news18-kannada Updated:February 22, 2021, 3:36 PM IST
ನಾಸಾದ ಹೆಲಿಕಾಪ್ಟರ್
ಭೂಮಿ ಮೇಲೆ ಹೆಲಿಕಾಪ್ಟರ್ ಹಾರಿಸುವುದು ಕಷ್ಟವೇನಲ್ಲ. ಆದರೆ ಮಂಗಳ ಗ್ರಹದ ಮೇಲೆ ಹೆಲಿಕಾಪ್ಟರ್ ಹಾರಿಸುವ ಪ್ರಯತ್ನದಲ್ಲಿ ನಾಸಾ ಪ್ರಯತ್ನ ಯಶಸ್ಸಿನತ್ತ ಸಾಗುತ್ತಿದೆ. ಈ ಹೆಲಿಕಾಪ್ಟರ್ಗೆ Ingenuity ಎಂದು ಹೆಸರಿಸಲಾಗಿದೆ. ಈ ಹೆಲಿಕಾಪ್ಟರ್ ರೋವರ್ನ ಸಹಾಯದಿಂದ ಮಂಗಳ ಗ್ರಹದ ಮೇಲಿನ ಕಲ್ಲು ಮತ್ತು ಮಣ್ಣನ್ನು ಭೂಮಿಗೆ ತರಲು ಸಾಹಸಕ್ಕೆ ಕೈ ಹಾಕಿದೆ. ಈ ಪ್ರಯತ್ನದ ಆರಂಭದ ಹಂತದಲ್ಲಿ Ingenuity ಹೆಲಿಕಾಪ್ಟರ್ ಯಾವ ಅಡೆತಡೆಯಿಲ್ಲದೇ ಮಂಗಳ ಗ್ರಹದ ಮೇಲೆ ಹಾರಾಟ ನಡೆಸಿದೆ ಎನ್ನುವ ಸಿಹಿ ಸುದ್ದಿ ನಾಸಾಗೆ ತಲುಪಿದೆ.
Ingenuity ಹೆಲಿಕಾಪ್ಟರ್ ಕೆಂಪು ಗ್ರಹ ಮಂಗಳನ ಮೇಲೆ ಏಕಾಂಗಿ ಪ್ರಯಾಣ ಕೈಗೊಂಡಿದೆ. ಶುಕ್ರವಾರ ಈ ಕುರಿತು ಮೊದಲ ವರದಿಯು ನಾಸಾಗೆ ತಲುಪಿದೆ. ಅಲ್ಲದೇ 'Ingenuity ಹೆಲಿಕಾಪ್ಟರ್ ಬ್ಯಾಟರಿಗಳೂ ಸಹ ಅಂದುಕೊಂಡಂತೆ ಚಾರ್ಚ್ ಆಗುತ್ತಿವೆ, ಅಲ್ಲದೇ ಅದರ ಎಲ್ಲ ಕಾರ್ಯತಂತ್ರಗಳೂ ಸಹ ವಿನ್ಯಾಸ ಮಾಡಿದ ರೀತಿಯಲ್ಲಿಯೇ ಕೆಲಸ ಮಾಡುತ್ತಿವೆ' ಎಂದು ನಾಸಾದ ಈ ಕಾರ್ಯಾಚರಣೆಯ ಪ್ರಮುಖರಾದ ಕ್ಯಾನ್ಹ್ಯಾಮ್ ತಿಳಿಸಿದ್ದಾರೆ.
Ingenuity ಹೆಲಿಕಾಪ್ಟರ್ ಮಿನಿ ಡ್ರೋನ್ಗಳ ಮಾದರಿಯಲ್ಲಿದೆ. ಇದರ ತೂಕ ಕೇವಲ 1.8 ಕೆಜಿ. ಅಲ್ಲದೇ, ಇದರ ದೊಡ್ಡದಾದ ಬ್ಲೇಡ್ಗಳು ಐದು ಪಟ್ಟು ವೇಗವಾಗಿ ತಿರುತ್ತವೆ. ಹೀಗಾಗಿ ಹೆಚ್ಚಿನ ಶಕ್ತಿಯ ಅವಶ್ಯಕತೆ ಈ ಸಾಧನಕ್ಕೆ ಬೇಕಾಗುತ್ತವೆ. ಇನ್ನು ಮಂಗಳ ಗ್ರಹದ ಮೇಲಿನ ಗುರುತ್ವ ಭೂಮಿಯ 3ನೇ ಒಂದು ಭಾಗದಷ್ಟು ಮಾತ್ರ. ಹೀಗಾಗಿ ಅಲ್ಲಿ ಹೆಚ್ಚಿನ ವೇಗದಲ್ಲಿ ಬ್ಲೇಡ್ಳುಗಳು ತಿರುಗಬೇಕಾಗುತ್ತವೆ.
ಇದನ್ನೂ ಓದಿ: SBI Gold Loan: ಎಸ್ಬಿಐ ಚಿನ್ನದ ಸಾಲ ಪಡೆಯಲು ಅರ್ಹತೆ, ಬಡ್ಡಿ ದರದ ಮಾಹಿತಿ ಇಲ್ಲಿದೆ
ಈ ಯೋಜನೆಯು ಯಶಸ್ವಿಯಾದರೆ, ಇದು ಮಂಗಳ ಗ್ರಹಕ್ಕೆ ಭವಿಷ್ಯದ ರೊಬೊಟಿಕ್ಸ್ ಮತ್ತು ಮಾನವ ಕಾರ್ಯಾಚರಣೆಗಳ ಭಾಗವಾಗಿರುವ ಇತರ ಸುಧಾರಿತ ರೋಬೋಟ್ಗಳನ್ನು ತಯಾರಿಸಲು ನೆರವಾಗುತ್ತದೆ ಎಂದು ನಾಸಾ ತಿಳಿಸಿದೆ. ಅಲ್ಲದೇ ಮಂಗಳ ಗ್ರಹದ ಮೇಲಿನ ಜೀವಿಗಳ ಅಸ್ವಿತ್ವದ ಅಧ್ಯಯನಕ್ಕೆ ಸಹಾಯ ಮಾಡುತ್ತದೆ ಎನ್ನಲಾಗಿದೆ.
"ಮಂಗಳ ಗ್ರಹದ ಮೇಲೆ Ingenuity ಹೆಲಿಕಾಪ್ಟರ್ ಹಾರಾಟ, ಭೂಮಿ ಮೇಲೆ ರೈಟ್ ಸಹೋದರರು ನಡೆಸಿದ ಮೊದಲ ವಿಮಾನದ ಹಾರಾಟವನ್ನು ನೆನಪಿಸುತ್ತದೆ," ಎಂದು ನಾಸಾ ಹೇಳಿದೆ.
ಆದರೆ Ingenuity ಹೆಲಿಕಾಪ್ಟರ್ ನ ಬ್ಯಾಟರಿಗಳನ್ನು ಮೊದಲು ಸರಿಯಾಗಿ ಚಾರ್ಚ್ ಆಗಬೇಕಿದೆ. ಹೆಲಿಕಾಪ್ಟರ್ ಗೆ ಬೇಕಾದ ಒಟ್ಟಾರೆ ಶಕ್ತಿಯಲ್ಲಿ ಶೇ.35 ರಷ್ಟು ಶಕ್ತಿಯನ್ನು ಬ್ಯಾಟರಿಯಿಂದಲೇ ಪಡೆಯಲಾಗುತ್ತದೆ. ನಂತರ ಈ ಬ್ಯಾಟರಿಗಳನ್ನು ತುಂಬಿಸಲು ಸೌರ ಕೋಶಗಳನ್ನೂ ಸಹ ಹೊಂದಿದೆ. ಹೀಗಾಗಿ ಸೌರವಿದ್ಯುತ್ನಿಂದ ಇದು ಮುನ್ನಡೆಯುತ್ತವೆ. ಆದರೆ ತುಂಬ ಶೀತ ವಾತಾವರಣ ಇರುವ ಮಂಗಳ ಗ್ರಹದಲ್ಲಿ ತಾಪಮಾನವು -90 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ನಾಸಾ ತಿಳಿಸಿದೆ.ಕೆಂಪು ಗ್ರಹವಾದ ಮಂಗಳನ ಮೇಲೆ ಗಗನ ನೌಕೆಯನ್ನು ಹಾರಿಬಿಡುವ ಅವಕಾಶ ತುಂಬ ಕಡಿಮೆ. ಅದೂ 26 ತಿಂಗಳಿನಲ್ಲಿ ಒಮ್ಮೆ ಮಾತ್ರವೇ ಬರುತ್ತದೆ. ಹೀಗಾಗಿ ಈ ಮಿಷನ್ ನಾಸಾ ಸಂಸ್ಥೆಯ ಅತ್ಯಂತ ಮಹತ್ವಾಕಾಂಕ್ಷೆಯ ಮಿಷನ್ ಆಗಿದೆ. ಒಂದು ವೇಳೆ ಇದು ಯಶಸ್ವಿಯಾದರೆ ನಾಸಾದ ಶೇ.90ರಷ್ಟು ಗುರಿಗಳು ಈ ಹೆಲಿಕಾಪ್ಟರ್ ಮೂಲಕ ಈಡೇರಿದಂತಾಗುತ್ತದೆ.
ಇದನ್ನೂ ಓದಿ: Gang Rape: ಮಧ್ಯಪ್ರದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಬಿಜೆಪಿ ನಾಯಕ ಸೇರಿ ನಾಲ್ವರ ಬಂಧನ
"ಈ ಕ್ರಾಫ್ಟ್ ಮಂಗಳ ಗ್ರಹದಲ್ಲಿ 31 ದಿನಗಳ ಕಾಲ ಇರುವ ಸಾಮರ್ಥ್ಯ ಹೊಂದಿದೆ. ಇದು ಭೂಮಿಗೆ ಹೋಲಿಸಿದರೆ 30 ದಿನಗಳಷ್ಟು. ಈ 'ಮಿಷನ್' ನ ಪ್ರತಿಯೊಂದು ಹಂತವೂ ನಾವು ಅಂದುಕೊಂಡಂತೆಯೇ ಆಗುತ್ತ ಹೋಗುತ್ತಿದೆ. ಇದು ಮುಂದಿನ ಹಂತಕ್ಕೆ ಹೋಗೋಕೆ ನಮಗೆ ಮತ್ತಷ್ಟು ಬಲ ನೀಡುತ್ತಿದೆ," ಎಂದು ನಾಸಾ ತಿಳಿಸಿದೆ.
ನಾಸಾದ Perseverance ಎಂಬ ರೋವರ್ ಕೆಂಪು ಗ್ರಹದ ಮೇಲಿನ ಕಲ್ಲು ಹಾಗೂ ಮಣ್ಣನ್ನು ಭೂಮಿಗೆ ತರಬೇಕಿದೆ. ಅಲ್ಲದೇ ಅಲ್ಲಿನ ಚಿತ್ರಗಳನ್ನು ಹಾಗೂ ಧ್ವನಿಯನ್ನು ಈ ರೋವರ್ ದಾಖಲಿಸಲಿದೆ. ಇನ್ನು ಇದರಲ್ಲಿನ ಟ್ಯೂಬ್ಗಳು ಈ ಹಿಂದೆ ಮಂಗಳ ಗ್ರಹದ ಮೇಲೆ ಮಾನವನ ಪುರಾವೆ ಏನಾದರೂ ಇತ್ತಾ ಎನ್ನುವುದನ್ನು ಕಂಡು ಹಿಡಿಯೋಕೆ ಅಲ್ಲಿನ ಬಂಡೆಗಳ ಮಾದರಿಯನ್ನೂ ಸಂಗ್ರಹಸುತ್ತಿವೆ. ಹೀಗೆ ನಾಸಾ ಹೊಸ ಇತಿಹಾಸವನ್ನು ಬರೆಯೋಕೆ, ಅದರಿಂದ ಹೊಸ ಪ್ರಯೋಗಗಳನ್ನು ಮಾಡೋಕೆ ಎಲ್ಲ ರೀತಿಯಿಂದಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
Published by:
Sushma Chakre
First published:
February 22, 2021, 3:36 PM IST