ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ಉಪಗ್ರಹ ಇಳಿಸಿ, ಅಧ್ಯಯನ ಕೈಗೊಂಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಭೂಮಿ ಹೊರತುಪಡಿಸಿ, ಬೇರೆ ಗ್ರಹಗಳು ಹೇಗಿರುತ್ತವೆ, ಅಲ್ಲಿನ ವಾತಾವರಣ ಎಂತಹದ್ದು, ಅಲ್ಲೂ ಜೀವಿಗಳು ವಾಸಿಸುತ್ತಿವೆಯೇ, ಅಥವಾ ವಾಸ ಮಾಡಬಹುದೇ ಎಂಬುದೇ ಗೊತ್ತಿಲ್ಲದಿರುವಾಗ ಅದನ್ನು ಪರಿಚಯಿಸುವ ಕಾರ್ಯಕ್ಕೆ ಕೈಹಾಕಿದ ವಿಜ್ಞಾನಿಗಳು ನಮ್ಮ ಕಲ್ಪನೆಗೆ ಹೊಸ ಆಯಾಮ ನೀಡುತ್ತಾ, ವೈಜ್ಞಾನಿಕ ಲೋಕಕ್ಕೆ ಹೊಸ ತಿರುವು ನೀಡಿದ್ದಾರೆ.
ಇದೆಲ್ಲ ಯಾಕೆ ಹೇಳುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ? ಬಾಹ್ಯಾಕಾಶ ಲೋಕದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಇದೀಗ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ನಾಸಾದಿಂದ ಮಂಗಳ ಗ್ರಹಕ್ಕೆ ಕಳುಹಿಸಲ್ಪಟ್ಟಿದ್ದ ಇನ್ಸೈಟ್ ಉಪಗ್ರಹ ಅಲ್ಲಿನ ಶಬ್ದವನ್ನು ಸೆರೆಹಿಡಿದಿದ್ದು, ಅದನ್ನು ಭೂಮಿಗೆ ರವಾನಿಸಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಕಣಿವೆಗೆ ಉರುಳಿದ ಬಸ್; 23 ಮಂದಿ ದುರ್ಮರಣ, ಎಂಟು ಮಂದಿಗೆ ಗಂಭೀರ ಗಾಯ
ಭೂಮಿಯಿಂದ ಅತಿಹೆಚ್ಚು ದೂರದಲ್ಲಿರುವ ಗ್ರಹವೆಂದೇ ಕರೆಯಲಾಗುವ ಮಂಗಳ ಗ್ರಹದಿಂದ ಹೀಗೆ ಶಬ್ದವನ್ನು ಗ್ರಹಿಸಿ ನಾಸಾದ ಇನ್ಸೈಟ್ ಉಪಗ್ರಹ ಅದನ್ನು ರೆಕಾರ್ಡ್ ಮಾಡಿದೆ. ಇದುವರೆಗೂ ಮಂಗಳ ಗ್ರಹದ ಮೇಲೆ ಸಂಶೋಧನೆಗಾಗಿ ಅನೇಕ ದೇಶಗಳು ಉಪಗ್ರಹವನ್ನು ಕಳುಹಿಸಿದ್ದರೂ ಅಲ್ಲಿನ ಚಿತ್ರವನ್ನು ಸೆರೆಹಿಡಿಯಲಾಗಿತ್ತೇ ವಿನಃ ಶಬ್ದವನ್ನು ಗ್ರಹಿಸಲು ಉಪಗ್ರಹಗಳಿಗೆ ಸಾಧ್ಯವಾಗಿರಲಿಲ್ಲ. ಆ ಸಾಧನೆಯನ್ನು ನಾಸಾ ವಿಜ್ಞಾನಿಗಳು ಮಾಡಿದ್ದಾರೆ. ಈ ಮೂಲಕ ವಿಜ್ಞಾನ ಲೋಕ ಅಚ್ಚರಿಯಿಂದ ನಾಸಾದತ್ತ ನೋಡುವಂತಾಗಿದೆ.
#Mars, I hear you and I’m feeling the good vibrations left in the wake of your Martian winds. Take a listen to the #SoundsOfMars I’ve picked up. 🔊
More on https://t.co/auhFdfiUMg pic.twitter.com/shVmYbfHRs
— NASA InSight (@NASAInSight) December 7, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ