HOME » NEWS » National-international » NARENDRA MODI CRIES DURING FAREWELL SPEECH ON GULAM NABI AZAD AT RAJYA SABHA SNVS

ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಬೀಳ್ಕೊಡುಗೆ ವೇಳೆ ಭಾವುಕಗೊಂಡು ಕಣ್ಣೀರಿಟ್ಟ ಪ್ರಧಾನಿ ಮೋದಿ

ಗುಲಾಂ ನಬಿ ಆಜಾದ್ ಅವರು ತಮಗೆ ಒಳ್ಳೆಯ ಸ್ನೇಹಿತರು. ಅವರಿಗೆ ಕಾಂಗ್ರೆಸ್ ಪಕ್ಷವಷ್ಟೇ ಅಲ್ಲ ದೇಶದ ಬಗ್ಗೆಯೂ ಕಾಳಜಿ ಇದೆ. ಅವರನ್ನ ತಾನು ನಿವೃತ್ತರಾಗಲು ಬಿಡುವುದಿಲ್ಲ. ಅವರ ಸೇವೆ ಬಳಸಿಕೊಳ್ಳುವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

Vijayasarthy SN | news18
Updated:February 9, 2021, 11:52 AM IST
ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಬೀಳ್ಕೊಡುಗೆ ವೇಳೆ ಭಾವುಕಗೊಂಡು ಕಣ್ಣೀರಿಟ್ಟ ಪ್ರಧಾನಿ ಮೋದಿ
ನರೇಂದ್ರ ಮೋದಿ
  • News18
  • Last Updated: February 9, 2021, 11:52 AM IST
  • Share this:
ನವದೆಹಲಿ(ಫೆ. 09): ಕಾಂಗ್ರೆಸ್​ನ ಅತ್ಯಂತ ಹಿರಿಯ ನಾಯಕರಲ್ಲೊಬ್ಬರಾದ ಗುಲಾಂ ನಬಿ ಆಜಾದ್ ಅವರ ರಾಜ್ಯಸಭಾ ಸದಸ್ಯ ಸ್ಥಾನದ ಅವಧಿ ಅಂತ್ಯವಾಗಿದೆ. ಇಂದು ರಾಜ್ಯಸಭೆಯಲ್ಲಿ ಅವರಿಗೆ ವಿದಾಯ ನೀಡುವ ವೇಳೆ ಗೌರವಾರ್ಪಣೆ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ವೇಳೆ ಭಾಷಣ ಮಾಡುತ್ತಾ ಭಾವುಕರಾಗಿ ಕಣ್ಣೀರಿಟ್ಟ ಕ್ಷಣಕ್ಕೂ ರಾಜ್ಯಸಭೆ ಸಾಕ್ಷಿಯಾಯಿತು. ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷವಷ್ಟೇ ಅಲ್ಲ, ತಮ್ಮ ದೇಶದ ಬಗ್ಗೆ ಸದಾ ಚಿಂತಿಸುತ್ತಾರೆ. ಅವರ ಸ್ಥಾನವನ್ನ ತುಂಬುವುದು ಬಹಳ ಕಷ್ಟ ಎಂದು ಅಭಿಪ್ರಾಯಪಟ್ಟರು.

ಗುಲಾಂ ನಬಿ ಆಜಾದ್ ಅವರು ತಮ್ಮ ಪಕ್ಷದ ಕ್ಷೇಮದ ಜೊತೆಗೆ ಸದನದ ಗೌರವ ಮತ್ತು ಭಾರತದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿದ್ದರು ಎಂದು ಹೇಳಿದ ಪ್ರಧಾನಿ ಮೋದಿ ಹಿಂದಿನ ಒಂದು ಘಟನೆಯನ್ನ ಮೆಲುಕು ಹಾಕಿದರು:

ಜಮ್ಮು ಮತ್ತು ಕಾಶ್ಮೀರದಲ್ಲಿ ಗುಜರಾತ್​ನಿಂದ ಹೋದ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಗುಲಾಂ ನಬಿ ಅವರು ತಮಗೆ ಎರಡು ಬಾರಿ ಕರೆ ಮಾಡಿದರು. ಮೃತಪಟ್ಟವರ ಮೃತದೇಹಗಳನ್ನ ಸಾಗಿಸಲು ಗುಲಾಂ ನಬಿ ಆಜಾದ್ ಮತ್ತು ಪ್ರಣಬ್ ಮುಖರ್ಜಿ ಅವರು ನೆರವಾಗಿದ್ದರು. ಗುಲಾಂ ನಬಿ ಅವರು ಪ್ರತಿಯೊಬ್ಬರನ್ನೂ ತಮ್ಮ ಕುಟುಂಬ ಸದಸ್ಯರಂತೆ ಕಾಳಜಿ ವಹಿಸುತ್ತಿದ್ದರು ಎಂದು ನರೇಂದ್ರ ಮೋದಿ ಗುಣಗಾನ ಮಾಡಿದರು. ಈ ವೇಳೆ ಮೋದಿ ಭಾವುಕರಾಗಿ ಅವರ ಕಣ್ಣಂಚಲಿ ಕಣ್ಣೀರು ಬಂದಿತು. ನಂತರ ಅವರು ಗುಲಾಂ ಅವರಿಗೆ ಸಲ್ಯೂಟ್ ರೀತಿ ಸಂಕೇತ ನೀಡಿ ತಮ್ಮ ಗೌರವ ತೋರಿದರು.

ಇದನ್ನೂ ಓದಿ: Deep Sidhu Arrest - ರೈತ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ಆರೋಪ; ನಟ ದೀಪ್ ಸಿಧು ಬಂಧನ

“ಹುದ್ದೆ, ಅಧಿಕಾರ ಸಿಗುತ್ತದಾದರೂ ಇವುಗಳನ್ನ ಹೇಗೆ ನಿರ್ವಹಿಸಬೇಕು ಎಂಬುದನ್ನು ಗುಲಾಂ ನಬಿ ಆಜಾದ್ ಅವರಿಂದ ಕಲಿಯಬೇಕು. ನಾನು ಅವರನ್ನ ಒಬ್ಬ ನಿಜವಾದ ಸ್ನೇಹಿತನೆಂದು ಪರಿಗಣಿಸುತ್ತೇನೆ” ಎಂದು ಮೋದಿ ಹೇಳಿದರು.

ನಿಮ್ಮನ್ನು ನಿವೃತ್ತರಾಗಲು ಬಿಡುವುದಿಲ್ಲ. ನಿಮ್ಮ ಸಲಹೆಯನ್ನ ತೆಗೆದುಕೊಳ್ಳುವ ಕೆಲಸ ಮುಂದುವರಿಸುತ್ತೇನೆ. ನನ್ನ ಬಾಗಿಲು ಸದಾ ನಿಮಗೆ ತೆರೆದೇ ಇರುತ್ತದೆ ಎಂದು ಹೇಳಿದ ನರೇಂದ್ರ ಮೋದಿ, ಮುಂದೆ ವಿಪಕ್ಷ ನಾಯಕನಾಗುವವರಿಗೆ ಗುಲಾಂ ನಬಿ ಆಜಾದ್ ಅವರಿಗೆ ಸಾಟಿಯಾಗುವುದು ಸವಾಲಿನ ಕೆಲಸವಾಗುತ್ತದೆ. ಯಾಕೆಂದರೆ ಆಜಾದ್ ಅವರಿಗೆ ತಮ್ಮ ಪಕ್ಷವಷ್ಟೇ ಅಲ್ಲ, ದೇಶ ಮತ್ತು ಸದನದ ಬಗ್ಗೆಯೂ ಬಹಳಷ್ಟು ಕಾಳಜಿ ಇತ್ತು ಎಂದು ಅಭಿಪ್ರಾಯಪಟ್ಟರು.ಇದೇ ವೇಳೆ, ಗುಲಾಂ ನಬಿ ಆಜಾದ್ ರೀತಿಯ ವ್ಯಕ್ತಿತ್ವ ಶರದ್ ಪವಾರ್ ಅವರದ್ದಾಗಿದೆ ಎಂದೂ ಹೇಳಿ ಪ್ರಧಾನಿ ಮೋದಿ ಅಚ್ಚರಿ ಮೂಡಿಸಿದರು.

ಇದನ್ನೂ ಓದಿ: ಇನ್ಮುಂದೆ ವಾರಕ್ಕೆ ನಾಲ್ಕೇ ದಿನ ಕೆಲಸ..?: ಶೀಘ್ರದಲ್ಲೇ ಕಾರ್ಮಿಕ ಇಲಾಖೆಯಿಂದ ಹೊಸ ನೀತಿ..!

ಇದಕ್ಕೂ ಮುನ್ನ ರಾಜ್ಯಸಭಾ ಛೇರ್ಮನ್ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಗುಲಾಂ ನಬಿ ಅವರಿಗೆ ಗೌರವಾರ್ಪಣೆ ಮಾಡಿದರು. ಗುಲಾಂ ನಬಿ ಆಜಾದ್ ಸದನದ ಹಿರಿಯ ಸದಸ್ಯರಾಗಿದ್ದರು. ಮೃದುಮಾತಿನವರಾದರೂ ತಮ್ಮ ವಾದವನ್ನ ಬಹಳ ಸಮರ್ಥವಾಗಿ ಮುಂದಿಡುತ್ತಿದ್ದರು. ನಾನೊಬ್ಬ ರಾಜ್ಯಸಭಾ ಛೇರ್ಮನ್ ಆಗಿ ಅವರ ಸೇವೆಯನ್ನ ಮಿಸ್ ಮಾಡಿಕೊಳ್ಳುತ್ತೇನೆ. ನೀವೆಲ್ಲಾ ನಿವೃತ್ತರಾಗಿದ್ದೀರಾದರೂ ನಿಮ್ಮ ಸೇವೆ ನಿಲ್ಲಿಸಿಲ್ಲ. ನೀವೆಲ್ಲಾ ಇಲ್ಲಿ ಇಲ್ಲದಿರುವುದು ನಮಗೆಲ್ಲಾ ಬಹಳ ನೋವಾಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದರು.

1949ರಲ್ಲಿ ಜಮ್ಮು-ಕಾಶ್ಮೀರದ ಭಲೇಸ್ಸಾದಲ್ಲಿ ಜನಿಸಿದ ಗುಲಾಂ ನಬಿ ಆಜಾದ್ 1973ರಲ್ಲಿ ಕಾಂಗ್ರೆಸ್ ಮೂಲಕವೇ ರಾಜಕಾರಣ ಪ್ರವೇಶಿಸಿದರು. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅವರು, ಕೇಂದ್ರ ಸಚಿವ ಸ್ಥಾನಗಳನ್ನೂ ನಿಭಾಯಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ಕೆಲಸ ಮಾಡಿದ್ಧಾರೆ.
Published by: Vijayasarthy SN
First published: February 9, 2021, 11:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories