Chandrayaan-2: ಚಂದ್ರಯಾನ 2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ

ಇಸ್ರೋದ ವಿಕ್ರಮ್​​​ ಲ್ಯಾಂಡರ್​​​​ ಪತನಗೊಂಡಿದ್ದ ಸ್ಥಳದ ಚಿತ್ರ ಸರೆ ಹಿಡಿದ ನಾಸಾದ ಲೂನಾರ್ ಆರ್ಬಿಟರ್, ಫೋಟೋ ಬಿಡುಗಡೆ ಮಾಡಿದೆ. ವಿಕ್ರಮ್​​​ ಲ್ಯಾಂಡಿಂಗ್ ಮುನ್ನ ಚಂದ್ರನ ಮೇಲ್ಮೈ ಹೇಗಿತ್ತು; ಲ್ಯಾಂಡಿಂಗ್ ನಂತರ ಚಂದ್ರನ ಮೇಲ್ಮೈ ಹೇಗಿದೆ ಎಂಬ ಚಿತ್ರ ಸರೆ ಹಿಡಿಯಲಾಗಿದೆ.

news18-kannada
Updated:December 3, 2019, 8:34 AM IST
Chandrayaan-2: ಚಂದ್ರಯಾನ 2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ
ವಿಕ್ರಮ್​​​ ಲ್ಯಾಂಡರ್​​​​​​
  • Share this:
ನವದೆಹಲಿ(ಡಿ.03): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಕಾಂಕ್ಷೆ ಯೋಜನೆ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವೀಗ ಪತ್ತೆಯಾಗಿದೆ. ವಿಕ್ರಮ್​​​​​ ಲ್ಯಾಂಡರ್​​​ ಪತನವಾದ ಸ್ಥಳವನ್ನು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಲೂನಾರ್ ಆರ್ಬಿಟರ್ ಪತ್ತೆ ಹಚ್ಚಿದೆ. ಇಸ್ರೋದ ವಿಕ್ರಮ್​​​ ಲ್ಯಾಂಡರ್​​​​ ಪತನಗೊಂಡಿದ್ದ ಸ್ಥಳದ ಚಿತ್ರ ಸರೆ ಹಿಡಿದ ನಾಸಾದ ಲೂನಾರ್ ಆರ್ಬಿಟರ್, ಫೋಟೋ ಬಿಡುಗಡೆ ಮಾಡಿದೆ. ವಿಕ್ರಮ್​​​ ಲ್ಯಾಂಡಿಂಗ್ ಮುನ್ನ ಚಂದ್ರನ ಮೇಲ್ಮೈ ಹೇಗಿತ್ತು; ಲ್ಯಾಂಡಿಂಗ್ ನಂತರ ಚಂದ್ರನ ಮೇಲ್ಮೈ ಹೇಗಿದೆ ಎಂಬ ಚಿತ್ರ ಸರೆ ಹಿಡಿಯಲಾಗಿದೆ.

ಈ ಹಿಂದೆ ಇಸ್ರೋದ ವಿಕ್ರಮ್​​​ ಲ್ಯಾಂಡರ್​​ ಪತನವಾದ ಸ್ಥಾನ ಪತ್ತೆ ಹಚ್ಚುವುದು ಕಷ್ಟ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದರು. ಚಂದ್ರನ ಮೇಲ್ಮೈ ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿದ ಪ್ರದೇಶದಲ್ಲಿ ನಾಸಾದ ಲೂನಾರ್ ಆರ್ಬಿಟರ್​​, ಕ್ಯಾಮರಾ ಸಹಾಯದಿಂದ ಚಿತ್ರಗಳನ್ನು ತೆಗೆಯುವುದು ಕಷ್ಟಸಾಧ್ಯ. ಇಲ್ಲಿ ಬೆಳಕು ಸ್ಪಷ್ಟವಾಗಿಲ್ಲದ ಕಾರಣ ವಿಕ್ರಮ್​​​ ಲ್ಯಾಂಡರ್ ಸ್ಥಾನ ಎಲ್ಲಿದೆ ಎಂದು ಗುರುತಿಸಲು ಆಗುವುದಿಲ್ಲ ಎಂದು ನಾಸಾ ತಿಳಿಸಿತ್ತು.

ಇದನ್ನೂ ಓದಿ: ಅಯ್ಯಪ್ಪ ಮಾಲೆ ಧರಿಸಿ, ಮಂಡಲ ಪೂಜೆ ಮಾಡುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಯುವಕ

ಜಾಗತಿಕ ಮಟ್ಟದಲ್ಲಿ ಭಾರತವನ್ನು ತಿರುಗಿ ನೋಡುವಂತೆ ಮಾಡಿದ್ದ ಇಸ್ರೋದ ಚಂದ್ರಯಾನ- 2, ಕಡೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಆದರೂ ಚಂದ್ರಯಾನ್​ - 2 ಲ್ಯಾಂಡರ್​ 'ವಿಕ್ರಂ' ಸುಸ್ಥಿತಿಯಲ್ಲಿದೆ ಎಂಬ ಮಾಹಿತಿಯನ್ನು ಇಸ್ರೋ ಸಂಸ್ಥೆಯೇ ನೀಡಿತ್ತು. ತನ್ನ ಹೇಳಿಕೆ ಬಳಿಕ ಲ್ಯಾಂಡರ್​ ವಿಕ್ರಂ ಜತೆ ಸಂಪರ್ಕ ಸಾಧಿಸುವ ಇಸ್ರೋ ಪ್ರಯತ್ನಕ್ಕೆ ಮೊದಲ ಹಂತದ ಯಶಸ್ಸು ಸಿಕ್ಕಿದೆ ಎಂದೇ ಭಾವಿಸಲಾಗಿತ್ತು.

ಇನ್ನು 2.1 ಕಿಲೋಮೀಟರ್​ ದೂರದಲ್ಲಿದ್ದಾಗ, ವಿಕ್ರಂ ಸಂಪರ್ಕವನ್ನು ಕಳೆದುಕೊಂಡಿತ್ತು. ಇದರಿಂದ ಇಸ್ರೋ ವಿಜ್ಞಾನಿಗಳಿಗೆ ಮತ್ತು ದೇಶದ ಜನರಿಗೆ ಭಾರೀ ನಿರಾಸೆ ಉಂಟಾಗಿತ್ತು. ಈ ಬೆನ್ನಲ್ಲೇ ಸಂತಸದ ವಿಚಾರವೆಂದರೆ ವಿಕ್ರಂಗೆ ಯಾವುದೇ ರೀತಿಯಾದ ಹಾನಿಯಾಗಿಲ್ಲ. ವಾಲಿದ ಸ್ಥಿತಿಯಲ್ಲಿದ್ದರೂ ವಿಕ್ರಂಗೆ ಡ್ಯಾಮೇಜ್​ಗಳಾಗಿಲ್ಲ. ಇಸ್ರೋ ತಂತ್ರಜ್ಞರು ವಿಕ್ರಂ ಜತೆ ಸಂಪರ್ಕ ಸಾಧಿಸಲು ನಿರಂತರ ಪ್ರಯತ್ನದಲ್ಲಿದ್ದೇವೆ ಎಂದು ಹೇಳಿದ್ದರು.

ಒಂದಷ್ಟು ದಿನಗಳ ಬಳಿಕ ಚಂದ್ರಯಾನ-2 ಶೇ.98ರಷ್ಟು ತನ್ನ ಯಶಸ್ಸು ಸಾಧಿಸಿದೆ. ಲ್ಯಾಂಡರ್​ ವಿಕ್ರಂ ಜೊತೆ ಸಂಪರ್ಕ ಸಾಧಿಸಲು ವಿಜ್ಞಾನಿಗಳು ಸತತ ಪ್ರಯತ್ನಿಸಿದ್ದೇವೆ. ಆದರೆ, ಅದು ಪತನವಾಗಿದೆ ಎಂದು ಗೊತ್ತಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್​ ಬೇಸರ ವ್ಯಕ್ತಪಡಿಸಿದ್ದರು.
First published:December 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...