“ಸದನದಲ್ಲಿ ಕೂರೋದಿಲ್ಲ, ಹೇಳಿದ್ದನ್ನು ಕೇಳುವುದೂ ಇಲ್ಲ” ರಾಹುಲ್ ವಿರುದ್ಧ ಪ್ರಧಾನಿ Modi ವ್ಯಂಗ್ಯ

ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಸದನದಲ್ಲಿ ಕುಳಿತುಕೊಳ್ಳದ, ಹೇಳಿದ್ದನ್ನು ಕೇಳಿಸಿಕೊಳ್ಳದ" ವ್ಯಕ್ತಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ರಾಹುಲ್ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.

ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ

ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ

 • Share this:
  ನವದೆಹಲಿ: ಸಂಸತ್ (Parliament) ಅಧಿವೇಶನದಲ್ಲಿ (Session) ಪ್ರಧಾನಿ (PM) ನರೇಂದ್ರ ಮೋದಿ (Narendra Modi) ಮತ್ತು ರಾಹುಲ್ ಗಾಂಧಿ (Rahul Gandhi) ನಡುವೆ ಮಾತಿನ ಚಕಮಕಿ ನಡೆದಿತ್ತು. ಹಲವು ವಿಚಾರಗಳ ಬಗ್ಗೆ ಪರಸ್ಪರ ಆರೋಪ ಮತ್ತು ಟೀಕೆಗಳು ಜೊರಾಗಿ ಕೇಳಿ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, “ರಾಹುಲ್ ಗಾಂಧಿ ಬಗ್ಗೆ ಮಾತಾಡುವುದಿಲ್ಲ, ಸದನದಲ್ಲಿ ಕೂರದ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಕಟುವಾಗಿ ಉತ್ತರಿಸಿದ್ದಾರೆ. “ಸಂಸತ್ತಿನಲ್ಲಿ ನಡೆದ ಚರ್ಚೆಯನ್ನು ಸ್ವಾಗತಿಸುತ್ತೇನೆ” ಎಂದು ಒತ್ತಿ ಹೇಳಿದ ಪ್ರಧಾನಿ ಮೋದಿ, “ನಾನು ಮತ್ತು ತನ್ನ ಸರ್ಕಾರ ಯಾರ ಮೇಲೂ ದಾಳಿ ಮಾಡುವುದಿಲ್ಲ ಮತ್ತು ನಾವು ಮಾತುಕತೆಯಲ್ಲಿ ನಂಬಿಕೆ ಇಟ್ಟವರು” ಎಂದು ಮೋದಿ ಹೇಳಿದರು.

   ರಾಹುಲ್ ಗಾಂಧಿ ವಿರುದ್ಧ ಮೋದಿ ಟೀಕೆ

  ಭಾರತ-ಚೀನಾ ಗಡಿ ವಿವಾದ ಮತ್ತು ಹೆಚ್ಚುತ್ತಿರುವ ನಿರುದ್ಯೋಗದಂತಹ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಸ್ಪಷ್ಟನೆ ನೀಡದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಈ ವಿಚಾರವಾಗಿ ಸುದ್ದಿಸಂಸ್ಥೆಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಸದನದಲ್ಲಿ ಕುಳಿತುಕೊಳ್ಳದ, ಹೇಳಿದ್ದನ್ನು ಕೇಳಿಸಿಕೊಳ್ಳದ" ವ್ಯಕ್ತಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ರಾಹುಲ್ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. ಸಂಸತ್ತಿನಲ್ಲಿ ಪ್ರತಿಪಕ್ಷಗಳು ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ವಿವಿಧ ಸಚಿವಾಲಯಗಳು ವಿವರವಾದ ಉತ್ತರಗಳನ್ನು ನೀಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

  “ಚರ್ಚೆಗೆ ನಮ್ಮ ಸರ್ಕಾರ ಸದಾ ಸಿದ್ಧ”

  ಸಂಸತ್ತಿನಲ್ಲಿ ಚರ್ಚೆಯನ್ನು ಸ್ವಾಗತಿಸುತ್ತೇನೆ ಎಂದು ಒತ್ತಿ ಹೇಳಿದ ಪ್ರಧಾನಿ ಮೋದಿ, ತಮ್ಮ ಸರ್ಕಾರ ಮಾತುಕತೆಯಲ್ಲಿ ನಂಬಿಕೆ ಇಟ್ಟಿದ್ದು, ನಾನು ಮತ್ತು ತನ್ನ ಸರ್ಕಾರವು ಯಾರ ಮೇಲೂ ದಾಳಿ ಮಾಡುವುದಿಲ್ಲ ಎಂದು ಹೇಳಿದರು. "ನನಗೆ ಯಾರೊಬ್ಬರ ಮೇಲೂ ಆಕ್ರಮಣ ಮಾಡುವ ಭಾಷೆ ತಿಳಿದಿಲ್ಲ ಮತ್ತು ಅದು ನನ್ನ ಸ್ವಭಾವದಲ್ಲಿಯೂ ಇಲ್ಲ. ಆದರೆ ತರ್ಕ ಮತ್ತು ಸತ್ಯಗಳ ಆಧಾರದ ಮೇಲೆ ಮಾಧ್ಯಮಗಳು ಕೆಲವು ವಿವಾದಗಳನ್ನು ಹುಟ್ಟುಹಾಕಲು ಸದನದಲ್ಲಿ ನನ್ನ ಮಾತುಗಳನ್ನು ಅರ್ಥೈಸಬಹುದು" ಎಂದು ಪ್ರಧಾನಿ ಹೇಳಿದರು.

  ಇದನ್ನೂ ಓದಿ: PM Modi Interview: ಪಂಚರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲ್ಲಿದೆ; ಪ್ರಧಾನಿ ಮೋದಿ ವಿಶ್ವಾಸ

  ಪ್ರಧಾನಿ ವಿರುದ್ಧ ಹರಿಹಾಯ್ದಿದ್ದ ರಾಹುಲ್ ಗಾಂಧಿ

  ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತಾ ನಿರ್ಣಯದ ಮೇಲೆ ಭಾಷಣ ಮಾಡುವಾಗ ರಾಹುಲ್ ಗಾಂಧಿ ಅವರು ನಿರುದ್ಯೋಗ, ಭಾರತ-ಚೀನಾ ಸಮಸ್ಯೆಯ ಕುರಿತಾದ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.

  ರಾಹುಲ್ ಗಾಂಧಿಯವರ ಹೇಳಿಕೆಗಳ ನಂತರ, ಪ್ರಧಾನಿ ಮೋದಿ ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ್ದರು ಈ ಆರೋಪದ ಪ್ರಶ್ನೆಗೆ ಪ್ರಧಾನಿ ಮೋದಿ ಸುದ್ದಿ ಸಂಸ್ಥೆಯಲ್ಲಿ ನಡೆದ ಸಂದರ್ಶನದಲ್ಲಿ ರಾಹುಲ್ ಬಗ್ಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು.

  “ಬಿಜೆಪಿ ಹೆದರಿಸುತ್ತಿದೆ” ಎಂದಿದ್ದ ರಾಹುಲ್ ಗಾಂಧಿ

  ಇದಕ್ಕೂ ಮುನ್ನ, ಸಂಸತ್ತಿನಲ್ಲಿ ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಬಿಜೆಪಿ ನೇತೃತ್ವದ ಸರ್ಕಾರವು "ಕಾಂಗ್ರೆಸ್‌ಗೆ ಹೆದರುತ್ತಿದೆ" ಎಂದು ಹೇಳಿದರು. ಪ್ರಧಾನಿಯವರ ‘ಕಾಂಗ್ರೆಸ್ ಭಯ’ ಸಂಸತ್ತಿನಲ್ಲಿ ಕಾಣಿಸುತ್ತಿದೆ, ಪಕ್ಷವನ್ನು ಟೀಕಿಸುವತ್ತ ಗಮನ ಹರಿಸಿದ್ದಾರೆಯೇ ಹೊರತು ಭರವಸೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದರು.

  ರಾಹುಲ್ ಆರೋಪಕ್ಕೆ ಪ್ರಧಾನಿ ತಿರುಗೇಟು

  ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯಿಸಿದ ಮೋದಿ “ನಾವು ಯಾರ ಮೇಲೂ ದಾಳಿ ಮಾಡುವುದಿಲ್ಲ, ಬದಲಿಗೆ ಸಂವಾದ ನಡೆಸುವುದನ್ನು ನಾವು ನಂಬುತ್ತೇವೆ. ಕೆಲವೊಮ್ಮೆ ಚರ್ಚೆಗಳು (ವಾದ-ವಿವಾದ), ಸಂಸತ್ತಿನಲ್ಲಿ ಅಡಚಣೆಗಳು (ಟೋಕಾ-ಟಕಿ) ಇರುತ್ತವೆ. ನಾನು ಇದನ್ನು ಸ್ವಾಗತಿಸುತ್ತೇನೆ ಮತ್ತು ಅದಕ್ಕಾಗಿಯೇ ನಾನು ಈ ವಿಷಯಗಳ ಬಗ್ಗೆ ಅಸಮಾಧಾನಗೊಳ್ಳಲು ಯಾವುದೇ ಕಾರಣವಿಲ್ಲ" ಎಂದು ಮೋದಿ ಹೇಳಿದರು.

  ಇದನ್ನೂ ಓದಿ: 'ಸ್ವಲ್ಪ ಮರ್ಯಾದೆಯಿಂದ ಮಾತಾಡಿ'- Kangana Ranautಗೆ ಬಿಜೆಪಿ ಲೀಡರ್ ಕ್ಲಾಸ್

   “ಸತ್ಯದ ಆಧಾರದ ಮೇಲೆ ಮಾತನಾಡಿದ್ದೇನೆ”

  ರಾಹುಲ್ ಗಾಂಧಿಯವರ ಪ್ರಶ್ನೆಗಳ ಬಗ್ಗೆ ಉತ್ತರಿಸಿದ ಪ್ರಧಾನಿ ಮೋದಿ, "ನಾನು ಪ್ರತಿಯೊಂದು ವಿಷಯದ ಬಗ್ಗೆ ಸತ್ಯತೆಯನ್ನು ವಿವರಿಸಿದ್ದೇನೆ ಮತ್ತು ಪ್ರತಿಯೊಂದು ವಿಷಯದ ಬಗ್ಗೆ ಸತ್ಯದ ಆಧಾರದ ಮೇಲೆ ಮಾತನಾಡಿದ್ದೇನೆ. ಕೆಲವು ವಿಷಯಗಳಲ್ಲಿ ನಮ್ಮ ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯವು ಇದಕ್ಕೆ ಉತ್ತರ ನೀಡಿದೆ. ವಿವರವಾದ ಉತ್ತರಗಳು ಮತ್ತು ಅಗತ್ಯವಿರುವಲ್ಲೆಲ್ಲಾ ನಾನು ಸಹ ಮಾತನಾಡಿದ್ದೇನೆ. ಸದನದಲ್ಲಿ ಕುಳಿದುಕೊಳ್ಳದ ಹಾಗೂ ಹೇಳಿದನ್ನು ಸರಿಯಾಗಿ ಕೇಳಿಸಿಕೊಳ್ಳದ ವ್ಯಕ್ತಿಗೆ ನಾನು ಹೇಗೆ ಉತ್ತರ ನೀಡಲಿ..? ಎಂದು ಮೋದಿ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
  Published by:Annappa Achari
  First published: