Narendra Modi| ಒಂದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಶೇ.66 ರಿಂದ ಶೇ24ಕ್ಕೆ ಇಳಿಕೆ; ಇಂಡಿಯಾ ಟುಡೆ ಸಮೀಕ್ಷೆ

ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ.27 ರಷ್ಟು ಜನರು ಚುನಾವಣಾ ರ್ಯಾಲಿಗಳು ಸೇರಿದಂತೆ ದೊಡ್ಡ ಮಟ್ಟದ ರಾಜಕೀಯ ಕೂಟಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ.

ನರೇಂದ್ರ ಮೋದಿ.

ನರೇಂದ್ರ ಮೋದಿ.

 • Share this:
  ಸೋಮವಾರ ಬಿಡುಗಡೆಯಾದ ಇಂಡಿಯಾ ಟುಡೇಯ "ಮೂಡ್ ಆಫ್ ದಿ ನೇಷನ್" ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ರೇಟಿಂಗ್ ಒಂದು ವರ್ಷದಲ್ಲಿ ಶೇ.66 ರಿಂದ ಶೇ.24 ಕ್ಕೆ ಇಳಿದಿದೆ ಎಂದು ತಿಳಿದುಬಂದಿದೆ. ಕೋವಿಡ್ -19 ಬಿಕ್ಕಟ್ಟಿನ ನಿರ್ವಹಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ ಎಂದು ಸಮೀಕ್ಷೆಯಲ್ಲಿ ಜನ ಪ್ರತಿಕ್ರಿಯೆ ನೀಡಿರುವುದು ನರೇಂದ್ರ ಮೋದಿ ಅವರ ಜನಪ್ರಿಯತೆಯ ರೇಟಿಂಗ್ ಕಡಿಮೆಯಾಗಲು ಪ್ರಾಥಮಿಕ ಕಾರಣವಾಗಿದೆ ಎಂದು ಹೇಳಲಾಗಿದೆ.

  2021 ರ ಜನವರಿಯಲ್ಲಿ ಶೇ.73 ರಷ್ಟು ಜನ ಕೊರೋನಾ ಮೊದಲ ಅಲೆಯನ್ನು ನಿರ್ವಹಿಸಿದ್ದಕ್ಕಾಗಿ ಪ್ರಧಾನಿ ಮೋದಿಯನ್ನು ಪ್ರಶಂಸಿಸಿದ್ದರು. ಆದರೆ, ಎರಡನೇ ಅಲೆಯ ಸಂದರ್ಭದಲ್ಲಿ ದೇಶ ಅನುಭವಿಸಿದ ಅಡ್ಡಿ ಆತಂಕ ಮತ್ತು ಅಪಾರ ಸಂಖ್ಯೆಯ ಸಾವು-ನೋವುಗಳು ಅವರ ಜನಪ್ರಿಯತೆ ಪ್ರಮಾಣ ಶೇ.49ರಷ್ಟು ಕುಸಿಯಲು ಕಾರಣವಾಗಿದೆ ಎಂದು ಇಂಡಿಯಾ ಟುಡೇ ವರದಿ ಹೇಳಿದೆ.  ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 27 ರಷ್ಟು ಜನರು ಚುನಾವಣಾ ರ್ಯಾಲಿಗಳು ಸೇರಿದಂತೆ ದೊಡ್ಡ ಮಟ್ಟದ ರಾಜಕೀಯ ಕೂಟಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ. ಸುಮಾರು ಶೇ.26 ರಷ್ಟು ಜನರು ಕೋವಿಡ್ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ನಡವಳಿಕೆಯನ್ನು ನಿರ್ಲಕ್ಷಿಸುವುದರಿಂದಲೇ ಸೋಂಕು ದೇಶದಲ್ಲಿ ಅಧಿಕವಾಗಿದೆ ಎಂದ ಆರೋಪಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

  ಶೇ. 71 ರಷ್ಟು ಜನ, ದೇಶದಲ್ಲಿ ಕೋವಿಡ್​ 19 ಸೋಂಕಿಗೆ ತುತ್ತಾದವರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಸಂಖ್ಯೆಗಿಂತ ಅಧಿಕವಾಗಿದೆ. ಆದರೆ, ಸರ್ಕಾರ ವಾಸ್ತವವಾದ ಸಂಖ್ಯೆಯನ್ನು ಈವರೆಗೆ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದ್ದರೆ, ಶೇ. 44 ರಷ್ಟು ಜನ ಕೊರೋನಾ ಸೋಂಕು ವಿರ್ವಹಣೆಯಲ್ಲಿ ಕೇಂದ್ರ ಸರ್ಕಾರದಷ್ಟೇ ರಾಜ್ಯ ಸರ್ಕಾರಗಳ ಪಾಲು ಅಧಿಕವಾಗಿದ್ದು, ಅವರೂ ಸಹ ಉತ್ತಮವಾಗಿ ಕೆಲಸ ನಿರ್ವಹಿಸಬೇಕು ಎಂದು ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ, ಶೇ.29% ರಷ್ಟು ಜನರು ಬೆಲೆ ಏರಿಕೆ ಮತ್ತು ಹಣದುಬ್ಬರವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸರ್ಕಾರದ ದೊಡ್ಡ ವೈಫಲ್ಯವೆಂದು ಭಾವಿಸಿದ್ದಾರೆ. ಸುಮಾರು ಶೇ.23 ರಷ್ಟು ಜನರು ನಿರುದ್ಯೋಗ ದರವು ಮೋದಿ ಸರ್ಕಾರದ ಎರಡನೇ ಅತಿದೊಡ್ಡ ವೈಫಲ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮೋದಿ ನಂತರ ಎರಡನೇ ರಾಜಕಾರಣಿಯಾಗಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಂಡವರು ಶೇ.11 ರಷ್ಟು ರೇಟಿಂಗ್‌ನೊಂದಿಗೆ ಮುಂದಿನ ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೇ.10 ರಷ್ಟು ರೇಟಿಂಗ್ ಹೊಂದಿದ್ದು ಪ್ರಧಾನಿ ಹುದ್ದೆಗೆ ಮೂರನೇ ಅತ್ಯಂತ ಜನಪ್ರಿಯ ನಾಯಕ ಎಂದೆನಿಸಿಕೊಂಡಿದ್ದಾರೆ.

  ಇದನ್ನೂ ಓದಿ: Afghanistan Crisis| ಸೈನಿಕರು, ರೈತರು ಸೇರಿದಂತೆ ಯಾರೊಂದಿಗೂ ದ್ವೇಷವಿಲ್ಲ, ಎಲ್ಲರನ್ನೂ ಕ್ಷಮಿಸಲಾಗಿದೆ; ತಾಲಿಬಾನ್ ಘೋಷಣೆ

  ಇಂಡಿಯಾ ಟುಡೇ ಸಮೀಕ್ಷೆಯು ಕಂಡುಕೊಂಡ ಪ್ರಕಾರ, ರಾಹುಲ್ ಗಾಂಧಿಯವರು 2020 ರಲ್ಲಿ ಶೇ.8 ರಿಂದ ಜನಪ್ರಿಯತೆಯ ರೇಟಿಂಗ್‌ಗಳಲ್ಲಿ ಏರಿಕೆ ಕಂಡಿದ್ದಾರೆ. ಆದಿತ್ಯನಾಥ್ 2019 ರಲ್ಲಿ ಶೇ.3 ರಷ್ಟಿದ್ದ ತಮ್ಮ ಜನಪ್ರಿಯತೆಯನ್ನು ಶೇ.11 ಕ್ಕೆ ಹೆಚ್ಚಿಸಿಕೊಂಡಿದ್ದಾರೆ.

  ಇದನ್ನೂ ಓದಿ: ವಿಶ್ವದ ಅತ್ಯಂತ ವಿಶೇಷ ಸೇತುವೆಗಳಿವು: ಒಂದಕ್ಕಿಂತ ಒಂದು ವಿಭಿನ್ನ... ನೀವು ನೋಡಲೇಬೇಕು!

  ಆದಾಗ್ಯೂ, ಆದಿತ್ಯನಾಥ್ 11 ರಾಜ್ಯಗಳ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಉತ್ತರಪ್ರದೇಶದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಿರೀಕ್ಷೆಯಿರುವುದರಿಂದ ಈ ಸಂಶೋಧನೆಯು ಮಹತ್ವ ಪಡೆದುಕೊಂಡಿದೆ ಎನ್ನಲಾಗಿದೆ.

  ಈ ವರ್ಷ, ಸಮೀಕ್ಷೆಯಲ್ಲಿ ಜುಲೈ 10 ಮತ್ತು ಜುಲೈ 22 ರ ನಡುವೆ 14,599 ಮಂದಿ ಭಾಗವಹಿಸಿದ್ದರು. ಪ್ರತಿಕ್ರಿಯಿಸಿದವರಲ್ಲಿ ಶೇ.71ರಷ್ಟು ಜನರು ಗ್ರಾಮೀಣ ಪ್ರದೇಶದಿಂದ ಮತ್ತು ಶೇ.29 ರಷ್ಟು ಜನ ನಗರ ವಲಯದಿಂದ ಬಂದವರು. ಈ ವಿಶ್ಲೇಷಣೆಯು 19 ರಾಜ್ಯಗಳು, 115 ಸಂಸತ್ ಮತ್ತು 230 ವಿಧಾನಸಭಾ ಸ್ಥಾನಗಳ ನಿವಾಸಿಗಳನ್ನು ಒಳಗೊಂಡಿದೆ.
  Published by:MAshok Kumar
  First published: