• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Pariksha Pe Charcha: ವಿಪಕ್ಷ ಮತ್ತು ಮಾಧ್ಯಮಗಳ ಟೀಕೆಯನ್ನು ಹೇಗೆ ಎದುರಿಸುತ್ತೀರಿ? ವಿದ್ಯಾರ್ಥಿಯ ಪ್ರಶ್ನೆಗೆ ಪಿಎಂ ಮೋದಿ ಉತ್ತರ!

Pariksha Pe Charcha: ವಿಪಕ್ಷ ಮತ್ತು ಮಾಧ್ಯಮಗಳ ಟೀಕೆಯನ್ನು ಹೇಗೆ ಎದುರಿಸುತ್ತೀರಿ? ವಿದ್ಯಾರ್ಥಿಯ ಪ್ರಶ್ನೆಗೆ ಪಿಎಂ ಮೋದಿ ಉತ್ತರ!

ಪ್ರಧಾನಿ ನರೇಂದ್ರ ಮೋದಿ ಅವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿ ಅವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ

ದೇಶದ ಪ್ರಧಾನ ಮಂತ್ರಿ ಆಗಿರುವ ನೀವು ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ನಿಮ್ಮ ವಿರುದ್ಧ ಟೀಕೆ ಮಾಡಿದಾಗ ಅದನ್ನು ಹೇಗೆ ಎದುರಿಸುತ್ತೀರಿ ಎಂದು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಿದ್ದಾರೆ.

 • News18 Kannada
 • 4-MIN READ
 • Last Updated :
 • New Delhi, India
 • Share this:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಆದ್ಯತೆಯ ಕಾರ್ಯಕ್ರಮಗಳಲ್ಲಿ ಪರೀಕ್ಷಾ ಪೇ ಚರ್ಚಾ (Pariksha Pe Charcha) ಕೂಡ ಒಂದು. ಹೀಗಾಗಿ ಈ ಬಾರಿ ಕೂಡ ಮೋದಿ ಅವರು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ದೆಹಲಿಯ (Delhi) ಟಾಲ್ಕಟೋರಾ ಕ್ರೀಡಾಂಗಣಲ್ಲಿ ಈ ಬಾರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದೇಶದ ವಿವಿಧ ಭಾಗದ 102 ವಿದ್ಯಾರ್ಥಿಗಳು (Students) ಹಾಗೂ ಶಿಕ್ಷಕರು ಮತ್ತು ಕಲಾ ಉತ್ಸವ ಸ್ಪರ್ಧೆಯ 80 ಮಂದಿ ವಿಜೇತರು ಈ ಬಾರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿದ್ಯಾರ್ಥಿಗಳು ಕೇಳಿದ ಹತ್ತಾರು ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಅವರು ಉತ್ತರಿಸಿದ್ದಾರೆ.


ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನೂರಾರು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಸಂಬಂಧಿಸಿದ, ಸಾಮಾಜಿಕ ಕಳಕಳಿ ಇರುವ, ರಾಜಕೀಯ ಜೀವನದ ಕುರಿತ ಹೀಗೆ ಹತ್ತಾರು ವಿಷಯಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳಿದರು. ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೆ ಪಿಎಂ ಮೋದಿ ಉತ್ತರಿಸಿದರು. ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೆ ಮಾಡಬಹುದಾದ ತಯಾರಿ, ಪರೀಕ್ಷೆಯನ್ನು ಎದುರಿಸುವ ಬಗೆ, ಪರೀಕ್ಷೆಯ ಕುರಿತು ಇರುವ ಭಯವನ್ನು ಹೋಗಲಾಡಿಸುವುದು ಹೀಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.


ಟೀಕೆಯನ್ನು ಹೇಗೆ ಎದುರಿಸ್ತೀರಾ?


ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜಕೀಯ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಯನ್ನು ಕೇಳಿದ್ದಾರೆ. ‘ನಮ್ಮ ದೇಶದ ಪ್ರಧಾನ ಮಂತ್ರಿ ಆಗಿರುವ ನೀವು ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ನಿಮ್ಮನ್ನು ಟೀಕೆ ಮಾಡಿದಾಗ ಅದನ್ನು ಹೇಗೆ ಎದುರಿಸುತ್ತೀರಿ?’ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, ‘ಪ್ರಬಲವಾದ ಪ್ರಜಾಪ್ರಭುತ್ವಕ್ಕೆ ಟೀಕೆಗಳು ಉತ್ತಮವಾದ ದಾರಿಯನ್ನು ಹಾಕಿಕೊಡುತ್ತದೆ ಎಂಬುವುದನ್ನು ನಾನು ತಾತ್ವಿಕವಾಗಿ ಒಪ್ಪುತ್ತೇನೆ. ಟೀಕೆ ಮಾಡುವವರ ಕೆಲಸವೇ ಟೀಕೆ ಮಾಡುವಂತಹುದು’ ಎಂದು ಹೇಳಿದರು.


ಆರೋಪಗಳಿಗೆ ತಲೆ ಕೆಡಿಸಿಕೊಳ್ಳಬಾರದು


ಮುಂದುವರಿದು ಮಾತನಾಡಿರುವ ಪ್ರಧಾನಿ ಮೋದಿ, ನಮ್ಮ ಸೈಕಾಲಜಿ ವಿರೋಧ ಪಕ್ಷದ ನಾಯಕರಿಗೆ ಗೊತ್ತಿರುತ್ತದೆ. ನಾವು ನಮ್ಮ ಕೆಲಸಗಳನ್ನು ಬಿಟ್ಟು ಅವರು ಮಾಡುವ ಟೀಕೆಗಳಿಗೆ ಉತ್ತರಿಸಬೇಕು ಎಂಬಂತಹ ಸ್ಥಿತಿಯನ್ನು ಅವರು ಪ್ರಶ್ನೆಗಳನ್ನು ಕೇಳಿ ನಿರ್ಮಾಣ ಮಾಡುತ್ತಾರೆ. ಆದರೆ ನಾವು ಅವರ ಟೀಕೆಗಳಿಗೆ ಗಮನ ಕೊಡದೆ ನಮ್ಮ ಗುರಿಯತ್ತ ಗಮನ ನೀಡಬೇಕು. ಟೀಕೆ ಮಾಡುವುದು ಕಷ್ಟದ ಕೆಲಸ. ಅದಕ್ಕಾಗಿ ಜನರು ಆರೋಪಗಳನ್ನು ಮಾಡುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಟೀಕೆಗಳು ಮತ್ತು ಆರೋಪಗಳ ಮಧ್ಯೆ ದೊಡ್ಡ ವ್ಯತ್ಯಾಸ ಇದೆ. ಹೀಗಾಗಿ ನಾವು ಯಾವುದೇ ಆರೋಪಗಳಿಗೆ ತಲೆ ಕೆಡಿಸಿಕೊಳ್ಳಬಾರದು. ಆದರೆ ಟೀಕೆಗಳು ನಮ್ಮ ಬೆಳವಣಿಗೆಗೆ ಅತ್ಯಗತ್ಯ ಎಂದು ಹೇಳಿದರು.


ಬದುಕಿನಲ್ಲಿ ಅನುಭವ ಮುಖ್ಯ


ಇನ್ನು ಹವ್ಯಾಸ, ಅನುಭವಗಳು ಜೀವನಕ್ಕೆ ಎಷ್ಟು ಮುಖ್ಯ ಅನ್ನುವುದರ ಕುರಿತು ಕೇಳಿದ ಪ್ರಶ್ನೆಗೆ ಒಂದು ಸಣ್ಣ ಕಥೆಯ ಮೂಲಕ ಉತ್ತರಿಸಿದ ನರೇಂದ್ರ ಮೋದಿ, ಒಮ್ಮೆ ಒಬ್ಬ ವ್ಯಕ್ತಿ ಎಲ್ಲೋ ಹೋಗಬೇಕೆಂದುಕೊಂಡಾಗ ಆತನ ಕಾರು ಸ್ಟಾರ್ಟ್‌ ಆಗಲೇ ಇಲ್ಲ. ಸುಮಾರು ಒಂದು ಗಂಟೆಗಳ ಕಾಲ ಕಾರ್‌ನ್ನು ದೂಡುತ್ತಾ ಹೋಗಿ ಸ್ಟಾರ್ಟ್‌ ಮಾಡಲು ಪ್ರಯತ್ನ ಪಟ್ಟ. ಆಗಲೂ ಕಾರ್ ಸ್ಟಾರ್ಟ್‌ ಆಗಲಿಲ್ಲ. ಕೊನೆಗೆ ಯಾವುದೇ ದಾರಿ ಕಾಣದೆ ಆತ ಮೆಕ್ಯಾನಿಕ್‌ಗೆ ಫೋನ್ ಮಾಡಿದ. ಮೆಕ್ಯಾನಿಕ್ ಬಂದು ಕೇವಲ ಎರಡೇ ನಿಮಿಷದಲ್ಲಿ ಕಾರ್‌ನ ಸಮಸ್ಯೆ ಕಂಡು ಹಿಡಿದು ಸರಿ ಮಾಡಿಕೊಟ್ಟ. ಜೊತೆಗೆ ಕಾರ್ ಮಾಲೀಕನಿಗೆ 200 ರೂಪಾಯಿಯ ಬಿಲ್ ನೀಡಿದ. ಆಗ ಕಾರ್ ಮಾಲೀಕ ಬರೀ 2 ನಿಮಿಷದ ಕೆಲಸಕ್ಕೆ 200 ರೂಪಾಯಿ ಕೇಳ್ತೀಯಾ ಎಂದು ಪ್ರಶ್ನೆ ಮಾಡಿದ. ಆಗ ಮೆಕ್ಯಾನಿಕ್ ಕೇವಲ 2 ನಿಮಿಷಕ್ಕೆ ನೀವು 200 ರೂಪಾಯಿ ಕೊಡೋದಲ್ಲ. ನನ್ನ 20 ವರ್ಷಗಳ ಅನುಭವಕ್ಕೆ ನೀಡ್ತಿರೋದು ಎಂದು ಉತ್ತರಿಸ್ತಾನೆ. ಹೀಗಾಗಿ ನಮ್ಮ ಬದುಕಿನಲ್ಲಿ ಅನುಭವ ಮುಖ್ಯ ಎಂದು ಹೇಳಿದಾಗ ಅಲ್ಲಿದ್ದವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

Published by:Avinash K
First published: