• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Moid@8: ಈ 8 ವರ್ಷಗಳಲ್ಲಿ ದೇಶ ತಲೆತಗ್ಗಿಸುವ ಒಂದೇ ಒಂದು ಕೆಲಸ ನಾನು ಮಾಡಿಲ್ಲ -ಪ್ರಧಾನಿ ಮೋದಿ ಸ್ಪಷ್ಟನೆ

Moid@8: ಈ 8 ವರ್ಷಗಳಲ್ಲಿ ದೇಶ ತಲೆತಗ್ಗಿಸುವ ಒಂದೇ ಒಂದು ಕೆಲಸ ನಾನು ಮಾಡಿಲ್ಲ -ಪ್ರಧಾನಿ ಮೋದಿ ಸ್ಪಷ್ಟನೆ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ತಮ್ಮ ಆಡಳಿತದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರತಿಕ್ರಿಯಿಸಿದ್ದಾರೆ. “ದೇಶದ ಯಾವುದೇ ಪ್ರಜೆ ತಲೆತಗ್ಗಿಸುವಂತಹ ಕೆಲಸವನ್ನು ನಾನು ವೈಯಕ್ತಿಕವಾಗಿ ಮಾಡಿಲ್ಲ ಮತ್ತು ಇತರರಿಗೆ ಮಾಡಲು ಅವಕಾಶವನ್ನೂ ಕೊಟ್ಟಿಲ್ಲ” ಅಂತ ಮೋದಿ ಅವರು ವಿಶ್ವಾಸದ ಮಾತನ್ನಾಡಿದ್ದಾರೆ.

  • Share this:



ಗುಜರಾತ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ (Central Government) ಅಸ್ವಿತ್ವಕ್ಕೆ ಬಂದು ಇದೇ ಮೇ 26ರಂದು 8 ವರ್ಷಗಳು (8 Years) ಪೂರ್ಣವಾಗಿವೆ. ಈ ಹಿನ್ನೆಲೆಯಲ್ಲಿ ತಮ್ಮ ಆಡಳಿತದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರತಿಕ್ರಿಯಿಸಿದ್ದಾರೆ. ಗುಜರಾತ್‌ (Gujarat) ರಾಜ್ಯದ ರಾಜ್‌ಕೋಟ್‌ ಜಿಲ್ಲೆಯ ಅತ್ಕೋಟ್‌ ನಗರದಲ್ಲಿ ನಿನ್ನೆ 200 ಹಾಸಿಗೆಯ (200 Beds) ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು (Multi Specialty Hospital) ಉದ್ಘಾಟಿಸಿ ಮಾತನಾಡಿದ ಅವರು, “ನನ್ನ ಆಡಳಿತದ ಈ ಎಂಟು ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಜನರು ನಾಚಿಕೆಯಿಂದ ತಲೆ ತಗ್ಗಿಸುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ” ಅಂತ ಹೇಳಿದ್ದಾರೆ. “ದೇಶದ ಯಾವುದೇ ಪ್ರಜೆ ತಲೆತಗ್ಗಿಸುವಂತಹ ಕೆಲಸವನ್ನು ನಾನು ವೈಯಕ್ತಿಕವಾಗಿ ಮಾಡಿಲ್ಲ ಮತ್ತು ಇತರರಿಗೆ ಮಾಡಲು ಅವಕಾಶವನ್ನೂ ಕೊಟ್ಟಿಲ್ಲ” ಅಂತ ಮೋದಿ ಅವರು ವಿಶ್ವಾಸದ ಮಾತನ್ನಾಡಿದ್ದಾರೆ.


“8 ವರ್ಷಗಳಲ್ಲಿ ಮಹಾತ್ಮರ ಕನಸು ನನಸು ಮಾಡಲು ಯತ್ನ”


"ಕಳೆದ ಎಂಟು ವರ್ಷಗಳಲ್ಲಿ, ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಕನಸು ಕಂಡಂತಹ ಭಾರತವನ್ನು ನಿರ್ಮಿಸಲು ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ದಲಿತರು, ಮಹಿಳೆಯರ ಅಭಿವೃದ್ಧಿಗೆ ಕ್ರಮ


ಮಹಾತ್ಮ ಗಾಂಧಿಯವರು ಬಡವರು, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರು ಸಬಲೀಕರಣಗೊಳ್ಳುವ ಭಾರತವನ್ನು ಬಯಸಿದ್ದರು. ಸ್ವಚ್ಛ ಮತ್ತು ಸ್ವಸ್ಥ ಭಾರತ ಹಾಗೂ ಸ್ವದೇಶಿ ಆರ್ಥಿಕ ವ್ಯವಸ್ಥೆಯ ಕನಸನ್ನು ಅವರು ಕಂಡಿದ್ದರು. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಈ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುತ್ತಿದೆ’ ಎಂದು ನರೇಂದ್ರ ಮೋದಿ ಹೇಳಿದ್ದಾರೆ.


ಇದನ್ನೂ ಓದಿ: Modi@8: ಈ 8 ವರ್ಷಗಳಲ್ಲಿ ಜಾರಿಯಾದ ಮೋದಿ ಸರ್ಕಾರದ ಪ್ರಮುಖ 8 ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ


“ದೇಶದ ಬಡ ಜನರಿಗಾಗಿ ವಿವಿಧ ಯೋಜನೆಗಳನ್ನು ತಂದಿದ್ದೇವೆ”


ನಾವು ಬಡವರ ಪರವಾದ ವಿವಿಧ ಯೋಜನೆಗಳ ಮೂಲಕ ದೇಶದ ಬಡವರಿಗೆ ಸೇವೆ ಸಲ್ಲಿಸಿದ್ದೇವೆ ಮತ್ತು ಅವರ ಜೀವನವನ್ನು ಉತ್ತಮಗೊಳಿಸಲು ಪ್ರಯತ್ನಿಸಿದ್ದೇವೆ" ಎಂದು ಅವರು ಹೇಳಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಸರ್ಕಾರವು ಬಡವರಿಗೆ ಆಹಾರ ಧಾನ್ಯ ದಾಸ್ತಾನುಗಳನ್ನು ತೆರೆಯಿತು ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ಹಾಕಿದೆ ಅಂತ ಹೇಳಿದ್ದಾರೆ.


“ನಾನು ಬಡತನದಲ್ಲಿಯೇ ಹುಟ್ಟಿ, ಬೆಳೆದವನು”


ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಾಲ್ಯದ ದಿನಗಳು, ಮನೆಯಲ್ಲಿದ್ದ ಬಡತನದ ಪರಿಸ್ಥಿತಿಯನ್ನು ನೆನಪು ಮಾಡಿಕೊಂಡರು. ನಾನು ಬಡತನದ ಬಗ್ಗೆ ಪುಸ್ತಕಗಳನ್ನು ಓದಿ ಅಥವಾ ದೂರದರ್ಶನ ನೋಡಿ ತಿಳಿದುಕೊಂಡವನಲ್ಲ. ಬದಲಿಗೆ ಬಡತನದಲ್ಲಿಯೇ ಬೆಳೆದು ಬಂದವನು. ಹೀಗಾಗಿ ನನಗೆ ಬಡತನದ ಬಗ್ಗೆ ಅರಿವಿದೆ, ಬಡ ಜನರ ಕಷ್ಟ ಹೇಗಿರುತ್ತದೆ ಎನ್ನುವುದು ಗೊತ್ತಿದೆ ಅಂತ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.


ಮೋದಿ ಯೋಜನೆ ಬಗ್ಗೆ ತಿಳಿಸಲು ವಿಶೇಷ ಕಾರ್ಯಕ್ರಮ


ಇನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎಂಟನೇ ವರ್ಷಾಚರಣೆಯ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಸಚಿವರು ಮತ್ತು ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ಬೃಹತ್ ಸಾರ್ವಜನಿಕ ಪ್ರಚಾರ ಅಭಿಯಾನ ನಡೆಸಲಿದ್ದು,  ಬಡವರ ಕಲ್ಯಾಣ ಯೋಜನೆಗಳು ಮತ್ತು ಉತ್ತಮ ಆಡಳಿತದ ಆದ್ಯತೆಗಳನ್ನು ಜನತೆಗೆ ತಿಳಿಸಲಿದ್ದಾರೆ.


ಇದನ್ನೂ ಓದಿ: PM Narendra Modi: 3500 ರೂ. ಬೆಲೆಯ 50 ಕೆಜಿ ಯೂರಿಯಾ ಚೀಲಕ್ಕೆ ರೈತರು 300 ರೂ. ಪಾವತಿಸಿ ಸಾಕು: ಪ್ರಧಾನಿ ಮೋದಿ ಘೋಷಣೆ


ಮೇ 30ರಿಂದ ಜೂನ್ 14ರವರೆಗೆ ವಿಶೇಷ ಕಾರ್ಯಕ್ರಮ


"ಮೇ 30 ರಿಂದ ಜೂನ್ 14 ರವರೆಗೆ ಬಿಜೆಪಿ, ಸರ್ಕಾರದ ಕಾರ್ಯ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ ಯೋಜನೆಗಳ ಬಗ್ಗೆ ಜನತೆಗೆ ತಿಳಿಸಲು ಹದಿನೈದು ದಿನಗಳ ಕಾಲ ದೇಶಾದ್ಯಂತ ಸಾರ್ವಜನಿಕ ಸಭೆಗಳನ್ನು ಆಯೋಜಿಸುತ್ತಿದೆ. ಏಕೆಂದರೆ ಇದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಆದ್ಯತೆಯಾಗಿದೆ" ಎಂದು ಬಿಜೆಪಿ ಮೂಲಗಳು ತಿ್ಳಿಸಿವೆ.


Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು