WhatsApp: ವಾಟ್ಸ್ಆ್ಯಪ್ ಡೌನ್ ಆಗುವುದಕ್ಕೂ ಮೋದಿಗೂ ಏನು ಸಂಬಂಧ?; ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಸುಳ್ಳು ಸುದ್ದಿ

Narendra Modi: ದೇಶದಲ್ಲಿ ವಾಟ್ಸ್​​​ಆ್ಯಪ್​ ಬಳಕೆ ಹೆಚ್ಚಿದ್ದರಿಂದ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಇದರನುಸಾರ ರಾತ್ರಿ 11.30ರಿಂದ ಬೆಳಗ್ಗೆ 6 ಗಂಟೆವೆರೆಗೆ ವಾಟ್ಸ್​​ಆ್ಯಪ್​ ಸ್ಥಗಿತಗೊಳ್ಳುತ್ತದೆ ಎನ್ನುವ ಸಂದೇಶ ರವಾನೆಯಾಗಿತ್ತು.

Rajesh Duggumane | news18
Updated:July 4, 2019, 10:51 AM IST
WhatsApp: ವಾಟ್ಸ್ಆ್ಯಪ್ ಡೌನ್ ಆಗುವುದಕ್ಕೂ ಮೋದಿಗೂ ಏನು ಸಂಬಂಧ?; ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಸುಳ್ಳು ಸುದ್ದಿ
ವಾಟ್ಸ್​​ಆ್ಯಪ್​
  • News18
  • Last Updated: July 4, 2019, 10:51 AM IST
  • Share this:
ನಿನ್ನೆ ವಾಟ್ಸ್​​ಆ್ಯಪ್​, ಇನ್ಸ್​​ಟಾಗ್ರಾಮ್​, ಫೇಸ್​ಬುಕ್​ ಸರ್ವರ್​ ಡೌನ್​ ಆದ ಕಾರಣ ಕೆಲ ಕಾಲ ಬಳಕೆದಾರರಿಗೆ ತೊಂದರೆ ಉಂಟಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಂಸ್ಥೆ, ಸಮಸ್ಯೆಯನ್ನುಯ ಆದಷ್ಟು ಬೇಗ ಬಗೆಹರಿಸುವುದಾಗಿ ಹೇಳಿಕೊಂಡಿತ್ತು. ಅಂತೆಯೇ ಈ ಸಮಸ್ಯೆಯನ್ನು ಪರಿಹಾರ ಮಾಡಿದೆ. ಈ ನಡುವೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಹಬ್ಬಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಾಟ್ಸ್​​ಆ್ಯಪ್​ ಸ್ಥಗಿತಗೊಳಿಸುತ್ತಿದ್ದಾರೆ ಎಂಬಿತ್ಯಾದಿ ಸುಳ್ಳು ಮಾಹಿತಿಯನ್ನು ಹಬ್ಬಿಸಿದ್ದಾರೆ.

ನಿನ್ನೆ ಸಂಜೆ ವಾಟ್ಸ್​​ಆ್ಯಪ್​ನಲ್ಲಿ ಫೋಟೋ, ವಿಡಿಯೋ ಡೌನ್​ಲೌಡ್​ ಹಾಗೂ ಸ್ಟೇಟಸ್​ಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವರು ತಮ್ಮ ಅಂತರ್ಜಾಲ ಸರಿಯಿಲ್ಲ ಎಂದೇ ಭಾವಿಸಿದ್ದರು. ನಂತರ ಈ ತೊಂದರೆ ಎಲ್ಲಾ ವಾಟ್ಸ್​​ಆ್ಯಪ್​ ಬಳಕೆದಾರರಲ್ಲೂ ಕಾಣಿಸಿಕೊಂಡಿದ್ದರಿಂದ ಕೆಲವರು ನಿಟ್ಟುಸಿರು ಬಿಟ್ಟಿದ್ದರು. ಗೂಗಲ್​ನಲ್ಲಿ ಈ ಬಗ್ಗೆ ತಡಕಾಡಿದ್ದರು. ಕೊನೆಗೂ ಸಂಸ್ಥೆ ಈ ಸಮಸ್ಯೆಯನ್ನು ಬಗೆಹರಿಸಿದೆ.

ವಾಟ್ಸ್ಆ್ಯಪ್
ವಾಟ್ಸ್ಆ್ಯಪ್


ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿಯೊಂದನ್ನು ಹರಿದಾಡುತ್ತಿದೆ. ದೇಶದಲ್ಲಿ ವಾಟ್ಸ್​​​ಆ್ಯಪ್​ ಬಳಕೆ ಹೆಚ್ಚಿದ್ದರಿಂದ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಇದರನುಸಾರ ರಾತ್ರಿ 11.30ರಿಂದ ಬೆಳಗ್ಗೆ 6 ಗಂಟೆವೆರೆಗೆ ವಾಟ್ಸ್​​ಆ್ಯಪ್​ ಸ್ಥಗಿತಗೊಳ್ಳುತ್ತದೆ ಎನ್ನುವ ಸಂದೇಶ ರವಾನೆಯಾಗಿತ್ತು. ಇದು ಮೋದಿ ಸರ್ಕಾರ ಮಾಡಿದ ಮಹತ್ವದ ನಿರ್ಧಾರ ಎಂದು ಕೆಲವರು ಹೇಳಿಕೊಂಡಿದ್ದರು. ಆದರೆ, ಇದು ನಕಲಿ ಸುದ್ದಿ. ಆ ರೀತಿ ಯಾವುದೇ ಆದೇಶವನ್ನೂ ಸರ್ಕಾರ ಹೊರಡಿಸಿಯೇ ಇಲ್ಲ.

Narendra Modi
ಪ್ರಧಾನಿ ನರೇಂದ್ರ ಮೋದಿ


ಇದನ್ನೂ ಓದಿ: ವಾಟ್ಸ್​ಆ್ಯಪ್​​ ಮತ್ತು ಫೇಸ್​​ಬುಕ್​ನಲ್ಲಿ ಮತ್ತೆ ಕಾಣಿಸಿಕೊಂಡ ಸಮಸ್ಯೆ​; ಬಳಕೆದಾರರ ಆಕ್ರೋಶ

ಇನ್ನು ಈ ಬಗ್ಗೆ ಕೆಲವರು ಸ್ಪಷ್ಟನೆ ನೀಡುವ ಕೆಲಸವನ್ನೂ ಮಾಡಿದ್ದಾರೆ. “ವಾಟ್ಸಾಪ್ ಎಂಬ ಸಾಮಾಜಿಕ‌ ಜಾಲತಾಣವನ್ನು ಭಾರತ ಸರಕಾರ ನಿಷೇಧ ಮಾಡುತ್ತಿದೆ ಎಂಬ ಸಂದೇಶವು ನರೇಂದ್ರ ಮೋದಿಜೀಯ ಹೆಸರಿನಲ್ಲಿ ರವಾನೆಯಾಗುತ್ತಿದೆ. ಇದು ಸತ್ಯಕ್ಕೆ ದೂರವಾಗಿದೆ. ದಯವಿಟ್ಟು ಪ್ರತಿಯೊಂದು ವಿಚಾರಕ್ಕೂ ನರೇಂದ್ರ ಮೋದಿ ಹೆಸರು ಬಳಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸಬಾರದು,” ಎಂದು ಕೆಲವರು ಮನವಿ ಮಾಡಿದ್ದಾರೆ.
Loading...

First published:July 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...