Modi Story: ಮೋದಿ ತಂಗಿಗೆ ನೀಡಿದ್ದ ₹ 11 ಅರ್ಧಘಂಟೆಯಲ್ಲೇ 7,50,000 ಆಗಿತ್ತು!

PM Narendra Modi: ನರೇಂದ್ರ ಮೋದಿ ಅವರ ಬಳಿ ಯಾವುದೇ ಹಣ ಇರುತ್ತಿರಲಿಲ್ಲ.  ಆದರೂ ಅವರು ರೂ. 11 ನೀಡಿದ್ದರು. ಆ ಚಿಕ್ಕ ಮೊತ್ತ ಸಹ ಅವರ ತಾಯಿ ಹೀರಾಬೆನ್ ನೀಡಿದ್ದಾಗಿತ್ತು! ತಮ್ಮ ತಾಯಿ ನೀಡಿದ ಹಣವನ್ನೇ ಬಿಜೆಪಿ ಅಭ್ಯರ್ಥಿಯ ಪ್ರಚಾರಕ್ಕೆ ಎಂದು ಅವರು ದೇಣಿಗೆ ನೀಡಿದ್ದರು!

ಡಾ.ಸುಧಾ ಯಾದವ್ ಮತ್ತು ಪ್ರಧಾನಿ ನರೇಂದ್ರ ಮೋದಿ

ಡಾ.ಸುಧಾ ಯಾದವ್ ಮತ್ತು ಪ್ರಧಾನಿ ನರೇಂದ್ರ ಮೋದಿ

 • Share this:
  ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಒಂದಿಲ್ಲೊಂದು ಕುತೂಹಲ ಮಾಹಿತಿ ಹೊರಬೀಳುತ್ತಲೇ ಇರುತ್ತದೆ. ಇದೀಗ ಪ್ರಧಾನಿ ಮೋದಿ ಕುರಿತ ಇನ್ನೊಂದು ರೋಚಕ ಮಾಹಿತಿ ಬಹಿರಂಗಗೊಂಡಿದೆ. ಹರಿಯಾಣದ ಬಿಜೆಪಿ ನಾಯಕಿ ಡಾ.ಸುಧಾ ಯಾದವ್ (Dr.Sudha Yadav) ಅವರೇ ಇತಿಹಾಸದ ರೋಚಕ ಘಟನೆಯೊಂದನ್ನು ತೆರೆದಿಟ್ಟಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi)  ಇನ್ನೊಂದು ಮುಖವನ್ನು ಅನಾವರಣಗೊಳಿಸಿದ್ದಾರೆ!  ಬಿಜೆಪಿ ಗುರುಗ್ರಾಮದ ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿಯ ಹುಡುಕಾಟ ನಡೆಸಿತ್ತು. ಕೊನೆಗೂ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರೊಬ್ಬರ ಪತ್ನಿಯನ್ನು ಕಣಕ್ಕಿಳಿಸಲು ಬಿಜೆಪಿ (BJP) ನಿರ್ಧಾರ ಮಾಡಿತು. ಅವರೇ ಡಾ.ಸುಧಾ ಯಾದವ್.  ಆದರೆ ಯಾವುದೇ ರಾಜಕೀಯ ಹಿನ್ನೆಲೆ ಅಥವಾ ಹಣಬಲ ಇರದ ಅವರಿಗೆ ಪ್ರಚಾರ ನಡೆಸುವುದು ಅಷ್ಟು ಸುಲಭದ್ದಾಗಿರಲಿಲ್ಲ. 

  ಡಾ.ಸುಧಾ ಯಾದವ್ ಅವರ ಪರವಾಗಿ ಪ್ರಚಾರಕ್ಕಾಗಿ ಹಣದ ಅವಶ್ಯಕತೆಯಿತ್ತು. ದೇಣಿಗೆ ಸಂಗ್ರಹಿಸಬೇಕಿತ್ತು. ಅಂದು ಗುಜರಾತ್​ ರಾಜ್ಯದ ಮುಖ್ಯಮಂತ್ರಿಯೂ ಆಗಿರದಿದ್ದ ನರೇಂದ್ರ ಮೋದಿ ಅವರೇ ಈ ದೇಣಿಗೆ ಕಾರ್ಯಕ್ಕೆ ಮುನ್ನುಡಿ ಹಾಡಿದರು.

  Independence Day 2022 PM Narendra Modi requests change mentality towards women support Nari shakti
  ಪ್ರಧಾನಿ ನರೇಂದ್ರ ಮೋದಿ


  ಅರ್ಧ ಘಂಟೆ ಒಳಗೇ 7.5 ಲಕ್ಷ!
  ಸ್ವತಃ ನರೇಂದ್ರ ಮೋದಿ ಅವರೇ ಡಾ.ಸುಧಾ ಯಾದವ್ ಅವರ ಚುನಾವಣಾ ಪ್ರಚಾರಕ್ಕಾಗಿ ಮೊದಲು 11 ರೂ.ದೇಣಿಗೆ ನೀಡಿದರು. ಸುಮಾರು ಅರ್ಧ ಗಂಟೆ ಒಳಗೇ 7.5 ಲಕ್ಷ ರೂ. ಹಣ ಸಂಗ್ರಹವಾಯಿತು! ಅಲ್ಲದೇ ಸುಧಾ ಯಾದವ್ ಅವರನ್ನು  ಸ್ವಂತ ತಂಗಿ ಎಂದೇ ಕರೆದ ನರೇಂದ್ರ ಮೋದಿ ಆ 11 ರೂ.ವನ್ನು ಉತ್ತಮ ಕೆಲಸಕ್ಕಾಗಿ ಬಳಸು ಎಂದು ಸಲಹೆ ನೀಡಿದ್ದರು.

  ಆ ಕ್ಷಣವನ್ನು ಎಂದಿಗೂ ಮರೆಯಲ್ಲ!
  ನೀವು ಬಿಜೆಪಿ ನಾಯಕಿ. ಡಾ. ಸುಧಾ ಯಾದವ್ ಅವರ ಮಾತುಗಳಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳಲ್ಲೇ ಕೇಳುವುದಾದರೆ, “1999 ರಲ್ಲಿ ಬಿಜೆಪಿ ಹರಿಯಾಣದ ಸಾಂಸ್ಥಿಕ ಉಸ್ತುವಾರಿಯಾಗಿ ನರೇಂದ್ರ ಮೋದಿಯವರು ನನ್ನ ಚುನಾವಣಾ ದೇಣಿಗೆಯನ್ನು ಹೇಗೆ ಸಂಗ್ರಹಿಸಿದರು ಎಂಬುದನ್ನು ನಾನು ಎಂದಿಗೂ ಮರೆಯಲಾರೆ. ನಾನು ಪಡೆದ ಮೊದಲ ದೇಣಿಗೆ ಮೋದಿಯವರಿಂದಲೇ ಬಂದಿತ್ತು!  ಅವರು ನನ್ನ ಪ್ರಚಾರ ನಿಧಿಗೆ ಒಮ್ಮೆ ಅವರ ತಾಯಿ ನೀಡಿದ್ದ 11 ರೂಪಾಯಿಗಳನ್ನು ದೇಣಿಗೆ ನೀಡಿದರು.  ಆ 11 ರೂಪಾಯಿ ಮುಂದೆ 7.5 ಲಕ್ಷ ಆಗಿ ಬೆಳೆಯಿತು.” ಎಂದು ಸುಧಾ ಯಾದವ್ ಅದ್ಭುತ ಕಥೆ ಬಿಚ್ಚಿಟ್ಟಿದ್ದಾರೆ.

  ಇದನ್ನೂ ಓದಿ: ಭಾರತದ ಮಧ್ಯಸ್ಥಿಕೆಯಿಂದ ರಷ್ಯಾ-ಉಕ್ರೇನ್ ಯುದ್ಧ ಅಂತ್ಯ? Moscow ತಲುಪಿದ ಅಜಿತ್ ದೋವಲ್!

  ಮೋದಿ ಅಮ್ಮ ನೀಡಿದ್ದ ಆ  11 ರೂ.!
  ಇಂದು ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಅಂದು ಗುಜರಾತ್ ಸಿಎಂ ಸಹ ಆಗಿರಲಿಲ್ಲ. ಬಿಜೆಪಿಯ ಪದಾಧಿಕಾರಿ ಅಷ್ಟೇ ಆಗಿದ್ದರು. ಹೀಗಾಗಿ ಅವರ ಖರ್ಚು ವೆಚ್ಚಗಳನ್ನು ಸಂಘಟನೆಯೇ ನೋಡಿಕೊಳ್ಳುತ್ತಿತ್ತು. ನರೇಂದ್ರ ಮೋದಿ ಅವರ ಬಳಿ ಯಾವುದೇ ಹಣ ಇರುತ್ತಿರಲಿಲ್ಲ.  ಆದರೂ ಅವರು ರೂ. 11 ನೀಡಿದ್ದರು. ಆ ಚಿಕ್ಕ ಮೊತ್ತ ಸಹ ಅವರ ತಾಯಿ ಹೀರಾಬೆನ್ ನೀಡಿದ್ದಾಗಿತ್ತು! ತಮ್ಮ ತಾಯಿ ನೀಡಿದ ಹಣವನ್ನೇ ಬಿಜೆಪಿ ಅಭ್ಯರ್ಥಿಯ ಪ್ರಚಾರಕ್ಕೆ ಎಂದು ಅವರು ದೇಣಿಗೆ ನೀಡಿದ್ದರು!

  PM Narendra Modi Rare Photos with his mother Heeraben Modi see pics
  ಒಂದು ಭಾವುಕ ಕ್ಷಣ!


  ಇದನ್ನೂ ಓದಿ: M K Stalin: ದೆಹಲಿಗೆ ಕೈಕಟ್ಟಿ ನಿಲ್ಲಲು ಹೋಗಲ್ಲ, ಬಿಜೆಪಿ ಜೊತೆ ಹೊಂದಾಣಿಕೆಯೇ ಇಲ್ಲ: ಎಂ ಕೆ ಸ್ಟಾಲಿನ್

  ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಹಲವು ನಾಯಕರ ಒಡನಾಟ, ನೆನಪು ಮತ್ತು ಸಂಬಂಧಗಳ ಬಗ್ಗೆ ವೆಬ್ ಪೋರ್ಟಲ್ ರೂಪದಲ್ಲಿ ಸಾರ್ವಜನಿಕ ಡೊಮೇನ್  modistory.in ಯಲ್ಲಿ ಸಮಗ್ರಹಿಸಲಾಗಿದೆ. ಇದೇ ಸಾರ್ವಜನಿಕ ಡೊಮೇನ್​ನಲ್ಲಿ ಈ ಕಥೆಯನ್ನು ತೆರೆದಿಡಲಾಗಿದೆ.
  Published by:guruganesh bhat
  First published: