• Home
  • »
  • News
  • »
  • national-international
  • »
  • Vande Bharat Express: ದೇಶದ 3ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ, ರೈಲಿನಲ್ಲಿ ಪ್ರಧಾನಿ ಪ್ರಯಾಣ!

Vande Bharat Express: ದೇಶದ 3ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ, ರೈಲಿನಲ್ಲಿ ಪ್ರಧಾನಿ ಪ್ರಯಾಣ!

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ

ದೇಶದ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಗುಜರಾತ್‌ನ (Gujarat) ಗಾಂಧಿನಗರದಲ್ಲಿ (Gandhinagar) ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ರೈಲು ಗುಜರಾತ್‌ನ ಗಾಂಧಿನಗರದಿಂದ ಮುಂಬೈಗೆ (Mumbai) ಸಂಚರಿಸುತ್ತದೆ. ಇಂದು ಬೆಳಗ್ಗೆ 10.30ಕ್ಕೆ ಪ್ರಧಾನಿ ಮೋದಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಬಳಿಕ ಇದೇ ರೈಲಿನಲ್ಲಿ ಪ್ರಧಾನಿ ಮೋದಿ ಅವರು ಸಂಚಾರವನ್ನೂ ಮಾಡಿದರು.

ಮುಂದೆ ಓದಿ ...
  • Share this:

ಗಾಂಧಿನಗರ, ಗುಜರಾತ್: ದೇಶದ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ (Vande Bharat Express train) ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಚಾಲನೆ ನೀಡಿದ್ದಾರೆ. ವಂದೇ ಭಾರತ್ ರೈಲು ಸರಣಿಯ ಮೂರನೇ ರೈಲು ಇದಾಗಿದೆ. ಮೊದಲ ರೈಲು ದೆಹಲಿ ಹಾಗೂ ವಾರಣಾಸಿ ಮಾರ್ಗದಲ್ಲಿ (Delhi to Varanasi) ಸಂಚರಿಸುತ್ತಿದೆ. ಇನ್ನು 2ನೇ ರೈಲು ದೆಹಲಿಯಿಂದ ಶ್ರೀ ಮಾತಾ ವೈಷ್ಣೋದೇವಿಗೆ (Delhi to Shri Mata Vaishno Devi) ಸಂಪರ್ಕ ಕಲ್ಪಿಸುವ ಕಾತ್ರಾ ನಿಲ್ದಾಣದವರೆಗೆ (Katra station) ಸಂಚರಿಸುತ್ತಿದೆ. ಇದೀಗ ಮೂರನೇ ರೈಲಿಗೆ ಗುಜರಾತ್‌ನ (Gujarat) ಗಾಂಧಿನಗರದಲ್ಲಿ (Gandhinagar) ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ರೈಲು ಗುಜರಾತ್‌ನ ಗಾಂಧಿನಗರದಿಂದ ಮುಂಬೈಗೆ (Mumbai) ಸಂಚರಿಸುತ್ತದೆ. ಇಂದು ಬೆಳಗ್ಗೆ 10.30ಕ್ಕೆ ಪ್ರಧಾನಿ ಮೋದಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಬಳಿಕ ಇದೇ ರೈಲಿನಲ್ಲಿ ಪ್ರಧಾನಿ ಮೋದಿ ಅವರು ಸಂಚಾರವನ್ನೂ ಮಾಡಿದರು. ಗಾಂಧಿನಗರದಿಂದ ಅಹಮದಾಬಾದ್‌ನ ಕಲುಪುರ ರೈಲ್ವೆ ನಿಲ್ದಾಣದವರೆಗೆ (Ahmedabad's Kalupura railway station) ಪ್ರಧಾನಿ ಮೋದಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಚರಿಸಿದರು.


ಗುಜರಾತ್-ಮಹಾರಾಷ್ಟ್ರ ನಡುವೆ ಸಂಪರ್ಕ


ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್, ಬಹು ನಿರೀಕ್ಷಿತ ಹೊಸದಾಗಿ ನಿರ್ಮಿಸಲಾದ ಸೆಮಿ-ಹೈ ಸ್ಪೀಡ್ ರೈಲು, ಅಂತಿಮವಾಗಿ ವಾಣಿಜ್ಯ ಚಾಲನೆ ಶುರು ಮಾಡಿದೆ. ಇದು ಆರಾಮದಾಯಕ ಮತ್ತು ವರ್ಧಿತ ರೈಲು ಪ್ರಯಾಣದ ಅನುಭವದ ಹೊಸ ಯುಗಕ್ಕೆ ನಾಂದಿ ಹಾಡಿದೆ. ಈ ರೈಲು ಗಾಂಧಿನಗರ ಮತ್ತು ಮುಂಬೈ ನಡುವೆ ಸಂಚರಿಸಲಿದ್ದು, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುತ್ತದೆ.ದೇಶದ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್


ವಂದೇ ಭಾರತ್ ರೈಲು ಸರಣಿಯ ಮೂರನೇ ರೈಲು ಇದಾಗಿದೆ. ಮೊದಲ ರೈಲು ದಿಲ್ಲಿ ಹಾಗೂ ವಾರಣಾಸಿ ಮಾರ್ಗದಲ್ಲಿ ಸಂಚರಿಸುತ್ತಿದೆ. ಇನ್ನು 2ನೇ ರೈಲು ದಿಲ್ಲಿಯಿಂದ ಶ್ರೀ ಮಾತಾ ವೈಷ್ಣೋದೇವಿಗೆ ಸಂಪರ್ಕ ಕಲ್ಪಿಸುವ ಕಾತ್ರಾ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುತ್ತದೆ. ಇದು ಗುಜರಾತ್‌ ಹಾಗೂ ಮುಂಬೈ ನಡುವೆ ಸಂಚರಿಸಲಿದೆ.


ಇದನ್ನೂ ಓದಿ: Indian Railways: ನವರಾತ್ರಿಗೆ ಭಾರತೀಯ ರೈಲ್ವೆಯಿಂದ ವಿಶೇಷ ಕೊಡುಗೆ


ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವಿಶೇಷತೆ


ಈ ರೈಲಿನ ವೈಶಿಷ್ಟ್ಯಗಳ ಕುರಿತು ಮಾತನಾಡಿದ ಪಶ್ಚಿಮ ರೈಲ್ವೇ ವಲಯದ ಸಿಪಿಆರ್‌ಒ ಸುಮಿತ್ ಠಾಕೂರ್, “ವಂದೇ ಭಾರತ್ ಎಕ್ಸ್‌ಪ್ರೆಸ್ ಅಸಂಖ್ಯಾತ ಉನ್ನತ ಸೌಕರ್ಯಗಳನ್ನು ಒದಗಿಸುತ್ತದೆ, ಇದು ಪ್ರಯಾಣಿಕರಿಗೆ ಪ್ರಯಾಣದ ಅನುಭವ ಮತ್ತು ಸುಧಾರಿತ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಕವಚ್ ತಂತ್ರಜ್ಞಾನ ಅಂದರೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ ಹೊಂದಿದೆ ಅಂತ ಹೇಳಿದ್ದಾರೆ.


ರೈಲಿನಲ್ಲಿ ಪ್ರಧಾನಿ ಪ್ರಯಾಣ


ವಿಮಾನ ಪ್ರಯಾಣದಂತೆ ಅನುಭವ!


ಈ ರೈಲು ಪ್ರಯಾಣಿಕರಿಗೆ ವಿಮಾನ ಪ್ರಯಾಣದ ಮಾದರಿಯ ಅನುಭವ ನೀಡುತ್ತದೆ. ದೇಶೀಯವಾಗಿ ನಿರ್ಮಾಣವಾಗಿರುವ ಈ ರೈಲು ಅಪಘಾತ ನಿರೋಧಕ ವ್ಯವಸ್ಥೆಯನ್ನು ಹೊಂದಿದೆ. 160 kmph ಗರಿಷ್ಠ ಕಾರ್ಯಾಚರಣೆಯ ವೇಗಕ್ಕಾಗಿ ಸಂಪೂರ್ಣವಾಗಿ ಮೋಟಾರ್‌ಗಳನ್ನು ಹೊಂದಿರುವ ಬೋಗಿಗಳನ್ನು ರೈಲು ಒಳಗೊಂಡಿದೆ, ಜೊತೆಗೆ ಸುಧಾರಿತ ಅತ್ಯಾಧುನಿಕ ಸಸ್ಪೆನ್ಷನ್ ವ್ಯವಸ್ಥೆಯು ಸುಗಮ ಮತ್ತು ಸುರಕ್ಷಿತ ಸವಾರಿ ಮತ್ತು ಪ್ರಯಾಣಿಕರಿಗೆ ಉತ್ತಮ ಸವಾರಿ ಅನುಭವವನ್ನು ನೀಡುತ್ತದೆ.ಪ್ರತಿ ಕೋಚ್‌ನಲ್ಲೂ ಇನ್ಫೋಟೈನ್‌ಮೆಂಟ್ ವ್ಯವಸ್ಥೆ


ಪ್ರತಿ ಕೋಚ್‌ನಲ್ಲಿ 32 ಇಂಚಿನ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿಕರ ಮಾಹಿತಿ ಮತ್ತು ಇನ್ಫೋಟೈನ್‌ಮೆಂಟ್ ಅನ್ನು ಒದಗಿಸುತ್ತದೆ. ದಿವ್ಯಾಂಗ್ ಸ್ನೇಹಿ ವಾಶ್‌ರೂಮ್‌ಗಳು ಮತ್ತು ಬ್ರೈಲ್ ಅಕ್ಷರಗಳಲ್ಲಿ ಸೀಟ್ ಸಂಖ್ಯೆಗಳನ್ನು ಹೊಂದಿರುವ ಸೀಟ್ ಹ್ಯಾಂಡಲ್ ಅನ್ನು ಸಹ ಒದಗಿಸಲಾಗಿದೆ.


ಇದನ್ನೂ ಓದಿ: Indian Railways: ಮಹಿಳೆಯರಿಗೆ ಗುಡ್​ ನ್ಯೂಸ್​, ರೈಲ್ವೆ ಇಲಾಖೆಯಿಂದ ಅವರಿಗಾಗಿ ವಿಶೇಷ ಆಸನಗಳು!


ರೈಲು ಹೊರಡುವ ಸಮಯ


ಗುಜರಾತ್‌ನ ಗಾಂಧಿ ನಗರ ಹಾಗೂ ಮುಂಬೈ ನಡುವಣ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 1 ರಿಂದ ತನ್ನ ವಾಣಿಜ್ಯ ಚಟುವಟಿಕೆ ಆರಂಭ ಮಾಡಲಿದೆ. ಭಾನುವಾರ ಹೊರತುಪಡಿಸಿ ವಾರದ ಎಲ್ಲಾ ದಿನವೂ ಈ ರೈಲು ಸೇವೆ ಇರಲಿದೆ. ಪ್ರತಿ ದಿನ ಬೆಳಗ್ಗೆ 6:10ಕ್ಕೆ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ಈ ರೈಲು, ಗುಜರಾತ್‌ನ ಗಾಂಧಿ ನಗರಕ್ಕೆ ಮಧ್ಯಾಹ್ನ 12:30ಕ್ಕೆ ತಲುಪಲಿದೆ. ನಂತರ ಮಧ್ಯಾಹ್ನ 2:05ಕ್ಕೆ ಗಾಂಧಿ ನಗರದಿಂದ ವಾಪಸ್ ಹೊರಡುವ ಈ ರೈಲು ರಾತ್ರಿ 8:35ಕ್ಕೆ ಮುಂಬೈ ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ. 

Published by:Annappa Achari
First published: