುವಾಗ ಈ ಆರೋರಾಗಳ ಫೋಟೋವನ್ನು ಜೋಶ್ ಕಸ್ಸಡಾ ಹಂಚಿಕೊಂಡಿದ್ದಾರೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದದಿಂದ, ಕಸ್ಸಡಾ ಉತ್ತರದ ದೀಪಗಳ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಎರಡು ಅತ್ಯದ್ಭುತ ಪದಗಳೊಂದಿಗೆ ಈ ದೀಪಗಳ ವರ್ಣನೆಯನ್ನು ಮಾಡಿ ನೈಸರ್ಗಿಕ ಬೆಳಕಿನ ಸುಂದರತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.


ಇದನ್ನೂ ಓದಿ: AI Photos: ರಾತ್ರಿಯ ವೇಳೆ ಸಾಮಾನ್ಯ ಜನರೆಲ್ಲರೂ ಇಲ್ಲಿ ದೆವ್ವಗಳಾಗ್ತಾರೆ! ಏನಿದು ವಿಷ್ಯ?


ಸಂಪೂರ್ಣವಾಗಿ ಕಾಲ್ಪನಿಕ ಎಂಬ ಶೀರ್ಷಿಕೆಯನ್ನು ಜೋಶ್ ನೀಡಿದ್ದು, ಇದೆಷ್ಟು ಸುಂದರವಾಗಿದೆ ಎಂಬುದರ ಅನುಭೂತಿಯನ್ನು ಪಡೆದುಕೊಳ್ಳಬಹುದಾಗಿದೆ.


ಟ್ವಿಟರ್‌ನಲ್ಲಿ ಹಂಚಿಕೊಂಡ ಚಿತ್ರದಲ್ಲಿ ಏನೇನಿದೆ?


ಟ್ವಿಟರ್‌ನಲ್ಲಿ ಹಂಚಿಕೊಂಡ ಚಿತ್ರದಲ್ಲಿ ಆರೋರಾದೊಂದಿಗೆ ಭೂಮಿಯ ಮೇಲಿರುವ ನಗರದ ದೀಪಗಳು ಹಾಗೂ ಬಾಹ್ಯಾಕಾಶ ನಿಲ್ದಾಣದ ಭಾಗವಾಗಿರುವ ಸೌರ ಸರಣಿಗಳ ಒಂದು ನೋಟವನ್ನು ಸಹ ಕಣ್ತುಂಬಿಕೊಳ್ಳಬಹುದಾಗಿದೆ.


ಈಗಾಗಲೇ ಹೇಳಿರುವಂತೆ ಭೂಮಿಯ ಮೇಲ್ಭಾಗದ ವಾತಾವರಣದೊಂದಿಗೆ ವಿದ್ಯುತ್ ಚಾರ್ಜ್ ಆದ ಕಣಗಳ ಘರ್ಷಣೆಯಿಂದ ಅರೋರಾಗಳು ಉದ್ಭವಿಸುತ್ತವೆ.


ಭೂಮಿಯ ಕಾಂತ ಕ್ಷೇತ್ರವು ಇಂತಹ ಚಾರ್ಜ್ಡ್ ಕಣಗಳನ್ನು ಹೆಚ್ಚಾಗಿ ಗ್ರಹದ ಧ್ರುವಗಳ ಕಡೆಗೆ ತಿರುಗಿಸುತ್ತವೆ. ಕಾಂತಕ್ಷೇತ್ರದ ಆಕಾರ ಎಂದರೆ ಆರೋರಾ ಅಂಡಾಣುಗಳು: ಗ್ರಹದ ಉತ್ತರ ಮತ್ತು ದಕ್ಷಿಣ ಕಾಂತೀಯ ಧ್ರುವಗಳ ಮೇಲೆ ರೂಪುಗೊಳ್ಳುತ್ತವೆ.


ಆರೋರಾವನ್ನು ಹೇಗೆ ವೀಕ್ಷಿಸಬಹುದು?


ಬಾಹ್ಯಾಕಾಶ ನಿಲ್ದಾಣದಿಂದ ಆರೋರಾದ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳುವುದು ಹೆಚ್ಚಿನ ಜನರಿಗೆ ಸಾಧ್ಯವಿಲ್ಲದೇ ಇರುವುದರಿಂದ ಈ ಅದ್ಭುತ ನೈಸರ್ಗಿಕ ವಿದ್ಯಮಾನವನ್ನು ವೀಕ್ಷಿಸಲು ಉತ್ತಮ ವಿಧಾನವೆಂದರೆ ಗ್ರೀನ್ಲ್ಯಾಂಡ್, ನಾರ್ವೆ, ಸ್ವೀಡನ್, ಫಿನ್ಲ್ಯಾಂಡ್ ಮತ್ತು ಇತರ ಪ್ರಪಂಚದ ಉತ್ತರದ ಸ್ಥಳಗಳಿಗೆ ಭೇಟಿ ನೀಡುವುದಾಗಿದೆ ಎಂದು ತಜ್ಞರು ತಿಳಿಸುತ್ತಾರೆ.


ಗ್ರಹದ ಇನ್ನೊಂದು ಬದಿಯಲ್ಲಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಟ್ಯಾಸ್ಮೆನಿಯಾದಂತಹ ಸ್ಥಳಗಳಿಂದ ಅರೋರಾಗಳನ್ನು ಉತ್ತಮವಾಗಿ ವೀಕ್ಷಿಸಬಹುದಾಗಿದೆ ಎಂದು ಬಾಹ್ಯಾಕಾಶ ಸಂಶೋಧಕರು ತಿಳಿಸಿದ್ದಾರೆ.


ಆರೋರಾ ಉಂಟಾಗುವ ಸೌರ ಚಟುವಟಿಕೆಗಳು ಹೆಚ್ಚುತ್ತಿವೆ


ದಿ ವೆದರ್ ನೆಟ್‌ವರ್ಕ್ ಪ್ರಕಾರ ಈ ಅರೋರಾಗಳಿಗೆ ಕಾರಣವಾಗುವ ಸೌರ ಚಟುವಟಿಕೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂದಾಗಿದೆ. ಫೆಬ್ರವರಿ 24, ಶುಕ್ರವಾರದಂದು "ಕರೋನಲ್ ಮಾಸ್ ಎಜೆಕ್ಷನ್" ಅಥವಾ ಒಂದು ರೀತಿಯ ಸೌರ ಸ್ಫೋಟ ಸಂಭವಿಸಿದೆ. ಇದು ಭೂಕಾಂತೀಯ ಚಂಡಮಾರುತವನ್ನು ಪ್ರಚೋದಿಸಲು ವೇಗವಾಗಿ ಹರಿಯುವ ಸೌರ ಮಾರುತದೊಂದಿಗೆ ಸಂಯೋಜಿತಗೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.


ಯುಕೆಯಲ್ಲಿ ಅಪರೂಪವಾಗಿ ಕಾಣಿಸಿಕೊಂಡ ಆರೋರಾ


ಈ ಕಾರಣದಿಂದಾಗಿ ದಿ ಗಾರ್ಡಿಯನ್‌ನ ವರದಿಯ ಅನ್ವಯ ಯುನೈಟೆಡ್ ಕಿಂಗ್‌ಡಂನಲ್ಲಿರುವಂತೆ ಅರೋರಾಗಳು ಗೋಚರಿಸದೇ ಇರುವ ಸ್ಥಳಗಳಲ್ಲಿ ಕೂಡ ಅಪರೂಪಕ್ಕೊಮ್ಮೆ ಕಂಡುಬರುತ್ತದೆ ಎಂದು ತಿಳಿಸಿದೆ. ಕುತೂಹಲಕಾರಿಯಾಗಿ ಬಿಬಿಸಿ ನೀಡಿರುವ ವರದಿಯ ಅನ್ವಯ, ಐಸ್‌ಲ್ಯಾಂಡ್‌ನಿಂದ ಮ್ಯಾಂಚೆಸ್ಟರ್‌ಗೆ ಪ್ರಯಾಣಿಸುವ ಕಮರ್ಷಿಯಲ್ ಪ್ಲೇನ್‌ನ ಪ್ರಯಾಣಿಕರು ತುಂಬಾ ಅಪರೂಪದ ನೈಸರ್ಗಿಕ ಬೆಳಕಿನ ನೋಟವನ್ನು ಕಣ್ತುಂಬಿಕೊಂಡರು. ಯುಕೆಯನ್ನು ಸಂಪೂರ್ಣ ಬೆಳಗಿಸಿದ ಈ ವಿದ್ಯಮಾನ ಸಂಪೂರ್ಣ ನಗರವನ್ನೇ ಬೆಳಕನಿಂದ ಕೋರೈಸಿತು ಎಂದು ವರದಿ ತಿಳಿಸಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು