ಆಗಸ್ಟ್‌ 10 ರಂದು ಅಂಡಮಾನ್‌ ನಿಕೋಬಾರ್‌ನಲ್ಲಿ ಜಲಂತರ್ಗಾಮಿ ಕೇಬಲ್‌ ಉದ್ಘಾಟಿಸಲಿರುವ ನರೇಂದ್ರ ಮೋದಿ

ಅಂಡಮಾನ್‌ನಿಕೋಬಾರ್‌ ನಲ್ಲಿ ನಿರ್ಮಾಣವಾಗಲಿರುವ ಜಲಾಂತರ್ಗಾಮಿ ಕೇಬಲ್ ಅಂಡಮಾನ್‌ ನಿಕೋಬಾರ್‌ ರಾಜಧಾನಿ ಪೋರ್ಟ್ ಬ್ಲೇರ್ ಪ್ರದೇಶವನ್ನು ಮತ್ತೊಂದು ಬದಿಯಲ್ಲಿರುವ ಸ್ವರಾಜ್ ದ್ವೀಪಕ್ಕೆ ಸಂಪರ್ಕಿಸುತ್ತದೆ" ಎಂದು ತಿಳಿಸಲಾಗಿದೆ.

ನರೇಂದ್ರ ಮೋದಿ.

ನರೇಂದ್ರ ಮೋದಿ.

  • Share this:
ದೆಹಲಿ (ಆಗಸ್ಟ್‌ 07); ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 10 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಜಲಾಂತರ್ಗಾಮಿ ಕೇಬಲ್ ಮತ್ತು ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಸಚಿವಾಲಯ ಇಂದು ಪ್ರಕಟಣೆ ಹೊರಡಿಸಿದೆ.

ದ್ವೀಪ ರಾಜ್ಯವಾದ ಅಂಡಮಾನ್‌ ಮತ್ತು ನಿಕೋಬಾರ್‌ ಭಾರತದ ಭಾಗವಾಗಿದ್ದರೂ ಸಹ ಚದುರಿರುವ ಈ ದ್ವೀಪಗಳು ತಾಂತ್ರಿಕವಾಗಿ ಸಾಕಷ್ಟು ಹಿಂದುಳಿದಿವೆ. ಹೀಗಾಗಿ ಈ ಭಾಗದ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಕೇಂದ್ರ ಸರ್ಕಾರ ಜಲಾಂತರ್ಗಾಮಿ ಕೇಬಲ್‌ಗಳು ಮತ್ತು ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕ ನಿರ್ಮಾಣಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.ಈ ಕುರಿತು ಪ್ರಕಟಣೆ ಹೊರಡಿಸುವ ಮೂಲಕ ಪ್ರಧಾನಿ ಕಾರ್ಯಕ್ರಮವನ್ನು ಖಚಿತಪಡಿಸಿರುವ ಪ್ರಧಾನಿ ಸಚಿವಾಲಯ, "ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 10, 2020 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಜಲಾಂತರ್ಗಾಮಿ ಕೇಬಲ್ ಮತ್ತು ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ : ಸಂತಸ ಎಂಬುದು ಮಂದಿರ-ಮಸೀದಿಯಲ್ಲಿಲ್ಲ, ಏಕತೆ-ಒಗ್ಗಟ್ಟಿನಲ್ಲಿದೆ; ನಟಿ ರಮ್ಯಾ ವಿವಾದಾಸ್ಪದ ಹೇಳಿಕೆ

ಇಲ್ಲಿ ನಿರ್ಮಾಣವಾಗಲಿರುವ ಜಲಾಂತರ್ಗಾಮಿ ಕೇಬಲ್ ಅಂಡಮಾನ್‌ ನಿಕೋಬಾರ್‌ ರಾಜಧಾನಿ ಪೋರ್ಟ್ ಬ್ಲೇರ್ ಪ್ರದೇಶವನ್ನು ಮತ್ತೊಂದು ಬದಿಯಲ್ಲಿರುವ ಸ್ವರಾಜ್ ದ್ವೀಪಕ್ಕೆ ಸಂಪರ್ಕಿಸುತ್ತದೆ" ಎಂದು ತಿಳಿಸಲಾಗಿದೆ.
Published by:MAshok Kumar
First published: