Lok Sabha Elections 2019: ಪ್ರಧಾನಿ ನರೇಂದ್ರ ಮೋದಿ ನೀತಿ ಸಂಹಿತೆ ಉಲ್ಲಂಘಿಸಿಲ್ಲ; ಚುನಾವಣಾ ಆಯೋಗ

ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ನೀತಿ ಸಂಹಿತೆ ಉಲ್ಲಂಘಟನೆ ಪ್ರಕರಣದ ಕುರಿತು ಮಂಗಳವಾರ ತನಿಖೆ ನಡೆಸಿದ್ದ ಆಯೋಗ ಮಹಾರಾಷ್ಟ್ರ ವಾರ್ತಾ ಎಂಬಲ್ಲಿ ಮೋದಿ ಮಾಡಿದ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ. 

MAshok Kumar | news18
Updated:May 1, 2019, 3:32 PM IST
Lok Sabha Elections 2019: ಪ್ರಧಾನಿ ನರೇಂದ್ರ ಮೋದಿ ನೀತಿ ಸಂಹಿತೆ ಉಲ್ಲಂಘಿಸಿಲ್ಲ; ಚುನಾವಣಾ ಆಯೋಗ
ನರೇಂದ್ರ ಮೋದಿ.
  • News18
  • Last Updated: May 1, 2019, 3:32 PM IST
  • Share this:
ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದ ವಾರ್ತಾ ಎಂಬಲ್ಲಿ ನಡೆಸಿದ ಚುನಾವಣಾ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಏಪ್ರಿಲ್. 1 ರಂದು ಮಹಾರಾಷ್ಟ್ರದ ವಾರ್ತಾ ಎಂಬಲ್ಲಿ ಬಿಜೆಪಿ ಚುನಾವಣಾ ಪ್ರಚಾರವನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಕೇರಳದ ವಯನಾಡ್​ನಿಂದ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಕುರಿತು ಉಲ್ಲೇಖಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಹಿಂದುಗಳ ಸಂಖ್ಯೆ ಅಧಿಕವಿರುವ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ತಮಗೆ ಮತ ಸಿಗಲಾರದು ಎಂಬ ಉದ್ದೇಶದಿಂದಲೇ ರಾಹುಲ್ ಗಾಂಧಿ ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ” ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದರು.

ಇದನ್ನೂ ಓದಿ : ಮೋದಿ, ಶಾರಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ; ಕಾಂಗ್ರೆಸ್​ ಅರ್ಜಿ ಸ್ವೀಕರಿಸಿದ ಸುಪ್ರೀಂಕೋರ್ಟ್​ ​​

ಮೋದಿಯ ಈ ಹೇಳಿಕೆಯಿಂದಾಗಿ ಹಿಂದೂಗಳಿಗೆ ಅವಮಾನವಾಗಿದೆ. ಅಲ್ಲದೆ ಇದು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆ ಎಂದು ಅರೋಪಿಸಿದ್ದ ಕಾಂಗ್ರೆಸ್ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಅಲ್ಲದೆ ಈ ಕುರಿತು ಸುಪ್ರೀಂ ಕೋರ್ಟ್​ನಲ್ಲೂ ದೂರು ಸಲ್ಲಿಸಿತ್ತು.

ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನೀಡಿದ್ದ ದೂರುಗಳ ಪೈಕಿ ಚುನಾವಣಾ ಆಯೋಗ ತನಿಖೆಗೆ ಸಮ್ಮಿತಿ ಸೂಚಿಸಿದ್ದ ಏಕೈಕ ಪ್ರಕರಣ ಇದಾಗಿತ್ತು. ಆದರೆ ಮಂಗಳವಾರ ಈ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಆಯೋಗ ಮಹಾರಾಷ್ಟ್ರ ವಾರ್ತಾ ಎಂಬಲ್ಲಿ ಮೋದಿ ಮಾಡಿದ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದೇ ಪ್ರಕರಣವನ್ನು ಮಂಗಳವಾರ ಸುಪ್ರೀಂ ಕೋರ್ಟ್​ನಲ್ಲೂ ವಿಚಾರಣೆಗೆ ತೆಗೆದುಕೊಳ್ಳಲಾಗಿತ್ತು. ಈ ವೇಳೆ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೇಲಿನ ಪ್ರಕರಣದ ಕುರಿತು ನಡೆಸಿರುವ ತನಿಖೆಯ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನೋಟೀಸ್ ಜಾರಿ ಮಾಡಿತ್ತು.

ಇದನ್ನೂ ಓದಿ : ಅಭ್ಯರ್ಥಿಗಳಿಗೆ ಮತ್ತೊಂದು ಸಂಕಷ್ಟ: ನೀತಿ ಸಂಹಿತೆ ಉಲ್ಲಂಘಿಸುವವರ ಬಗ್ಗೆ ದೂರು ಕೊಟ್ರೆ ಶಿಕ್ಷೆ ಗ್ಯಾರಂಟಿ!ಅದರೆ, ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಭಾಷಣದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಿದ್ದು ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್.2 ಕ್ಕೆ ಮುಂದೂಡಿದೆ.

ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ : ಚುನಾವಣಾ ಆಯೋಗದ ಈ ತೀರ್ಮಾನದ ವಿರುದ್ಧ ಸಾಮಾನ್ಯವಾಗಿ ಕಾಂಗ್ರೆಸ್​ ಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ. ಎಲೆಕ್ಷನ್​ ಕೋಡ್ ಆಫ್ ಕಂಡೆಕ್ಟ್  ಎಂಬುದು ಮೋದಿ ಕೋಡ್ ಆಪ್ ಕಂಡೆಕ್ಟ್ ಆಗಿ ಬದಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗದ ತೀರ್ಮಾನವನ್ನು ಟೀಕಿಸಿದೆ.

First published:May 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ