Howdy Modi: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನ ತೋರಿದ ಭಾರತ ಪ್ರಧಾನಿ

ವಿಶ್ವದ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ಹಾಗೂ ಅಣು ಶಕ್ತಿಯ ದೇಶ ಒಂದಾಗಿರುವುದು ಎರಡೂ ದೇಶದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ಎರಡೂ ದೇಶದ ಜನರ ಶ್ರೇಯೋಭಿವೃದ್ಧಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

news18
Updated:September 23, 2019, 9:14 AM IST
Howdy Modi: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನ ತೋರಿದ ಭಾರತ ಪ್ರಧಾನಿ
ಪ್ರಧಾನಿ ಮೋದಿ
  • News18
  • Last Updated: September 23, 2019, 9:14 AM IST
  • Share this:
ನವದೆಹಲಿ(ಸೆ.23): ಅಮೆರಿಕದ ಹ್ಯೂಸ್ಟನ್‌ ಸ್ಟೇಡಿಯಂನಲ್ಲಿ ನಡೆದ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಪ್ರಧಾನಿ ಕನ್ನಡ ಸೇರಿದಂತೆ ಹತ್ತು ಭಾಷೆ ಮಾತಾಡುವ ಮೂಲಕ ಇಡೀ ಭಾರತೀಯರ ಗಮನ ಸೆಳೆದಿದ್ದಾರೆ. ಇಲ್ಲಿ ಸೇರಿದ್ದ 50 ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, "ಹೌಡಿ ಮೋದಿ" ಅಂತಾ ಕೇಳಿದವರಿಗೆ ಚೆನ್ನಾಗಿದ್ದೇನೆ ಎಂದು ಉತ್ತರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ಕನ್ನಡ ಬಳಕೆ ಮಾಡಿದ್ದು ಗಮನಾರ್ಹ. ಒಂದು ವಿಶ್ವಮಟ್ಟದ ವೇದಿಕೆ ಮೇಲೆ ಮೊದಲ ಬಾರಿಗೆ ಪ್ರಧಾನಿ ಮೋದಿ, ಕನ್ನದ ಜೊತೆಗೆ ಅನೇಕ ಪ್ರಾದೇಶಿಕ ಭಾಷೆಗಳನ್ನ ಮಾತಾಡಿದರು. ಹೌಡಿ ಮೋದಿ ಎಂದು ಕೇಳುತ್ತಿದ್ದಾರೆ. ಹೀಗೆಂದರೆ "ಹೌ ಡೂ ಯು ಡು" ಮೋದಿ ಎಂದರ್ಥ. ಅಮೆರಿಕಾದಲ್ಲಿ ಹೇಗಿದ್ದೀರಿ ಎಂದು ಕೇಳಲು ಹೌಡಿ ಅನ್ನೋ ಪದ ಬಳಸುತ್ತಾರೆ ಎಂದರು.

ಇನ್ನು, ಹೌಡಿ ಮೋದಿ ಎಂದ ಕನ್ನಡಿಗರಿಗೆ ಕನ್ನಡದಲ್ಲೇ ಚೆನ್ನಾಗಿದ್ದೀನಿ ಎಂದು ಉತ್ತರಿಸಿದರು. ಹಾಗೆಯೇ ತಮಿಳು, ತೆಲುಗು, ಗುಜರಾತಿ, ಹಿಂದಿ, ಒಡಿಶಾ ಸೇರಿದಂತೆ ಸುಮಾರು 10 ಭಾಷೆಗಳಲ್ಲಿ ನಮ್ಮ ದೇಶದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು, ಜನರ ಶ್ರೇಯೋಭಿವೃದ್ಧಿಗೆ ಪೂರಕವಾಗಲಿದೆ; ನರೇಂದ್ರ ಮೋದಿ

ವಿಶ್ವದ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ಹಾಗೂ ಅಣು ಶಕ್ತಿಯ ದೇಶ ಒಂದಾಗಿರುವುದು ಎರಡೂ ದೇಶದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ಎರಡೂ ದೇಶದ ಜನರ ಶ್ರೇಯೋಭಿವೃದ್ಧಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಇದೆ ವೇಳೆ "ಅಬ್​ ಕಿ ಬಾರ್​ ಟ್ರಂಪ್​ ಸರ್ಕಾರ್​" ಎಂದು ಘೋಷಣೆ ಕೂಗುವ ಮೂಲಕ ಈ ಬಾರಿಯೂ ಅಮೆರಿಕದಲ್ಲಿ ಟ್ರಂಪ್ ಅವರೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ 7 ದಿನಗಳ ಪ್ರವಾಸಕ್ಕಾಗಿ ಶನಿವಾರ ಅಮೆರಿಕಕ್ಕೆ ತೆರಳಿದ್ದಾರೆ. ನಿನ್ನೆ ಹೂಸ್ಟನ್ ನಗರದ ಎನ್​ಆರ್​ಜಿ ಸ್ಟೇಡಿಯಂನಲ್ಲಿ ನಡೆದ ಬಹು ನಿರೀಕ್ಷಿತ “ಹೌಡಿ ಮೋದಿ” ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸುಮಾರು 50 ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಮೋದಿಯವರನ್ನು ಹರ್ಷೋದ್ಘಾರದೊಂದಿಗೆ ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
----------------
First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ