Space ಟೆಕ್ನಾಲಾಜಿಯಲ್ಲಿ ಕಾಲಿಟ್ಟ ನಾಸಾದ ದೈತ್ಯ SLS Moon ರಾಕೆಟ್! ಏನಿದರ ಸ್ಪೆಷಾಲಿಟಿ ಅಂತ ಇಲ್ಲಿದೆ ನೋಡಿ..

ಅಮೆರಿಕ(America)ದ ಸ್ಪೇಸ್ ಏಜನ್ಸಿ(Space Agency)ಯಾದ ನಾಸಾ(Nasa) ತನ್ನ ಹೊಸ ರಾಕೆಟ್(New Rocket) ಆದ SLS Moon ಅನ್ನು ಪ್ರಥಮ ಬಾರಿಗೆ ಪ್ರಸ್ತುತಪಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಮೆರಿಕ(America)ದ ಸ್ಪೇಸ್ ಏಜನ್ಸಿ(Space Agency)ಯಾದ ನಾಸಾ(Nasa) ತನ್ನ ಹೊಸ ರಾಕೆಟ್(New Rocket) ಆದ SLS Moon ಅನ್ನು ಪ್ರಥಮ ಬಾರಿಗೆ ಪ್ರಸ್ತುತಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ನಾಸಾ ಫ್ಲೋರಿಡಾದಲ್ಲಿರುವ ಕೆನೆಡಿ ಸ್ಪೇಸ್ ಸೆಂಟರ್ ನಲ್ಲಿ ಸ್ಥಿತವಿರುವ ಪ್ಯಾಡ್ 39B ಉಡಾವಣಾ ತಾಣಕ್ಕೆ ತನ್ನ ಲಾಂಚ್ ವೆಹಿಕಲ್(Launch Vehicle) ಆದ SLS ಅನ್ನು ಜೋಡಿಸಿ ಮಾದರಿ ಪರೀಕ್ಷೆಗಾಗಿ ಕೌಂಟ್ ಡೌನ್ ಆರಂಭಿಸಿದೆ. ಎಲ್ಲವೂ ಸರಿ ಹೋದಲ್ಲಿ ಕೆಲವೆ ತಂಗಳುಗಳಲ್ಲಿ ನಾಸಾ ಈ ರಾಕೆಟ್ ಅನ್ನು ಉಡಾಯಿಸಲಿದೆ. ಇದು ಮಾನವರಹಿತ ಪರೀಕ್ಷಾರ್ಥ ಕ್ಯಾಪ್ಸೂಲ್ ಅನ್ನು ಹೊಂದಿದ್ದು ಚಂದ್ರ(Moon)ನ ಬಳಿ ತೆರಳಲಿದೆ. ಈ ಮೂಲಕ ಈ ದಶಕದ ಅರ್ಧ ಭಾಗದಲ್ಲಿ ಗಗನಯಾನಿಗಳು SLS ಏರಿ ಚಂದ್ರನ ಮೇಲ್ಮೈ ತಲುಪಬಹುದೆಂದು ವಿಶ್ವಾಸ ಹೊಂದಲಾಗಿದೆ. ನಾಸಾ ಈಗಾಗಲೇ ರೂಪಿಸಿರುವ ಅರ್ಟೆಮಿಸ್ ಕಾರ್ಯಕ್ರಮದ ಭಾಗವಾಗಿ ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಹೊಸ ಇತಿಹಾಸ ಸೃಷ್ಟಿಸಲಿದೆಯಂತೆ SLN Moon!

ಈ ಬಗ್ಗೆ ಪ್ರತಿಕ್ರಯಿಸಿರುವ ನಾಸಾದ ಆಡಳಿತಾಧಿಕಾರಿ ಬಿಲ್ ನೆಲ್ಸನ್ , ‘ನಭ ಅನ್ವೇಷಣೆಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾನವ ಉಪಸ್ಥಿತಿಯ ಸುವರ್ಣ ಯುಗಕ್ಕೆ ನಾವು ಕಾಲಿಟ್ಟಿದ್ದೇವೆ" ಎಂದು ಅವರು ಹೇಳಿದ್ದಾರೆ. ‘ಅರ್ಟೆಮಿಸ್ ಕಾರ್ಯಕ್ರಮವು ಹೊಸ ಆಯಾಮಗಳನ್ನು ಮುಟ್ಟುತ್ತಿದೆ’ ಎಂದೂ ಸಹ ಈ ಸಂದರ್ಭದಲ್ಲಿ ಅವರು ನುಡಿದಿದ್ದಾರೆ. ಮುಂದುವರೆಯುತ್ತ ಅವರು ಈ ಮೂಲಕ ಪ್ರಥಮ ಬಾರಿಗೆ ಮಹಿಳೆಯೊಬ್ಬಳನ್ನು ಚಂದ್ರನ ಅಂಗಳಕ್ಕೆ ಇಳಿಸುವ ಮೂಲಕ ಇತಿಹಾಸ ಬರೆಯಲಿದ್ದೇವೆಂದು ಸಹ ತಿಳಿಸಿದ್ದಾರೆ.

ಮಂಗಳನ ಅನ್ವೇಷಣೆಗೆ ಬುನಾದಿ!

ನಾಸಾದ ಈ ಪ್ರತಿಷ್ಠಿತ ಅರ್ಟೆಮಿಸ್ ಕಾರ್ಯಕ್ರಮವು ಸ್ಪೇಸ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯಲಿದ್ದು ಮುಂದೆ ಮಂಗಳನ ಅನ್ವೇಷಣೆಗೆ ಬುನಾದಿ ಹಾಕಲಿದೆ ಎಂದು ತಿಳಿದುಬಂದಿದೆ. SLS ಒಂದು ಬೃಹತ್ ಉಪಕರಣವಾಗಿದೆ. ಸುಮಾರು ನೂರು ಮೀ. ಎತ್ತರ ಹೊಂದಿರುವ ಇದು 1960 ಹಾಗೂ 1970ರ ದಶಕದಲ್ಲಿದ್ದ ಅಪೋಲೊ ಸ್ಯಾಟರ್ನ್ ವೆಹಿಕಲ್ಸ್ ಗಳಿಗಿಂತಲೂ ಶಕ್ತಿಶಾಲಿಯಾಗಿದೆ.

ಇದನ್ನೂ ಓದಿ: ದುಡ್ಡಿಲ್ಲದ ಟೈಮ್​ನಲ್ಲಿ ಕನಸು ಕಂಡ್ರು.. ಕೊನೆಗೂ ನನಸು ಮಾಡಿಕೊಂಡ ಫ್ರೆಂಡ್ಸ್​​! ಏನ್​ ಇವ್ರ ಕಥೆ ಅಂತ ನೀವೇ ನೋಡಿ

ಇದು ಗಗನಯಾತ್ರಿಗಳನ್ನು ಭೂಮಿಯ ಆಚೆಗೆ ಕಳುಹಿಸಲು ಮಾತ್ರವಲ್ಲದೆ ಹೆಚ್ಚುವರಿಯಾಗಿ ಹೆಚ್ಚಿನ ಉಪಕರಣಗಳು ಮತ್ತು ಸರಕುಗಳನ್ನು ಕಳುಹಿಸುವ ಒತ್ತಡವನ್ನು ಹೊಂದಿರುತ್ತದೆ, ಇದರಲ್ಲಿ ಸಿಬ್ಬಂದಿಗಳು ದೀರ್ಘಕಾಲದವರೆಗೆ ದೂರ ಉಳಿಯಬಹುದು. ಕೆನಡಿ ಕೇಂದ್ರದ ವೆಹಿಕಲ್ ಅಸೆಂಬ್ಲಿ ಬಿಲ್ಡಿಂಗ್ (VAB) ಘಟಕದಲ್ಲಿ ಗುರುವಾರದಂದು ಇದನ್ನು ಜೋಡಿಸಲಾಗಿದ್ದು ಚೊಚ್ಚಲ ಬಾರಿಗೆ ಅಲ್ಲಿ ನೆರೆದಿದ್ದವರೆಲ್ಲರೂ ಅದರ ಎಲ್ಲಾ ವಿಭಿನ್ನ ಅಂಶಗಳನ್ನು ಸಂಪೂರ್ಣವಾಗಿ ಒಟ್ಟಿಗೆ ಜೋಡಿಸುವುದನ್ನು ಪ್ರಥಮ ಬಾರಿಗೆ ಕಣ್ತುಂಬಿಕೊಂಡರು.

ಮೊದಲಿಗೆ ಮೊಬೈಲ್​ ಲಾಂಚರ್​ ಹೆಸರು!

ಮೊದಲಿಗೆ ಮೊಬೈಲ್ ಲಾಂಚರ್ ಎಂದು ಕರೆಯಲ್ಪಡುವ ಬೆಂಬಲ ಗ್ಯಾಂಟ್ರಿಗೆ ಜೋಡಿಸಲಾದ ರಾಕೆಟ್ ಅನ್ನು ಹೊರ ತರಲಾಯಿತು. ಈ ರಚನೆಯು ಸ್ವತಃ 120 ಮೀಟರ್ ಎತ್ತರ ಮತ್ತು 5,000 ಟನ್ ತೂಕವನ್ನು ಹೊಂದಿದೆ, ಇದನ್ನು ಬೃಹತ್ ಟ್ರಾಕ್ಟರ್ ಮೇಲೆ ಕೂರಿಸಲಾಗಿತ್ತು. ಇದನ್ನು ಕ್ರಾವ್ಲರ್ ಟ್ರಾನ್ಸ್ಪೋರ್ಟರ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: 1 ಲಕ್ಷ ಹೂಡಿಕೆ 1.64 ಕೋಟಿ ಲಾಭ ತರ್ತಿತ್ತು! ಈ ಜಾದೂ ಹೇಗೆ ತಿಳಿಯಿರಿ

ಈಗ ಈ ಜೋಡಣೆಯನ್ನು ಮೊದಲಿಗೆ 'ವೆಟ್ ಡ್ರೆಸ್ ರಿಹರ್ಸಲ್' ಗೆ ಒಳಪಡಿಸಲಾಗುತ್ತದೆ. ಇದರಲ್ಲಿ ರಾಕೆಟ್ ಅನ್ನು ಪ್ರೊಪೆಲ್ಲಂಟ್‌ಗಳೊಂದಿಗೆ ಲೋಡ್ ಮಾಡಲಾಗುವುದು ಮತ್ತು ಲಿಫ್ಟ್-ಆಫ್ ಕ್ಷಣದಿಂದ ಕೇವಲ 9.4 ಸೆಕೆಂಡುಗಳವರೆಗೆ ಅಭ್ಯಾಸದ ಕೌಂಟ್‌ಡೌನ್ ಮೂಲಕ ಇದನ್ನು ಪರೀಕ್ಷಿಸಲಾಗುವುದು. ಎಲ್ಲವೂ ಸರಿ ಹೋಗಿ ಇಂಜಿನಿಯರ್‌ಗಳು ತೃಪ್ತಿಪಟ್ಟಾಗ, ನಾಸಾ ನಂತರ ಇದರ ಉಡಾವಣೆಯ ದಿನಾಂಕವನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಸದ್ಯ ಅಂದುಕೊಂಡಂತೆ ಎಲ್ಲವೂ ನಡೆದರೆಮೇ ಅಂತ್ಯದಂದು ಉಡಾವಣೆ ಮಾಡಲಾಗುವುದು ತಪ್ಪಿದ್ದಲ್ಲಿ ಅದು ಜೂನ್ ಅಥವಾ ಜುಲೈ ವರೆಗೂ ಹೋಗಬಹುದು.
First published: