PM Modi Speech; ರೈತರ ಖಾತೆಗೆ ಹಣ, ನವೆಂಬರ್‌ ವರೆಗೆ ಆಹಾರ ಧಾನ್ಯ ಉಚಿತ ವಿತರಣೆ; ನರೇಂದ್ರ ಮೋದಿ

ಲಾಕ್‌ಡೌನ್ ಅವಧಿಯಲ್ಲಿ ಬಡ ಹೆಣ್ಣು ಮಕ್ಕಳ ಜನಧನ್ ಖಾತೆಗೆ ಸಹಾಯ ಧನವನ್ನು ರವಾನಿಸಲಾಗಿದೆ. ದೇಶದ 9 ಕೋಟಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಅಲ್ಲದೆ, ದೇಶದ 80 ಕೋಟಿ ಜನರಿಗೆ ಪ್ರತಿನಿತ್ಯ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.


Updated:June 30, 2020, 4:35 PM IST
PM Modi Speech; ರೈತರ ಖಾತೆಗೆ ಹಣ, ನವೆಂಬರ್‌ ವರೆಗೆ ಆಹಾರ ಧಾನ್ಯ ಉಚಿತ ವಿತರಣೆ; ನರೇಂದ್ರ ಮೋದಿ
ಪ್ರಧಾನಿ ಮೋದಿ
  • Share this:
ನವ ದೆಹಲಿ (ಜೂನ್‌ 30); ಕೊರೋನಾ ಸಂಕಷ್ಟದ ಕಾಲದಲ್ಲಿ ಕೇಂದ್ರ ಸರ್ಕಾರ ಬಡ ಜನರ ಪರವಾಗಿ ನಿಂತಿದೆ. ಬಡವರ ಜನ್‌ಧನ್ ಹಾಗೂ ರೈತರ ಬ್ಯಾಂ‌ಕ್‌ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗಿದೆ. ಅಲ್ಲದೆ, ಕಳೆದ ಮೂರು ತಿಂಗಳಿನಿಂದ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದ್ದು, ನವೆಂಬರ್‌ ತಿಂಗಳವರೆಗೆ ಉಚಿತ ಆಹಾರ ಧಾನ್ಯಗಳ ವಿತರಣೆ ಮುಂದುವರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಲಾಕ್‌ಡೌನ್ ಸಂದರ್ಭವನ್ನು ಕೇಂದ್ರ ಸರ್ಕಾರ ನಿಭಾಯಿಸಿರುವ ರೀತಿಯನ್ನು ಜನರ ಎದುರು ತೆರೆದಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ, "ಕಳೆದ ಮೂರು ತಿಂಗಳನ್ನು ಸರ್ಕಾರ ಸರಿಯಾದ ದಾರಿಯಲ್ಲೇ ನಿಭಾಯಿಸಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕೊರೋನಾ ಸಾವಿನ ಸಂಖ್ಯೆ ಕಡಿಮೆ. ಆದರೆ, ಈ ಪರಿಸ್ಥಿತಿಯಲ್ಲಿ ಬಡ ಮತ್ತು ರೈತರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂಬುದು ಸತ್ಯ.

ಇದೇ ಕಾರಣಕ್ಕೆ 2.25 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಬಡ ಹೆಣ್ಣು ಮಕ್ಕಳ ಜನಧನ್ ಖಾತೆಗೆ ಸಹಾಯ ಧನವನ್ನು ರವಾನಿಸಲಾಗಿದೆ. ದೇಶದ 9 ಕೋಟಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಅಲ್ಲದೆ, ದೇಶದ 80 ಕೋಟಿ ಜನರಿಗೆ ಪ್ರತಿನಿತ್ಯ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ" ಎಂದು ಮೋದಿ ತಿಳಿಸಿದ್ದಾರೆ.

"ಒಂದು ದೇಶ ಒಂದು ಪಡಿತರ ಚೀಟಿ ಎಂಬ ಕಲ್ಪನೆಗೆ ಇದು ಸಕಾಲ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಬಡವರ್ಗದ ಜನ ಸಂಕಷ್ಟಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಕಳೆದ ಮೂರು ತಿಂಗಳಿನಿಂದ ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.

ಅಕ್ಕಿ ಜೊತೆಗೆ ಬೇಳೆಕಾಳುಗಳನ್ನೂ ನೀಡಲಾಗಿದೆ. ಅಲ್ಲದೆ, ಗರೀಬಿ ಕಲ್ಯಾಣ್ ಯೋಜನೆ ಮೂಲಕ ಉಚಿತ ಪಡಿತರ ನೀಡುವ ಯೋಜನೆಯನ್ನು ಮುಂದಿನ ನವೆಂಬರ್‌ವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಪ್ರತಿ ಇಂಗಳು 5 ಕೆ.ಜಿ. ಅಕ್ಕಿ, 1 ಕೆ.ಜಿ. ಬೇಳೆ ನೀಡಲಾಗುವುದು. ಹೀಗಾಗಿ ಮುಂದಿನ ದಿನಗಳಲ್ಲೂ ಸಹ ಬಡಜನ ಆಹಾರಕ್ಕಾಗಿ ಪರಿತಪಿಸುವ ಸ್ಥಿತಿ ಉದ್ಭವಿಸುವುದಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದಾರೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading