Modi: ಪ್ರಧಾನಿ ಕಚೇರಿ ಆಕ್ಷೇಪದ ಬಳಿಕ ರಾತ್ರೋ ರಾತ್ರಿ ಕಣ್ಮರೆಯಾಯಿತು ಪುಣೆಯಲ್ಲಿನ ಮೋದಿ ಪ್ರತಿಮೆ

ಈ ವಿಷಯ ಪ್ರಧಾನ ಮಂತ್ರಿ ಕಚೇರಿ ಗಮನಕ್ಕೆ ಬರುತ್ತಿದ್ದಂತೆ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನಲೆ ಕಳೆದ ರಾತ್ರಿಯೇ ವಿಗ್ರಹವನ್ನು ತೆರೆವು ಮಾಡಲಾಗಿದೆ

ಮೋದಿ ಮಂದಿರ

ಮೋದಿ ಮಂದಿರ

 • Share this:
  ಪುಣೆ  (ಆ. 19): ವ್ಯಕ್ತಿಗಳನ್ನು ಆದರ್ಶವಾಗಿ ಪರಿಗಣಿಸಿ ಆರಾಧಿಸುವಂತೆ ನಂಬಿಕೆ ಭಾರತೀಯರಲ್ಲಿ ಹೊಸದಲ್ಲ. ಅನೇಕ ಸಿನಿಮಾ ನಟ-ನಟಿಯರಿಗೆ ರಾಜಕಾರಣಿಗಳಿಗೆ ಗುಡಿ ಕಟ್ಟಿ ಪೂಜಿಸುತ್ತಾರೆ. ಮಹಾರಾಷ್ಟ್ರದ ಪುಣೆಯಲ್ಲಿಯೂ ಕೂಡ ಬಿಜೆಪಿ ಕಾರ್ಯಕರ್ತರೊಬ್ಬರು ಇದೇ ರೀತಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗಾಗಿ ಗುಡಿ ಕಟ್ಟಿ, ಅವರ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಮುಂದಾಗಿದ್ದರು. ಈ ಮೂಲಕ ತಮ್ಮ ಭಕ್ತಿ ಪರಾಕಷ್ಟೆ ಮೆರೆಯಲು ಮುಂದಾಗಿದ್ದರು. ಆದರೆ, ಅವರ ಈ ನಡೆ  ಎನ್​ಸಿಪಿ ಕೆಂಗಣ್ಣಿಗೆ ಗುರಿಯಾದ ಹಿನ್ನಲೆ ರಾತ್ರೋ ರಾತ್ರಿ ಈಗ ಗುಡಿ ಕಣ್ಮರೆಯಾಗಿದೆ.

  ಪುಣೆಯ 37 ವರ್ಷದ ಮಯೂರ್​ ಮುಂಡಾ ಎನ್ನುವ ರಿಯಲ್​ ಎಸ್ಟೇಟ್​ ಉದ್ಯಮಿಯೂ ಆಗಿರುವ ಬಿಜೆಪಿ ಕಾರ್ಯಕರ್ತರೊಬ್ಬರು ಈ ಔದ್​ ಏರಿಯದ ರಸ್ತೆಯಲ್ಲಿ ಈ ಗುಡಿ ನಿರ್ಮಾಣ ಮಾಡಿ ನರೇಂದ್ರ ಮೋದಿ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಮುಂದಾಗಿದ್ದರು. ಆರು ತಿಂಗಳ ಹಿಂದೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದ ಈ ಮಂದಿರವನ್ನು ಸ್ವಾತಂತ್ರ್ಯ ದಿನಾಚರಣೆಯಂದು ಉದ್ಘಾಟಿಸಲಾಗಿತ್ತು. 1. 6 ಲಕ್ಷ ರೂ ವೆಚ್ಚದಲ್ಲಿ ಈ ಮಂದಿರ ನಿರ್ಮಾಣ ಮಾಡಿದ್ದು, ರೆಡ್​ ಮಾರ್ಬಲ್​ನಲ್ಲಿ ಪ್ರಧಾನಿ ಪ್ರತಿಮೆ ನಿರ್ಮಿಸಲಾಗಿತ್ತು. ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಆರ್ಟಿಕಲ್​ 370 ರದ್ದು, ತ್ರಿವಳಿ ತಲಾಕ್​ ಸೇರಿದಂತೆ ಸೇರಿದಂತೆ ಹಲವು ದಿಟ್ಟ ನಿರ್ಧಾರ ಕೈ ಗೊಂಡಿದ್ದಾರೆ. ಈ ಹಿನ್ನಲೆ ಈ ಮಂದಿರವನ್ನು ನಿರ್ಮಿಸಲಾಗಿದೆ ಎಂದಿದ್ದರು.

  ಈ ದೇವಾಲಯ ನಿರ್ಮಾಣ ಕುರಿತು ಸ್ಥಳೀಯ ವರದಿಗಾರರೊಂದಿಗೆ ಮಾತನಾಡಿರುವ ಬಿಜೆಪಿ ಕಾರ್ಯಕರ್ತ, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದ ವ್ಯಕ್ತಿಗೆ ಒಂದು ದೇವಸ್ಥಾನ ಇರಬೇಕು ಎಂದು ನನಗೆ ಅನಿಸಿತು. ಹಾಗಾಗಿ ಈ ಮಂದಿರ ನಿರ್ಮಿಸಲು ಮುಂದಾದೆ ಎಂದಿದ್ದಾರೆ.

  ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್​, ಎನ್​ಸಿಪಿ ಬಿಜೆಪಿ ವಿರುದ್ಧ ಹರಿಹಾಯ್ದವು. ಬಿಜೆಪಿ ಒಂದು ಕಡೆ ರಾಷ್ಟ್ರ ನಾಯಕರ ಹೆಸರುಗಳನ್ನು ತೆಗೆದು ಹಾಕುತ್ತಾ. ಮತ್ತೊಂದು ಕಡೆ ತಮ್ಮದೇ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಟೀಕೆ ಮಾಡಿದ್ದವು. ಅಲ್ಲದೇ, ನಿಮ್ಮ ಪಕ್ಷದ ನಾಯಕರಿಗೆ ನೀವು ನಿಷ್ಠೆಯಿಂದ ಇರಿ. ಇದಕ್ಕೆ ನಮ್ಮ ಅಡ್ಡಿ ಇಲ್ಲ. ಆದರೆ, ಈ ರೀತಿ ಮಂದಿರವನ್ನು ಪುಣೆಯಲ್ಲಿ ನಿರ್ಮಾಣ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಎನ್​ಸಿಪಿ ನಾಯಕರು ಹರಿಹಾಯ್ದಿದ್ದರು.

  ಇದನ್ನು ಓದಿ: ಧಾರ್ಮಿಕ ಹಿನ್ನಲೆಯಿಂದ ಬಂದ ನನಗೆ ಮುಜರಾಯಿ ಇಲಾಖೆ ಸೂಕ್ತ ಖಾತೆ: ಶಶಿಕಲಾ ಜೊಲ್ಲೆ

  ಈ ವಿಷಯ ಪ್ರಧಾನ ಮಂತ್ರಿ ಕಚೇರಿ ಗಮನಕ್ಕೆ ಬರುತ್ತಿದ್ದಂತೆ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನಲೆ ಕಳೆದ ರಾತ್ರಿಯೇ ವಿಗ್ರಹವನ್ನು ತೆರೆವು ಮಾಡಿ ಸ್ಥಳೀಯ ಕೌನ್ಸಿಲರ್​ ಮನೆಯಲ್ಲಿ ಇರಿಸಲಾಗಿದೆ. ಗುರುವಾರ ಈ ದಾರಿಯಲ್ಲಿ ಹಾಗು ಹೋಗುವವರಿಗೆ ವಿಗ್ರಹ ಕಣ್ಮರೆಯಾಗಿರುವುದು ಅಚ್ಚರಿ ಮೂಡಿಸಿದೆ.

  ಮುಂದಿನ ವರ್ಷ ಪುಣೆಯಲ್ಲಿ ಮುನ್ಸಿಪಲ್​ ಚುನಾವಣೆ ನಡೆಯಲಿದೆ. ಈ ಚುನಾವಣೆ ಗಮನದಲ್ಲಿಟ್ಟುಕೊಂಡು ಎನ್​ಸಿಪಿ ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಕೆ ಮಾಡಲು ಮುಂದಾಗಿತ್ತು. ಈ ಪ್ರತಿಮೆ ರಾಜಕೀಯ ಆರೋಪ -ಪ್ರತ್ಯಾರೋಪಕ್ಕೆ ಗುರಿಯಾಗುವ ಮೊದಲೇ ಈಗ ಪ್ರತಿಮೆಯನ್ನು ತೆರವುಗೊಳಿಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: