ಸೂರ್ಯನ ಮೇಲ್ಮೈಯಿಂದ ಹೊರಹೊಮ್ಮುವ ಕರೋನಲ್ ಮಾಸ್ ಇಜೆಕ್ಶನ್ (CME) ದೃಶ್ಯಗಳಿಂದ ಅಂತರ್ಜಾಲವೇ ಮಂತ್ರಮುಗ್ಧಗೊಂಡಿದ್ದು ನಾಸಾ (NASA) ಈ ವೀಡಿಯೊವನ್ನು ತನ್ನ ಜಾಲತಾಣದಲ್ಲಿ ಹಂಚಿಕೊಂಡಿದೆ. ದೃಶ್ಯಾವಳಿಯು ಎಂಟು ಗಂಟೆಗಳಲ್ಲಿ 2 ಮಿಲಿಯನ್ಗಿಂತಲೂ ಹೆಚ್ಚಿನ ವೀಕ್ಷಣೆಗಳು ಹಾಗೂ ಲೈಕ್ಗಳನ್ನು ಗಳಿಸಿದೆ. ಯುಗಾಂತರಗಳಿಂದ ರಹಸ್ಯದ ವಸ್ತುವಾಗಿರುವ ಸೂರ್ಯನು ತನ್ನ ರಹಸ್ಯಗಳನ್ನು ವೈಜ್ಞಾನಿಕ ಪ್ರಗತಿಯ ಮೂಲಕ ಅನಾವರಣಗೊಳಿಸುತ್ತಿದ್ದಾನೆ. ತಂತ್ರಜ್ಞಾನದ ನವೀಕರಣದೊಂದಿಗೆ ಸೂರ್ಯನ ರಹಸ್ಯವನ್ನು ವಿಜ್ಞಾನಿಗಳು ಬೇಧಿಸುತ್ತಿದ್ದಾರೆ. ಸೂರ್ಯನ ಮೇಲ್ಮೈಯಉಂಟಾಗುವ ಲ್ಲಿ ಸ್ಫೋಟಗಳನ್ನೇ ಸಿಎಮ್ಇ ಗಳು ಎಂದು ಕರೆಯಲಾಗಿದೆ. ಒಮ್ಮೊಮ್ಮೆ ಇವು ಸೌರಮಂಡಲಕ್ಕೆ ಹಾನಿಯುಂಟಾಗದಂತೆ ಚಲಿಸಿದರೂ ಕೆಲವೊಮ್ಮೆ ಭೂಮಿಯನ್ನು ಗುರಿಯಾಗಿರಿಸಿಕೊಳ್ಳುತ್ತವೆ.
ವೀಡಿಯೊದಲ್ಲಿ ನಮೂದಿಸಲಾದ ಶೀರ್ಷಿಕೆ ಕೂಡ ಆಕರ್ಷಕವಾಗಿದ್ದು ಸೌರ ಮಂಡಲದ ಕುರಿತು ನಮ್ಮ ವಿಮರ್ಶೆ? ಒಂದು ನಕ್ಷತ್ರ ಎಂದು ನಾಸಾ ಬರೆದುಕೊಂಡಿದ್ದು, ಮುಂದಿನ ಕೆಲವು ಸಾಲುಗಳಲ್ಲಿ ಸಿಎಮ್ಇ ಕುರಿತು ಇನ್ನಷ್ಟು ರೋಚಕ ವಿಷಯಗಳನ್ನು ಪ್ರಸ್ತುತಪಡಿಸಿದೆ. ಪ್ರತಿ ಗಂಟೆಗೆ 1 ಮಿಲಿಯನ್ ಮೈಲುಗಳು ಅಥವಾ 1,600,000 ಕಿಲೋಮೀಟರ್ ವೇಗದಲ್ಲಿ ಸೌರ ಪ್ಲಾಸ್ಮಾ ತರಂಗಗಳು ಶತಕೋಟಿ ಕಣಗಳನ್ನು ಬಾಹ್ಯಾಕಾಶಕ್ಕೆ ಎಸೆಯುತ್ತವೆ ಎಂದು ತಿಳಿಸಿದೆ.
View this post on Instagram
2013 ರಲ್ಲಿ ನಮ್ಮ ಸೌರ ಡೈನಾಮಿಕ್ಸ್ ಆಬ್ಸರ್ವೇಟರಿ (SDO) ಮೂಲಕ ಕಂಡ ಈ ತೀವ್ರ ನೇರಳಾತೀತ ಬೆಳಕಿನಲ್ಲಿ ಕಾಣುವ ಈ ನಿರ್ದಿಷ್ಟ ಸಿಎಮ್ಇ ಭೂಮಿಯತ್ತ ಸಾಗಲಿಲ್ಲ. ಸಂವಹನ ಹಾಗೂ ನ್ಯಾವಿಗೇಶನ್ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಉಂಟುಮಾಡುವ ವಿಕಿರಣದ ಪ್ರಬಲ ಸ್ಫೋಟಗಳಾದ ಸೌರ ಜ್ವಾಲೆಗಳಿಂತರದ ಈ ಸಿಎಮ್ಇ ಗಳು ತಾತ್ಕಾಲಿಕವಾಗಿ ಇಲೆಕ್ಟ್ರಿಕಲ್ ವ್ಯವಸ್ಥೆಗಳನ್ನು ಮಿತಿಮೀರಿ ಲೋಡ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಅದೃಷ್ಟದ ವಿಯವೆಂದರೆ ನಮ್ಮ ಸೌರ ವೀಕ್ಷಣಾಲಯಗಳು ಬಾಹ್ಯಾಕಾಶದ ಈ ಆಕರ್ಷಕ ಅಂಶವನ್ನು ಪತ್ತೆಹಚ್ಚಲು ನಮಗೆ ಸಹಾಯ ಮಾಡುತ್ತದೆ. ಹಾಗಾಗಿ ಭೂಮಿಯ ಮೇಲೆ ಅಡೆತಡೆಗಳು ಕಡಿಮೆ ಉಂಟಾಗುತ್ತವೆ ಎಂದು ನಾಸಾ ತಿಳಿಸಿದೆ.
ಬೆಳಕಿಗೆ ಹೆಚ್ಚುವರಿಯಾಗಿ ಸೌರಜ್ವಾಲೆಯ ಪರಮಾಣುಗಳು, ಎಲೆಕ್ಟ್ರಾನ್ಗಳು ಹಾಗೂ ಅಯಾನ್ಗಳನ್ನು ಹೊರಹಾಕುತ್ತವೆ ಇದನ್ನೇ ಕರೋನಲ್ ಮಾಸ್ ಇಜೆಕ್ಷನ್ ಎಂದು ಕರೆಯಲಾಗುತ್ತದೆ. ಸೂರ್ಯನ ಕೆಳ ಕರೋನಾದಲ್ಲಿರುವ ಹೆಚ್ಚು ತಿರುಚಿದ ಕಾಂತಕ್ಷೇತ್ರದ ರಚನೆಗಳು (ಫ್ಲಕ್ಸ್ ಹಗ್ಗಗಳು) ಹೆಚ್ಚು ಒತ್ತಡಕ್ಕೊಳಗಾದಾಗ ಮತ್ತು ಕಡಿಮೆ ಉದ್ವಿಗ್ನ ಸಂರಚನೆಯಾಗಿ ರೂಪುಗೊಂಡಾಗ ಹೆಚ್ಚು ಸ್ಫೋಟಕ ಸಿಎಮ್ಇಗಳು ಸಾಮಾನ್ಯವಾಗಿ ಪ್ರಾರಂಭವಾಗುತ್ತವೆ - ಈ ಪ್ರಕ್ರಿಯೆಯನ್ನು ಕಾಂತೀಯ ಮರುಸಂಪರ್ಕ ಎಂದು ಕರೆಯಲಾಗುತ್ತದೆ.
ನಾಸಾ ಸೌರ ಮತ್ತು ಹೆಲಿಯೊಸ್ಫೆರಿಕ್ ಅಬ್ಸರ್ವೇಟರಿ (ಎಸ್ಒಹೆಚ್ಒ) ಒಂದು ಕರೋನಾಗ್ರಾಫ್ ಅನ್ನು ಹೊಂದಿದೆ - ಇದನ್ನು ದೊಡ್ಡ ಕೋನ ಮತ್ತು ಸ್ಪೆಕ್ಟ್ರೋಮೆಟ್ರಿಕ್ ಕೊರೊನಾಗ್ರಾಫ್ (ಲಾಸ್ಕೊ) ಎಂದು ಕರೆಯಲಾಗುತ್ತದೆ. ಈ ಉಪಕರಣವು ಸೂರ್ಯನ ಕರೋನದ ಆಪ್ಟಿಕಲ್ ಇಮೇಜಿಂಗ್ಗಾಗಿ ಎರಡು ಶ್ರೇಣಿಗಳನ್ನು ಹೊಂದಿದೆ. ಸಿಎಮ್ಇಗಳನ್ನು ವಿಶ್ಲೇಷಿಸಲು ಮತ್ತು ವರ್ಗೀಕರಿಸಲು ಮುನ್ಸೂಚಕರು ಬಳಸುವ ಪ್ರಾಥಮಿಕ ಸಾಧನವೆಂದರೆ ಲಾಸ್ಕೋ ಉಪಕರಣವಾಗಿದೆ. ಈ ಸಿಎಮ್ಇಗಳು ಭೂಮಿಗೆ ಅಪ್ಪಳಿಸಿದಾಗ ಭೂಕಾಂತೀಯ ಚಂಡಮಾರುತ ಉಂಟಾಗುತ್ತದೆ ಹಾಗೂ ಇದು ಎರಡು ಪಟ್ಟು ಶಕ್ತಿಯುತವಾಗಿರುತ್ತದೆ. ಭೂಮಿಯ ಕಕ್ಷೆಯಲ್ಲಿರುವ ಉಪಗ್ರಹಗಳು ಇದ್ದಕ್ಕಿದ್ದಂತೆ ಶಕ್ತಿಯುತ ಮತ್ತು ಹಾನಿಕಾರಕ, ವಿದ್ಯುತ್ ಶಕ್ತಿಯ ಕಣಗಳ ಆಲಿಕಲ್ಲುಗಳಿಗೆ ಒಡ್ಡಿಕೊಳ್ಳುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ